newsfirstkannada.com

ಎಲಿಮಿನೇಟರ್​ ಪಂದ್ಯಕ್ಕೂ ಮುನ್ನ ಆರ್​​ಸಿಬಿಗೆ ಗುಡ್​ನ್ಯೂಸ್​​.. ರಾಜಸ್ಥಾನ್​​ ತಂಡಕ್ಕೆ ಭಾರೀ ಆಘಾತ

Share :

Published May 22, 2024 at 3:51pm

    2024ರ ಇಂಡಿಯನ್​ ಪ್ರೀಮಿಯರ್​ ಲೀಗ್ ಹಂತದ ಪಂದ್ಯಗಳು ಮುಕ್ತಾಯ

    ಇಂದು ಪ್ಲೇ ಆಫ್​​ ಪಂದ್ಯದಲ್ಲಿ ಆರ್​​ಸಿಬಿ ವಿರುದ್ಧ ರಾಜಸ್ಥಾನ್​ ಟೀಮ್​​ ಕಣಕ್ಕೆ

    ಪ್ಲೇ ಆಫ್​ ಪಂದ್ಯಕ್ಕೆ ರಾಜಸ್ಥಾನ್​ ರಾಯಲ್ಸ್​​​ ತಂಡಕ್ಕೆ ಈ ಆಟಗಾರನ ಅನುಪಸ್ಥಿತಿ

2024ರ ಇಂಡಿಯನ್​ ಪ್ರೀಮಿಯರ್​ ಲೀಗ್ ಹಂತದ ಪಂದ್ಯಗಳು ಮುಕ್ತಾಯಗೊಂಡಿವೆ. ಈಗಾಗಲೇ ಕೆಕೆಆರ್​​​, ಸನ್​ರೈಸರ್ಸ್​ ಹೈದರಾಬಾದ್​​ ನಡುವಿನ ಕ್ವಾಲಿಫೈಯರ್-1ರ ಪಂದ್ಯ ಮುಗಿದಿದೆ. ಇಂದು ನರೇಂದ್ರ ಮೋದಿ ಇಂಟರ್​ ನ್ಯಾಷನಲ್​​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯಲಿರೋ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ಮತ್ತು ಆರ್​​ಸಿಬಿ ಮುಖಾಮುಖಿ ಆಗಲಿವೆ.

ಎಲಿಮಿನೇಟರ್​ ಪಂದ್ಯದಲ್ಲಿ ಆರ್​​ಸಿಬಿಯನ್ನು ಎದುರಿಸಲು ಮುಂದಾಗಿರೋ ರಾಜಸ್ಥಾನ್​ ರಾಯಲ್ಸ್​ಗೆ ಬಿಗ್​ ಶಾಕ್​ ಇದೆ. ಈ ಪಂದ್ಯದಿಂದ ಸ್ಟಾರ್​ ಪ್ಲೇಯರ್​​ ಜೋಸ್​ ಬಟ್ಲರ್​​ ಅಲಭ್ಯರಾಗಿದ್ದು, ಇವರ ಅನುಪಸ್ಥಿತಿ ಎದ್ದು ಕಾಡಲಿದೆ. ಕಾರಣ ಕಳೆದ ಪಂದ್ಯದಲ್ಲೂ ಆರ್​​ಸಿಬಿ ವಿರುದ್ಧ ರಾಜಸ್ಥಾನ್​ ಗೆಲ್ಲಲು ಜೋಸ್​ ಬಟ್ಲರ್​ ಕಾರಣ.

ಬಟ್ಲರ್​​ ಫಾರ್ಮ್​ಗೆ ಬಂದಿದ್ದೇ ಆರ್​​ಸಿಬಿ ಪಂದ್ಯದಿಂದ..!

ಯೆಸ್​​, ಏಪ್ರಿಲ್​​ 6ನೇ ತಾರೀಕು ಜೈಪುರ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​ನಲ್ಲಿ ನಡೆದಿದ್ದ ಪಂದ್ಯದಲ್ಲಿ ಆರ್​​​ಸಿಬಿ ವಿರುದ್ಧ ರಾಜಸ್ಥಾನ್​ ಗೆದ್ದು ಬೀಗಿತ್ತು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 183 ರನ್ ಕಲೆಹಾಕಿತು. ಕೊಹ್ಲಿ ಅಜೇಯ 113 ರನ್ ಬಾರಿಸಿದರು. ಈ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡ ಮೊದಲ ಓವರ್​ನಲ್ಲೇ ಯಶಸ್ವಿ ಜೈಸ್ವಾಲ್ ವಿಕೆಟ್ ಕಳೆದುಕೊಂಡಿತು. ಆರಂಭದಲ್ಲೇ ರಾಜಸ್ಥಾನ್​​ ವಿಕೆಟ್ ಕಳೆದುಕೊಂಡ ಕಾರಣ ಪಂದ್ಯ ಆರ್​ಸಿಬಿ ಪರ ವಾಲುತ್ತೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಬಳಿಕ ಫಾರ್ಮ್​​ಗೆ ಜೋಸ್​ ಬಟ್ಲರ್​ ಆರ್​ಸಿಬಿ ವೇಗಿಗಳ ಬೆವರಿಳಿಸಿದರು. ಆರ್​ಸಿಬಿ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದರು. ಆರಂಭಿಕರಾಗಿ ಕಣಕ್ಕಿಳಿದು ಕೊನೆಯವರೆಗೂ ಅಜೇಯರಾಗಿ ಉಳಿದ ಬಟ್ಲರ್ 20ನೇ ಓವರ್​ನ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಶತಕ ಕೂಡ ಪೂರ್ಣಗೊಳಿಸಿದರು. ಬಟ್ಲರ್ ತಮ್ಮ ಇನ್ನಿಂಗ್ಸ್​ನಲ್ಲಿ 58 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿದರು.

ಇದನ್ನೂ ಓದಿ: ಪ್ಲೇ ಆಫ್​ಗೆ ಮುನ್ನವೇ ಗುಡ್​ನ್ಯೂಸ್​​.. ಆರ್​​​ಸಿಬಿಗೆ ಸ್ಟಾರ್​ ಬ್ಯಾಟರ್​​ ಯೂನಿವರ್ಸಲ್​ ಬಾಸ್​​ ಎಂಟ್ರಿ!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಎಲಿಮಿನೇಟರ್​ ಪಂದ್ಯಕ್ಕೂ ಮುನ್ನ ಆರ್​​ಸಿಬಿಗೆ ಗುಡ್​ನ್ಯೂಸ್​​.. ರಾಜಸ್ಥಾನ್​​ ತಂಡಕ್ಕೆ ಭಾರೀ ಆಘಾತ

https://newsfirstlive.com/wp-content/uploads/2024/05/RCB-RR.jpg

Load More