/newsfirstlive-kannada/media/post_attachments/wp-content/uploads/2025/02/ODISHA_turtles.jpg)
ನೈಸರ್ಗಿಕತೆ ಎಂದರೆ ಯಾವುದು ಯಾವ ಸಮಯಕ್ಕೆ ಆಗಬೇಕು ಅದು ಹಾಗೇ ಆಗುತ್ತದೆ. ಪ್ರಕೃತಿಯಲ್ಲಿ ಯಾವುದನ್ನು ಮನುಷ್ಯ ಸೃಷ್ಟಿಸಲಾರ ಎಂದು ಈಗಾಗಲೇ ವೈಜ್ಞಾನಿಕತೆ ಹೇಳಿದೆ. ಅದರಂತೆ ಕೆಲ ಜಲಚರಗಳು ಸಮುದ್ರದ ನೀರಲ್ಲಿದ್ದರೂ ತಮ್ಮ ಸಂತಾನೋತ್ಪತ್ತಿಗಾಗಿ ದಡಕ್ಕೆ ಬರಲೇಬೇಕು. ಅದೇ ರೀತಿ ಲಕ್ಷಾನುಗಟ್ಟಲೇ ಆಮೆಗಳು ಕರಾವಳಿಗೆ ಬಂದಿರುವುದು ನೋಡುಗರ ಪ್ರವಾಸಿಗರಿಗೆ ಸಂತಸ ಮೂಡಿಸಿವೆ.
ಸಮುದ್ರ ತೀರದಲ್ಲಿ ಎಷ್ಟು ದೂರ ಹೋಗಿ ನೋಡಿದರು ಮರಳಿನ ಬದಲು ಬರೀ ಆಮೆಗಳೆ ಕಾಣಿಸುತ್ತಿವೆ. ಇಂತಹ ವಿಹಂಗಮನೋಟ ಕಂಡು ಬಂದಿರುವುದು ಒಡಿಶಾದಲ್ಲಿ. ಗಹಿರ್ಮಾತಾ ಸಮುದ್ರದ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ರುಶಿಕುಲ್ಯ ಹಾಗೂ ದೇವಿ ನದಿಯ ತೀರಕ್ಕೆ 6 ಲಕ್ಷಕ್ಕೂ ಅಧಿಕ ಅಳಿವಿನಂಚಿನಲ್ಲಿರುವ (Endangered species) ಆಲಿವ್ ರಿಡ್ಲಿ ಆಮೆಗಳು ಭೇಟಿ ನೀಡಿವೆ.
ಬೇಸಿಗೆ ಕಾರಣ ಈಗ ಆಲಿವ್ ರಿಡ್ಲಿ ಆಮೆಗಳ ಸಂತಾನೋತ್ಪಾತ್ತಿ ಸಮಯವಾಗಿದೆ, ಹೀಗಾಗಿ ಸಮುದ್ರದಿಂದ ಸಾವಿರಾರು ಕಿಲೋಮೀಟರ್ ಪ್ರಯಾಣ ಮಾಡಿ ಗೂಡು ಕಟ್ಟಲು ಇಲ್ಲಿಗೆ ಬರುತ್ತವೆ. ಮೊಟ್ಟೆಗಳನ್ನು ಇಟ್ಟ ಬಳಿಕ ಆಮೆಗಳು ಮತ್ತೆ ಸಮುದ್ರದ ಒಳಗೆ ಹೋಗಿ ಬಿಡುತ್ತವೆ. ಮೊಟ್ಟೆಗಳಿಂದ ಬರುವ ಮರಿ ಆಮೆಗಳು ಕೂಡ ಸಮುದ್ರಕ್ಕೆ ಹೋಗುತ್ತವೆ. ಕೆಲವೊಂದು ಮರಿ ಆಮೆಗಳು ನರಿ, ಕಾಡುಬೆಕ್ಕು ಇತ್ಯಾದಿ ಪ್ರಾಣಿಗಳಿಗೆ ಆಹಾರವಾಗುತ್ತವೆ. ಆದರೆ ಈ ಕರಾವಳಿ ತೀರವು ಮೊಟ್ಟೆ ಇಡಲು ಆಮೆಗಳಿಗೆ ಸೂಕ್ತವಾಗಿದ್ದರಿಂದ ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತವೆ.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಿದ ಯುವ ಆಲ್ರೌಂಡರ್.. ಶರವೇಗದ ಫೀಲ್ಡಿಂಗ್ಗೆ ಮೊದಲ ವಿಕೆಟ್ ರನೌಟ್
2023ರಲ್ಲಿ 6.37 ಲಕ್ಷ ಆಮೆಗಳು ಆಗಮಿಸಿದ್ದವು, ಆದರೆ ಈಗ ಇವುಗಳ ಸಂಖ್ಯೆಯಲ್ಲಿ ಹೆಚ್ಚಾಗಿದ್ದು ಬರೋಬ್ಬರಿ 6.82 ಲಕ್ಷಕ್ಕೂ ಹೆಚ್ಚು ಆಲಿವ್ ರಿಡ್ಲಿ ಆಮೆಗಳು ಕಡಲತೀರಕ್ಕೆ ಮೊಟ್ಟೆಗಳನ್ನಿಡಲು ಬಂದಿವೆ. ಸದ್ಯ ಇವುಗಳನ್ನು ನೋಡಲು ಪ್ರವಾಸಿಗರು ಕೂಡ ದೊಡ್ಡ ಸಂಖ್ಯೆಯಲ್ಲಿ ಕರವಾಳಿ ಭಾಗಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ಬರ್ಹಾಂಪುರ ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್‌ಒ) ಸನ್ನಿ ಖೋಕ್ಕರ್ ಹೇಳಿದ್ದಾರೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ