/newsfirstlive-kannada/media/post_attachments/wp-content/uploads/2025/05/Harry-Brook-Catch-Video.jpg)
ಇಂಗ್ಲೆಂಡ್ನ ಹ್ಯಾರಿ ಬ್ರೂಕ್ ಹಿಡಿದ ಅದ್ಭುತ ಕ್ಯಾಚ್ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿದೆ. ಜಿಂಬಾಬ್ವೆ ಎದುರಿನ ಏಕೈಕ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ನಲ್ಲಿ ವೆಸ್ಲಿ ಮಾಧೆವೆರೆ 36 ರನ್ಗಳೊಂದಿಗೆ ಬ್ಯಾಟಿಂಗ್ ನಡೆಸುತ್ತಿದ್ದರು. ಈ ವೇಳೆ ಬೆನ್ ಸ್ಟೋಕ್ಸ್ ಓವರ್ನಲ್ಲಿ ಬ್ಯಾಟ್ಗೆ ಸವರಿದ ಚೆಂಡು ಥರ್ಡ್ ಮ್ಯಾನ್ನತ್ತ ಸಾಗಿತ್ತು. ಆದ್ರೆ, 2ನೇ ಸ್ಲಿಪ್ನಲ್ಲಿ ಫೀಲ್ಡಿಂಗ್ ಮಾಡ್ತಿದ್ದ ಬ್ರೂಕ್ ಹಕ್ಕಿಯಂತೆ ಹಾರಿ ಕ್ಯಾಚ್ ಹಿಡಿದಿದ್ದಾರೆ. ಇದಕ್ಕೆ ನಾಯಕ ಬೆನ್ ಸ್ಟೋಕ್ಸ್ ಒಂದು ಕ್ಷಣ ದಂಗಾದರು.
ಜಿಂಬಾಬ್ವೆ ಎದುರಿನ ಏಕೈಕ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದು ಬೀಗಿದೆ. ನ್ಯಾಟಿಂಗ್ಹ್ಯಾಮ್ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಇಂಗ್ಲೆಂಡ್ 565 ರನ್ಗಳಿಗೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು.
Harry Brook, that is sensational! 😲
(via @englandcricket) #ENGvZIMpic.twitter.com/11fjF0EwNN
— ESPNcricinfo (@ESPNcricinfo)
Harry Brook, that is sensational! 😲
(via @englandcricket) #ENGvZIMpic.twitter.com/11fjF0EwNN— ESPNcricinfo (@ESPNcricinfo) May 24, 2025
">May 24, 2025
ಬಳಿಕ ಬ್ಯಾಟಿಂಗ್ ಆರಂಭಿಸಿದ ಜಿಂಬಾಬ್ವೆ ಮೊದಲ ಇನ್ನಿಂಗ್ಸ್ನಲ್ಲಿ 265 ರನ್ಗೆ ಸರ್ವ ಪತನವಾಯಿತು. ಇದರೊಂದಿಗೆ ಫಾಲೋ ಆನ್ಗೆ ಸಿಲುಕಿದ ಜಿಂಬಾಬ್ವೆ 2ನೇ ಇನ್ನಿಂಗ್ಸ್ನಲ್ಲಿ 255 ರನ್ಗೆ ಆಲೌಟ್ ಆಯಿತು. ಆ ಮೂಲಕ ಇಂಗ್ಲೆಂಡ್ ಇನ್ನಿಂಗ್ಸ್ ಹಾಗೂ 45 ರನ್ಗಳ ಗೆಲುವು ದಾಖಲಿಸಿತು.
ಇದನ್ನೂ ಓದಿ: ಕೊನೆಗೂ ಕನ್ನಡಿಗನಿಗೆ ನ್ಯಾಯ ಒದಗಿಸಿದ BCCI.. ಕರುಣ್ ಎದುರಿಸಿದ 7 ವರ್ಷಗಳ ಅಗ್ನಿ ಪರೀಕ್ಷೆ ಹೇಗಿತ್ತು..?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ