ಬೇಡಿಕೆ ಕಳೆದುಕೊಂಡ ಇಂಜಿನಿಯರಿಂಗ್​.. ಆಘಾತಕಾರಿ ಎಚ್ಚರಿಕೆ ಕೊಡ್ತಿದೆ ಕಳೆದ ಬಾರಿಯ ಅಡ್ಮಿಷನ್ ಸಂಖ್ಯೆ..!

author-image
Ganesh
Updated On
ಬೇಡಿಕೆ ಕಳೆದುಕೊಂಡ ಇಂಜಿನಿಯರಿಂಗ್​.. ಆಘಾತಕಾರಿ ಎಚ್ಚರಿಕೆ ಕೊಡ್ತಿದೆ ಕಳೆದ ಬಾರಿಯ ಅಡ್ಮಿಷನ್ ಸಂಖ್ಯೆ..!
Advertisment
  • ಇಂಜಿನಿಯರಿಂಗ್ ಕೋರ್ಸ್​​ಗಳಿಗೆ ಜೀವ ತುಂಬಲು ಸರ್ಕಸ್
  • ಫೀಸ್ ಕಡಿಮೆ ಮಾಡಲು ನಿರ್ಧರಿಸಿದ ಕರ್ನಾಟಕ ಸರ್ಕಾರ
  • ನಿಜಕ್ಕೂ ಡಿಮ್ಯಾಂಡ್ ಕಳೆದುಕೊಳ್ತಿದ್ಯಾ ಇಂಜಿನಿಯರಿಂಗ್?

ಇತ್ತೀಚೆಗಷ್ಟೇ 2025-26ನೇ ಶೈಕ್ಷಣಿಕ ಸಾಲಿನ ಖಾಸಗಿ ಅನುದಾನ ರಹಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಇಂಜಿನಿಯರಿಂಗ್ ಮತ್ತು ಆರ್ಚಿಟೆಕ್ಟ್ ಕೋರ್ಸ್‌ಗಳ ಫೀಸ್​​ 7.5 ಪರ್ಸೆಂಟ್ ಹೆಚ್ಚಿಸೋದಕ್ಕೆ ಸರ್ಕಾರ ತೀರ್ಮಾನ ಮಾಡಿತ್ತು. ಈಗಾಗಲೇ ವರ್ಷದಿಂದ ವರ್ಷಕ್ಕೆ ಶೇಕಡ.10ರಷ್ಟು ಪ್ರವೇಶ ಶುಲ್ಕ ಹೆಚ್ಚಿಸಲು ಅನುದಾನ ರಹಿತ ಖಾಸಗಿ ಕಾಲೇಜುಗಳಿಗೆ ಅವಕಾಶ ಇದೆ. ಇಷ್ಟಾದ್ರೂ ಮತ್ತೆ ಬಿಇ, ಆರ್ಕಿಟೆಕ್ಟ್‌ ಕೋರ್ಸ್‌ಗಳ ಎಂಟ್ರಿ ಫೀಸ್​ಅನ್ನ ಸರ್ಕಾರ ಹೆಚ್ಚಳ ಮಾಡಿ ವಿದ್ಯಾರ್ಥಿಗಳಿಗೆ ಶಾಕ್ ಕೊಟ್ಟಿತ್ತು.

ಇದನ್ನೂ ಓದಿ: ಮಕ್ಕಳಿಗೆ ಪಾಠ ಮಾಡಲು ಈಜಿ ಹೋಗುವ ಗಣಿತ ಶಿಕ್ಷಕ.. 20 ವರ್ಷಗಳಲ್ಲಿ ಒಂದು ದಿನವೂ ರಜೆ ಹಾಕಿಲ್ಲ

ಕರ್ನಾಟಕ ಅನುದಾನ ರಹಿತ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಸಂಘ, ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಹಾಗೂ ಖಾಸಗಿ ವೃತ್ತಿಪರ ಕಾಲೇಜುಗಳ ಆಡಳಿತ ಮಂಡಳಿ ಪ್ರತಿನಿಧಿಗಳ ಜೊತೆಗೆ ಇತ್ತೀಚೆಗೆ ತಾನೇ, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ ಸುಧಾಕರ್ ಸಭೆ ನಡೆಸಿದ್ದರು. ಈ ಮೀಟಿಂಗ್​ನಲ್ಲಿ ಫೀಸ್​​ ಹೆಚ್ಚಿಸೋ ನಿರ್ಧಾರಕ್ಕೆ ಬರಲಾಗಿದೆ. ಇದ್ರಿಂದ ಇಂಜಿನಿಯರಿಂಗ್​​ ಕೋರ್ಸ್​ ಮಾಡಬೇಕು ಅನ್ಕೊಂಡಿದ್ದ ಅಭ್ಯರ್ಥಿಗಳಿಗೆ ಶಾಕ್​ ಕೊಟ್ಟಿದೆ. ಸರ್ಕಾರದ ಈ ನಿರ್ಧಾರ ನೇರವಾಗಿ ವಿದ್ಯಾರ್ಥಿಗಳ ಕೆಂಗಣ್ಣಿಗೆ ಗುರಿ ಮಾಡಿಕೊಟ್ಟಿದೆ. ಹೀಗಾಗಿ ಇಡೀ ರಾಜ್ಯಾದ್ಯಂತ ಈ ನಿರ್ಧಾರದ ವಿರುದ್ಧ ಭಾರೀ ಆಕ್ರೋಶ ಕೇಳಿ ಬಂದಿತ್ತು. ಇದ್ರ ಬೆನ್ನಲ್ಲೇ ಅಲರ್ಟ್​ ಆಗಿರೋ ಸರ್ಕಾರ ಇಂಜಿನಿಯರಿಂಗ್​ ವಿದ್ಯಾರ್ಥಿಗಳಿಗೆ ಗುಡ್​ನ್ಯೂಸ್​​ ನೀಡಿದೆ.

ಹೌದು​​, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್ ಕೊಡೋದಕ್ಕೆ ಉನ್ನತ ಶಿಕ್ಷಣ ಇಲಾಖೆ ಸಜ್ಜಾಗಿದ್ದು, ಕೆಲವು ಬಿಇ ಕೋರ್ಸ್‌ಗಳ ಶುಲ್ಕ ಇಳಿಕೆಗೆ ಪ್ಲ್ಯಾನ್ ಮಾಡ್ತಾ ಇದೆ. ಒಂದು ಕಾಲದಲ್ಲಿ ಎಂಜಿನಿಯರಿಂಗ್ ಮಾಡಲು ತಾ ಮುಂದು ನಾ ಮುಂದು ಅಂತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುತ್ತಿದ್ರು. ಆದರೆ ಇತ್ತೀಚಿಗೆ ಕೆಲ ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಡಿಮ್ಯಾಂಡ್​ ಕಡಿಮೆ ಆಗಿದೆ. ಅಂತಹ ಕೋರ್ಸ್‌ಗಳಿಗೆ ಶುಲ್ಕ ವಿನಾಯಿತಿ ನೀಡಲು ಇಲಾಖೆ ಮುಂದಾಗಿದೆ.

ಇದನ್ನೂ ಓದಿ:SSLC ಪಾಸಾಗಿದ್ರೆ ಸಾಕು, ಭಾರೀ ಬೇಡಿಕೆಯ ಕೋರ್ಸ್ ಇದು..! 3 ವರ್ಷ ನಂತರ ಕೈತುಂಬ ಸಂಬಳ..!

ಮೆಕಾನಿಕಲ್, ಸಿವಿಲ್ ಸೇರಿಕೊಂಡು ಕೆಲ ಕೋರ್ಸ್‌ಗಳಿಗೆ ಅಡ್ಮಿಷನ್ ಮಾಡಿಕೊಳ್ಳೋದಕ್ಕೆ ವಿದ್ಯಾರ್ಥಿಗಳು ಹಿಂದೇಟು ಹಾಕ್ತಿದ್ದಾರೆ. ಹೀಗಾಗಿ ಕಳೆದ ವರ್ಷ ಹೆಚ್ಚಿನ ಸೀಟುಗಳು ಹಾಗೇ ಉಳಿದಿತ್ತು. ಇದನ್ನ ಗಮನಿಸಿದ ಉನ್ನತ ಶಿಕ್ಷಣ ಇಲಾಖೆ, ಡಿಮ್ಯಾಂಡ್ ಇಲ್ಲದ ಕೋರ್ಸ್‌ಗಳಿಗೆ ಮತ್ತೊಮ್ಮೆ ಜೀವ ತುಂಬಿಸೋಕೆ ಕೋರ್ಸ್‌ಗಳ ಫೀಸ್ ಕಡಿಮೆ ಮಾಡೋದಕ್ಕೆ ತಯಾರಿ ನಡೆಸಿದೆ. ಈ ಶುಲ್ಕ ವಿನಾಯಿತಿಯು ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳಿಗೆ ಮಾತ್ರ ಅನ್ವಯಿಸುತ್ತೆ.

2024ರಲ್ಲಿ ಹಾಗೇ ಉಳಿದಿದ್ದ ಸೀಟುಗಳ ವಿವರ

ಕಂಪ್ಯೂಟರ್ ಸೈನ್ಸ್​​ ಲಭ್ಯವಿದ್ದ ಸೀಟುಗಳ ಸಂಖ್ಯೆ 2,367. ಭರ್ತಿಯಾಗಿದ್ದ ಸೀಟುಗಳ ಸಂಖ್ಯೆ 2,136 ಆಗಿದ್ದು, ಬರೋಬ್ಬರಿ 231 ಸೀಟುಗಳು ತುಂಬಿರಲಿಲ್ಲ. ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಟೋಟಲ್​ ಸೀಟುಗಳ ಸಂಖ್ಯೆ 11,361 ಇದ್ದು, 9,841 ಸೀಟುಗಳು ಭರ್ತಿ ಆಗಿವೆ. ಸುಮಾರು 1,520 ಸೀಟುಗಳು ಫಿಲ್​ ಆಗಿರಲಿಲ್ಲ.

ಇದನ್ನೂ ಓದಿ: ಮಯಾಂಕ್​​ರನ್ನೇ ಆರ್​ಸಿಬಿ ಸೆಲೆಕ್ಟ್ ಮಾಡಿದ್ದು ಯಾಕೆ..? ಅಸಲಿ ಕಾರಣ ಇಲ್ಲಿದೆ..

publive-image

ಮಾಹಿತಿ ತಂತ್ರಜ್ಞಾನ ಲಭ್ಯವಿದ್ದ ಸೀಟುಗಳ ಸಂಖ್ಯೆ 6,084. ಭರ್ತಿಯಾದ ಸೀಟುಗಳು ಸುಮಾರು 5,405 ಮತ್ತು ಹಾಗೇ ಉಳಿದಿದ್ದ ಸೀಟುಗಳು ಸುಮಾರು 679 ಆಗಿತ್ತು. ಸಿವಿಲ್ ಎಂಜಿನಿಯರಿಂಗ್ ಲಭ್ಯವಿದ್ದ ಸೀಟುಗಳು 5,723. ಕೇವಲ 2,883 ಸೀಟುಗಳು ಭರ್ತಿ ಆಗಿದ್ದು, ಬರೋಬ್ಬರಿ 2,840 ಸೀಟ್ಸ್​ ಫಿಲ್​ ಆಗಿರಲಿಲ್ಲ. ಜತೆಗೆ ಮೆಕ್ಯಾನಿಲ್ ಎಂಜಿನಿಯರಿಂಗ್ ಕೋರ್ಸ್​ ಕಥೆ ಕೂಡ ಅಷ್ಟೇ. ಲಭ್ಯವಿದ್ದ 5,977 ಸೀಟುಗಳಲ್ಲಿ ಕೇವಲ 2,783 ಸೀಟು ಮಾತ್ರ ಭರ್ತಿ ಆಗಿತ್ತು. ಸುಮಾರು 3,194 ಸೀಟುಗಳು ಭರ್ತಿ ಆಗಿರಲಿಲ್ಲ ಅನ್ನೋದು ಶಾಕಿಂಗ್​ ವಿಚಾರ.

2024ರಲ್ಲಿ ಸಿವಿಲ್ ಎಂಜಿನಿಯರಿಂಗ್​ಗೆ ಶೇಖಡ 47-48ರಷ್ಟು ದಾಖಲಾತಿ ಆದ್ರೆ, ಮೆಕಾನಿಕಲ್ ಎಂಜಿನಿಯರಿಂಗ್‌ಗೆ ಕೇವಲ ಶೇ27ರಷ್ಟು ಮಾತ್ರ ದಾಖಲಾತಿ ಆಗಿತ್ತು. ಹೀಗಾಗಿ ಪ್ರಮುಖ ಈ ಎರಡು ಕೋರ್ಸ್ ಸೇರಿದಂತೆ ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ ಫೀಸ್ ಕೂಡ ಕಡಿಮೆ ಆಗಲಿದೆ. ಇನ್ನೂ ಈ ಬಾರಿ ಸಿಇಟಿ ಸೀಟು ಹಂಚಿಕೆಯೊಳಗೆ ಕಾಲೇಜು ಫೀಸ್ ಅಂತಿಮವಾಗಿಲಿದೆ. ಒಂದು ಕಾಲದಲ್ಲು ಬಹುಬೇಡಿಕೆ ಇದ್ದ ಎಂಜಿನಿಯರಿಂಗ್ ಸೀಟುಗಳು ಈ ಬಾರಿ ಬೇಡಿಕೆ ಕಳೆದುಕೊಡಿವೆ. ಹಾಗಾಗಿ ಇಲಾಖೆ ಅಂತಹ ಕೋರ್ಸ್‌ಗಳಿಗೆ ಮರು ಜೀವ ತುಂಬಲು ಸಿದ್ದವಾಗ್ತಿದೆ.

ಇದನ್ನೂ ಓದಿ: ಶಿವಣ್ಣ ಮನೆಯಲ್ಲಿ ಒಂದೂವರೆ ಗಂಟೆ ಸಿಕ್ರೇಟ್ ಮೀಟಿಂಗ್.. ಕನ್ನಡ ಸ್ಟಾರ್​ ನಟರಿಗೆ ಒಂದು ಸಂದೇಶ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment