ವಿಶ್ವ ಕ್ರಿಕೆಟ್​ಗೆ ಟೀಮ್ ಇಂಡಿಯಾನೇ ಪವರ್ ಹೌಸ್​.. ಆದ್ರೆ ಪೇಸ್​ ಅಟ್ಯಾಕ್​ಗೆ ಬ್ರೇಕ್ ಬಿತ್ತಾ?

author-image
Bheemappa
Updated On
ಸ್ಟಾರ್​​​​​​​​​ ಗಿರಿ ಮುಂದೆ ಉಳಿದವ್ರು ಕಣ್ಮರೆ.. ಸಿರಾಜ್, ಜೈಸ್ವಾಲ್ ಬಗ್ಗೆ ಗಂಗೂಲಿ ಮಹತ್ವದ ಹೇಳಿಕೆ..!
Advertisment
  • ಬಿಸಿಸಿಐ ಆಯ್ಕೆ ಸಮಿತಿ ಕಣ್ಣಿಗೆ ಕಾಣಲ್ವಾ ಪ್ರತಿಭಾವಂತ ಆಟಗಾರರು.?
  • ಒಳ್ಳೆಯ ಆಟಗಾರನನ್ನ ಹುಡುಕುವಲ್ಲಿ ಮ್ಯಾನೆಜ್ಮೆಂಟ್ ವಿಫಲ ಆಯ್ತಾ?
  • ಪಂದ್ಯದಲ್ಲಿ ಟೀಮ್ ಇಂಡಿಯಾದ ಬೌಲಿಂಗ್ ಅಟ್ಯಾಕ್​​ ಬಗ್ಗೆ ಎದ್ದ ಪ್ರಶ್ನೆ

ಟೀಮ್ ಇಂಡಿಯಾದಲ್ಲಿ ಪೇಸರ್​​​ಗಳ ಗೋಲ್ಡನ್​​ ಎರಾ ಮುಗೀತಾ ಇಂಥದ್ದೊಂದು ಪ್ರಶ್ನೆ ಮ್ಯಾಂಚೆಸ್ಟರ್ ಟೆಸ್ಟ್​ನ ಪರ್ಫಾಮೆನ್ಸ್​​ನಿಂದ​ ಹುಟ್ಟಿಕೊಂಡಿದೆ. ಟೀಮ್ ಇಂಡಿಯಾ ವಿಶ್ವ ಕ್ರಿಕೆಟ್​​ಗೆ ಪವರ್ ಹೌಸ್ ಆಗಿರಬಹುದು. ಆದ್ರೆ, ಪೇಸ್ ಅಟ್ಯಾಕ್​ಗೆ ಅಲ್ಲ ಎಂಬ ಮಾತುಗಳು ಕೇಳಿ ಬರ್ತಾ ಇವೆ. ಹಾಗಾದ್ರೆ, ಟೀಮ್​ ಇಂಡಿಯಾ ಬೌಲಿಂಗ್​ ಬಲ ಕಳೆದುಕೊಳ್ತಾ?.

ಒಂದು ಟೈಮ್​​ನಲ್ಲಿ ಟೀಮ್ ಇಂಡಿಯಾ ಬಲ ಬ್ಯಾಟಿಂಗ್ ​ಮಾತ್ರ ಎಂಬ ಮಾತಿತ್ತು. ವಿರಾಟ್ ಕೊಹ್ಲಿ ಯಾವಾಗ ಟೀಮ್ ಇಂಡಿಯಾ ಕ್ಯಾಪ್ಟನ್ ಆದ್ರೋ, ಆವಾಗಿನಿಂದ ಎಲ್ಲ ಬದಲಾಯ್ತು. ಬ್ಯಾಟ್ಸ್​ಮನ್ ಬದಲು ಬೌಲರ್​​ಗಳು ಡಾಮಿನೇಟ್​ ಮಾಡಲು ಶುರುವಿಟ್ಟುಕೊಂಡ್ರು. 2018ರಿಂದ 2021 ಅವಧಿಯಲ್ಲಿ ಟೀಮ್ ಇಂಡಿಯಾದಲ್ಲಿ ನಡೆದಿದ್ದು ಪೇಸರ್​ಗಳ ದರ್ಬಾರ್. ಆಸ್ಟ್ರೇಲಿಯನ್ನರಿಗೆ ಅವರದ್ದೇ ನಾಡಿನಲ್ಲಿ ಮಣ್ಣು ಮುಕ್ಕಿಸಿದ್ದು ಇದಕ್ಕೆ ಬೆಸ್ಟ್ ಎಕ್ಸಾಂಪಲ್​.

publive-image

ಇಶಾಂತ್ ಶರ್ಮಾ, ಭುವನೇಶ್ವರ್ ಕುಮಾರ್​​​​​​​​​​, ಉಮೇಶ್​ ಯಾದವ್, ಮೊಹಮ್ಮದ್ ಶಮಿ, ಜಸ್​ಪ್ರೀತ್ ಬೂಮ್ರಾ.. ದೈತ್ಯ ಪೇಸ್ ಅಟ್ಯಾಕ್ ಹೊಂದಿದ್ದ ಟೀಮ್ ಇಂಡಿಯಾ, ದೇಶ ವಿದೇಶದಲ್ಲಿ ಗೆಲುವಿನ ದಂಡೆಯಾತ್ರೆ ನಡೆಸಿತ್ತು. ಸೇನಾ ದೇಶಗಳಲ್ಲಿ ಟೀಮ್ ಇಂಡಿಯಾದ ಸಕ್ಸಸ್​ ಸೂತ್ರವೇ ಡೆಡ್ಲಿ ಪೇಸ್ ಅಟ್ಯಾಕ್​ ಆಗಿತ್ತು. ಆದ್ರೆ, ಇದೀಗ ಪೇಸ್ ಅಟ್ಯಾಕ್ ಟೀಮ್ ಇಂಡಿಯಾಗೇ ಮಾಕರವಾಗಿದೆ.

130ರ ವೇಗದಲ್ಲಿ ಬೌಲಿಂಗ್.. ಬೇಕಿತ್ತಾ ಇಂಥಾ ಬೌಲರ್.?

ಮ್ಯಾಂಚೆಸ್ಟರ್ ಟೆಸ್ಟ್​​ ಪಂದ್ಯದ ನಡುವೆಯೇ ಟೀಮ್ ಇಂಡಿಯಾದ ಬೌಲಿಂಗ್ ಅಟ್ಯಾಕ್​​ ಬಗ್ಗೆ ಪ್ರಶ್ನೆ ಹುಟ್ಟಿದೆ. ಇದಕ್ಕೆ ಮೇನ್ ರೀಸನ್​ ಹರಿಯಾಣ ಹರಿಕೇನ್​​​ ಅನ್ಶುಲ್ ಕಾಂಬೋಜ್​. ಡೆಬ್ಯೂ ಮಾಡಿರೋ ಅನ್ಶುಲ್​ ಕಾಂಬೋಜ್​​ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇತ್ತು. ಆದ್ರೆ, ಅನ್ಶುಲ್​ ಕಾಂಬೋಜ್ ಬೌಲಿಂಗ್ ನೋಡಿದ್ಮೇಲೆ, ಯಾಕಾದ್ರೂ ಈತನ ಡೆಬ್ಯು ಮಾಡಿಸಿದ್ರು ಅನ್ನೋ ಪ್ರಶ್ನೆ ಉದ್ಬವವಾಗಿದೆ. ಕೇವಲ 130ರ ವೇಗದಲ್ಲಿ ಬೌಲಿಂಗ್ ಮಾಡುವ ಈತ, ಯಾಕಾದ್ರೂ ಬೇಕಿತ್ತೂ ಎಂಬ ಪ್ರಶ್ನೆಯೂ ಕಾಡತೊಡಗಿದೆ.

ಗಂಭೀರ್ ಸೆಲೆಕ್ಷನ್ ಬಗ್ಗೆ ಕಿಡಿ

ಗೌತಮ್ ಗಂಭೀರ್ ಸೆಲೆಕ್ಷನ್​ನಲ್ಲಿ ನಿಶ್ಚಲತೆ ಇಲ್ಲ. ದೀರ್ಘಕಾಲದ ತನಕ ಆಟಗಾರರನ್ನು ನಂಬಲ್ಲ. ಟೀಮ್ ಇಂಡಿಯಾ, ಬಾರ್ಡರ್​ ಗವಾಸ್ಕರ್ ಟೆಸ್ಟ್ ಸರಣಿಯನ್ನು ಹರ್ಷಿತ್ ರಾಣಾ ಜೊತೆ ಆಡಿತ್ತು. ಆದ್ರೆ, ಈಗ ಅನ್ಶುಲ್ ಕಾಂಬೋಜ್​ ಜೊತೆ ಆಡ್ತಿದೆ.

ಮನೋಜ್ ತಿವಾರಿ, ಮಾಜಿ ಕ್ರಿಕೆಟರ್​

ಅನ್ಶುಲ್ ಕಾಂಬೋಜ್​​ ಆಯ್ಕೆ ವಿಚಾರದಲ್ಲಿ ಮಾಜಿ ಸ್ಪಿನ್ನರ್​ ಆರ್​.ಅಶ್ವಿನ್ ಕೂಡ ಅಪಸ್ವರ ಎತ್ತಿದ್ದಾರೆ. ಐಪಿಎಲ್ ವೇಳೆ ನೋಡಿದ ಬೌಲಿಂಗ್​​ಗೂ, ಸದ್ಯ ನೋಡ್ತಿರುವ ಬೌಲಿಂಗ್ ಸ್ಪಿಡ್ ವೇರಿಯೇಷನ್ ಬಗ್ಗೆ ಅಚ್ಚರಿಗೊಂಡಿದ್ದಾರೆ.

ಆಸ್ಟ್ರೇಲಿಯಾದ ಪಾರ್ಟ್​ ಟೈಮ್ ಬೌಲರ್​ಗೂ ಇಲ್ಲ ಸಮ..!

ವಿಶ್ವ ಕ್ರಿಕೆಟ್​ನಲ್ಲಿ ಬಿಸಿಸಿಐ ಪವರ್ ಹೌಸ್.. ವಿಶ್ವ ಕ್ರಿಕೆಟ್ ಲೋಕದ ಅಧಿಪತಿ.. ಆದ್ರೆ, 140 ವೇಗದಲ್ಲಿ ಬೌಲಿಂಗ್ ಮಾಡುವ ಒಂದೊಳ್ಳೆ ಬೌಲರ್ ಟೀಮ್ ಇಂಡಿಯಾಗೆ ಸಿಕ್ಕಿಲ್ಲ. ಇದು ಟೀಮ್ ಇಂಡಿಯಾ ದುರ್ದೈವವೋ..? ಇಲ್ಲ ಟೀಮ್ ಇಂಡಿಯಾದಲ್ಲಿನ ಪಾಲಿಟಿಕ್ಸ್​ಗೆ ಸಂದ ಜಯವೋ ಗೊತ್ತಾಗ್ತಿಲ್ಲ. ಆಸ್ಟ್ರೇಲಿಯಾದ ಪಾರ್ಟ್​ ಟೈಮ್ ಸ್ಪಿನ್ನರ್ ಲಬುಶೇನ್, ಫಾಸ್ಟ್​ ಬೌಲಿಂಗ್ ಮಾಡಿದ್ರೂ 131ರ ವೇಗದಲ್ಲಿ ಇರುತ್ತೆ. ಆದ್ರೆ, ಪೇಸರ್ ಆಗಿ ಕಣಕ್ಕಿಳಿದ ಅನ್ಶುಲ್ ಕಾಂಬೋಜ್​​ 123, 124, 125 ಅಸುಪಾಸಿನಲ್ಲೇ ಬೌಲಿಂಗ್ ಮಾಡ್ತಿದ್ದಾರೆ. ಇದೇ ವಿಚಾರವಾಗಿಯೇ ಇಂಗ್ಲೆಂಡ್​ ಮಾಜಿ ನಾಯಕ ಮೈಕಲ್ ವಾನ್, ಪವರ್ ಹೌಸ್ ಬಿಸಿಸಿಐಗೆ ಚಾಟಿ ಬೀಸಿದ್ದಾರೆ.

ಇದನ್ನೂ  ಓದಿ: ಅಭಿಷೇಕ್, ರಿಂಕು ಸಿಂಗ್, ಸುದರ್ಶನ್ ಬ್ಯಾಟಿಂಗ್​ಗೆ ಮುಂಚೆ ಏನ್ ಮಾಡ್ತಾರೆ.. ಹೀಗೆ ಮಾಡೋದು ಯಾಕೆ?

publive-image

ಬೌಲಿಂಗ್​ನಲ್ಲಿ ಇಲ್ಲ ಪವರ್​!

ವಿಶ್ವ ಕ್ರಿಕೆಟ್‌ನಲ್ಲಿ ಭಾರತ ಪವರ್‌ಹೌಸ್‌. ಆದ್ರೆ. ಭಾರತದ ಡೊಮೆಸ್ಟಿಕ್ ಕ್ರಿಕೆಟ್​ನಲ್ಲಿ ಶಾರ್ದೂಲ್, ಕಾಂಬೋಜ್‌ಗಿಂತ ಉತ್ತಮ ಬೌಲರ್ ಇಲ್ಲ ಎಂದು ತೋರುತ್ತದೆ. ಇದನ್ನು ನಂಬಲು ಅಸಾಧ್ಯವಾಗಿದೆ. ಇಂಡಿಯನ್ ಕ್ರಿಕೆಟ್ ಪಾಲಿಟಿಕ್ಸ್​ ಅಂಡರ್​​​ ರೇಟೆಟ್​​.

ಮೈಕಲ್ ವಾನ್, ಇಂಗ್ಲೆಂಡ್ ಮಾಜಿ ನಾಯಕ

ಡೊಮೆಸ್ಟಿಕ್ ಕ್ರಿಕೆಟ್​ನಲ್ಲಿ ಪೇಸರ್​​ಗಳಿಗೆ ಇದ್ಯಾ ಕೊರತೆ..?

ಮೈಕಲ್ ವಾನ್ ನೇರವಾಗಿ ಬಿಸಿಸಿಐ ಆಯ್ಕೆ ಪ್ರಕ್ರಿಯೆಯನ್ನೇ ಪ್ರಶ್ನಿಸಿದ್ದಾರೆ. ಸೆಲೆಕ್ಟರ್​ಗಳು ನಾಮಕಾವಸ್ಥೆಗೆ ಇದ್ದಾರಾ ಎಂಬ ಅನುಮಾನವನ್ನು ಹುಟ್ಟು ಹಾಕಿದೆ. ಡೊಮೆಸ್ಟಿಕ್​ ಕ್ರಿಕೆಟ್​ನತ್ತ ಕಣ್ಣು ಹಾಯಿಸಿದ್ರೆ, ಮುಖೇಶ್ ಕುಮಾರ್​, ಮೊಹ್ಸಿನ್ ಖಾನ್, ಕುಲ್​ದೀಪ್ ಸೇನ್, ಸಿಮರ್​ಜಿತ್ ಸಿಂಗ್, ಪ್ರಣವ್ ರಾಘವೇಂದ್ರ, ನಮನ್ ತಿವಾರಿ, ಹರ್ಷಿತ್ ರಾಣಾ, ಖಲೀಲ್ ಅಹ್ಮದ್​, ವಿದ್ವತ್ ಕಾವೇರಪ್ಪ, ವೈಶಾಕ್ ವಿಜಯ್ ಕುಮಾರ್​​ಂಥ ಯಂಗ್ ಪೇಸರ್​ಗಳ ದಂಡೇ ಇದೆ. ಇದಲ್ಲದೇ ಪೇಸರ್​​ಗಳಿಗಾಗಿಯೇ ಬಿಸಿಸಿಐ ಸ್ಪೆಷಲ್ ಕಾಟ್ರಾಕ್ಟ್ ನೀಡ್ತಿದೆ. ಇಷ್ಟೇಲ್ಲಾ ಇದ್ರೂ, ಇಂಗ್ಲೆಂಡ್​ನಂಥ ಪೇಸ್ ಕಂಡೀಷನ್ಸ್​ನಲ್ಲಿ ಆಡುವ ಸಲುವಾಗಿ ಒಂದೊಳ್ಳೆ ಪೇಸರ್​​ನ ಹುಡುಕುವಲ್ಲಿ ಸೆಲೆಕ್ಟರ್ಸ್​ ವಿಫಲವಾಗಿರುವುದು ದುಸ್ಥಿತಿಯನ್ನ ಎತ್ತಿ ತೋರಿಸ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment