ಬೆಂಗಳೂರಲ್ಲಿ ಭೀಕರ ಅಪಘಾತ.. ಸ್ಥಳದಲ್ಲೇ ಪ್ರಾಣಬಿಟ್ಟ ಇಂಜಿನಿಯರಿಂಗ್ ವಿದ್ಯಾರ್ಥಿನಿ

author-image
Veena Gangani
Updated On
ಬೆಂಗಳೂರಲ್ಲಿ ಭೀಕರ ಅಪಘಾತ.. ಸ್ಥಳದಲ್ಲೇ ಪ್ರಾಣಬಿಟ್ಟ ಇಂಜಿನಿಯರಿಂಗ್ ವಿದ್ಯಾರ್ಥಿನಿ
Advertisment
  • ಇಂಜಿನಿಯರಿಂಗ್​​ ವಿದ್ಯಾರ್ಥಿನಿ ದೇವತಾ ದುರಂತ ಅಂತ್ಯ
  • ಆಯತಪ್ಪಿ ರಸ್ತೆಗೆ ಬಿದ್ದ ವಿದ್ಯಾರ್ಥಿನಿಯ ಮೇಲೆ ಹರಿದ ಕಾರು
  • ವಿದ್ಯಾರ್ಥಿನಿ ಆಯತಪ್ಪಿ ಬಿಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಬೆಂಗಳೂರು: ಸಿಲಿಕಾನ್​ ಸಿಟಿ ರಸ್ತೆಯಲ್ಲಿ ಓಡಾಡುವಾಗ ಅಥವಾ ಸಂಚಾರ ಮಾಡುವಾಗ ಎಷ್ಟು ಜಾಗರೂಕರಾಗಿದ್ದರು ಕಡಿಮೆನೇ. ಏಕೆಂದರೆ ದಿನನಿತ್ಯ ಒಂದಲ್ಲಾ ಒಂದು ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ.

ಇದನ್ನೂ ಓದಿ: ಅಪ್ಪನಾಗೋ ಖುಷಿಯಲ್ಲಿರೋ ವಾಸುಕಿ ವೈಭವ್​ಗೆ ಕ್ಯೂಟ್ ಸರ್​ಪ್ರೈಸ್​ ಕೊಟ್ಟ ಅರುಣ್​ ಸಾಗರ್ ದಂಪತಿ

ಆದ್ರೆ, 4 ದಿನಗಳ ಹಿಂದೆ ಬೆಂಗಳೂರಿನಲ್ಲಿ ಭೀಕರ ಅಪಘಾತವೊಂದು ನಡೆದು ಹೋಗಿದೆ. ಆ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಅಪಘಾತದಲ್ಲಿ ಇಂಜಿನಿಯರಿಂಗ್​​ ವಿದ್ಯಾರ್ಥಿನಿ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾಳೆ. ದೇವತಾ (24) ಸ್ಥಳದಲ್ಲೇ ಮೃತಪಟ್ಟ ವಿದ್ಯಾರ್ಥಿನಿ.

publive-image

ವಿದ್ಯಾರ್ಥಿನಿ ದೇವತಾ ಸ್ಕೂಟರ್​ನಲ್ಲಿ ಬರುತ್ತಿದ್ದಾಗ ಆಯತಪ್ಪಿ ರಸ್ತೆಗೆ ಬಿದ್ದಿದ್ದಾಳೆ. ಇದೇ ವೇಳೆ ಎದುರಿನಿಂದ ಬಂದ ಕಾರು ಆಕೆಯ ಮೇಲೆ ಹರಿದು ಹೋಗಿದೆ. ಪರಿಣಾಮ ವಿದ್ಯಾರ್ಥಿನಿ ಧರಿಸಿದ್ದ ಹೆಲ್ಮೆಟ್ ಬೇರ್ಪಟ್ಟಿದ್ದರಿಂದ ಯುವತಿ ಸ್ಥಳದಲ್ಲೇ ಉಸಿರು ನಿಲ್ಲಿಸಿದ್ದಾಳೆ.

publive-image

ಎದುರುಗಡೆ ಬ್ಯಾನರ್ ಇರೋದರಿಂದ ಕಾರು ಚಾಲಕ ಸ್ವಲ್ಪ ಬಲಕ್ಕೆ ಬಂದಿದ್ದಾನೆ. ಇದರಿಂದ ದ್ಚಿಚಕ್ರದಲ್ಲಿ ಹೋಗ್ತಿದ್ದ ವಿದ್ಯಾರ್ಥಿನಿ ಆಯತಪ್ಪಿದ್ಲು, ಇದರಿಂದಲೇ ಆ್ಯಕ್ಸಿಡೆಂಟ್ ನಡೆಯಿತು ಅನ್ನೋದು ಕುಟುಂಬಸ್ಥರ ಮಾತಾಗಿದೆ. ಆದ್ರೆ ಸಿಸಿಟಿವಿಯಲ್ಲಿ ವಿದ್ಯಾರ್ಥಿನಿ ಆಯತಪ್ಪಿ ಬೀಳ್ತಿರೋದು ಸೆರೆಯಾಗಿದೆ. ಇನ್ನೂ, ತಮಗಿದ್ದ ಒಬ್ಬಳೇ ಮಗಳನ್ನ ಕಳೆದುಕೊಂಡು ಪೋಷರು ಕಣ್ಣೀರು ಹಾಕುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment