newsfirstkannada.com

×

ಖ್ಯಾತ IPL​ ಆಟಗಾರನಿಗೆ ಆಘಾತ.. ಭಾವನಾತ್ಮಕ ಪೋಸ್ಟ್​ ಹಂಚಿಕೊಂಡ ಸ್ಟಾರ್​​ ಕ್ರಿಕೆಟಿಗ

Share :

Published October 31, 2024 at 7:38am

    ಅಕ್ಟೋಬರ್​ 17ರಂದು ನಡೆದ ಘಟನೆಯಿಂದ ನೊಂದ ಕ್ರಿಕೆಟಿಗ

    ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡ ಬೆನ್​ ಸ್ಟೋಕ್ಸ್​

    ಪಾಕ್​ ವಿರುದ್ಧದ ಪಂದ್ಯ ಎದುರಿಸುವಾಗ ಕೇಳಿಬಂತು ಅಚ್ಚರಿಯ ಸುದ್ದಿ

ಇಂಗ್ಲೆಂಡ್​​ ಕ್ರಿಕೆಟ್​​ ತಂಡದ ನಾಯಕ ಬೆನ್​ ಸ್ಟೋಕ್ಸ್​​​ ಅವರ ಮನೆಗೆ ಕಳ್ಳರು ನುಗ್ಗಿದ ಆಘಾತಕಾರಿ ಘಟನೆ ನಡೆದಿದೆ. ಬೆನ್​ ಸ್ಟೋಕ್ಸ್​ ಪಾಕಿಸ್ತಾನದ ಟೆಸ್ಟ್​ ಸರಣಿಯಲ್ಲಿ ಭಾಗವಹಿಸಿದ್ದಾಗ ಮುಸುಕುಧಾರಿಗಳು ಮನೆಗೆ ನುಗ್ಗಿ ದರೋಡೆ ಮಾಡಿದ್ದಾರೆ.

ಅಕ್ಟೋಬರ್​ 17ರಂದು ಈ ಘಟನೆ ನಡೆದಿದೆ. ಬೆನ್​ ಸ್ಟೋಕ್ಸ್​ ಪತ್ನಿ ಕ್ಲೇರ್​​ ಮತ್ತು ಮಕ್ಕಳಾದ ಲೇಟನ್​ ಮತ್ತು ಲಿಬ್ಬಿ ಮನೆಯಲ್ಲಿದ್ದಾಗ ಕಳ್ಳರು ನುಗ್ಗಿದ್ದಾರೆ. ಬೆಳೆ ಬಾಳುವ ವಸ್ತುಗಳನ್ನು ಕದ್ದೊಯ್ದಿದ್ದಾರೆ. ಅದೃಷ್ಟವಶಾತ್​ ಬೆನ್​ ಸ್ಟೋಕ್ಸ್​ ಪತ್ನಿ ಮತ್ತು ಮಕ್ಕಳ ಜೀವಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ: IPL 2025: RCB ರೀಟೈನ್​ ಲಿಸ್ಟ್​ ರೆಡಿ; ಬೆಂಗಳೂರು ತಂಡದಿಂದ ಸಿರಾಜ್​ ಔಟ್​

ಬೆನ್​ ಸ್ಟೋಕ್ಸ್​ ಮುಲ್ತಾನ್​​ನಲ್ಲಿ ನಡೆದ ಪಾಕ್​ ವಿರುದ್ಧದ ಪಂದ್ಯದಲ್ಲಿ ಭಾಗವಹಿಸಿದ್ದರು. ಈ ಸಮಯದಲ್ಲಿ ಇಂಗ್ಲೆಂಡ್​ನ ಕ್ಯಾಸಲ್​ ಈಡನ್​ ಪ್ರದೇಶದಲ್ಲಿದ್ದ ಅವರ ಮನೆಯಲ್ಲಿ ಕಳ್ಳತನವಾಗಿದೆ. ಈ ಘಟನೆ ಕುರಿತಾಗಿ ಮಾಹಿತಿ ಹಂಚಿಕೊಂಡ ಇಂಗ್ಲೆಂಡ್​ ತಂಡದ ನಾಯಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಗುಜರಾತ್​​​ ಟೈಟನ್ಸ್​​ ರೀಟೈನ್​ ಲಿಸ್ಟ್​ನಲ್ಲಿ ಅಚ್ಚರಿ ಹೆಸರುಗಳು ರಿವೀಲ್​​; ಸ್ಟಾರ್​ ಆಟಗಾರರೇ ಔಟ್​​

‘ಅಕ್ಟೋಬರ್​ 17 ಗುರುವಾರದಂದು ಮುಸುಕುಧಾರಿಗಳು ನನ್ನ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದಾರೆ. ಆಭರಣ ಸೇರಿ ಬೆಲೆ ಬಾಳುವ ವಸ್ತುಗಳನ್ನು ಕದ್ದಿದ್ದಾರೆ. ಕದ್ದೊಯ್ದ ವಸ್ತುಗಳು ನನ್ನ ಮತ್ತು ಕುಟುಂಬಕ್ಕೆ ಭಾವನಾತ್ಮಕ ಮೌಲ್ಯವನ್ನು ಹೊಂದಿದೆ. ಈ ಕೃತ್ಯ ಎಸಗಿದವರನ್ನು ಪತ್ತೆ ಹಚ್ಚಲು ಸಹಾಯಕ್ಕಾಗಿ ಕೋರುವ ಮನವಿ ಇದಾಗಿದೆ’ ಎಂದು ಬೆನ್​​ ಸ್ಟೋಕ್ಸ್​ ಪೋಸ್ಟ್​ ಮಾಡಿದ್ದಾರೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಖ್ಯಾತ IPL​ ಆಟಗಾರನಿಗೆ ಆಘಾತ.. ಭಾವನಾತ್ಮಕ ಪೋಸ್ಟ್​ ಹಂಚಿಕೊಂಡ ಸ್ಟಾರ್​​ ಕ್ರಿಕೆಟಿಗ

https://newsfirstlive.com/wp-content/uploads/2024/10/Ben-stocks.jpg

Load More