ಇಂಗ್ಲೆಂಡ್​ ತಂಡದಿಂದ ಭರ್ಜರಿ ಬ್ಯಾಟಿಂಗ್​​; ಟೀಮ್​ ಇಂಡಿಯಾಗೆ ಬಿಗ್​ ಟಾರ್ಗೆಟ್​

author-image
Ganesh Nachikethu
Updated On
ಇಂಗ್ಲೆಂಡ್​ ತಂಡದಿಂದ ಭರ್ಜರಿ ಬ್ಯಾಟಿಂಗ್​​; ಟೀಮ್​ ಇಂಡಿಯಾಗೆ ಬಿಗ್​ ಟಾರ್ಗೆಟ್​
Advertisment
  • ಟೀಮ್​ ಇಂಡಿಯಾ, ಇಂಗ್ಲೆಂಡ್​ ನಡುವಿನ 2ನೇ ಏಕದಿನ ಪಂದ್ಯ
  • 2ನೇ ಏಕದಿನ ಪಂದ್ಯದಲ್ಲಿ ಟೀಮ್​ ಇಂಡಿಯಾಗೆ ಬಿಗ್​ ಟಾರ್ಗೆಟ್​​
  • ಟೀಮ್​ ಇಂಡಿಯಾಗೆ 305 ರನ್​​ಗಳ ಟಾರ್ಗೆಟ್​ ಕೊಟ್ಟ ಇಂಗ್ಲೆಂಡ್​

ಇಂದು ಕಟಕ್​​ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ 2ನೇ ಮಹತ್ವದ ಏಕದಿನ ಪಂದ್ಯದಲ್ಲಿ ಟೀಮ್​ ಇಂಡಿಯಾಗೆ ಇಂಗ್ಲೆಂಡ್​ ಬರೋಬ್ಬರಿ 305 ರನ್​ಗಳ ಬಿಗ್​ ಟಾರ್ಗೆಟ್​ ಕೊಟ್ಟಿದೆ.

ಇಂಗ್ಲೆಂಡ್​ಗೆ ಉತ್ತಮ ಆರಂಭ

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಇಂಗ್ಲೆಂಡ್​ ಪರ ಓಪನಿಂಗ್​ ಮಾಡಿದ ಸ್ಟಾರ್​ ವಿಕೆಟ್​ ಕೀಪರ್​ ಬ್ಯಾಟರ್​ ಫಿಲ್​ ಸಾಲ್ಟ್​ 1 ಸಿಕ್ಸರ್​​, 2 ಫೋರ್​ ಸಮೇತ 26 ರನ್​​ ಚಚ್ಚಿದ್ರು. ಇವರಿಗೆ ಸಾಥ್​ ಕೊಟ್ಟ ಡಕೆಟ್​ ಭರ್ಜರಿ 10 ಫೋರ್​ ಮೂಲಕ 65 ರನ್​​ ಸಿಡಿಸಿ ಉತ್ತಮ ಆರಂಭ ಒದಗಿಸಿದರು.

ಜೋ ರೂಟ್​ ಆರ್ಭಟ

ಬಳಿಕ ಕ್ರೀಸ್​ಗೆ ಬಂದ ಜೋ ರೂಟ್​ ನೆಲಕಚ್ಚಿ ನಿಂತು ಆಡಿದರು. ತಾನು ಎದುರಿಸಿದ 72 ಬಾಲ್​ನಲ್ಲಿ 6 ಫೋರ್​ ಸಮೇತ 69 ರನ್​​ ಬಾರಿಸಿದ್ರು. ಮಿಡಲ್​ ಆರ್ಡರ್​ ವಿಕೆಟ್​ ಬೀಳದಂತೆ ನೋಡಿಕೊಂಡ ಇವರು ಡೀಸೆಂಟ್​​ ಆಗಿ ಸ್ಟ್ರೈಕ್​ ರೊಟೇಟ್​ ಮಾಡಿದ್ರು. ಹ್ಯಾರಿ ಬ್ರೂಕ್​​ 31, ಕ್ಯಾಪ್ಟನ್​ ಜೋಸ್​ ಬಟ್ಲರ್​ 34 ರನ್​​ ಗಳಿಸಿದ್ರು.

ಆರ್​​ಸಿಬಿ ಬ್ಯಾಟರ್​ ಅಬ್ಬರ

ನಂತರ ಅಬ್ಬರಿಸಿದ ಆರ್​​ಸಿಬಿ ಸ್ಟಾರ್​ ಆಲ್​ರೌಂಡರ್​ ಲಿಯಾಮ್​ ಲಿವಿಂಗ್​ಸ್ಟೋನ್​ ಕೇವಲ 32 ಬಾಲ್​ನಲ್ಲಿ 2 ಭರ್ಜರಿ ಸಿಕ್ಸರ್​​, 2 ಫೋರ್​ ಸಮೇತ 41 ರನ್​​ ಸಿಡಿಸಿದರು. ಮುಂದಿನ ಐಪಿಎಲ್​ ಸೀಸನ್​ಗೆ ಮುನ್ನ ಫಾರ್ಮ್​ ಕಂಡುಕೊಂಡರು.

ಜಾಮಿ ಓವರ್ಟನ್​ 6, ಗಸ್​​ 3, ಆದಿಲ್​ ರಶೀದ್​​ 14 ರನ್​ ಗಳಿಸಿದ್ರು. ಭಾರತ ತಂಡದ ಪರ ರವೀಂದ್ರ ಜಡೇಜಾ 3 ವಿಕೆಟ್​ ಪಡೆದರು. ಮೊಹಮ್ಮದ್​ ಶಮಿ, ಹರ್ಷಿತ್​ ರಾಣಾ, ಹಾರ್ದಿಕ್​ ಪಾಂಡ್ಯ, ವರುಣ್​ ಚಕ್ರವರ್ತಿ ತಲಾ 1 ವಿಕೆಟ್​ ತೆಗೆದರು.

ಇದನ್ನೂ ಓದಿ:6,4,4,4,4,4,4,4,4,4,4,4,4,4,4; ಮತ್ತೊಂದು ಶತಕ ಸಿಡಿಸಿದ ಕನ್ನಡಿಗ ಕರುಣ್​ ನಾಯರ್!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment