/newsfirstlive-kannada/media/post_attachments/wp-content/uploads/2025/02/AFG_ENG_2.jpg)
ಚಾಂಪಿಯನ್ ಟ್ರೋಫಿಯಲ್ಲಿ ಅಫ್ಘಾನಿಸ್ತಾನ್ ತಂಡ ಭರ್ಜರಿ ಜಯ ಗಳಿಸಿರುವುದರ ಮೂಲಕ ಇಂಗ್ಲೆಂಡ್​ ಟೂರ್ನಿಯಿಂದ ಹೊರ ನಡೆದಿದೆ. ಮೊದಲ ಬ್ಯಾಟಿಂಗ್ ಮಾಡಿದ್ದ ಅಫ್ಘಾನ್ ಭಾರೀ ಮೊತ್ತದ ರನ್ ಬಾರಿಸಿದ್ದರಿಂದ ಟಾರ್ಗೆಟ್ ಮುಟ್ಟುವಲ್ಲಿ ಆಂಗ್ಲರು ಎಡವಿ ಕೈ ಸುಟ್ಟುಕೊಂಡಿದ್ದಾರೆ.
/newsfirstlive-kannada/media/post_attachments/wp-content/uploads/2025/02/AFG_ENG_1.jpg)
ಪಾಕಿಸ್ತಾನದ ಲಾಹೋರ್​ ನಗರದ ಗಡಾಫಿ ಸ್ಟೇಡಿಯಂನಲ್ಲಿ ನಡೆದ ಗ್ರೂಪ್- ಬಿ, 8ನೇ ಪಂದ್ಯದಲ್ಲಿ ಅಫ್ಘಾನಿಸ್ತಾನದ ನಾಯಕ ಹಶ್ಮತುಲ್ಲಾ ಶಾಹಿದಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಇಂಗ್ಲೆಂಡ್ ತಂಡ ಆರಂಭದಲ್ಲಿ ಅಫ್ಘಾನ್ ಮೇಲೆ ಬೌಲಿಂಗ್​ನಲ್ಲಿ ಭಾರೀ ಸವಾರಿ ಮಾಡಿತು. ಆದರೆ ಓಪನರ್ ಇಬ್ರಾಹಿಂ ಜದ್ರಾನ್ ಅವರ ಬ್ಯಾಟಿಂಗ್ ಮುಂದೆ ಇಂಗ್ಲೆಂಡ್ ಬೌಲರ್ಸ್ ಥಂಡಾ ಹೊಡೆದರು. ಏಕೆಂದರೆ 146 ಎಸೆತಗಳನ್ನು ಎದುರಿಸಿ ಜದ್ರಾನ್, 12 ಬೌಂಡರಿ, 6 ಭರ್ಜರಿ ಸಿಕ್ಸ್ ಸಮೇತ 177 ರನ್​ಗಳನ್ನು ಗಳಿಸಿ ತಂಡಕ್ಕೆ ದೊಡ್ಡ ಅಡಿಪಾಯ ಹಾಕಿದರು. ಇದರಿಂದ ಅಫ್ಘಾನ್ 50 ಓವರ್​​ಗಳಲ್ಲಿ 7 ವಿಕೆಟ್​ಗೆ 325 ರನ್​ ಗಳಿಸಿ ದೊಡ್ಡ ಟಾರ್ಗೆಟ್ ನೀಡಿತ್ತು.
ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಆರಂಭದಲ್ಲೇ ದೊಡ್ಡ ಆಘಾತಕ್ಕೆ ಒಳಗಾಯಿತು. ಓಪನರ್ಸ್ ಬಂದಷ್ಟೇ ವೇಗದಲ್ಲಿ ಪೆವಿಲಿಯನ್​ಗೆ ನಡೆದರು. ಆದರೆ ಮಧ್ಯಮ ಕಮಾಂಕದಲ್ಲಿ ಕ್ರೀಸ್​ಗೆ ಬಂದ ಜೋ ರೂಟ್ ಉತ್ತಮ ಬ್ಯಾಟಿಂಗ್ ಮಾಡಿದರು. 111 ಎಸೆತಗಳಲ್ಲಿ 11 ಬೌಂಡರಿ, 1 ಸಿಕ್ಸರಿಂದ ರೂಟ್​ 120 ರನ್​ ಬಾರಿಸಿದರು. ಆದರೆ ಉಳಿದ ಬ್ಯಾಟ್ಸ್​ ಮನ್ಸ್​ ಯಾರು 40ರನ್​ಗಳ ಗಡಿ ದಾಟಲಿಲ್ಲ. ಹೀಗಾಗಿ ಇಂಗ್ಲೆಂಡ್ ಗೆಲ್ಲುವ ಸಮೀಪಕ್ಕೆ ಬಂದು ತಂಡವನ್ನು ಕೈಚೆಲ್ಲಿದೆ. 49.5 ಓವರ್​ನಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 317 ರನ್​ ಮಾತ್ರ ಗಳಿಸಿತು. ಇದರಿಂದ ಅಫ್ಘಾನ್ 8 ರನ್​ಗಳ ರೋಚಕ ಗೆಲುವು ಪಡೆದು ಸಂಭ್ರಮಿಸಿತು. ​
ಇದನ್ನೂ ಓದಿ: ನಟ ವಿಜಯ್ ಐಷಾರಾಮಿ ಮನೆ ಮೇಲೆ ಚಪ್ಪಲಿ ಎಸೆದ ಕಿಡಿಗೇಡಿ.. ಕಾರಣ ಇದೆನಾ?
/newsfirstlive-kannada/media/post_attachments/wp-content/uploads/2025/02/AFG_ENG.jpg)
ಒಂದು ಪಂದ್ಯ ಸೋತಿದ್ದರೂ ಈ ಗೆಲುವಿನೊಂದಿಗೆ ಅಫ್ಘಾನ್ ಟೂರ್ನಿಯಲ್ಲಿ ಇನ್ನು ಇರಲಿದೆ. ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ಆಡುವುದರ ಮೇಲೆ ಅಫ್ಘಾನ್ ಸೆಮಿಸ್ ಹೋಗುವುದು ನಿರ್ಧಾರವಾಗಲಿದೆ. ಆದರೆ ಇಂಗ್ಲೆಂಡ್ ಟೂರ್ನಿಯಲ್ಲಿ ಎರಡು ಪಂದ್ಯಗಳನ್ನು ಸೋತಿರುವ ಕಾರಣ ಮನೆಗೆ ವಾಪಸ್ ಆಗಲಿದೆ. ಸದ್ಯ ಬಾಂಗ್ಲಾ, ಪಾಕ್ ಹಾಗೂ ಇಂಗ್ಲೆಂಡ್ ಟೂರ್ನಿಯಿಂದ ಹೊರ ಬಿದ್ದಿವೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us