newsfirstkannada.com

14 ವರ್ಷದ ದಾಂಪತ್ಯ ಜೀವನ ಅಂತ್ಯ.. ಮಾಜಿ ಪತಿಯ ವಿವಾಹ ಬಗ್ಗೆ ಸಾನಿಯಾ ಮಿರ್ಜಾ ಏನಂದ್ರು ಗೊತ್ತಾ?

Share :

Published January 22, 2024 at 9:38am

Update January 22, 2024 at 9:39am

  2010ರಲ್ಲಿ ವಿವಾಹ 2024ರಲ್ಲಿ ಅಂತ್ಯ

  3ನೇ ವಿವಾಹವಾದ ಪಾಕ್​ ಮಾಜಿ ಕ್ರಿಕೆಟಿಗ ಶೋಯೆಬ್​ ಮಲ್ಲಿಕ್​

  ಸಾನಿಯಾ ಮತ್ತು ಪಾಕ್​ ಮಾಜಿ ಕ್ರಿಕೆಟಿಗನ ಮೊದಲ ಭೇಟಿ ಆಗಿದ್ದು ಎಲ್ಲಿ?

ಭಾರತದ ಮಾಜಿ ಟೆನ್ನೀಸ್​​ ಆಟಗಾರ್ತಿ ಸಾನಿಯಾ ಮಲ್ಲಿಕ್​​ ಮತ್ತು ಪಾಕ್​ ಮಾಜಿ ಕ್ರಿಕೆಟಿಕ ಶೋಯೆಬ್​ ಮಲ್ಲಿಕ್​ ಜೊತೆಗಿನ 14 ವರ್ಷದ ದಾಂಪತ್ಯ ಜೀವನ ಅಂತ್ಯಗೊಂಡಿದೆ. ಅತ್ತ ಶೋಯೆಬ್​ ಬೇರೆ ಸಂಗಾತಿಯನ್ನು ನೋಡಿಕೊಂಡು ವಿವಾಹವಾಗುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಾತ್ರವಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್​ ಹರಿಬಿಟ್ಟಿದ್ದಾರೆ. ಆದರೆ ಈ ವಿಚಾರ ಸಾನಿಯಾ ಮತ್ತು ಆಕೆಯ ಕುಟುಂಬ ಮಾತ್ರ ಯಾವುದೇ ರಿಯಾಕ್ಷನ್​ ಕೊಡದೆ ಸುಮ್ಮನಾಗಿದೆ.

ಸಾನಿಯಾ ಟೀಂ ಮತ್ತು ಆಕೆಯ ಫ್ಯಾಮಿಲಿ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ‘‘ ಸಾನಿಯಾ ಯಾವಾಗಲು ತನ್ನ ವೈಯ್ಯಕ್ತಿಕ ಜೀವನವನ್ನು ಸಾರ್ವಜನಿಕರ ಕಣ್ಣಿನಿಂದ ದೂರವಿಟ್ಟಿದ್ದಾಳೆ. ಆದರೆ ಶೋಯೆಬ್​ ಆಕೆಯ ಜೊತೆಗೆ ಕೆಲವು ತಿಂಗಳು ಹಿಂದೆ ವಿಚ್ಛೇದನ ಪಡೆದಿದ್ದಾರೆ. ಶೋಯೆಬ್​ ಅವರ ಹೊಸ ಪ್ರಯಾಣಕ್ಕೆ ಶುಭ ಹಾರೈಸಿದ್ದಾರೆ’’

‘‘ಸಾನಿಯಾ ಜೀವನದ ಸೂಕ್ಷ್ಮ ಅವಧಿಯಲ್ಲಿ ಎಲ್ಲಾ ಅಭಿಮಾನಿಗಳು ಮತ್ತು ಹಿತೈಷಿಗಳು ಯಾವುದೇ ಉಹಾಪೋಹಗಳಿಗೆ ಒಳಗಾಗದೆ ಅವರ ಗೌಪತ್ಯೆಯನ್ನು ಗೌರವಿಸುವಂತೆ ವಿನಂತಿಸುತ್ತೇವೆ’’.

ಐದು ವರ್ಷದ ಮಗ

ಸಾನಿಯಾ ಮಿರ್ಜಾ ಮತ್ತು ಶೋಯೆಬ್​ ಮಲ್ಲಿಕ್ ಏಪ್ರಿಲ್​ 10,​ 2010ರಲ್ಲಿ ವಿವಾಹವಾಗುತ್ತಾರೆ. ಈ ಜೋಡಿಗೆ 5 ವರ್ಷದ ಮುದ್ದಾದ ಗಂಡು ಮಗನಿದ್ದಾನೆ. ಆದರೀಗ ಇಬ್ಬರು ವಿಚ್ಛೇದನ ಪಡೆದುಕೊಂಡು ದೂರವಾಗಿದ್ದಾರೆ. ಸಾನಿಯಾ ಮಿರ್ಜಾ ಸದ್ಯ ದುಬೈನಲ್ಲಿ ನೆಲೆಸಿದ್ದಾರೆ.

ಮಗು ಇಜಾನ್​ ಜೊತೆ ಸಾನಿಯಾ ಮಿರ್ಜಾ

ಸನಾ ಜಾವೇದ್ ಜೊತೆ ಮದುವೆ

ಶೋಯೆಬ್​ ಮಲ್ಲಿಕ್​ ಸನಾ ಜಾವೇದ್​ ಎಂಬಾಕೆಯ ಕೈ ಹಿಡಿದಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಇನ್ನು ಸನಾ ಹಲವಾರು ಧಾರಾವಾಹಿಯಲ್ಲಿ ನಟಿಸಿದ್ದಾರೆ ಮತ್ತು ಪಾಕ್​ ಸಿನಿಮಾದಲ್ಲಿ ನಟಿಸಿದ್ದಾರೆ. 2020ರಲ್ಲಿ ಗಾಯಕ ಉಮೈರ್​ ಜೈಸ್ವಾಲ್​ ಅವರನ್ನು ಸರಳವಾಗಿ ವಿವಾಹವಾಗಿದ್ದರು. ಆದರೀಗ ಶೋಯೆಬ್​ ಕೈ ಹಿಡಿದಿದ್ದಾರೆ.

ಸಾನಿಯಾ ಶೋಯೆಬ್​ ಲವ್​ ಸ್ಟೋರಿ

ಸಾನಿಯಾ ಮಿರ್ಜಾ ಮತ್ತು ಶೋಯೆಬ್​ ಮಲ್ಲಿಕ್​ 2010 ರಲ್ಲಿ ಆಸ್ಟ್ರೇಲಿಯಾದ ಹೋಬರ್ಟ್‌ನಲ್ಲಿ ಭೇಟಿಯಾದರು. ಕೆಲವು ತಿಂಗಳುಗಳ ಕಾಲ ಡೇಟಿಂಗ್ ಮಾಡಿ 2010 ರಲ್ಲಿ ವಿವಾಹವಾದರು. ಎಂಟು ವರ್ಷಗಳ ಮದುವೆಯ ನಂತರ ಮಾಜಿ ದಂಪತಿಗಳು 2018 ರಲ್ಲಿ ತಮ್ಮ ಮೊದಲ ಮಗು ಇಜಾನ್​ನನ್ನು ಸ್ವಾಗತಿಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

14 ವರ್ಷದ ದಾಂಪತ್ಯ ಜೀವನ ಅಂತ್ಯ.. ಮಾಜಿ ಪತಿಯ ವಿವಾಹ ಬಗ್ಗೆ ಸಾನಿಯಾ ಮಿರ್ಜಾ ಏನಂದ್ರು ಗೊತ್ತಾ?

https://newsfirstlive.com/wp-content/uploads/2024/01/Shoibh-Mallik.jpg

Load More