newsfirstkannada.com

ಚೊಚ್ಚಲ ಪಂದ್ಯದಲ್ಲೇ ಆಕಾಶ್ ​ದೀಪ್ ಮ್ಯಾಜಿಕ್.. ಭಾರತೀಯ ಬೌಲರ್ಸ್ ತಾಳ್ಮೆ ಪರೀಕ್ಷಿಸಿದ ರೂಟ್, ಸೆಂಚುರಿ

Share :

Published February 24, 2024 at 8:53am

Update February 24, 2024 at 8:54am

    ಆಕಾಶ್​ ದೀಪ್​ ಮುಂದೆ ಬೆನ್​ ಡಕೆಟ್​​​, ಪೋಪ್​ ​ ಸೈಲೆಂಟ್​ ಆದ್ರು

    ಇಂಗ್ಲೆಂಡ್​ ತಂಡಕ್ಕೆ ಆಸರೆಯಾದ ಜೋ ರೂಟ್ ಆಕರ್ಷಕ ಶತಕ

    ರವಿಚಂದ್ರನ್ ಅಶ್ವಿನ್​, ರವೀಂದ್ರ ಜಡೇಜಾರಿಂದ ಬ್ರಿಟಿಷರಿಗೆ ಶಾಕ್

ರಾಂಚಿ ಟೆಸ್ಟ್​​ನ ಮೊದಲ ದಿನದಾಟದಲ್ಲಿ ಇಂಡೋ -ಇಂಗ್ಲೆಂಡ್​ ತಂಡಗಳು ನಾನಾ- ನೀನಾ ಎಂಬಂತೆ ಸಾಲಿಡ್​ ಫೈಟ್​ ನಡೆಸಿದ್ವು. ಆರಂಭದಲ್ಲಿ ಇಂಡಿಯನ್​​ ಟೈಗರ್ಸ್​ ಘರ್ಜಿಸಿದ್ರೆ, ಆ ಬಳಿಕ ಇಂಗ್ಲೆಂಡ್​​ ಲಯನ್ಸ್​ ಸಾಲಿಡ್​ ಕಮ್​ಬ್ಯಾಕ್​ ಮಾಡಿದರು. ಹೇಗಿತ್ತು ಇಂಡೋ -ಇಂಗ್ಲೆಂಡ್​​ ನಡುವಿನ ಮೊದಲ ದಿನದಾಟದ ಕದನ?.

ಇಂಡೋ -ಇಂಗ್ಲೆಂಡ್​​​ 4ನೇ ಟೆಸ್ಟ್​​ನ ಮೊದಲ ದಿನದಾಟ ಅಭಿಮಾನಿಗಳಿಗೆ ಸಖತ್​ ಟ್ರೀಟ್​​​ ನೀಡ್ತು. ಡೆಬ್ಯೂಟಂಟ್​ ಆಕಾಶ್ ​ದೀಪ್ ಆರಂಭದಲ್ಲೇ ಆಂಗ್ಲರ ಆಟಕ್ಕೆ ಬ್ರೇಕ್​ ಹಾಕಿದ್ರು. ಆದ್ರೆ, ಆ ಬಳಿಕ ಅನುಭವಿ ಜೋ ರೂಟ್​​​, ಭಾರತೀಯ ಬೌಲರ್​ಗಳ ತಾಳ್ಮೆಯನ್ನೇ ಪರೀಕ್ಷಿಸಿಬಿಟ್ಟರು.

ಡೆಬ್ಯೂ ಪಂದ್ಯದಲ್ಲೇ ಆಂಗ್ಲರ ಚಳಿ ಬಿಡಿಸಿದ ಆಕಾಶ್​.!

ಟಾಸ್​​ ಗೆದ್ದು ಆತ್ಮವಿಶ್ವಾಸದಲ್ಲಿ ಬ್ಯಾಟಿಂಗ್​ ಆಯ್ದುಕೊಂಡ ಇಂಗ್ಲೆಂಡ್​​ ಕ್ಯಾಪ್ಟನ್​ ಬೆನ್​ ಸ್ಟೋಕ್ಸ್​​ ಲೆಕ್ಕಾಚಾರ ಆರಂಭದಲ್ಲೇ ತಲೆ ಕೆಳಗಾಯ್ತು. ಡೆಬ್ಯೂಟಂಟ್​​ ಆಕಾಶ್​ ದೀಪ್​ ಆಂಗ್ಲರ ಆಟಕ್ಕೆ ಆರಂಭದಲ್ಲೇ ಬ್ರೇಕ್​ ಹಾಕಿದರು. ಆಕಾಶ್​ ದೀಪ್​ ಆರ್ಭಟದ ಮುಂದೆ ಬೆನ್​ ಡಕೆಟ್​​​, ಒಲೀ ಪೋಪ್​ ಫುಲ್​ ಸೈಲೆಂಟಾದ್ರು. ಬಂದಷ್ಟೇ ವೇಗವಾಗಿ ಇವರಿಬ್ರು ಪೆವಿಲಿಯನ್​ ಸೇರಿದ್ರೆ, 42 ರನ್​ಗಳಿಗೆ ಜಾಕ್​ ಕ್ರಾವ್ಲಿ ವಿಕೆಟ್​ ಒಪ್ಪಿಸಿದರು.

5 ವಿಕೆಟ್​ ಕಬಳಿಸಿ ಮಿಂಚಿದ ಇಂಡಿಯನ್​ ಬೌಲರ್ಸ್​​

57 ರನ್​ಗಳಿಗೆ 3 ವಿಕೆಟ್​ ಕಳೆದುಕೊಂಡು ಕಂಗೆಟ್ಟ ತಂಡಕ್ಕೆ ಅಶ್ವಿನ್​, ರವೀಂದ್ರ ಜಡೇಜಾ ಶಾಕ್​ ನೀಡಿದ್ರು. 38 ರನ್​ಗಳಿಸಿ ಉತ್ತಮ ಸ್ಟಾರ್ಟ್​ ಪಡೆದುಕೊಂಡ ಜಾನಿ ಬೇರ್​​ಸ್ಟೋ ಅಶ್ವಿನ್​ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಬಿದ್ರು. ಬಳಿಕ ಕಣಕ್ಕಿಳಿದ ಕ್ಯಾಪ್ಟನ್​ ಬೆನ್​ ಸ್ಟೋಕ್ಸ್​​ಗೆ, ರವೀಂದ್ರ ಜಡೇಜಾ ಪೆವಿಲಿಯನ್​ ದಾರಿ ತೋರಿಸಿದ್ರು.

2ನೇ ಸೆಷನ್​ನಲ್ಲಿ ಇಂಗ್ಲೆಂಡ್​​​ ತಿರುಗೇಟು.!

ಮೊದಲ ಸೆಷನ್​​ನಲ್ಲಿ​ 112 ರನ್​​ಗಳಿಸಿ 5 ವಿಕೆಟ್​ ಕಳೆದುಕೊಂಡ ಇಂಗ್ಲೆಂಡ್​ ತಂಡ ಸೆಕೆಂಡ್​ ಸೆಷನ್​ನಲ್ಲಿ ಎಚ್ಚರಿಕೆಯ ಆಟವಾಡಿತು. ಅನುಭವಿ ಜೋ ರೂಟ್​ ಹಾಗೂ ಬೆನ್​ ಫೋಕ್ಸ್​​ ಸಾಲಿಡ್​​ ಪಾರ್ಟನರ್​ಶಿಪ್​ ಕಟ್ಟಿದ್ರು. ಇಂಡಿಯನ್​ ಬೌಲರ್​​ಗಳ ತಾಳ್ಮೆ ಪರೀಕ್ಷೆ ಮಾಡಿದ ಈ ಜೋಡಿ 261 ಎಸೆತಗಳನ್ನ ಎದುರಿಸಿ 113 ರನ್​ಗಳ ಜೊತೆಯಾಟವಾಡಿತು.

ಕ್ರಿಸ್​ ಕಚ್ಚಿ ನಿಂತ ರೂಟ್​​​.. ರಾಂಚಿಯಲ್ಲಿ ಶತಕದಾರ್ಭಟ.!

3ನೇ ಸೆಷನ್​ನ ಆರಂಭದಲ್ಲೇ ಬೆನ್​ ಫೋಕ್ಸ್​ ಆಟಕ್ಕೆ ಮೊಹಮ್ಮದ್​ ಸಿರಾಜ್​ ಬ್ರೇಕ್ ಹಾಕಿದ್ರು. 47 ರನ್​ಗಳಿಗೆ ಫೋಕ್ಸ್​​ ಆಟ ಅಂತ್ಯವಾದ್ರೆ, ಆ ಬಳಿಕ ಕಣಕ್ಕಿಳಿದ ಟಾಮ್​ ಹಾರ್ಟ್ಲಿ ಆಟವೂ ಸಿರಾಜ್​ ಮುಂದೆ ನಡೀಲಿಲ್ಲ. ಆದ್ರೆ, ಇನ್ನೊಂದು ತುದಿಯಲ್ಲಿ ಅದ್ಭುತ ಆಟವಾಡಿದ ಜೋ ರೂಟ್​​, ಶತಕ ಸಿಡಿಸಿ ಮಿಂಚಿದ್ರು.

ದಿನದ ಅಂತ್ಯಕ್ಕೆ ಇಂಗ್ಲೆಂಡ್​​ 7 ವಿಕೆಟ್​ ನಷ್ಟಕ್ಕೆ 307

226 ಎಸೆತಗಳನ್ನ ಎದುರಿಸಿದ ಜೋ ರೂಟ್​​ 9 ಬೌಂಡರಿಗಳ ನೆರವಿನಿಂದ 106 ರನ್​ ಗಳಿಸಿದ್ದಾರೆ. ರೂಟ್​ ಸಖತ್​ ಸಾಥ್​ ಕೊಡ್ತಿರೋ ಒಲೀ ರಾಬಿನ್ಸನ್​ 1 ಸಿಕ್ಸರ್ 4 ಬೌಂಡರಿ ಸಹಿತ 31 ರನ್​ಗಳಿಸಿದ್ದಾರೆ. ದಿನದ ಅಂತ್ಯಕ್ಕೆ 7 ವಿಕೆಟ್​​​ ನಷ್ಟಕ್ಕೆ 302 ರನ್​ಗಳಿಸಿದೆ. ಒಲಿ ರಾಬಿನ್ಸನ್​ ಹಾಗೂ ಜೋ ರೂಟ್​ ಇವತ್ತಿಗೆ ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ.

ಮೊದಲ ದಿನದಾಟದ ಆರಂಭಿಕ ಸೆಷನ್​ನಲ್ಲಿ ಆಘಾತ ಎದುರಿಸಿದ ಇಂಗ್ಲೆಂಡ್​ ತಂಡ 2 ಮತ್ತು 3ನೇ ಸೆಷನ್​ನಲ್ಲಿ ಅದ್ಭುತ ಆಟವಾಡಿದೆ. ಲಂಚ್​ ಬ್ರೇಕ್​ ಬಳಿಕ ಕೇವಲ 2 ವಿಕೆಟ್​ಗಳನ್ನ ಕಳೆದುಕೊಂಡ ಆಂಗ್ಲ ಪಡೆ ಸಾಲಿಡ್​ ಕಮ್​ಬ್ಯಾಕ್​ ಮಾಡಿದೆ. ಟೀಮ್​ ಇಂಡಿಯಾ ಕೂಡ ವಿಕೆಟ್​​ ಕಬಳಿಸಲು ಕಸರತ್ತು ನಡೆಸ್ತಾ ಇದ್ದು, ಹೀಗಾಗಿ ಇಂದಿನ ದಿನದಾಟದ ಮೊದಲ ಸೆಷನ್​ ಸಾಕಷ್ಟು ಕುತೂಹಲ ಮೂಡಿಸಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಚೊಚ್ಚಲ ಪಂದ್ಯದಲ್ಲೇ ಆಕಾಶ್ ​ದೀಪ್ ಮ್ಯಾಜಿಕ್.. ಭಾರತೀಯ ಬೌಲರ್ಸ್ ತಾಳ್ಮೆ ಪರೀಕ್ಷಿಸಿದ ರೂಟ್, ಸೆಂಚುರಿ

https://newsfirstlive.com/wp-content/uploads/2024/02/AKASH_DEEP.jpg

Load More