/newsfirstlive-kannada/media/post_attachments/wp-content/uploads/2024/10/ORANGE-FRUIT-PEEL-3.jpg)
ಮುಡಾ, ಮೋಡದಲ್ಲಿ ಮರೆಯಾಯ್ತು ಅಂತ ರಿಲ್ಯಾಕ್ಸ್​ನಲ್ಲಿದ್ದ ಸಿಎಂ ಸಿದ್ದರಾಮಯ್ಯನವರಿಗೆ ಸಿಡಿಲು ಅಪ್ಪಳಿಸಿದೆ. ಮೈಸೂರು ಕರ್ಮಕಾಂಡಕ್ಕೆ ಇ.ಡಿ ಪ್ರವೇಶ ಆಗಿದ್ದು ಡಬಲ್​ ಟೆನ್ಶನ್​ ತರಿಸಿದೆ. ಮುಡಾ ಕಚೇರಿಯಲ್ಲಿ ಪರಿಶೀಲನೆ ವೇಳೆ ಕೆಲವು ಫೈಲ್ಸ್ ಮಿಸ್ ಆಗಿರೋದು ಪತ್ತೆಯಾಗಿದ್ದು, ಅನುಮಾನ ಹೆಚ್ಚಿಸಿವೆ. ಇದೇ ಮಿಸ್ಸಿಂಗ್ ಫೈಲ್ಸ್​ ಸಿಎಂಗೆ ಸಂಕಷ್ಟ ತಂದೊಡ್ಡುವ ಸಾಧ್ಯತೆಯೂ ಇದೆ.
ಇದನ್ನೂ ಓದಿ:ಮತ್ತೊಂದು ಮುಡಾ ಹಗರಣ? CM ಸಿದ್ದರಾಮಯ್ಯ ವಿರುದ್ಧ ಹೊಸ ಬಾಂಬ್ ಸಿಡಿಸಿದ ಹೆಚ್.ಡಿ ಕುಮಾರಸ್ವಾಮಿ
/newsfirstlive-kannada/media/post_attachments/wp-content/uploads/2024/09/CM_SIDDARAMAIAH_MUDA.jpg)
ಮುಡಾ ಕೇಸಲ್ಲಿ ಇ.ಡಿ ಎಂಟ್ರಿ, ಸಿಎಂ ಸಿಎಂ ಸಿದ್ದರಾಮಯ್ಯಗೆ ಹೆಚ್ಚಾಯ್ತು ಟೆನ್ಷನ್
ಮುಡಾ ಹಗರಣ ಸಂಬಂಧ ಮೈಸೂರಿನ ಜೆಎಲ್​ಬಿ ರಸ್ತೆಯಲ್ಲಿರುವ ಮುಡಾ ಕಚೇರಿ ಮೇಲೆ 20 ಕ್ಕೂ ಅಧಿಕ ಇ.ಡಿ ಅಧಿಕಾರಿಗಳು ದಿಢೀರ್​ ದಾಳಿ ಮಾಡಿ ಶಾಕ್ ಕೊಟ್ಟಿದ್ದರು. ಆರ್​ಐಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ದೂರಿನ ಆಧಾರದ ಮೇಲೆ ಈ ದಾಳಿ ಮಾಡಿದ್ದು ಕಚೇರಿಯಲ್ಲಿನ ದಾಖಲೆ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ:ಮುಡಾ ಹಗರಣಕ್ಕೆ ಮೇಜರ್ ಟ್ವಿಸ್ಟ್; ಮೈಸೂರು ಕಚೇರಿಯಲ್ಲಿ ಸಂಚಲನ..!
13 ಗಂಟೆಗಳ ಕಾಲ ಜಾರಿ ನಿರ್ದೇಶನಾಲಯ ಟೀಮ್​ನಿಂದ ತಲಾಶ್
ಇ.ಡಿ ಅಧಿಕಾರಿಗಳು ಮುಡಾದಲ್ಲಿ ನಡೆದಿರುವ ಎಲ್ಲಾ ಅಕ್ರಮಗಳ ದಾಖಲೆಗಳಿಗಾಗಿ ಶೋಧ ನಡೆಸಿದ್ದಾರೆ. ಮುಡಾ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಪ್ರಸನ್ನ ಕುಮಾರ್ ಕಚೇರಿಯಲ್ಲಿ ತೀವ್ರ ಶೋಧ ನಡೆದಿದೆ. ಬೆಳಗ್ಗೆ 10 ಗಂಟೆಯಿಂದ ರಾತ್ರಿ ಸುಮಾರು 11 ಗಂಟೆಯವರೆಗೆ ಶೋಧ ಕಾರ್ಯ ನಡೆಸಲಾಯ್ತು. ಸಿದ್ದರಾಮಯ್ಯ ಪತ್ನಿ ಪಾರ್ವತಿ ಹೆಸರಿಗೆ ಪರಭಾರೆಯಾದ ಜಮೀನು ಕುರಿತು ತಲಾಶ್ ನಡೆದಿದೆ. ಒಂದಷ್ಟು ಪ್ರಮುಖ ಪ್ರಶ್ನೆಗಳನ್ನೂ ಮುಡಾ ಅಧಿಕಾರಿಗಳಿಗೆ ಕೇಳಲಾಗಿದೆ.
ಮುಡಾ ಅಧಿಕಾರಿಗಳಿಗೆ ಪ್ರಶ್ನೆ
ಸೈಟು ಹಂಚಿದ ಬಗ್ಗೆ ನಿಮ್ಮ ಬಳಿ ಮಾಹಿತಿ ಏನಿದೆ?
A1 ಆಗಿರೋ ಸಿಎಂ ಸಿದ್ದರಾಮಯ್ಯ ಪ್ರಭಾವ ಏನಿದೆ?
ಕಂದಾಯ ಇಲಾಖೆಯಿಂದ ದಾಖಲೆ ಸಂಗ್ರಹಿಸಿದ್ದೀರಾ?
ಸ್ನೇಹಮಯಿ ಕೃಷ್ಣರಿಂದ ಪಡೆದ ಮೂಲ ದಾಖಲೆ ಎಲ್ಲಿ?
ಕೆಲ ದಾಖಲೆಗಳು ಇಲ್ಲ ಎನ್ನುವ ಮಾಹಿತಿ ಇದೆ.. ಯಾಕೆ?
ಸೈಟ್ ವಾಪಸ್ ಪಡೆದುಕೊಳ್ಳುವ ಪ್ರಕ್ರಿಯೆ ಮುಗಿಸಿದ್ದೀರಾ?
ಸೈಟು ವಾಪಸ್ ಪಡೆದ ಬಳಿಕ ಸೈಟುಗಳ ಸ್ಥಿತಿ ಹೇಗಿದೆ?
ಹೀಗೆ 60ಕ್ಕೂ ಅಧಿಕ ಪ್ರಶ್ನೆ ಕೇಳಲಾಗಿದೆ. ಉತ್ತರ ನೀಡದ ಅಧಿಕಾರಿಗಳಿಗೆ ತೀವ್ರ ತರಾಟೆ ತೆಗೆದುಕೊಂಡಿರೋ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸದ್ಯಕ್ಕೆ ಒಂದು ಸುತ್ತಿನ ರೇಡ್ ಮುಕ್ತಾಯಗೊಂಡಿದೆ. ಇಂದು ಕೂಡ ಮತ್ತೆ ತನಿಖೆ ಮುಂದುವರೆಸಲು ತೀರ್ಮಾನ ಮಾಡಲಾಗಿದೆ.
ಹಗರಣಕ್ಕೆ ಸಂಬಂಧಿಸಿದಂತೆ ಮುಡಾದಲ್ಲಿ ಹಲವಾರು ಕಡತಗಳು ನಾಪತ್ತೆಯಾಗಿದ್ದು, ತನಿಖೆಯ ವೇಳೆ ಗಮನಕ್ಕೆ ಬಂದಿದೆ. ಹೀಗಾಗಿ ಪ್ರಸ್ತುತ ಇರುವ ಕಡತಗಳು ಸಹ ನಾಪತ್ತೆಯಾಗಬಾರದು ಎಂಬ ಉದ್ದೇಶದಿಂದ ಮುಡಾದ ಮೇಲೆ ಕಣ್ಗಾವಲು ಇರಿಸಲು ಸಿಆರ್‌ಪಿಎಫ್ ಯೋಧರ ಬಳಕೆ ಮಾಡಲಾಗಿದೆ. ಯೋಧರಿಗೆ ಮುಡಾ ಕಚೇರಿಗೆ ಹಾಸಿಗೆ, ದಿಂಬು, ರಗ್ಗಿನ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ: ರಾಮನಗರ ತೋಟದ ಮನೆಯಲ್ಲಿ ಮಹತ್ವದ ಬೆಳವಣಿಗೆ; ಜೆಡಿಎಸ್ ಸಭೆಯಲ್ಲಿ ಒಮ್ಮತದ ನಿರ್ಧಾರ..!
ಮುಡಾ ಹಗರಣ ಸಿಎಂ ಸಿದ್ದರಾಮಯ್ಯರನ್ನು ಬಿಟ್ಟು ಬಿಡದಂತೆ ಕಾಡುತ್ತಿದೆ. ಸದ್ಯ ಮುಡಾ ಕಚೇರಿ ಮೇಲೆ ದಾಳಿ ಮಾಡಿರುವ ಇ.ಡಿ ಅಧಿಕಾರಿಗಳು ಇದುವರೆಗೆ ನಡೆದ ಎಲ್ಲಾ ಹಗರಣಗಳ ದಾಖಲೆಗಳನ್ನು ತಡಕಾಡಿದ್ದಾರೆ. ಈ ದಾಳಿ ವೇಳೆ ಕಂಡು ಬಂದ ಮಿಸ್ಸಿಂಗ್ ಫೈಲ್ಸ್ ಸಿಎಂ ಸಿದ್ದರಾಮಯ್ಯರಿಗೆ ಸಂಕಷ್ಟ ತಂದೊಡ್ಡುವ ಸಾಧ್ಯತೆಯೂ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us