newsfirstkannada.com

INDvsENG: 3ನೇ ದಿನದಾಟದಲ್ಲಿ ಭಾರತಕ್ಕೆ ಇಂಗ್ಲೆಂಡ್ ತಿರುಗೇಟು.. 126 ರನ್​ಗಳ ಮುನ್ನಡೆಯಲ್ಲಿ ಇಂಗ್ಲೆಂಡ್

Share :

Published January 28, 2024 at 10:39am

Update January 28, 2024 at 10:43am

    ಇಂದು ಆಂಗ್ಲರಿಗೆ ಪ್ರತ್ಯುತ್ತರ ನೀಡಲು ರೋಹಿತ್ ಪಣ

    ಏಕಾಂಗಿ ಹೋರಾಟ.. ಓಲಿ ಪೋಪ್​​ಗೆ ಶತಕ ಸಂಭ್ರಮ!

    ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್​- 436/10

ಎಲ್ಲವೂ ಅಂದುಕೊಂಡಂತೆ ಆಗಿದ್ರೆ, ನಿನ್ನೆಯೇ ಟೀಮ್ ಇಂಡಿಯಾ, ಇಂಗ್ಲೆಂಡ್ ಎದುರಿನ ಮೊದಲ ಪಂದ್ಯದ ವಿಯೋತ್ಸವನ್ನ ಮೂರೇ ದಿನಕ್ಕೆ ಆಚರಿಸುತ್ತಿತ್ತು. ಆದರೆ, ಇದೆಲ್ಲವೂ ನಿನ್ನೆ ಉಲ್ಟಾ ಆಯ್ತು. ಇಂಗ್ಲೆಂಡ್ ತಂಡದ ಒಬ್ಬನ ಆಟ ಗೆಲುವನ್ನ ಒಂದು ದಿನದ ಮಟ್ಟಿಗೆ ಪೋಸ್ಟ್​ ಫೋನ್ ಮಾಡ್ತು.

7 ವಿಕೆಟ್ ನಷ್ಟಕ್ಕೆ 421 ರನ್​. ಶತಕದ ಅಂಚಿನಲ್ಲಿದ್ದ ಜಡೇಜಾ. ಸಾಥ್ ನೀಡಲು ಅಕ್ಷರ್​ ಪಟೇಲ್. ಬಿಗ್ ಸ್ಕೋರ್ ಕೆಲಹಾಕುವ ಲೆಕ್ಕಚಾರ. ಇದೆಲ್ಲವೂ ಇಂಗ್ಲೆಂಡ್​ ದರ್ಬಾರ್​ ಮುಂದೆ ನುಚ್ಚುನೂರಾಯ್ತು.

ಹೌದು! 421 ರನ್​​ಗಳಿಂದ 3ನೇ ದಿನದಾಟ ಆರಂಭಿಸಿದ ಟೀಮ್ ಇಂಡಿಯಾ, ನಿನ್ನೆಯೇ ಜಸ್ಟ್​ 15 ರನ್​ ಕೂಡಿಸುವಷ್ಟರಲ್ಲೇ 3 ವಿಕೆಟ್ ಕಳೆದುಕೊಂಡು 436 ರನ್​​ಗಳಿಗೆ ಆಲೌಟ್ ಆಯ್ತು. ಶತಕದ ನಿರೀಕ್ಷೆಯಲ್ಲಿದ್ದ ಜಡೇಜಾ ಕನಸು ಭಗ್ನಗೊಳ್ತು.

190 ರನ್​​​ಗಳ ಹಿನ್ನಡೆ.. ಇಂಗ್ಲೆಂಡ್​ಗೆ ಭರ್ಜರಿ ಓಪನಿಂಗ್..!

190 ರನ್​​ಗಳ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್​ ಆರಂಭಿಸಿದ ಇಂಗ್ಲೆಂಡ್​ಗೆ ಜಾಕ್ ಕ್ರಾವ್ಲಿ, ಬೆನ್ ಡಕ್ಕೆಟ್ ಉತ್ತಮ ಆರಂಭ ನೀಡಿದರು. ಏಕದಿನ ಶೈಲಿಯಲ್ಲೇ ಬ್ಯಾಟ್ ಬೀಸಿದ ಇವರು ಬಿಗ್ ಸ್ಕೋರ್ ಕಲೆಹಾಕೋ ನಿರೀಕ್ಷೆ ಮೂಡಿಸಿದ್ರು. ಆದರೆ, ಈ ವೇಳೆ 31 ರನ್ ಗಳಿಸಿದ್ದ ಜಾಕ್​​ ಕ್ರಾವ್ಲೆಗೆ ಅಶ್ವಿನ್ ಪೆವಿಲಿಯನ್ ಹಾದಿ ತೋರಿದ್ರೆ. 47 ರನ್​ ಗಳಿಸಿ ಬ್ಯಾಟ್ ಬೀಸ್ತಿದ್ದ ಬೆನ್ ಡೆಕೆಟ್​​​​​​​​​​​​​​​ಗೆ ಬೂಮ್ರಾ ಕ್ಲೀನ್​ ಬೋಲ್ಡ್​ ಮಾಡಿದ್ರು.

ಈ ಬೆನ್ನಲ್ಲೇ ಬಂದ ಜೋ ರೂಟ್​​ ಕೂಡ ಬೂಮ್ರಾರ ಎಲ್​ಬಿಡ್ಲೂ ಬಲೆಗೆ ಸಿಲುಕಿದ್ರೆ. ಬಳಿಕ ಬಂದ ಜಾನಿ ಬೇರ್​ಸ್ಟೋ, ಜಡೇಜಾ ಜಾದೂ ಮುಂದೆ ಮಂಡಿಯೂರಿದ್ರು. ಇವ್ರೇ ಅಲ್ಲ. ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್​ ಮಗದೊಮ್ಮೆ ಅಶ್ವಿನ್​​ಗೆ ಬಲಿಯಾದರು. ಇದರೊಂದಿಗೆ ಇಂಗ್ಲೆಂಡ್, 163 ರನ್​ಗೆ ಪ್ರಮುಖ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

6ನೇ ವಿಕೆಟ್​ಗೆ ಶತಕದ ಜೊತೆಯಾಟ.. ಬೌಲರ್ಸ್ ಸುಸ್ತು.!

ವಿಕೆಟ್ ಉರುಳುತ್ತಿದ್ದರು ಓತ್ತಡಕ್ಕೆ ಸಿಲುಕದ ಓಲಿ ಪೋಪ್, ಲೀಲಾಜಾಲವಾಗಿ ಬ್ಯಾಟ್ ಬೀಸಿದ್ರು. 6ನೇ ವಿಕೆಟ್​​ಗೆ ಫೋಕ್ಸ್​ ಜೊತೆಗೂಡಿ 112 ರನ್​​​​​ಗಳ ಅಮೋಘ ಜೊತೆಯಾಟವಾಡಿದ್ರು.

ಅಷ್ಟೇ ಅಲ್ಲ.! 154 ಎಸೆತಗಳಲ್ಲಿ 10 ಬೌಂಡರಿ ಒಳಗೊಂಡ ಶತಕ ಸಿಡಿಸಿದ ಪೋಪ್​, ನಂತರ ರನ್​ ಗಳಿಕೆಗೆ ಮತ್ತಷ್ಟು ವೇಗ ನೀಡಲು ಮುಂದಾದ್ರು. ಈ ವೇಳೆ ಪೋಪ್​​ಗೆ ಸಾಥ್ ನೀಡ್ತಿದ್ದ ಫೋಕ್ಸ್​, ಅಕ್ಷರ್​ ಪಟೇಲ್​ರ ಅದ್ಬುತ ಬಾಲ್​​ಗೆ ಕ್ಲೀನ್ ಬೋಲ್ಡ್​ ಆಗಿ ಪೆವಿಲಿಯನ್ ಸೇರಿದರು.

ಮೂರನೇ ದಿನದಾಟದ ಗೌರವ ಇಂಗ್ಲೆಂಡ್ ಪಾಲು..!

110 ರನ್​​ ಗಳಿಸಿ ಮುನ್ನುಗ್ಗತ್ತಿದ್ದ ಪೋಪ್​ಗೆ ಅಕ್ಷರ್ ಪಟೇಲ್ ಜೀವದಾನ ನೀಡಿದರು. ಇದರ ಪರಿಣಾಮವಾಗಿ ಅಜೇಯ 148 ಗಳಿಸಿರುವ ಪೋಪ್​, ಇಂದಿಗೆ ಕ್ರೀಸ್​​ ಕಾಯ್ದುಕೊಂಡಿದ್ದಾರೆ. 126 ರನ್​ಗಳ ಲೀಡ್​ ಸಾಧಿಸಿದ ಇಂಗ್ಲೆಂಡ್, 3ನೇ ದಿನದಾಟದ ಗೌರವ ಸಂಪಾದಿಸಿತು.

ಒಟ್ಟಿನಲ್ಲಿ.! ಮೂರನೇ ದಿನದಾಟ ಟೀಮ್ ಇಂಡಿಯಾಗೆ ತಿರುಗೇಟು ನೀಡಿರುವ ಇಂಗ್ಲೆಂಡ್​​​ಗೆ​, ಇಂದು ರೋಹಿತ್ ಪಡೆ ಟಕ್ಕರ್ ನೀಡಬೇಕಾಗಿದೆ. ಇಲ್ಲ ಸಂಕಷ್ಟಕ್ಕೆ ಸಿಲುಕಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

INDvsENG: 3ನೇ ದಿನದಾಟದಲ್ಲಿ ಭಾರತಕ್ಕೆ ಇಂಗ್ಲೆಂಡ್ ತಿರುಗೇಟು.. 126 ರನ್​ಗಳ ಮುನ್ನಡೆಯಲ್ಲಿ ಇಂಗ್ಲೆಂಡ್

https://newsfirstlive.com/wp-content/uploads/2024/01/Olipope.jpg

Load More