ಟೀಮ್​ ಇಂಡಿಯಾದ ಯುವ ಬ್ಯಾಟರ್​​ ಅಭಿಷೇಕ್​​ ಶರ್ಮಾಗೆ ಕೊನೆಯ ಅವಕಾಶ; ಬಿಸಿಸಿಐ ಎಚ್ಚರಿಕೆ!

author-image
Ganesh Nachikethu
Updated On
ಅಭಿಷೇಕ್ ಶರ್ಮಾ ಸಿಡಿಲಬ್ಬರದ ಬ್ಯಾಟಿಂಗ್.. ಶರವೇಗದ ಸೆಂಚುರಿ ಸಿಡಿಸಿದ ಯುವ ಬ್ಯಾಟರ್​
Advertisment
  • ಟೀಮ್​ ಇಂಡಿಯಾ, ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟಿ20 ಸರಣಿ
  • ಟೀಮ್​ ಇಂಡಿಯಾದ ಯುವ ಬ್ಯಾಟರ್​ಗೆ ಇದು ಕೊನೆಯ ಅವಕಾಶ
  • ಯುವ ಬ್ಯಾಟರ್​​ ಅಭಿಷೇಕ್​ ಶರ್ಮಾ ಪಾಲಿಗೆ ಇದು ಮಹತ್ವದ ಸೀರೀಸ್​

ಇಂದು ಟೀಮ್​ ಇಂಡಿಯಾ, ಇಂಗ್ಲೆಂಡ್ ನಡುವಿನ ಐದು ಟಿ20 ಪಂದ್ಯಗಳ ಸರಣಿಯ ಮೊದಲ ಮ್ಯಾಚ್​​ ನಡೆಯಲಿದೆ. ಇಂಗ್ಲೆಂಡ್ ವಿರುದ್ದದ ಟಿ20 ಸರಣಿ ಆರಂಭಕ್ಕೂ ಮುನ್ನವೇ ಟೀಮ್​ ಇಂಡಿಯಾದ ಯುವ ಬ್ಯಾಟರ್​​ ಅಭಿಷೇಕ್​ ಶರ್ಮಾ ಅವರಿಗೆ ಇದೇ ಕೊನೆಯ ಅವಕಾಶ ಅನ್ನೋ ಚರ್ಚೆ ಶುರುವಾಗಿದೆ.

ವಿಶ್ವಕಪ್ ಮುಗಿಯುತ್ತಿದ್ದಂತೆ ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ಟಿ20 ಕ್ರಿಕೆಟ್​ನಿಂದ ನಿವೃತ್ತಿಯಾದರು. ಈ ಬೆನ್ನಲ್ಲೇ ಟೀಮ್​ ಇಂಡಿಯಾದಲ್ಲಿ ಟಿ20 ಕ್ರಿಕೆಟ್​ನಲ್ಲಿ ಯುವ ಆಟಗಾರರಿಗೆ ಅವಕಾಶ ನೀಡಲಾಗುತ್ತಿದೆ. ಈ ಯುವ ಆಟಗಾರರ ಪೈಕಿ ಅಭಿಷೇಕ್​ ಶರ್ಮಾ ಕೂಡ ಒಬ್ಬರು.

ಅಭಿಷೇಕ್​ ಶರ್ಮಾಗೆ ಬ್ಯಾಕ್​ ಟು ಬ್ಯಾಕ್​ ಚಾನ್ಸ್​​

ಟೀಮ್​ ಇಂಡಿಯಾದ ಎಡಗೈ ಬ್ಯಾಟರ್​​ ಅಭಿಷೇಕ್ ಶರ್ಮಾ. ಇವರು ಐಪಿಎಲ್​​ ಮತ್ತು ದೇಶೀಯ ಕ್ರಿಕೆಟ್​ನಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಹೀಗಾಗಿ ಕಳೆದ ಕೆಲವು ತಿಂಗಳಿನಿಂದ ಅಭಿಷೇಕ್​ ಶರ್ಮಾಗೆ ಬ್ಯಾಕ್​ ಟು ಬ್ಯಾಕ್​ ಟೀಮ್​ ಇಂಡಿಯಾದಲ್ಲಿ ಅವಕಾಶ ನೀಡಲಾಗುತ್ತಿದೆ. ಆದರೆ, ಇವರು ಟೀಮ್​ ಇಂಡಿಯಾ ಪರ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿಲ್ಲ.

ಅಭಿಷೇಕ್​ ಜಾಗಕ್ಕೆ ಯುವ ಬ್ಯಾಟರ್​​

ಸಂಜು ಸ್ಯಾಮ್ಸನ್ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯಲ್ಲಿ ಮಿಂಚಿದ್ದರು. ಇವರ ಹಾಗೇ ಅಭಿಷೇಕ್​ ಶರ್ಮಾ ಕೂಡ ಮಿಂಚಲೇಬೇಕಿದೆ. ಇಲ್ಲದಿದ್ದರೆ ಅಭಿಷೇಕ್ ಸ್ಥಾನಕ್ಕೆ ಯಶಸ್ವಿ ಜೈಸ್ವಾಲ್ ಬರಬಹುದು. ಒಂದು ವೇಳೆ ಹೀಗಾದಲ್ಲಿ ಅಭಿಷೇಕ್ ಶರ್ಮಾ ಟೀಮ್ ಇಂಡಿಯಾದಲ್ಲಿ ಅವಕಾಶ ಕಳೆದುಕೊಳ್ಳಲಿದ್ದಾರೆ.

ಅಭಿಷೇಕ್ ದಾಖಲೆ

ಟೀಮ್​ ಇಂಡಿಯಾ ಪರ 12 ಟಿ20 ಪಂದ್ಯಗಳು ಆಡಿರೋ ಅಭಿಷೇಕ್ ಶರ್ಮಾ ಅವರು, ಜಿಂಬಾಬ್ವೆ ವಿರುದ್ಧ ಶತಕ ಸಿಡಿಸಿದ್ರು. ಈ ಶತಕದ ಹೊರತಾಗಿ 11 ಪಂದ್ಯಗಳಲ್ಲಿ ಕೇವಲ 156 ರನ್ ಗಳಿಸಿದ್ದಾರೆ. ಇವರು ಇಂಗ್ಲೆಂಡ್​ ವಿರುದ್ಧ ಸರಣಿಯಲ್ಲಿ ಅಬ್ಬರಿಸಲೇಬೇಕಿದೆ.

ಇದನ್ನೂ ಓದಿ:ಇಂಗ್ಲೆಂಡ್​ ವಿರುದ್ಧ ಭಾರತ ಸೋತರೆ ಗಂಭೀರ್​ಗೆ ಸಂಕಷ್ಟ; ಟೀಮ್​ ಇಂಡಿಯಾ ಮುಖ್ಯ ಕೋಚ್​ ಹುದ್ದೆಯಿಂದ ಕಿಕ್​ ಔಟ್​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment