/newsfirstlive-kannada/media/post_attachments/wp-content/uploads/2024/10/ED-AND-SIDDARAMIAH.jpg)
ಬೆಂಗಳೂರು: ಜಾರಿ ನಿರ್ದೇಶನಾಲಯ, ಸಿದ್ದುಗೆ ಬಲೆ ಹಾಕಲು ನಿರ್ದೇಶನ ಪಡೆದಂತೆ ಕಾಣಿಸುತ್ತೆ. ಆದ್ರೆ, ಹರಿಯಾಣ ಎಲೆಕ್ಷನ್​​ ಬಳಿಕ ರಾಜ್ಯದಲ್ಲಿ ದೊಡ್ಡ ಜಾತ್ರೆ ಏರ್ಪಡಿಸಲಾಗಿದೆ. ರಾಜ್ಯದಿಂದ ಸಂಪನ್ಮೂಲ ಹರಿಯದಂತೆ ಮಹಾರಾಷ್ಟ್ರ ಎಲೆಕ್ಷನ್​ ಹತ್ತಿರದಲ್ಲಿ ಕ್ಷಿಪ್ರ ಕ್ರಾಂತಿ ಮೊಳಗುವ ಸುಳಿವುಗಳು ಸಿಗ್ತಿವೆ. ಹಾಗಾಗಿ ಸಿದ್ದರಾಮಯ್ಯ ಬಳಗದ ಆಪ್ತರ 1, 2, 3, 4 ಎಣಿಕೆ ಆಗಿದೆ. ದೆಹಲಿಯ ನಾರ್ಥ್​​ ಬ್ಲಾಕ್​ನಿಂದ ದಾಳಿಯ ಆದೇಶಕ್ಕೆ ಕಾಯಲಾಗ್ತಿದೆ ಅಂತ ಗೊತ್ತಾಗಿದೆ.
ಇತ್ತ ಇ.ಡಿ ಆಗಮನಕ್ಕೂ ಮುನ್ನವೇ ಸಿದ್ದರಾಮಯ್ಯ ಆಪ್ತರ ಎದೆಯಲ್ಲಿ ಢವಢವ ಶುರುವಾಗಿದೆ. ಸಚಿವರ ಮನೆ, ಕಚೇರಿ ಮೇಲೆ ದಾಳಿಗೆ ಇ.ಡಿ ಸಜ್ಜಾಗಿದೆ ಅಂತ ಗೊತ್ತಾಗಿದ್ದು, ಸಿದ್ದರಾಮಯ್ಯ ಆಪ್ತ ಸಚಿವರಿಗೂ ರೇಡ್ ಟೆನ್ಷನ್ ಕಾಡ್ತಿದೆ. ಬೈರತಿ ಸುರೇಶ್, ಮಹದೇವಪ್ಪ, ಜಮೀರ್​ಗೆ ಮುಡಾಫ್​​​ ಆಗಿದ್ದು, ಮುಡಾ ಅಧ್ಯಕ್ಷ ಮರೀಗೌಡ, ಈ ಹಿಂದಿನ ಮುಡಾ ಆಯುಕ್ತರು, ಬಾಮೈದ ಮಲ್ಲಿಕಾರ್ಜುನ ಸ್ವಾಮಿಗೂ ಇ.ಡಿ ಆತಂಕ ಬೆಂಬಿಡದೇ ಕಾಡ್ತಿದೆ. ಹೀಗಾಗಿ ಪ್ರಕರಣದ ಬಿಸಿಗೆ ಕೈ ನಾಯಕರು ವಿಚಲಿತರಾಗಿದ್ದಾರೆ.
ಇನ್ನು, ಇ.ಡಿ, ಲೋಕಾ’ ತನಿಖೆಗೆ ನಾನು ರೆಡಿ ಅಂತ ಸಿದ್ದರಾಮಯ್ಯ ಗಟ್ಟಿ ದನಿಯಲ್ಲಿ ಗುಡುಗಿದ್ದಾರೆ. ಯಾವುದೇ ತನಿಖೆಗೆ ನಾನು ಹೆದರಲ್ಲ ಎಂದಿರುವ ಸಿಎಂ, ನನ್ನದೇನು ತಪ್ಪಿಲ್ಲ ವಿಶ್ವಾಸದ ಮಾತಾಡಿದ್ದಾರೆ.ಇಡಿ, ಲೋಕಾಯುಕ್ತ ತನಿಖೆಗೆ ರೆಡಿ. ಯಾವುದೇ ತನಿಖೆ ನಡೆದ್ರೂ ಐ ಡೋಂಟ್ ಕೇರ್. ನಾನು ಯಾವುದೇ ಅಕ್ರಮದಲ್ಲಿ ಭಾಗಿಯಾಗಿಲ್ಲ. ತನಿಖೆ ಬಗ್ಗೆ ಯಾಕೆ ತಲೆಕಡೆಸಿಕೊಳ್ಳಲಿ. ತನಿಖೆ ಮಾಡ್ಲಿ ಬಿಡಿ. ಸತ್ಯ ಹೊರಗಡೆ ಬರಲಿ. ನಾನು ಪತ್ರ ಬರೆದಿಲ್ಲ, ಆದೇಶ ನೀಡಿಲ್ಲ. ನನ್ನ ವಿರುದ್ಧ ಯಾವದೇ ದಾಖಲೆ ಇಲ್ಲ. ನನ್ನ ಇಮೇಜ್​ಗೆ ಡ್ಯಾಮೇಜ್ ಮಾಡಿರುವ ವಿಪಕ್ಷಗಳಿಗೂ ತಕ್ಕ ಉತ್ತರ ಸಿಗಲಿದೆ. ಇತ್ತ, ಸಿಎಂ ವಿರುದ್ಧ ECIR ದಾಖಲಿಸಿಕೊಂಡ ಇ.ಡಿ. ಪಿಎಂಎಲ್ಎ ಆ್ಯಕ್ಟ್​ ಅಡಿ ತನಿಖೆ ನಡೆಸೋ ಸಾಧ್ಯತೆ ಇದೆ.. ಆದ್ರೆ, ಇ.ಡಿ ದಾಖಲಿಸಿದ ಕೇಸ್ ಸಿಎಂಗೆ ಅಪ್ಲೇ ಆಗುತ್ತಾ ಅನ್ನೋ ಪ್ರಶ್ನೆ ಇದೆ.
ಸಿದ್ದರಾಮಯ್ಯನವರಿಗೆ ಸಂಕಷ್ಟ ತಂದಿಡುವ ಅಂಶಗಳು ಯಾವುವು?
ಅಪರಾಧ ಚಟುವಟಿಕೆ ಮೂಲಕ ಆಸ್ತಿಯನ್ನ ಪಡೆಯುವುದು. ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪಡೆದಿರುವಂತಹ ಆಸ್ತಿ. ಮುಡಾ ಪ್ರಕರಣದಲ್ಲಿ ಅಕ್ರಮವಾಗಿ ಸೈಟ್ ಪಡೆದ ಆರೋಪ. ಪಿಎಂಎಲ್ಎ ಸೆಕ್ಷನ್ 2 ವಿ. ಅಪರಾಧ ಮೂಲಕ ಯಾವುದೇ ಆಸ್ತಿ, ಸ್ವತ್ತು ಪಡೆದಿರಬೇಕು. ಅದಕ್ಕೆ ರೂಪ ಇರಬಹುದು, ಇರದೆಯೂ ಇರುವಂತಹ ಆಸ್ತಿ. ಅದಕ್ಕೆ ಸ್ಥಿರಾಸ್ತಿ-ಚರಾಸ್ತಿ, ಕಣ್ಣಿಗೆ ಕಾಣಿಸುವ, ಕಾಣದಿರುವ ಆಸ್ತಿ ಒಳಪಡಲಿದೆ.
ದಾಖಲೆಯಲ್ಲಿ ಇಲ್ಲದಿರುವ-ದಾಖಲೆಗಳಲ್ಲಿ ಇರದೇ ಇರುವ ಆಸ್ತಿ ಆಗಿದೆ. ಮುಡಾ ಕೇಸ್​ನಲ್ಲಿ ಫೋರ್ಜರಿ, ನಕಲಿ ದಾಖಲೆ ಸೃಷ್ಟಿ ಆರೋಪ ಸಹ ಇಲ್ಲಿದೆ. ಆದ್ರೆ, ಈ ಅಂಶಗಳು ಸಿಂಧು ಆಗಬೇಕಾದ್ರೆ, ಮೂಲ ಕ್ರೈಂ ಆಗಿರಬೇಕು. ಲೋಕಾಯುಕ್ತ ತನಿಖೆಯಲ್ಲಿ ಅಪರಾಧ ಪೂರ್ಣ ಸಾಬೀತಾಗಬೇಕು. ಅಕ್ರಮವಾಗಿ, ನಕಲಿ ದಾಖಲೆ ಸೃಷ್ಟಿಸಿ, ವಂಚನೆ ದೃಢವಾಗಬೇಕು. ಸರ್ಕಾರಿ ಅಧಿಕಾರಿ ಅಕ್ರಮ ಲಾಭ ಪಡೆದಿರೋದು ಸಾಬೀತಾಗಬೇಕು. ಮೂಲ ಪ್ರಕರಣದಲ್ಲಿ ಅಪರಾಧ ಚಟುವಟಿಕೆ ದೃಢ ಪಟ್ಟರೆ ಮಾತ್ರ ECIR ಅಪ್ಲೇ ಆಗಲಿದೆ.
ಒಂದು ಕಡೆ ಸಿಎಂಗೆ ಸಂಕಷ್ಟ ಶುರುವಾಗಿದ್ರೆ, ಇತ್ತ ಮುಡಾ ದೂರುದಾರ ಸ್ನೇಹಮಯಿ ಕೃಷ್ಣಗೆ ಇ.ಡಿ ಸಮನ್ಸ್ ಜಾರಿ ಮಾಡಿದೆ. ನಾಳೆ ವಿಚಾರಣೆಗೆ ಹೋಗ್ತೇನೆ ಅಂತ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.
ಈ ಕೇಸ್​ನಲ್ಲಿ ಸಿದ್ದು ತನಿಖೆಗೆ ಒಳಪಡೋದು ಸಿದ್ಧವಾಗಿದೆ. ಲೋಕಾಯುಕ್ತ ತನಿಖೆ ಏನೋ ಓಕೆ. ಆದ್ರೆ, ಇ.ಡಿ ತನಿಖಾ ಉರುಳು, ಸಿದ್ದು ಕೊರಳು ಬಿಗಿ ಮಾಡುದ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ