newsfirstkannada.com

ಸಚಿವರ ಆಪ್ತನ ಮನೆಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ ಕೇಸ್​.. 35 ಕೋಟಿ ರೂಪಾಯಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..!

Share :

Published May 16, 2024 at 10:26am

    ಕಾಂಗ್ರೆಸ್​​ ನಾಯಕನ ನಿವಾಸದಲ್ಲಿ 35 ಕೋಟಿ ಹಣ ಪತ್ತೆ

    7 ಗಂಟೆ ವಿಚಾರಣೆ ನಡೆಸಿ ED ಅಧಿಕಾರಿಗಳು ಮಾಡಿದ್ದೇನು?

    ಕಾಂಗ್ರೆಸ್ ನಾಯಕ ಯಾರು? 35 ಕೋಟಿ ಪತ್ತೆ ಕೇಸ್​ಗೆ ಸಂಬಂಧವೇನು?

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ, ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಸಚಿವ ಅಲಂಗೀರ್ ಆಲಂರನ್ನ ನಿನ್ನೆ ಜಾರಿ ನಿರ್ದೇಶನಾಲಯ ಬಂಧಿಸಿದೆ.

ಎರಡನೇ ದಿನ ಸುಮಾರು ಆರು ಗಂಟೆಗಳ ವಿಚಾರಣೆ ನಡೆಸಿ 70 ವರ್ಷದ ಅಲಂಗೀರ್ ಆಲಂರನ್ನ ಮನಿ ಲಾಂಡರಿಂಗ್ ಆಕ್ಟ್ ನಿಬಂಧನೆಗಳ ಅಡಿಯಲ್ಲಿ ತನಿಖಾ ಸಂಸ್ಥೆಯ ವಲಯ ಕಚೇರಿಯಲ್ಲಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಈ ಬೆನ್ನಲ್ಲೇ ರಾಂಚಿಯಲ್ಲಿರುವ ಇಡಿ ಕಚೇರಿಯ ಹೊರಗೆ ಬಿಗಿ ಭದ್ರತೆ ನಿಯೋಜಿಸಲಾಗಿದೆ.

ಇದನ್ನೂ ಓದಿ:ಪತ್ನಿಗೆ ವಿಡಿಯೋ ಕಾಲ್ ಮಾಡುತ್ತಲೇ ಪ್ರಾಣಬಿಟ್ಟ ಜಿಮ್ ಟ್ರೈನರ್.. ಹೆದರಿಸಲು ಹೋಗಿ ಜೀವ ಹೋಯ್ತು..

ಕಳೆದ ವಾರ ಆಲಂ ಅವರ ಆಪ್ತ ಕಾರ್ಯದರ್ಶಿ ಹಾಗೂ ರಾಜ್ಯ ಆಡಳಿತ ಸೇವಾ ಅಧಿಕಾರಿ ಸಂಜೀವ್ ಕುಮಾರ್ ಲಾಲ್​ರನ್ನ ಇಡಿ ಬಂಧಿಸಿ, ಅವರಿಗೆ ಸಂಬಂಧಿಸಿದ ಫ್ಲಾಟ್‌ ಮೇಲೆ ದಾಳಿ ನಡೆಸಿ 35 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ವಶಪಡಿಸಿಕೊಂಡಿತ್ತು. ಇದೀಗ ವಿಚಾರಣೆ ಬಳಿಕ ಸಚಿವ ಅಲಂಗೀರ್ ಆಲಂರನ್ನ ಬಂಧಿಸಲಾಗಿದೆ.

ಅಲಂಗೀರ್​ ಆಲಂ ಯಾರು..?
ಅಲಂಗೀರ್ ಆಲಂ ಅವರು ಪಾಕುರ್ ವಿಧಾನಸಭೆ ಕ್ಷೇತ್ರದ ಶಾಸಕ. ನಾಲ್ಕು ಬಾರಿ ಶಾಸಕನಾಗಿ ಆಯ್ಕೆ ಆಗಿರುವ ಇವರು, ಜಾರ್ಖಂಡ್ ಸರ್ಕಾರದಲ್ಲಿ ಸಂಸದೀಯ ವ್ಯವಹಾರಗಳ ಮತ್ತು ಗ್ರಾಮೀಣ ಅಭಿವೃದ್ಧಿ ಸಚಿವರಾಗಿದ್ದಾರೆ. ಇದಕ್ಕೂ ಮೊದಲು ಅಲಂಗೀರ್​ ಅಲಂ ಅಂದರೆ 2006, ಅಕ್ಟೋಬರ್ 20 ರಿಂದ 2009 ಡಿಸೆಂಬರ್​ ವರೆಗೆ ಜಾರ್ಖಂಡ್ ವಿಧಾನಸಭೆಯ ಸ್ಪೀಕರ್ ಆಗಿದ್ದರು. 2000ರಲ್ಲಿ ನಡೆದ ಚುನಾವಣೆಯಲ್ಲಿ ಮೊದಲ ಬಾರಿಗೆ ವಿಧಾನಸಭೆಯನ್ನು ಪ್ರವೇಶ ಮಾಡಿದ್ದರು. ನಂತರ 4 ಬಾರಿ ಶಾಸಕರಾಗಿದ್ದಾರೆ.

ಇದನ್ನೂ ಓದಿ:ಸಚಿವರ ಆಪ್ತನ ಮನೆಯಲ್ಲಿ ಕಂತೆ ಕಂತೆ ನೋಟುಗಳ ಗುಡ್ಡೆ.. ಈ ಕಾಂಗ್ರೆಸ್ ನಾಯಕನ ಹಿನ್ನೆಲೆ ಏನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಚಿವರ ಆಪ್ತನ ಮನೆಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ ಕೇಸ್​.. 35 ಕೋಟಿ ರೂಪಾಯಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..!

https://newsfirstlive.com/wp-content/uploads/2024/05/CONG-ALAM-1.jpg

Load More