ಸ್ಟಾರ್ ನಟ ಮಹೇಶ್​ ಬಾಬುಗೆ ED ಸಂಕಷ್ಟ.. ನಡೆದಿದೆಯಾ ಕೋಟಿ ಕೋಟಿ ಅವ್ಯವಹಾರ..?

author-image
Ganesh
Updated On
ಸ್ಟಾರ್ ನಟ ಮಹೇಶ್​ ಬಾಬುಗೆ ED ಸಂಕಷ್ಟ.. ನಡೆದಿದೆಯಾ ಕೋಟಿ ಕೋಟಿ ಅವ್ಯವಹಾರ..?
Advertisment
  • ಏಪ್ರಿಲ್ 28 ರಂದು ವಿಚಾರಣೆಗೆ ಬರುವಂತೆ ಸಮನ್ಸ್
  • ಇಡಿ ಅಧಿಕಾರಿಗಳು ಯಾಕೆ ಸಮನ್ಸ್ ನೀಡಿದ್ದಾರೆ ಗೊತ್ತಾ?
  • ಏ.16 ರಂದು ED ಅಧಿಕಾರಿಗಳಿಗೆ ಸಿಕ್ಕಿದೆ ಮಹತ್ವದ ದಾಖಲೆ

ಮನಿ ಲ್ಯಾಂಡರಿಂಗ್ ಪ್ರಕರಣದಲ್ಲಿ ತೆಲುಗು ಸ್ಟಾರ್ ನಟ ಮಹೇಶ್ ಬಾಬುಗೆ (Mahesh Babu) ಇಡಿ (ಜಾರಿ ನಿರ್ದೇಶನಾಲಯ) ನೋಟಿಸ್ ಜಾರಿ ಮಾಡಿದೆ. ಸುರಾನ ಗ್ರೂಪ್ ಮತ್ತು ಸಾಯಿಸೂರ್ಯ ಡೆವಲಪರ್ಸ್ (Sai Surya Developers and Surana Group) ಪ್ರಕರಣದಲ್ಲಿ ಏಪ್ರಿಲ್ 28 ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ.

ಪ್ರಮೋಷನ್ ಅಡಿಯಲ್ಲಿ ಮಹೇಶ್ ಬಾಬು ಸುರಾನ ಗ್ರೂಪ್ ಮತ್ತು ಸಾಯಿಸೂರ್ಯ ಡೆವಲಪರ್ಸ್​ನಿಂದ ಐದು ಕೋಟಿಗೂ ಹೆಚ್ಚು ಹಣ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಏಪ್ರಿಲ್ 16 ರಂದು ಸುರಾನ ಗ್ರೂಪ್ ಮತ್ತು ಸಾಯಿಸೂರ್ಯ ಡೆವಲಪರ್ಸ್ ಮೇಲೆ ಇಡಿ ದಾಳಿ ಮಾಡಿತ್ತು. ಕಂಪನಿಗಳ ಕಚೇರಿ ಹಾಗೂ ಮುಖ್ಯಸ್ಥರ ನಿವಾಸದ ಮೇಲೆ ದಾಳಿ ನಡೆಸಿತ್ತು. ಅದಾದ ನಂತರ ಈ ಬೆಳವಣಿಗೆ ನಡೆದಿದೆ.

ಇದನ್ನೂ ಓದಿ: ಬಡ ಜನರ ಚಾಂಪಿಯನ್​​.. ಪೋಪ್ ಫ್ರಾನ್ಸಿಸ್ ಸರಳ ಜೀವನ ಶೈಲಿ ಹೇಗಿತ್ತು ಗೊತ್ತಾ?

ಅಧಿಕಾರಿಗಳು ಮಹೇಶ್​ ಬಾಬುಗೆ ಏಪ್ರಿಲ್ 28 ರಂದು ಹೈದರಾಬಾದ್‌ನಲ್ಲಿರುವ ಇಡಿ ಕಚೇರಿಗೆ ಬರುವಂತೆ ನೋಟಿಸ್ ಜಾರಿ ಮಾಡಿದ್ದಾರೆ. ಈ ಜಾಹೀರಾತಿಗಾಗಿ ಮಹೇಶ್ ಬಾಬು ಒಟ್ಟು 5 ಕೋಟಿ 90 ಲಕ್ಷ ರೂಪಾಯಿ ಪಡೆದಿದ್ದಾರೆ ಎನ್ನಲಾಗಿದೆ. ಅದರಲ್ಲಿ ಮಹೇಶ್ ಬಾಬು 3.4 ಕೋಟಿ ರೂಪಾಯಿ ಚೆಕ್ ಮತ್ತು 2.5 ಕೋಟಿ ರೂಪಾಯಿ ನಗದು ಪಡೆದಿರುವುದು ಪತ್ತೆಯಾಗಿದೆ.

ಸಾಯಿ ಸೂರ್ಯ ಡೆವಲಪರ್ ಎಂಡಿ ಸತೀಶ್ ಚಂದ್ರ ಮನೆಯಲ್ಲಿ ದೊರೆತ ದಾಖಲೆಯ ಆಧಾರದ ಮೇಲೆ ಪ್ರಕರಣ ಬೆಳಕಿಗೆ ಬಂದಿದೆ. ಮಹೇಶ್ ಬಾಬು ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಸಾಯಿಸೂರ್ಯ ಡೆವಲಪರ್ಸ್ ಜಾಹೀರಾತಿನಲ್ಲಿ ನಟಿಸಿದ್ದರು.

ಇದನ್ನೂ ಓದಿ: INSPIRING: ರಸ್ತೆಯಲ್ಲಿ ಬಿದ್ದು ನರಳಾಡ್ತಿದ್ದ ಹಸುವಿಗೆ ಚಿಕಿತ್ಸೆ ಕೊಡಿಸಿದ ಹೈಕೋರ್ಟ್​ನ ನ್ಯಾಯಮೂರ್ತಿಗಳು..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment