/newsfirstlive-kannada/media/post_attachments/wp-content/uploads/2025/01/IND-vs-ENG-News.jpg)
ಇಂದು ಕೋಲ್ಕತ್ತಾದ ಈಡನ್​ ಗಾರ್ಡನ್​​ನಲ್ಲಿ ಭಾರತ ಹಾಗೂ ಇಂಗ್ಲೆಂಡ್ ಮಧ್ಯೆ ಮೊದಲ ಟಿ20 ಪಂದ್ಯ ನಡೆಯುತ್ತಿದೆ. ಟಾಸ್​ ಸೋತರೂ ಫಸ್ಟ್​ ಬ್ಯಾಟಿಂಗ್​ ಮಾಡಿದ ಇಂಗ್ಲೆಂಡ್ ತಂಡ ಕೇವಲ 132 ರನ್​ಗಳಿಗೆ ಆಲೌಟ್​ ಆಗಿದೆ.
ಆರಂಭದಲ್ಲೇ ಇಂಗ್ಲೆಂಡ್​ಗೆ ಆಘಾತ
ಇಂಗ್ಲೆಂಡ್ ತಂಡದ ಪರ ಇನಿಂಗ್ಸ್ ಆರಂಭಿಸಿದ ಫಿಲ್ ಸಾಲ್ಟ್ ಹಾಗೂ ಬೆನ್ ಡಕೆಟ್ ತಂಡಕ್ಕೆ ದೊಡ್ಡ ಕಾಣಿಕೆ ನೀಡಲಿಲ್ಲ. ಬೌಂಡರಿ ಬಾರಿಸಲು ಹೋಗಿ ಫಿಲ್​ ಸಾಲ್ಟ್​ ಅರ್ಷದೀಪ್ ಸಿಂಗ್ ಎಸೆದ ಮೂರನೇ ಎಸೆತದಲ್ಲಿ ಪೆವಿಲಿಯನ್ ಸೇರಿದರು. ಇನ್ನು ಬೆನ್ ಡಕೆಟ್ ಕೂಡ ವಿಕೆಟ್​ ಒಪ್ಪಿಸಿದ್ರು. ಇದರಿಂದ ಇಂಗ್ಲೆಂಡ್​ ಟೀಮ್​ ಒತ್ತಡಕ್ಕೆ ಸಿಲುಕಿತು.
ಬ್ಯಾಕ್​ ಟು ಬ್ಯಾಕ್​​ ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದ್ದ ಇಂಗ್ಲೆಂಡ್​ ತಂಡಕ್ಕೆ ಜೋಸ್ ಬಟ್ಲರ್ ಹಾಗೂ ಹ್ಯಾರಿ ಬ್ರುಕ್ ನೆರವಾದರು. ಈ ಜೋಡಿ 28 ಎಸೆತಗಳಲ್ಲಿ 48 ರನ್ ಸೇರಿಸಿತು. ಹ್ಯಾರಿ ಬ್ರೂಕ್ 2 ಬೌಂಡರಿ, 1 ಸಿಕ್ಸರ್ ಸೇರಿ 17 ರನ್ ಬಾರಿಸಿ ಔಟ್ ಆದರು.
ಆರ್​​ಬಿಸಿ ಬ್ಯಾಟರ್​ಗಳ ವೈಫಲ್ಯ
ಜೋಸ್ ಬಟ್ಲರ್‌ಗೆ ಯಾರು ಉತ್ತಮ ಸಾಥ್ ನೀಡಲಿಲ್ಲ. ಆರ್​​ಸಿಬಿ ಸ್ಟಾರ್​ ಬ್ಯಾಟರ್​ಗಳಾದ ಲಿಯಾಮ್ ಲಿವಿಂಗ್‌ಸ್ಟೋನ್, ಜಾಕಬ್ ಬೆಥೆಲ್​ ಕೈ ಕೊಟ್ಟರು.
THE RCB ERA BEGINS 🏆 💔#INDvsENG#INDvENGpic.twitter.com/KpaMNNg25a
— Dr Artistic Soul (@dr_artisticsoul)
THE RCB ERA BEGINS 🏆 💔#INDvsENG#INDvENGpic.twitter.com/KpaMNNg25a
— Dr Artistic Soul (@dr_artisticsoul) January 22, 2025
">January 22, 2025
ಜೋಸ್​​ ಬಟ್ಲರ್​ ಏಕಾಂಗಿ ಹೋರಾಟ
ನಾಯಕ ಜೋಸ್ ಬಟ್ಲರ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು ಆಡಿದ 44 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಸಹಾಯದಿಂದ 68 ರನ್ ಬಾರಿಸಿದ್ರು. ಇಂಗ್ಲೆಂಡ್ 20 ಓವರ್‌ಗಳಲ್ಲಿ 132 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ಅರ್ಷದೀಪ್ ಸಿಂಗ್ 2, ವರುಣ್ ಚಕ್ರವರ್ತಿ 3, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ತಲಾ 2 ವಿಕೆಟ್ ಪಡೆದರು.
ಇದನ್ನೂ ಓದಿ: ಇಂಗ್ಲೆಂಡ್​ ವಿರುದ್ಧ ಮೊದಲ ಪಂದ್ಯ; ವಿರಾಟ್​ ಕೊಹ್ಲಿ ಆಪ್ತನಿಗೆ ಟೀಮ್​ ಇಂಡಿಯಾದಿಂದ ಗೇಟ್​ಪಾಸ್​
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ