/newsfirstlive-kannada/media/post_attachments/wp-content/uploads/2024/06/KUWAIT_1.jpg)
ಕುವೈತ್‌ನಲ್ಲಿರೋ ಮಲಯಾಳಿ ಉದ್ಯಮಿಗೆ ಸೇರಿದ ಕಟ್ಟಡವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿ ಹಲವರ ಪ್ರಾಣ ಪಕ್ಷಿ ಹಾರಿ ಹೋಗಿದೆ. ಕೆಲಸ ಹುಡುಕಿಕೊಂಡು ವಿದೇಶದಲ್ಲಿ ಜೀವನ ನಡೆಸ್ತಿದ್ದ ಹತ್ತಾರು ಮಂದಿಯನ್ನ ಅಗ್ನಿದೇವ ಯಮನಂತೆ ಸಜೀವ ದಹನ ಮಾಡಿದ್ದಾನೆ.
ಅಪಾರ್ಟ್ಮೆಂಟ್.. ಫುಲ್ ಸೇಫ್ ಅಂಡ್ ಸೆಕ್ಯೂರ್ಡ್ ಅಂತಾರೆ. ಆದ್ರೆ ಸ್ವಲ್ಪ ಯಾಮಾರಿ ಏನಾದ್ರು ಅವಘಡಗಳು ಆದ್ರೆ ಶಿವನ ಪಾದಾನೇ ಗತಿ ಅನ್ನೋದು ಇಲ್ಲಿ ಮತ್ತೊಮ್ಮೆ ನಿಜವಾಗಿದೆ. ಪಶ್ಚಿಮ ಏಷ್ಯಾದ ಒಂದು ದೇಶವಾಗಿರೋ ಕುವೈತ್‌ನ ದಕ್ಷಿಣ ನಗರವಾದ ಮಂಗಾಫ್‌ನಲ್ಲಿ ಸಂಭವಿಸಿರೋ ಭಾರಿ ಅಗ್ನಿ ಅವಘಡದಲ್ಲಿ ಮಾರಣ ಹೋಮವೇ ನಡೆದು ಹೋಗಿದೆ.
ಇದನ್ನೂ ಓದಿ:ರಾಜ್ಯದ ಜಿಲ್ಲೆಗಳಲ್ಲಿ ವರುಣಾರ್ಭಟ.. ಮನೆ ಮೇಲೆ ಮರ ಬಿದ್ದು ಮಹಿಳೆ ಗಂಭೀರ; ಇಂದು ಮಳೆಯ ಎಚ್ಚರಿಕೆ?
ಘಟನೆಯಲ್ಲಿ ಗಾಯಗೊಂಡ 50ಕ್ಕೂ ಹೆಚ್ಚು ಜನರು
ದಕ್ಷಿಣ ಕುವೈತ್‌ನ ಮಂಗಾಫ್ ನಗರದಲ್ಲಿ ಕಾರ್ಮಿಕರ ವಸತಿ ಕಟ್ಟಡದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, 50 ಮಂದಿ ಸಾವನ್ನಪ್ಪಿದ್ದಾರೆ. ದುರಂತ ಅಂದ್ರೆ ಸಾವಿನ್ನಪ್ಪಿದವರು 50 ಜನರ ಪೈಕಿ 40 ಭಾರತೀಯರೇ ಆಗಿದ್ದಾರೆ. ಇನ್ನೂ ಕಟ್ಟಡದಲ್ಲಿ ಸಿಲುಕಿದ್ದ 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ನ್ಯೂಸ್ ಫಸ್ಟ್ಗೆ ಕುವೈತ್‌ನಲ್ಲಿರುವ ಆಸೀಫ್ ಮಾಹಿತಿ ನೀಡಿದ್ದಾರೆ. ಕಟ್ಟಡದಲ್ಲಿ ಸುಮಾರು 160 ಜನರು ವಾಸಿಸುತ್ತಿದ್ದರು, ಅವರೆಲ್ಲ ಒಂದೇ ಕಂಪನಿಯ ಕೆಲಸಗಾರರಾಗಿದ್ದರು ಅಂತಾ ಹೇಳಲಾಗ್ತಿದೆ.
ಕಟ್ಟಡವು ಮಲಯಾಳಿ ಉದ್ಯಮಿ ಕೆಜಿ ಅಬ್ರಹಾಂ ಒಡೆತನದ NBTC ಸಮೂಹಕ್ಕೆ ಸೇರಿದೆ. ಇನ್ನೂ ಕುವೈತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸಂತ್ರಸ್ತರಿಗೆ ಸಹಾಯ ಮಾಡಲು 965-6550-5246 ಎಂಬ ಸಹಾಯವಾಣಿ ಸಂಖ್ಯೆಯನ್ನು ಪ್ರಾರಂಭಿಸಿದೆ.
ಇದನ್ನೂ ಓದಿ:ಸಿನಿಮಾ ಇಂಡಸ್ಟ್ರಿಯಿಂದ ಬ್ಯಾನ್ ಆಗ್ತಾರಾ ದರ್ಶನ್.. ರಾಕ್ಲೈನ್ ವೆಂಕಟೇಶ್ ಹೇಳುವುದು ಏನು?
ಭಾರತೀಯರ ಕುಟುಂಬಗಳಿಗೆ ಪ್ರಧಾನಿ ಮೋದಿ ತಲಾ 2 ಲಕ್ಷ ರೂಪಾಯಿ
ಕುವೈತ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದ ಕುರಿತು ದೆಹಲಿಯ 7 ಲೋಕ ಕಲ್ಯಾಣ್ ಮಾರ್ಗ್‌ನಲ್ಲಿರುವ ತಮ್ಮ ನಿವಾಸದಲ್ಲಿ ಪ್ರಧಾನಿ ಮೋದಿ ಪರಿಶೀಲನಾ ಸಭೆ ನಡೆಸಿದ್ರು. ಭೀಕರ ಅಗ್ನಿ ದುರಂತದಲ್ಲಿ ಸಾವನ್ನಪ್ಪಿದ ಭಾರತೀಯರ ಕುಟುಂಬಗಳಿಗೆ ಪ್ರಧಾನಿ ಮೋದಿ ತಲಾ 2 ಲಕ್ಷ ರೂಪಾಯಿ, ಗಾಯಾಳುಗಳಿಗೆ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಇನ್ನೂ ಅಗ್ನಿ ಅವಘಡದಲ್ಲಿ ಗಾಯಗೊಂಡವರಿಗೆ ಸೂಕ್ತ ವೈದ್ಯಕೀಯ ಆರೈಕೆಯನ್ನು ಒದಗಿಸಲು ವೈದ್ಯಕೀಯ ತಂಡಗಳು ಪ್ರಯತ್ನಿಸುತ್ತಿವೆ ಎಂದು ಭಾರತೀಯ ಸಚಿವಾಲಯ ಹೇಳಿದೆ.
ದುರಂತ ನಡೆದ ಸ್ಥಳದಲ್ಲಿರೋ ಕನ್ನಡಿಗರು ಭಯದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಆತಂಕದಲ್ಲಿದ್ದ ಜನರ ಜೊತೆ ಕುವೈತ್‌ನಲ್ಲಿರೋ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು ನಿಂತು ನಿಮ್ಮ ಜೊತೆ ನಾವಿದ್ದೇವೆ ಎಂದು ಧೈರ್ಯ ತುಂಬುತ್ತಿದ್ದಾರೆ. ಕುವೈತ್‌ನಲ್ಲಿ ಬದುಕು ಕಟ್ಟಿಕೊಳ್ಳಲು ತೆರಳಿದ್ದ ಮಂದಿ ಅವಘಡದಲ್ಲಿ ಸಾವನ್ನಪ್ಪಿರೋದು ನಿಜಕ್ಕೂ ದುರಂತವೇ ಸರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ