/newsfirstlive-kannada/media/post_attachments/wp-content/uploads/2024/12/SYRIA-END-OF-ERA.jpg)
ಸಿರಿಯಾದಲ್ಲಿ ಸೃಷ್ಟಿಯಾದ ನಾಗರಿಕ ಯುದ್ಧ ಈಗ ಅಲ್ಲಿನ ಅಧ್ಯಕ್ಷನನ್ನು ದೇಶ ಬಿಟ್ಟು ಓಡಿ ಹೋಗುವಂತೆ ಮಾಡಿದೆ. ಕಳೆದ ಹಲವು ತಿಂಗಳಿನಿಂದ ಸಿರಿಯಾದಲ್ಲಿ ಆಂತರಿಕ ಕಲಹ ಜೋರಾಗಿತ್ತು. ನಾಗರಿಕರು ಸಿರಿಯಾದ ಅಧ್ಯಕ್ಷ ಬಶಾರ್ ಅಲ್ ಅಸ್ಸಾದ್ ಮೇಲೆ ಬಂಡಾಯ ಸಾರಿದ್ದರು. ಒಂದೊಂದೇ ನಗರವನ್ನು ವಶಕ್ಕೆ ಪಡೆದುಕೊಳ್ಳುತ್ತಾ ಬಂದ ಬಂಡಾಯಗಾರರ ಪಡೆ, ಈಗ ಡೆಮಾಸ್ಕಸ್ ಮೇಲೆಯೂ ತಮ್ಮ ಹಿಡಿತ ಸಾಧಿಸಿದ್ದು. ಸಿರಿಯಾದ ಅಧ್ಯಕ್ಷ ಅಸ್ಸಾದ್ ದೇಶ ಬಿಟ್ಟು ಓಡಿ ಹೋಗಿದ್ದಾರೆ.
ಕಳೆದ 24 ವರ್ಷಗಳಿಂದ ಸಿರಿಯಾದಲ್ಲಿ ಬಶಾರ್ ಅಲ್ ಅಸ್ಸಾದ್ ಅವರ ಸರ್ಕಾರವಿತ್ತು. 24 ವರ್ಷದ ಸುದೀರ್ಘ ಅಧಿಕಾರ ಇಂದಿಗೆ ಸಿರಿಯಾದಲ್ಲಿ ಕೊನೆಗೊಂಡಿದೆ. ದಿ ಹಯ್ಯಾತ್ ತೆಹ್ರಿರ್ ಅಲ್ ಶಮ್ ಎಂಬ ಬಂಡಾಯಗಾರರ ಗುಂಪು ಸಿರಿಯಾದಲ್ಲಿ ನಾಗರೀಕ ಯುದ್ಧವನ್ನು ಸಾರಿತ್ತು. ಸದ್ಯ ನಡೆದಿರುವ ಬೆಳವಣಿಗೆ ಬಗ್ಗೆ ಮಾತನಾಡಿರುವ ಈ ಬಂಡಾಯ ಪಡೆ 8.12.2024ರ ದಿನವನ್ನು ನಾವು ಕರಾಳ ದಿನಗಳ ಯುಗಾಂತ್ಯವೆಂದು ಘೋಷಿಸುತ್ತೇವೆ ಎಂದಿದೆ.
ಇದನ್ನೂ ಓದಿ:ಮಧ್ಯಪ್ರಾಚ್ಯದಲ್ಲಿ ಮತ್ತೆ ಹೊತ್ತಿಕೊಂಡ ಆಂತರಿಕ ಸಂಘರ್ಷದ ಕಿಚ್ಚು; ಸರ್ಕಾರದ ವಿರುದ್ಧ ತಿರುಗಿ ಬಿದ್ದ ಬಂಡುಕೋರರು!
ಈ ಒಂದು ಬೆಳವಣಿಗೆಯಿಂದ ಹೆಚ್ಚು ಕಡಿಮೆ ಅಲ್ ಅಸ್ಸಾದ್ನ ಸರ್ಕಾರ ಸದಾಕಾಲಕ್ಕೆ ಕುಸಿದು ಬಿದ್ದಂತಾಗಿದೆ ಎಂದು ಅಂತಾರಾಷ್ಟ್ರೀಯ ಪತ್ರಿಕೆಗಳು ಹೇಳುತ್ತಿವೆ. ಈಗಾಗಲೇ ಡೆಮಾಸ್ಕಸ್ ಏರ್ಪೋರ್ಟ್ನಿಂದ ಮಿಲಿಟರಿ ಪಡೆ ಹಾಗೂ ರಕ್ಷಣಾ ಸಿಬ್ಬಂದಿಯನ್ನು ವಾಪಸ್ ಕಳುಹಿಸಲಾಗಿದೆ. ಡೆಮಾಸ್ಕಸ್ನಲ್ಲಿ ಯುದ್ಧದ ಟ್ಯಾಂಕ್ ಏರಿ ಗನ್ಫೈರ್ ಮಾಡಿ ವಿಜಯೋತ್ಸಾಹ ಅಚರಿಸುತ್ತಿವೆ ಬಂಡಾಯಪಡೆಗಳು. ಮತ್ತೊಂದು ಕಡೆ ಅಲ್ ಅಸ್ಸಾದ್ನ ಬೃಹತ್ ಪ್ರತಿಮೆಯನ್ನು ಕೂಡ ನೆಲಕ್ಕೆ ಉರುಳಿಸಲಾಗಿದ್ದು. ಮಸೀದಿಯ ಲೌಡ್ಸ್ಪೀಕರ್ನಲ್ಲಿ ಇದು ಅಸ್ಸಾದ್ನ ಆಡಳಿತ ಅಂತ್ಯದ ಸಂಕೇತ ಎಂದು ಘೋಷಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ