newsfirstkannada.com

ಮುಂಬೈನಲ್ಲಿ ಸೇವೆ ನಿಲ್ಲಿಸಿದ ಐತಿಹಾಸಿಕ ಡಬಲ್​ ಡೆಕ್ಕರ್ ಬಸ್​ಗಳು.. ನೆನಪು ಮೆಲುಕು ಹಾಕಿದ ನೆಟ್ಟಿಗರು

Share :

Published September 16, 2023 at 9:29am

    8 ದಶಕಗಳ ಕಾಲ ನಗರದಲ್ಲಿ ಸೇವೆ ಸಲ್ಲಿಸಿದ್ದ ಬಸ್​ಗಳು

    ಮುಂಬೈನಲ್ಲಿ ಇನ್ಮುಂದೆ ಡೆಬಲ್ ಡೆಕ್ಕರ್ ಸೇವೆ ಇರಲ್ಲ..!

    ಡಬಲ್ ಡೆಕ್ಕರ್​ ಬಸ್​ ನೆನಪು ಮೆಲುಕು ಹಾಕಿದ ನೆಟ್ಟಿಗರು

ಮುಂಬೈ: 1900ನೇ ಇಸವಿಯಿಂದ ಇಲ್ಲಿಯವರೆಗೆ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗಾಗಿ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಮುಂಬೈ ನಗರದ ಐಕಾನಿಕ್ ಡಬಲ್ ಡೆಕ್ಕರ್ ಬಸ್‌ಗಳು ತಮ್ಮ ಸೇವೆಯನ್ನು ನಿನ್ನೆಗೆ ಮುಗಿಸಿವೆ. ಇನ್ನು ಮುಂದೆ ಮುಂಬೈ ನಗರದಲ್ಲಿ ಈ ಡಬಲ್ ಡೆಕ್ಕರ್ ಬಸ್‌ಗಳು ಕಾಣುವುದಿಲ್ಲ.

ನಗರದಲ್ಲಿ 7 ಡಬಲ್ ಡೆಕ್ಕರ್ ಬಸ್‌ಗಳು ಓಡಾಡುತ್ತಿದ್ದವು. ಇದರಲ್ಲಿ 3 ತೆರೆದ ಮೇಲ್ಛಾವಣಿ ಹೊಂದಿದ ಬಸ್​ಗಳಾಗಿದ್ದವು. ಇಲ್ಲಿಗೆ ಇವು 15 ವರ್ಷಗಳನ್ನು ಪೂರೈಸಿದ್ದು ತುಂಬಾ ಹಳೆಯದಾಗಿ ಕಾಣುತ್ತಿವೆ. ಸೆ.15 ಅಂದರೆ ನಿನ್ನೆಗೆ ಈ ಡಬಲ್ ಡೆಕ್ಕರ್ ಬಸ್​ಗಳು ತಮ್ಮ ಸೇವೆಯನ್ನು ಅಂತ್ಯಗೊಳಿಸಿವೆ. ಅಲ್ಲದೇ ತೆರೆದ ಮೇಲ್ಛಾವಣಿ ಹೊಂದಿದ ಡಬಲ್ ಡೆಕ್ಕರ್ ಬಸ್​ಗಳು ಮುಂದಿನ ತಿಂಗಳು ಅಕ್ಟೋಬರ್ 5 ರವರೆಗೆ ಮಾತ್ರ ಸೇವೆ ನೀಡಿ ನಂತರ ಕಾರ್ಯವನ್ನು ಅಂತ್ಯಗೊಳಿಸಲಿವೆ ಎಂದು ವರದಿ ಮಾಡಲಾಗಿದೆ.

ಡಬಲ್ ಡೆಕ್ಕರ್ ಬಸ್​ಗಳ ನಿನ್ನೆ ಕೊನೆ ಸೇವೆ ನೀಡುವ ವೇಳೆ ಬಸ್​ಗಳನ್ನು ಬಲೂನ್​ಗಳಿಂದ ಸಿಂಗಾರಿಸಲಾಗಿತ್ತು. ಈ ವೇಳೆ ಡ್ರೈವರ್​, ಕಂಡಕ್ಟರ್ ತಮ್ಮ ಅನುಭವವನ್ನು ಹಂಚಿಕೊಂಡರು. ಅಲ್ಲದೆ ನಗರ ವಾಸಿಗಳು ಕೂಡ ಬಸ್​ನಲ್ಲಿ ಪ್ರಯಾಣಿಸಿದ್ದ ಹಳೆಯ ನೆನಪುಗಳನ್ನು ಹೇಳಿಕೊಂಡಿದ್ದಾರೆ.

ಡಬಲ್ ಡೆಕ್ಕರ್ ಬಸ್‌ಗಳು ತೆರೆದ ಮೇಲ್ಛಾವಣಿ ಹೊಂದಿದ್ದರಿಂದ ನಗರದ ಪ್ರವಾಸಕ್ಕೆ ಹೇಳಿ ಮಾಡಿಸಿದಂತ್ತಿದ್ದವು. ಕಳೆದ ಎಂಟು ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದ ಬಸ್​ಗಳನ್ನು ಮುಂದಿನ ದಿನಗಳಲ್ಲಿ ರಸ್ತೆಯಲ್ಲಿ ಓಡಾಡುವುದಿಲ್ಲ ಎನ್ನಲಾಗಿದೆ. ಸದ್ಯ ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ತಮ್ಮ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಕಾಲೇಜಿನ ದಿನಗಳನ್ನು, ಫ್ಯಾಮಿಲಿ, ಫ್ರೆಂಡ್ಸ್ ಜೊತೆ ನಗರ ಸುತ್ತಾಡಿದ್ದರ ಬಗ್ಗೆ ನೆಟ್ಟಿಗರು ನೆನಪು ಮಾಡಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮುಂಬೈನಲ್ಲಿ ಸೇವೆ ನಿಲ್ಲಿಸಿದ ಐತಿಹಾಸಿಕ ಡಬಲ್​ ಡೆಕ್ಕರ್ ಬಸ್​ಗಳು.. ನೆನಪು ಮೆಲುಕು ಹಾಕಿದ ನೆಟ್ಟಿಗರು

https://newsfirstlive.com/wp-content/uploads/2023/09/double_decker_buses.jpg

Load More