newsfirstkannada.com

ಟೀಮ್​ ಇಂಡಿಯಾ ತಂತ್ರಕ್ಕೆ ಆಂಗ್ಲರ ತಿರುಮಂತ್ರ.. ಸೋಲಿನ ಸುಳಿಗೆ ಸಿಲುಕಿಸಿದ್ದೇ ತಂಡದ ಸ್ಟ್ರೆಂಥ್​..!

Share :

Published January 30, 2024 at 10:51am

    ಸ್ಪಿನ್​ ಟ್ರ್ಯಾಕ್​​ಗಳೇ ಟೀಮ್​ ಇಂಡಿಯಾಗೆ ವಿಲನ್

    ಟರ್ನಿಂಗ್​ ಟ್ರ್ಯಾಕ್​ಗಳಲ್ಲಿ ​ಬ್ಯಾಟ್ಸ್​ಮನ್​ಗಳ ಪರದಾಟ

    ಮುಂದಿನ ಪಂದ್ಯಗಳಲ್ಲಿ ಪಿಚ್​ ಬದಲಾಗುತ್ತಾ.?

ಹೈದ್ರಾಬಾದ್​​ ಟೆಸ್ಟ್​ನಲ್ಲಿ ಟೀಮ್​ ಇಂಡಿಯಾ ಸೋತಿದ್ದು ಈಗ ಮುಗಿದ ಅದ್ಯಾಯ. ಆ ಮುಖಭಂಗವನ್ನು ಮರೀಬೇಕು ಈ ಸರಣಿಯನ್ನ ಟೀಮ್​ ಇಂಡಿಯಾ ಗೆಲ್ಲಬೇಕು. ಆಂಗ್ಲರನ್ನ ಮಣಿಸಿ ಟ್ರೋಫಿ ಗೆಲ್ಲಬೇಕು ಅಂದ್ರೆ ಟೀಮ್​ ಇಂಡಿಯಾದ ಲೆಕ್ಕಾಚಾರ ಬದಲಾಗಲೇಬೇಕು. ಯಾಕಂದ್ರೆ ನಮ್ಮ ಸ್ಟ್ರೆಂಥೇ ನಮಗೆ ವಿಲನ್​ ಆಗಿ ಕಾಡ್ತಿದೆ.

ಇಂಡೋ-ಇಂಗ್ಲೆಂಡ್​​ ಮೊದಲ ಟೆಸ್ಟ್​ ಪಂದ್ಯದಲ್ಲಿ ಟೀಮ್​ ಇಂಡಿಯಾ ನಿರೀಕ್ಷೆ ಮಾಡದ ರೀತಿಯಲ್ಲಿ ಮುಗ್ಗರಿಸಿದ್ದಾಗಿದೆ. ಪಂದ್ಯದ ಮೊದಲ 3 ದಿನದಾಟದಲ್ಲಿ ಪಾರಮ್ಯ ಮೆರೆದ ರೋಹಿತ್​ ಪಡೆ 4ನೇ ದಿನದಾಟದಲ್ಲಿ ಸೋತು ಅವಮಾನಾಕ್ಕೀಡಾಗಿದೆ. 231 ರನ್​ಗಳ ಸಾಧಾರಣ ಟಾರ್ಗೆಟ್​​ ಬೆನ್ನತ್ತಲಾಗದೇ, ಆಂಗ್ಲರ ಮುಂದೆ ಮಂಡಿಯೂರಿದೆ.

ಟೀಮ್​ ಇಂಡಿಯಾ ತಂತ್ರಕ್ಕೆ ಆಂಗ್ಲರ ತಿರುಮಂತ್ರ
ಹೈದ್ರಾಬಾದ್​ ಟೆಸ್ಟ್​​ನಲ್ಲಿ ತಾವೇ ತೋಡಿದ ಹಳ್ಳಕ್ಕೆ ಟೀಮ್​ ಇಂಡಿಯನ್ಸ್ ಬಿದ್ದಿದ್ದು ಸದ್ಯ ಓಪನ್​ ಸೀಕ್ರೆಟ್​​.. ನಾವೇ ಸ್ಪಿನ್​ ಕಿಂಗ್ಸ್​​, ನಮ್ಮ ಮುಂದೆ ಯಾರೂ ಇಲ್ಲ.. ಎಂಬ ಭ್ರಮೆಯಲ್ಲಿ ಸ್ಪಿನ್​ ಟ್ರ್ಯಾಕ್​​ ರೆಡಿ ಮಾಡಿಸಿ ಕಣಕ್ಕಿಳಿದ ಟೀಮ್​ ಇಂಡಿಯಾ, ಆರಂಭದಲ್ಲಿ ಮೇಲುಗೈ ಸಾಧಿಸಿದ್ದೇನೋ ಸತ್ಯ. ಅಂತ್ಯದಲ್ಲಿ ಈ ಖೆಡ್ಡಾಗೆ ಬಿದ್ದು ಮುಖಭಂಗ ಅನುಭವಿಸಿದ್ದೂ ಅಷ್ಟೇ ಸತ್ಯ.

ಸೋಲಿನ ಸುಳಿಗೆ ಸಿಲುಕಿಸಿದ್ದೇ ತಂಡದ ‘ಸ್ಟ್ರೆಂಥ್​’​.!
ಸ್ಪಿನ್​ ಟು ವಿನ್​ ಇದು ತವರಿನಲ್ಲಿ ಟೀಮ್​ ಇಂಡಿಯಾ ಮಂತ್ರ. ಬಹು ಕಾಲದಿಂದಲೇ ಇದೇ ಟೀಮ್​ ಇಂಡಿಯಾದ ಸ್ಟ್ರೆಂಥ್​ ಕೂಡ. ಇದೇ ಸ್ಟ್ರೆಂಥ್​ ಇದೀಗ ವೀಕ್​ನೆಸ್​ ಆಗಿ ಬದಲಾಗ್ತಿದೆ. ಹೈದ್ರಾಬಾದ್​ ಟೆಸ್ಟ್​ ಇದಕ್ಕೆ ಬೆಸ್ಟ್​ ಏಕ್ಸಾಂಪಲ್​.. ಸ್ಪಿನ್​ ಟ್ರ್ಯಾಕ್​ನಲ್ಲಿ ಡೆಬ್ಯೂಟಂಟ್​ ಟಾಮ್​ ಹಾರ್ಟ್ಲೀ ಎದುರು ಟೀಮ್​ ಇಂಡಿಯಾ ಮಕಾಡೆ ಮಲಗಿ ಬಿಡ್ತು.

ಸ್ಪಿನ್​ ಟ್ರ್ಯಾಕ್​​ಗಳೇ ಟೀಮ್​ ಇಂಡಿಯಾಗೆ ವಿಲನ್​
ಇಂಗ್ಲೆಂಡ್​​​ ಎದುರಿನ ಮುಂದಿನ ಪಂದ್ಯಗಳಲ್ಲಿ ಮತ್ತೆ ನಮ್ಮ ಸ್ಟ್ರೆಂಥ್​ ಸ್ಪಿನ್​ ಅಂತಾ ಟರ್ನಿಂಗ್​ ಟ್ರ್ಯಾಕ್​​ನಲ್ಲಿ ಆಡೋಕೆ ಮುಂದಾದ್ರೆ, ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಂತಾಗುತ್ತೆ. ಹೈದ್ರಾಬಾದ್​​ನ ಸ್ಪಿನ್​ ಟ್ರ್ಯಾಕ್​ನಲ್ಲಿ ಟೀಮ್​ ಇಂಡಿಯಾ ಮಕಾಡೆ ಮಲಗಿರೋದಕ್ಕೆ ನಾವು ಈ ಮಾತನ್ನ ಹೇಳ್ತಿಲ್ಲ. 2011ರಿಂದ ಈವರೆಗಿನ ಟೀಮ್​ ಇಂಡಿಯಾದ ಟ್ರ್ಯಾಕ್​ ರೆಕಾರ್ಡೆ ಈ ಕಥೆಯನ್ನ ಹೇಳ್ತಿದೆ.

2011ರಿಂದ ಟರ್ನಿಂಗ್​ಟ್ರ್ಯಾಕ್​ನಲ್ಲಿ ಭಾರತ
ಭಾರತದಲ್ಲಿ 2011ರಿಂದ ಸರಾಸರಿ 3.7 ಡಿಗ್ರಿ ಟರ್ನ್​ ಆಗುವ ಪಿಚ್​ಗಳಲ್ಲಿ ಆಡಿದಾಗ ಟೀಮ್​ ಇಂಡಿಯಾ 41 ಪಂದ್ಯಗಳನ್ನ ಗೆದ್ದಿದೆ. ಇನ್ನು ಅದಕ್ಕಿಂತ ಹೆಚ್ಚು ಅಂದ್ರೆ ಸರಾಸರಿ 4.3 ಡಿಗ್ರಿ ಟರ್ನ್​ ಆಗ್ತಿದ್ದ ಪಿಚ್​​ಗಳಲ್ಲಿ 5 ಪಂದ್ಯಗಳನ್ನ ಸೋತಿದೆ. ಮೊದಲ ಟೆಸ್ಟ್​ ಸೋತ ಹೈದ್ರಾಬಾದ್​ ಪಿಚ್​ ಕೂಡ 4.2 ಡಿಗ್ರಿ ಟರ್ನ್​ ಆಗ್ತಿತ್ತು.

ವೈಜಾಗ್, ರಾಜ್​ಕೋಟ್, ರಾಂಚಿಯಲ್ಲೂ ಟರ್ನಿಂಗ್​ ಟ್ರ್ಯಾಕ್..?
ಈ ಸರಣಿಯ ಮುಂದಿನ ಪಂದ್ಯಗಳು ನಡೆಯೋ ವೈಜಾಗ್​, ರಾಜ್​ಕೋಟ್​ ಹಾಗೂ ಜಾರ್ಖಂಡ್​ನ ರಾಂಚಿಯ ಪಿಚ್​ಗಳೂ ಸ್ಪಿನ್​ಗೆ ಹೆಚ್ಚು ಸಹಕಾರಿ. ಹಾಗಂತ ಟೀಮ್​ ಇಂಡಿಯಾ ಸ್ಪಿನ್​ ಟ್ರ್ಯಾಕ್​ ರೆಡಿ ಮಾಡಿಸಿದ್ರೆ, ಅಪಾಯ ಕಟ್ಟಿಟ್ಟ ಬುತ್ತಿ. ನಮ್ಮ ಸ್ಟ್ರೆಂಥ್​ಗೆ ನಾವು ಆಡೋದು ತಪ್ಪಲ್ಲ..! ಆದ್ರೆ, ಈ ಸ್ಪಿನ್​ ಟ್ರ್ಯಾಕ್​ನಲ್ಲಿ ನಮ್ಮ ಬ್ಯಾಟರ್ಸೇ ಮುಗ್ಗರಿಸ್ತಿದ್ದಾರೆ. ಹೀಗಿದ್ದೂ, ಟರ್ನಿಂಗ್​​​ ಟ್ರ್ಯಾಕ್​ ಮೊರೆ ಹೋಗೋದು ಎಷ್ಟು ಸರಿ ನೀವೆ ಹೇಳಿ.

ಸ್ಪೋರ್ಟಿವ್​ ಟ್ರ್ಯಾಕ್​ನಲ್ಲಿ ಆಡಲು ಸೋಲಿನ ಭಯ?
ಟೀಮ್​ ಇಂಡಿಯಾದಲ್ಲಿ ನಡೆಯೋ ಬಹುತೇಕ ಟೆಸ್ಟ್​ ಪಂದ್ಯಗಳು ಸ್ಪಿನ್​ ಟ್ರ್ಯಾಕ್​ನಲ್ಲೇ ನಡೆಯೋದು. ಇಲ್ಲಿ ಗೆಲ್ಲಲಾಗದ ಅದೆಷ್ಟೋ ವಿದೇಶಿ ತಂಡಗಳು ಕೊನೆಗೆ ಈ ಪಿಚ್​​ ಗೂಬೆ ಕೂರಿಸಿವೆ. ಇದೇ ಸ್ವತಃ ಇಂಡಿಯಾನೇ ಸ್ಪಿನ್​ ಟ್ರ್ಯಾಕ್​ನಲ್ಲಿ ಮುಗ್ಗರಿಸಿದೆ. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಟೀಮ್​ ಮ್ಯಾನೇಜ್​​ಮೆಂಟ್​ ಹಾಗೂ ಬಿಸಿಸಿಐ ಸ್ಪೋರ್ಟಿವ್​​ ಟ್ರ್ಯಾಕ್​ ರೆಡಿ ಮಾಡಿಸಬೇಕು ಅನ್ನೋದು ಹಲವರ ಸಲಹೆ. ಆದ್ರೆ, ಟೀಮ್​ ಇಂಡಿಯಾgಎ ಸ್ಪೋರ್ಟಿವ್​ ಟ್ರ್ಯಾಕ್​ನಲ್ಲಿ ಆಡೋಕೆ ಸೋಲಿನ ಭಯ ಇದ್ದೇ ಇದೆ. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಟ್ರ್ಯಾಕ್​ ಹೇಗಿರುತ್ತೆ ಅನ್ನೋದು ಸದ್ಯ ಕುತೂಹಲ ಮೂಡಿಸಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಟೀಮ್​ ಇಂಡಿಯಾ ತಂತ್ರಕ್ಕೆ ಆಂಗ್ಲರ ತಿರುಮಂತ್ರ.. ಸೋಲಿನ ಸುಳಿಗೆ ಸಿಲುಕಿಸಿದ್ದೇ ತಂಡದ ಸ್ಟ್ರೆಂಥ್​..!

https://newsfirstlive.com/wp-content/uploads/2024/01/TEAM_INDIA_1.jpg

Load More