ಗಂಭೀರ್​​ಗೆ ಪಟ್ಟದ ಪರೀಕ್ಷೆ.. ಪಾಸ್​ ಆಗಿಲ್ಲ ಅಂದ್ರೆ ನೋ ಎಕ್ಸ್​​ಕ್ಯೂಸ್..!

author-image
Ganesh
Updated On
ಗಂಭೀರ್​​ಗೆ ಪಟ್ಟದ ಪರೀಕ್ಷೆ.. ಪಾಸ್​ ಆಗಿಲ್ಲ ಅಂದ್ರೆ ನೋ ಎಕ್ಸ್​​ಕ್ಯೂಸ್..!
Advertisment
  • ಇಂಡೋ-ಇಂಗ್ಲೆಂಡ್​​ ಟೆಸ್ಟ್​ ಸರಣಿಗೆ ಕೌಂಟ್​​ಡೌನ್
  • ಹೊಸ ಸೀಸನ್​, ಹೊಸ ತಂಡ, ಹೊಸ ನಾಯಕ
  • ಆಂಗ್ಲರ ನಾಡಲ್ಲಿ ಹೆಡ್​ಕೋಚ್​ಗೆ ಗಂಭೀರ ಸವಾಲು

ಭಾರತೀಯ ಕ್ರಿಕೆಟ್​​ ಜಗತ್ತಿನಲ್ಲಿ ಸದ್ಯ 2 ವಿಚಾರಗಳು ಚರ್ಚೆಯಾಗ್ತಿವೆ. ಒಂದು ಟೀಮ್​ ಇಂಡಿಯಾದ ಯುವ ಪಡೆ ಇಂಗ್ಲೆಂಡ್​​ನ ಚಾಲೆಂಜಿಂಗ್​ ಕಂಡಿಷನ್ಸ್​​ನಲ್ಲಿ ಹೇಗೆ ಪರ್ಫಾಮ್​​ ಮಾಡುತ್ತೆ ಅನ್ನೋದು. ಇನ್ನೊಂದು ಟೀಮ್​ ಇಂಡಿಯಾ ಹೆಡ್​ ಕೋಚ್​​ ಗೌತಮ್​ ಗಂಭೀರ್ ರಿಯಲ್​​​​ ಟೆಸ್ಟ್​​ ಪಾಸಾಗ್ತಾರಾ ಅನ್ನೋದು. ಯುವ ಆಟಗಾರರು ಫೇಲ್​ ಆದ್ರೆ ಏಕ್ಸ್​ಕ್ಯೂಸ್​ ಇದೆ. ಗಂಭೀರ್​​ ಪಾಸಾಗ್ಲಿಲ್ಲ ಅಂದ್ರೆ ನೋ ಎಕ್ಸ್​​ಕ್ಯೂಸ್​​. ಆಂಗ್ಲರ ನಾಡಲ್ಲಿ ಗಂಭೀರ್​ ಪಟ್ಟದ ಪರೀಕ್ಷೆ ನಡೆಯಲಿದೆ.

ಬಾಂಗ್ಲಾದೇಶ ಎದುರು 2-0 ಅಂತರದ ಜಯ

ಗುರು ಗಂಭೀರ್​​ ಮಾರ್ಗದರ್ಶನದ ಮೊದಲ ಸರಣಿಯಲ್ಲಿ ಬಾಂಗ್ಲಾದೇಶವನ್ನ ಬಗ್ಗು ಬಡಿದ ಟೀಮ್​ ಇಂಡಿಯಾ 2-0 ಅಂತರದಲ್ಲಿ ಸರಣಿ ಗೆದ್ದು ಬೀಗಿತು. ಸಾಲಿಡ್​​ ಸ್ಟಾರ್ಟ್​​ ಪಡೆದ ಗಂಭೀರ್ ಗಾಡಿಯ ಇಂಜಿನ್​ ಜರ್ನಿ ಸಾಗಿದಂತೆ ಸ್ಲೋ ಡೌನ್​ ಆಗಿ ಮುಗ್ಗರಿಸಿಬಿಡ್ತು. ಬಾಂಗ್ಲಾ ವಿರುದ್ಧದ ಸರಣಿ ಬಳಿಕ ತವರಿನಲ್ಲಿ ನಡೆದ ನ್ಯೂಜಿಲೆಂಡ್​ ವಿರುದ್ಧದ ಸರಣಿಯಲ್ಲಿ ಟೀಮ್​ ಇಂಡಿಯಾ ಮುಖಭಂಗ ಅನುಭವಿಸಿತು. ಬರೋಬ್ಬರಿ 12 ವರ್ಷಗಳ ಬಳಿಕ ತವರಿನಲ್ಲಿ ಟೆಸ್ಟ್​ ಸರಣಿ ಸೋತ ಭಾರತ ತಂಡ 3-0 ಅಂತರದಲ್ಲಿ ವೈಟ್​ವಾಷ್​​ ಮುಖಭಂಗ ಅನುಭವಿಸಿತು.

ಇದನ್ನೂ ಓದಿ: ಬಾಗಲಕೋಟೆ; ಮೆಡಿಕಲ್ ಆಫೀಸರ್​, ನರ್ಸ್​ ಉದ್ಯೋಗಗಳಿಗೆ ಅರ್ಜಿ ಆಹ್ವಾನ

publive-image

ಆನಂತರದ ಬಾರ್ಡರ್​-ಗವಾಸ್ಕರ್​ ಟೆಸ್ಟ್​ ಸರಣಿಯಲ್ಲೂ ಗುರುವಿನ ಪಾಠ ವರ್ಕೌಟ್​ ಆಗಲಿಲ್ಲ. ಮೊದಲ ಪಂದ್ಯ ಗೆದ್ದು ಸರಣಿಯಲ್ಲಿ ಶುಭಾರಂಭ ಮಾಡಿದ್ರೂ ಅಂತ್ಯದಲ್ಲಿ ಭಾರತ ತಂಡ 1-3 ಅಂತರದ ಸೋಲುಂಡಿತು. ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್​ ಫೈನಲ್​ ಪ್ರವೇಶದ ಕನಸನ್ನ ಸೋಲು ನುಚ್ಚು ನೂರಾಗಿಸಿತು.

ಹೊಸ ಸೀಸನ್​, ಹೊಸ ತಂಡ, ಹೊಸ ನಾಯಕ

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಸೈಕಲ್ನ ಹೊಸ ಸೀಸನ್ ಅನ್ನ ಹೊಸ ಹುರುಪಿನೊಂದಿಗೆ ಆರಂಭಿಸಲು ಟೀಮ್​ ಇಂಡಿಯಾ ಸಜ್ಜಾಗಿದೆ. ಟೀಮ್​ ಇಂಡಿಯಾದಲ್ಲೂ ಹಳೆ ನೀರು ಹರಿದು ಹೋಗಿ ಹೊಸ ನೀರು ಬಂದಿದೆ. ಸೀನಿಯರ್​​ಗಳು ಟೆಸ್ಟ್​ಗೆ ಗುಡ್​ ಬೈ ಹೇಳಿದ್ದಾಗಿದೆ. ಈಗ ಹೊಸ ಆಟಗಾರರು, ಹೊಸ ನಾಯಕ, ಯುವ ಆಟಗಾರ ಪಡೆಯನ್ನ ಕಟ್ಟಿಕೊಂಡು ಗಂಭೀರ್​ ಆಂಗ್ಲರ ವಿರುದ್ಧದ ಯುದ್ಧಕೆ ಸಜ್ಜಾಗಿದ್ದಾರೆ. ರನ್​ಭೂಮಿಗೆ ಇಳಿಯಲು ರೆಡಿಯಾಗಿರೋ ಗಂಭೀರ್​ ಮುಂದೆ ಕಠಿಣ ಸವಾಲುಗಳಿವೆ.

ಇದನ್ನೂ ಓದಿ: ಕಾಲ್ತುಳಿತದಲ್ಲಿ RCB ಅಭಿಮಾನಿ ನಿಧನ.. ಮೊಮ್ಮಗನ ಅಗಲಿಕೆ ನೋವಿನಲ್ಲಿದ್ದ ಅಜ್ಜಿಯೂ ಕೊನೆಯುಸಿರು

publive-image

ಗಂಭೀರ್​ಗೆ ‘ಫ್ರೀ ಹ್ಯಾಂಡ್​’.. ಷರತ್ತುಗಳು ಅನ್ವಯ

ಬಿಸಿಸಿಐ ಬಾಸ್​​ಗಳು ಗಂಭೀರ್​ಗೆ ಫ್ರಿ ಹ್ಯಾಂಡ್​ ನೀಡಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದ ಕೊನೆ ಟೆಸ್ಟ್​ನಲ್ಲಿ ಕ್ಯಾಪ್ಟನ್​​ ರೋಹಿತ್​ ಶರ್ಮಾನೇ ಬೆಂಚ್​ ಕಾದಿದ್ರು ಅನ್ನೋದು ಗಂಭೀರ್​ ಪವರ್​ ಎಷ್ಟಿದೆ ಅನ್ನೋದಕ್ಕೆ ಬೆಸ್ಟ್​ ಎಕ್ಸಾಂಪಲ್​. ಇದೀಗ ಇಂಗ್ಲೆಂಡ್​ ಸರಣಿಗೆ ಪ್ರಕಟವಾಗಿರೋ ತಂಡದ ಆಯ್ಕೆ, ನಾಯಕತ್ವದ ಹಸ್ತಾಂತರ, ಭವಿಷ್ಯದ ಫ್ಲಾನ್​​ ಎಲ್ಲಾ ವಿಚಾರದಲ್ಲೂ ಗಂಭೀರ್​​ಗೆ ಫ್ರಿ ಹ್ಯಾಂಡ್​ ನೀಡಲಾಗಿದೆ. ಜೊತೆಗೆ ಷರತ್ತನ್ನೂ ವಿಧಿಸಲಾಗಿದೆ. ಒಂದು ವೇಳೆ ಟೆಸ್ಟ್​​ ಸರಣಿಯಲ್ಲಿ ಟೀಮ್​ ಇಂಡಿಯಾ ಕ್ವಾಲಿಟಿ ಪರ್ಫಾಮೆನ್ಸ್​ ನೀಡದಿದ್ರೆ, ಟೆಸ್ಟ್​​ ಫಾರ್ಮೆಟ್​ನಿಂದ ಗಂಭೀರ್​ ತಲೆದಂಡವಾಗಲಿದೆ ಅನ್ನೋದು ಬಿಸಿಸಿಐ ಮೂಲದ ಮಾಹಿತಿ. ಈ ಹಿಂದೆಯೇ ಟೆಸ್ಟ್​ ಫಾರ್ಮೆಟ್​ಗೆ ಸಪರೇಟ್​ ಕೋಚ್​ ನೇಮಿಸೋ ಚರ್ಚೆ ಬಿಸಿಸಿಐ ವಲಯದಲ್ಲಿ ನಡೆದಿತ್ತು. ಗಂಭೀರ್​ ಫೇಲ್​ ಆದ್ರೆ ಆ ಬಗ್ಗೆ ಮತ್ತೊಮ್ಮೆ ಚಿಂತಿಸಲು ಬಾಸ್​​ಗಳು ನಿರ್ಧರಿಸಿದ್ದಾರೆ.

ಅನಾನುಭವಿ ನಾಯಕ, ಅನಾನುಭವಿ ಆಟಗಾರರು

ರೋಹಿತ್​ ಶರ್ಮಾ ಉತ್ತರಾಧಿಕಾರಿಯಾಗಿ ಟೀಮ್​ ಇಂಡಿಯಾ ನಾಯಕನ ಪಟ್ಟವೇರಿರೋ ಶುಭ್​ಮನ್​ ಗಿಲ್​ಗೆ ಅನುಭವದ ಕೊರತೆಯಿದೆ. ಡೊಮೆಸ್ಟಿಕ್​ ಕ್ರಿಕೆಟ್​​ನಲ್ಲಿ ಕೇವಲ ಒಂದು ಪಂದ್ಯದಲ್ಲಿ ಮಾತ್ರ ತಂಡವನ್ನ ಮುನ್ನಡೆಸಿದ್ದಾರೆ. ಗಿಲ್​ಗೆ ನೆರವಾಗಲು ಮಾಜಿ ನಾಯಕರಾದ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ತಂಡದಲ್ಲಿಲ್ಲ. ಗಂಭೀರ್​ ಆಫ್​ ದ ಫೀಲ್ಡ್​ನಲ್ಲಿ ಏನೇ ಗೇಮ್​ ಪ್ಲಾನ್​ ಮಾಡಿದ್ರೂ ಅದನ್ನ ಆನ್​​ಫೀಲ್ಡ್​ನಲ್ಲಿ ಗಿಲ್​ ಎಕ್ಸಿಕ್ಯೂಟ್​ ಮಾಡಬೇಕಿದೆ. ಅನಾನುಭವಿ ನಾಯಕನನ್ನ ಇಟ್ಟುಕೊಂಡು ಇಂಗ್ಲೆಂಡ್​ ಟೈಗರ್ಸ್​ನ ಖೆಡ್ಡಾಗೆ ಕೆಡವೋದು ಗಂಭೀರ್​ಗೆ ದೊಡ್ಡ ಸವಾಲಾಗಲಿದೆ.

ಇದನ್ನೂ ಓದಿ: ಚಿಕ್ಕಮಗಳೂರು ಒಂಟಿ ಕಾಲು ಪತ್ತೆ ಕೇಸ್​ನ ರಹಸ್ಯ ಬಯಲು.. ಥ್ರಿಲ್ಲಿಂಗ್ ಕ್ರೈಂ ಇನ್ವೆಸ್ಟಿಗೇಷನ್ ಸ್ಟೋರಿ..

publive-image

ಇಂಗ್ಲೆಂಡ್​​ ಪ್ರವಾಸದ ತಂಡದಲ್ಲಿರೋ ಕೆಲವರನ್ನ ಹೊರತುಪಡಿಸಿದ್ರೆ ಅನಾನುಭವಿ ಆಟಗಾರರೇ ತಂಡದಲ್ಲಿದ್ದಾರೆ. ಕೆಲವರು ಡೆಬ್ಯೂ ಮಾಡೋಕೆ ಸಜ್ಜಾಗಿದ್ರೆ ಡೆಬ್ಯೂ ಮಾಡಿರೋ ಇನ್ನು ಕೆಲವರಿಗೆ ಇಂಗ್ಲೆಂಡ್​ನಲ್ಲಿ ಆಡಿದ ಅನುಭವೇ ಇಲ್ಲ. ಇಂಗ್ಲೆಂಡ್​​ನಂತ ಟಫ್​ ಪ್ಲೇಯಿಂಗ್​ ಕಂಡಿಷನ್ಸ್​ನಲ್ಲಿ ಯುವ ಆಟಗಾರರಿಂದ ಗಂಭೀರ್​ ಹೇಗೆ ಪರ್ಫಾಮೆನ್ಸ್​ ಹೊರ ತೆಗಿತಾರೆ ಅನ್ನೋದು ದೊಡ್ಡ ಪ್ರಶ್ನೆಯಾಗಿದೆ.

'I’m always under pressure.. ಇಂಗ್ಲೆಂಡ್​​ ಫ್ಲೈಟ್​​ ಹತ್ತೋಕು ಮುನ್ನ ಗಂಭೀರ್​ ಹೇಳಿದ ಮಾತಿದು. ಒತ್ತಡದಲ್ಲೇ ಟೆಸ್ಟ್​ ಸರಣಿಯನ್ನ ಆಡಲು ಆಂಗ್ಲರ ನಾಡಿಗೆ ಕಾಲಿಟ್ಟಿರೋ ಗಂಭೀರ್​ ರಿಯಲ್​​ ಟೆಸ್ಟ್​​ನಲ್ಲಿ ಗೆಲ್ತಾರಾ? ಹೆಡ್​​ಕೋಚ್​ ಪಟ್ಟವನ್ನ ಉಳಿಸಿಕೊಳ್ತಾರಾ? ಕಾದು ನೋಡೋಣ.

ಇದನ್ನೂ ಓದಿ: ಸೂರ್ಯಕುಮಾರ್ ಯಾದವ್​ಗೆ ಶಾಕಿಂಗ್ ನ್ಯೂಸ್.. BCCIನಲ್ಲಿ ಬದಲಾವಣೆಯ ಬಿಸಿಬಿಸಿ ಚರ್ಚೆ..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment