ಎಂಜಿನಿಯರ್ ಕನಸು ಕಾಣ್ತಿರೋರಿಗೆ ಬಿಗ್ ಶಾಕ್​.. ಶೇಕಡಾ 83ರಷ್ಟು ಅಭ್ಯರ್ಥಿಗಳಿಗೆ ಕೆಲಸ ಸಿಗ್ತಿಲ್ಲ!

author-image
Bheemappa
Updated On
ಎಂಜಿನಿಯರ್ ಕನಸು ಕಾಣ್ತಿರೋರಿಗೆ ಬಿಗ್ ಶಾಕ್​.. ಶೇಕಡಾ 83ರಷ್ಟು ಅಭ್ಯರ್ಥಿಗಳಿಗೆ ಕೆಲಸ ಸಿಗ್ತಿಲ್ಲ!
Advertisment
  • ದೊಡ್ಡ ದೊಡ್ಡ ಕಂಪನಿಗಳು ತಮ್ಮ ಸಿಬ್ಬಂದಿ ಸಂಖ್ಯೆ ಕಡಿಮೆ ಮಾಡ್ತಿವೆ
  • ಈ ವರ್ಷ 1 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಕಳೆದುಕೊಂಡ್ರಾ?
  • ಕೃತಕ ಬುದ್ಧಿಮತ್ತೆ ಬಳಕೆ ಜಾಸ್ತಿ ಮಾಡಲು ಹುದ್ದೆಗಳ ಸಂಖ್ಯೆ ಕಡಿತ.!

ಇತ್ತೀಚಿನ ದಿನಗಳಲ್ಲಿ ಜಾಬ್​ ಸಿಗೋದೇ ಬಹಳ ಕಷ್ಟ. ಕಾರಣ ಹಲವು ಉದ್ಯಮಗಳು, ಉದ್ಯಮಿಗಳು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿ ಉದ್ಯೋಗದಲ್ಲಿ ನಷ್ಟ ಅನುಭವಿಸಿದ್ದಾರೆ. ಇದರ ಪರಿಣಾಮ ಭಾರತದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸ್ಟಡೀಸ್​ ಪ್ರಕಾರ ಭಾರತದಲ್ಲಿ ನಿರುದ್ಯೋಗ ದರ ಇನ್ನೂ ಏರಿಕೆ ಆಗೋ ಸಾಧ್ಯತೆ ಇದೆ. ಇದು ಉದ್ಯೋಗಾಂಕ್ಷಿಗಳಿಗೆ ಶಾಕಿಂಗ್​ ನ್ಯೂಸ್​ ಆಗಿದೆ. ಅದ್ರಲ್ಲೂ ಇಂಜಿನಿಯರ್​ ಆಗಬೇಕು ಅನ್ನೋ ಕನಸು ಕಾಣುತ್ತಾ ಪದವಿ ಸೇರುತ್ತಿರೋ ಶೇ. 83ರಷ್ಟು ಪದವೀಧರರಿಗೆ ಉದ್ಯೋಗವೇ ಸಿಕ್ಕಿಲ್ಲ ಎನ್ನುವ ಶಾಕಿಂಗ್​ ವರದಿ ಬಿಡುಗಡೆಯಾಗಿದೆ.

ಎಂಬಿಬಿಎಸ್​ ಮಾಡಬೇಕು ಅಂದ್ರೆ ಪಿಯುಸಿಯಲ್ಲಿ ಅಗತ್ಯವಿರೋ ಅಷ್ಟು ಪರ್ಸೆಂಟೇಜ್​ ಬಂದಿಲ್ಲ. ಮ್ಯಾನೇಜ್ಮೆಂಟ್​ ಕೋಟಾದಲ್ಲಿ ಕೋಟಿಗಟ್ಟಲೇ ದುಡ್ಡು ಕೊಟ್ಟ ಮೆಡಿಕಲ್​ ಸೀಟು ಪಡೆಯಲು ಆಗೋದಿಲ್ಲ. ಹೀಗೆ ಹಲವು ಕಾರಣಗಳಿಂದಾಗಿ ವಿದ್ಯಾರ್ಥಿಗಳು ಇಂಜಿನಿಯರಿಂಗ್​ ಕೋರ್ಸ್​ ಮಾಡುತ್ತಾರೆ. ಈಗಂತೂ ಇಂಜಿನಿಯರಿಂಗ್ ಕೋರ್ಸ್​ ಮಾಡಿದವರ ಸಂಖ್ಯೆ ಮಿತಿಮೀರಿ ಬಿಟ್ಟಿದೆ.

publive-image

ಒನ್​ ಟೈಮ್​ನಲ್ಲಿ ಇಂಜಿನಿಯರ್​ಗೆ ಭಾರೀ ಬೇಡಿಕೆ

ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್​ ಮಾಡಲು ಎಷ್ಟೋ ಬಾರಿ ಇಷ್ಟಾನೇ ಇರಲ್ಲ. ಆದ್ರೂ ಪೋಷಕರು ಮಾತ್ರ ಮಕ್ಕಳನ್ನು ಇಂಜಿನಿಯರಿಂಗ್ ಕೋರ್ಸ್​ಗೆ ಸೇರಿಸುತ್ತಾರೆ. ಒಂದು ಕಾಲದಲ್ಲಿ ಭಾರೀ ಬೇಡಿಕೆ ಇದ್ದ ಈ ಕೋರ್ಸ್​ಗೆ ದಿನೇ ದಿನೇ ತನ್ನ ಡಿಮ್ಯಾಂಡ್​ ಕಳೆದುಕೊಳ್ಳುತ್ತಿದೆ. ಒಂದು ವೇಳೆ ಇಂಜಿನಿಯರಿಂಗ್​​ನಲ್ಲಿ RANK ಬಂದ್ರೂ ಇಂಟರ್ವ್ಯೂ ಚೆನ್ನಾಗಿ ಮಾಡಿದ್ರೂ ಕೆಲಸ ಸಿಗುತ್ತಿಲ್ಲ.

ಒಂದು ಕಾಲದಲ್ಲಿ ಇಂಜಿನಿಯರಿಂಗ್​ ಮಾಡಿದ್ರೆ ಕೆಲಸ ಗ್ಯಾರಂಟಿ. ಜತೆಗೆ ಲಕ್ಷ ಲಕ್ಷ ಸಂಬಳ ಕೂಡ ಸಿಗ್ತಿತ್ತು. ಆದರೀಗ ಪರಿಸ್ಥಿತಿ ಹದಗೆಟ್ಟು ದಶಕಗಳೇ ಕಳೆದುಹೋಗಿದೆ. ಅದೆಷ್ಟೋ ಟೆಕ್ಕಿಗಳನ್ನು ದೊಡ್ಡ ದೊಡ್ಡ ಕಂಪನಿಗಳು ಮನೆಗೆ ಕಳಿಸುತ್ತಿವೆ. ಅತಿ ಹೆಚ್ಚು ಸಂಬಳ ಪಡೆಯುವವರೇ ಕಂಪನಿಗಳ ಟಾರ್ಗೆಟ್​ ಆಗಿದ್ದಾರೆ.

ಪ್ರತಿದಿನ ಲೇ ಆಫ್​​ ಸುದ್ದಿ ಕೇಳಿ ಬರುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಇಂಜಿನಿಯರ್ಸ್​ ಕೆಲಸ ಕಳೆದುಕೊಳ್ಳುತ್ತಿದ್ದಾರೆ. AI ಬಂದ ಮೇಲಂತೂ ಮತ್ತಷ್ಟು ಸ್ಥಿತಿ ಹದಗೆಟ್ಟಿದೆ. ಇದೇ ಕಾರಣಕ್ಕೆ ಪ್ರತಿಷ್ಠೆಗಾಗಿ ತಮ್ಮ ಮಕ್ಕಳನ್ನು ಇಂಜಿನಿಯರಿಂಗ್​ ಮಾಡಿಸಿದವರೂ ಉದ್ಯೋಗ ಸಿಗದ ಕಾರಣ ನೋವು ಅನುಭವಿಸುತ್ತಿದ್ದಾರೆ. ಕೆಲವರಿಗೆ ಉದ್ಯೋಗ ಸಿಕ್ಕರೂ ಅತ್ಯಂತ ಕಡಿಮೆ ಸಂಬಳದಲ್ಲಿ ಕೆಲಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿನಂಥ ಮಹಾನಗರಗಳಲ್ಲಿ ಜಾಬ್​ ಸಿಕ್ಕರೂ ಕಡಿಮೆ ಸಂಬಳ. ಆ ಸಂಬಳ ಬಾಡಿಗೆ ಕಟ್ಟಲೂ ಸಾಕಾಗಲ್ಲ ಎನ್ನುವ ಸ್ಥಿತಿ ಎದುರಾಗಿದೆ.

ಶೇ.83ರಷ್ಟು ಇಂಜಿನಿಯರ್​ಗಳಿಗೆ ಕೆಲಸ ಇಲ್ಲ

ಇಷ್ಟಾದ್ರೂ ಎಂಜಿನಿಯರಿಂಗ್​ ಮಾಡುವವರ ಸಂಖ್ಯೆ ಕಮ್ಮಿಯಾಗಿಲ್ಲ. ಇದರ ನಡುವೆಯೇ ಶಾಕಿಂಗ್​ ವರದಿಯೊಂದು ಬಂದಿದೆ. ಕಳೆದ ವರ್ಷ 2024ರಲ್ಲಿ ಎಂಜಿನಿಯರಿಂಗ್​ ಪದವಿ ಪಡೆದ ಶೇಕಡಾ 83 ರಷ್ಟು ಮಂದಿಗೆ ಉದ್ಯೋಗವೇ ಸಿಕ್ಕಿಲ್ಲ. ಕೊನೆಯ ಪಕ್ಷ ಇಂಟರ್ನ್‌ಶಿಪ್ ಕೂಡ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ.

ಇದು ಎಐ ಜಮಾನ. ಇದರ ಪರಿಣಾಮ ಮಾನವ ಶ್ರಮದ ಅಗತ್ಯ ಕಡಿಮೆಯಾಗುತ್ತಿದೆ. ಹೀಗಾಗಿ ಹೆಚ್ಚು ಕಂಪನಿಗಳು automation ಕೆಲಸದ ಮೊರೆ ಹೋಗಿವೆ. ಹೀಗಾಗಿ ಲೇ ಆಫ್ ಆಗುತ್ತಿದೆ. ಐಬಿಎಂ, Google, Amazon, Meta, Spotify ಮುಂತಾದ ದೊಡ್ಡ ಟೆಕ್ ಕಂಪನಿಗಳೂ ಸಹ ತಮ್ಮ ಸಿಬ್ಬಂದಿ ಸಂಖ್ಯೆಯನ್ನು ಕಡಿಮೆ ಮಾಡುವ ದಿಕ್ಕಿನಲ್ಲಿ ಕ್ರಮ ಕೈಗೊಂಡಿವೆ. ಇತ್ತೀಚಿನ ವರದಿಗಳ ಪ್ರಕಾರ ಈ ವರ್ಷದಲ್ಲಿ ಮಾತ್ರ ಸುಮಾರು 100ಕ್ಕೂ ಹೆಚ್ಚು ಕಂಪನಿಗಳು 1 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ್ದರೆಂಬ ಮಾಹಿತಿ ಇದೆ. ಇದರಿಂದ ಉದ್ಯೋಗಿಗಳು ಯಾವಾಗ ಬೇಕಾದ್ರೂ ತಮ್ಮ ಕೆಲಸ ಹೋಗಬಹುದು ಅನ್ನೋ ಭಯದಲ್ಲೇ ಜಾಬ್​ ಮಾಡುತ್ತಿದ್ದಾರೆ.

ಇದನ್ನೂ ಓದಿ: BHEL ಅಲ್ಲಿ 500ಕ್ಕೂ ಅಧಿಕ ಉದ್ಯೋಗಗಳು.. 10th, ಐಟಿಐ ಪಾಸ್ ಆಗಿದ್ರೆ ಅಪ್ಲೇ ಮಾಡಬಹುದು

publive-image

AI ದಿನದಿಂದ ದಿನಕ್ಕೆ ಬದಲಾಗುತ್ತಿರುವ ತಂತ್ರಜ್ಞಾನ ಕ್ಷೇತ್ರದಲ್ಲಿ ಮೊದಲ ಆಯ್ಕೆಯಾಗಿದೆ. ಕಂಪನಿಗಳಿಗೆ ಇದು ವೇಗ, ಶ್ರದ್ಧ ಮತ್ತು ವೆಚ್ಚಕಡಿತ ಎಂಬ ಮೂರೂ ಲಾಭಗಳನ್ನು ಒದಗಿಸುತ್ತಿದೆ. ಸಣ್ಣ ಕಂಪನಿಗಳು ಕೂಡ ಇತ್ತೀಚೆಗೆ ಯಾವುದೇ ಕಾರಣವಿಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುತ್ತಿವೆ.

ಎಲ್ಲಾ ಕಂಪನಿಗಳು ಎಐನಲ್ಲಿ ಹೆಚ್ಚು ಹೂಡಿಕೆ ಮಾಡುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬಂದಿದೆ. ಕೃತಕ ಬುದ್ಧಿಮತ್ತೆ ಬಳಕೆ ಜಾಸ್ತಿ ಮಾಡಲು ಮತ್ತು ಇಂಜಿನಿಯರ್ಸ್​​ ಸೇರಿದಂತೆ ಮಾರಾಟ ವಿಭಾಗದ ಕೆಲಸಗಾರರ ಉದ್ಯೋಗ ಕಡಿತ ಮಾಡಲು ಮುಂದಾಗಿದೆ ಎಂದು ಅಂತರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment