/newsfirstlive-kannada/media/post_attachments/wp-content/uploads/2025/06/IND-VS-ENG-2.jpg)
ಲೀಡ್ಸ್ ಟೆಸ್ಟ್ನ ಮೊದಲ ದಿನಾದಟದಲ್ಲಿ ಪಾರಮ್ಯ ಮರೆದ ಟೀಮ್ ಇಂಡಿಯಾ 2ನೇ ದಿನವೂ ಬೊಂಬಾಟ್ ಆರಂಭ ಪಡೆದುಕೊಳ್ತು. ಆದ್ರೆ ಸೆಕೆಂಡ್ ಸೆಷನ್ನಲ್ಲಿ ಇಂಗ್ಲೆಂಡ್ ಭರ್ಜರಿ ಕಮ್ಬ್ಯಾಕ್ ಮಾಡ್ತು. ಆಂಗ್ಲರ ಎದುರು ಬೂಮ್ರಾ ಏಕಾಂಗಿ ಹೋರಾಟ ನಡೆಸಿದ್ರು.
ಸೆಷನ್ - 1: ಲೀಡ್ಸ್ನಲ್ಲಿ ರಿಷಭ್ ಪಂತ್ ಫೆಂಟಾಸ್ಟಿಕ್ ಶತಕ
3 ವಿಕೆಟ್ ನಷ್ಟಕ್ಕೆ 359 ರನ್ಗಳೊಂದಿಗೆ ದಿನದಾಟ ಆರಂಭಿಸಿದ ಟೀಮ್ ಇಂಡಿಯಾ ಅದ್ಭುತ ಆಟವನ್ನ ಮುಂದುವರೆಸಿತು. ಕ್ಯಾಪ್ಟನ್ ಶುಭ್ಮನ್ ಗಿಲ್, ವೈಸ್ ಕ್ಯಾಪ್ಟನ್ ರಿಷಭ್ ಪಂತ್ ಇಂಗ್ಲೆಂಡ್ ಬೌಲರ್ಗಳನ್ನ ಪಂಚರ್ ಮಾಡಿದ್ರು. 4ನೇ ವಿಕೆಟ್ಗೆ 209 ರನ್ಗಳ ಬಿಗ್ ಪಾರ್ಟನರ್ಶಿಪ್ ಕಟ್ಟಿದ್ರು.
ಮೊದಲ ದಿನದಂತೆ 2ನೇ ದಿನವೂ ರಿಷಭ್ ಪಂತ್ ಬೊಂಬಾಟ್ ಬ್ಯಾಟಿಂಗ್ ಮುಂದುವರೆಸಿದ್ರು. ಬೌಂಡರಿ-ಸಿಕ್ಸರ್ ಸಿಡಿಸಿ ಫ್ಯಾನ್ಸ್ಗೆ ಭರ್ಜರಿ ಎಂಟರ್ಟೈನ್ಮೆಂಟ್ ನೀಡಿದ್ರು. 146 ಎಸೆತಕ್ಕೆ ಶತಕ ಸಿಡಿಸಿ ಸಂಭ್ರಮಿಸಿದ್ರು. ಇಂಗ್ಲೆಂಡ್ ನೆಲದಲ್ಲಿ 3ನೇ ಶತಕ ಪೂರೈಸಿದ ಪಂತ್, ಸ್ಪೆಷಲ್ ಸೆಲಬ್ರೇಷನ್ ಮಾಡಿ ಸಂಭ್ರಮಿಸಿದ್ರು.
ಇದನ್ನೂ ಓದಿ: ರಿಷಭ್ ಪಂತ್ ಈಗಲೂ ಡೇಟಿಂಗ್ನಲ್ಲಿ ಇದ್ದಾರಾ.. ವಿಕೆಟ್ ಕೀಪರ್ನ ಗರ್ಲ್ಫ್ರೆಂಡ್ ಆಸ್ತಿ ಎಷ್ಟಿದೆ?
147 ರನ್ಗಳಿಸಿ ಶುಭ್ಮನ್ ಗಿಲ್ ಔಟಾದ್ರು. ಇದ್ರೊಂದಿಗೆ ಟೀಮ್ ಇಂಡಿಯಾದ ಕುಸಿತ ಶುರುವಾಯ್ತು. ಕಮ್ಬ್ಯಾಕ್ ಮಾಡಿದ್ದ ಕರುಣ್ ನಾಯರ್ ಡಕೌಟ್ ಆದ್ರು. ರಿಷಭ್ ಆಟವೂ 134 ರನ್ಗೆ ಅಂತ್ಯವಾಯ್ತು. ಶಾರ್ದೂಲ್ ಠಾಕೂರ್ ತಂಡಕ್ಕೆ ಆಸರೆಯಾಗಲಿಲ್ಲ. ಲಂಚ್ ಬ್ರೇಕ್ ವೇಳೆಗೆ 7 ವಿಕೆಟ್ ಕಳೆದುಕೊಂಡ ಟೀಮ್ ಇಂಡಿಯಾ 454 ರನ್ಗಳಿಸಿತು.
ಸೆಷನ್ - 2: ಇಂಡಿಯಾ ಆಲೌಟ್, ಇಂಗ್ಲೆಂಡ್ ಕಮ್ಬ್ಯಾಕ್
ಶುಭ್ಮನ್ ಗಿಲ್ ಪತನದೊಂದಿಗೆ ಆರಂಭವಾದ ಪೆವಿಲಿಯನ್ ಪರೇಡ್ ಲಂಚ್ ಬ್ರೇಕ್ ಬಳಿಕವೂ ನಿಲ್ಲಲಿಲ್ಲ. ಜಸ್ಟ್ 41 ರನ್ಗಳ ಅಂತರದಲ್ಲಿ 7 ವಿಕೆಟ್ಗಳು ಉರುಳಿದ್ವು. 471 ರನ್ಗಳಿಗೆ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ ಆಲೌಟ್ ಆಯ್ತು.
ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಆರಂಭದಲ್ಲೇ ಬೂಮ್ರಾಘಾತಕ್ಕೆ ಒಳಗಾಯ್ತು. ಬೂಮ್ರಾ ಬೆಂಕಿ ಎಸೆತಕ್ಕೆ ದಂಗಾದ ಜಾಕ್ ಕ್ರಾವ್ಲಿ 4 ರನ್ಗೆ ಆಟ ಮುಗಿಸಿದ್ರು. ಬಳಿಕ ಕ್ರಿಸ್ನಲ್ಲಿ ಜೊತೆಯಾದ ಬೆನ್ ಡಕೆಟ್, ಒಲಿ ಪೋಪ್ ತಂಡಕ್ಕೆ ಚೇತರಿಕೆ ನೀಡಿದ್ರು. ಸಿಕ್ಕ ಅವಕಾಶವನ್ನ ಕೈ ಚೆಲ್ಲಿದ ರವೀಂದ್ರ ಜಡೇಜಾ ಡಕೆಟ್ಗೆ ಜೀವದಾನ ನೀಡಿದ್ರು. ಆ ಬಳಿಕ ಸಾಲಿಡ್ ಆಟವಾಡಿದ ಈ ಜೋಡಿ 100 ರನ್ಗಳ ಜೊತೆಯಾಟವಾಡಿತು. 2ನೇ ಸೆಷನ್ ಅಂತ್ಯಕ್ಕೆ ಇಂಗ್ಲೆಂಡ್ 1 ವಿಕೆಟ್ ನಷ್ಟಕ್ಕೆ 107 ರನ್ಗಳಿಸಿತು.
ಇದನ್ನೂ ಓದಿ: ಕಿಂಗ್ ಕೊಹ್ಲಿ ಬ್ರ್ಯಾಂಡ್ ವ್ಯಾಲ್ಯೂ ಮತ್ತಷ್ಟು ದುಬಾರಿ.. ಈ ಏರಿಕೆ ಹಿಂದಿದೆ ಸ್ಪೆಷಲ್ ರೀಸನ್!
ಸೆಷನ್ - 3: ಜಸ್ಪ್ರಿತ್ ಬೂಮ್ರಾ ಏಕಾಂಗಿ ಹೋರಾಟ
3ನೇ ಸೆಷನ್ನಲ್ಲಿ ಬೂಮ್ರಾ ಏಕಾಂಗಿ ಹೋರಾಟ ನಡೆಸಿದ್ರು. ಸೆಷನ್ ಆರಂಭದಲ್ಲೇ ಬೆನ್ ಡಕೆಟ್ನ ಕ್ಲೀನ್ಬೋಲ್ಡ್ ಮಾಡಿದ್ರು. ಅದ್ರ ಬೆನ್ನಲ್ಲೇ ಬೂಮ್ರಾ ಮತ್ತೊಂದು ಆಪರ್ಚುನಿಟಿ ಕ್ರಿಯೇಟ್ ಮಾಡಿದ್ರು. ಅದನ್ನ ಯಶಸ್ವಿ ಜೈಸ್ವಾಲ್ ಮಣ್ಣುಪಾಲು ಮಾಡಿ, ಒಲಿ ಪೋಪ್ ಜೀವದಾನ ನೀಡಿದ್ರು. 3ನೇ ವಿಕೆಟ್ಗೆ ಜೋ ರೂಟ್-ಒಲಿ ಪೋಪ್ ಇಂಡಿಯನ್ ಬೌಲರ್ಗಳನ್ನ ಕಾಡಿದ್ರು. 127 ಎಸೆತಗಳಲ್ಲಿ ಪೋಪ್ ಶತಕ ಪೂರೈಸಿದ್ರು.
ಒಲಿ ಪೋಪ್ ಶತಕ ಸಿಡಿಸಿ ಮರು ಎಸೆತದಲ್ಲಿ ಜಸ್ಪ್ರಿತ್ ಬೂಮ್ರಾ ಜೋ ರೂಟ್ ವಿಕೆಟ್ ಉರುಳಿಸಿದ್ರು. ಅಂತಿಮವಾಗಿ ಇಂಗ್ಲೆಂಡ್ ದಿನದ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ ಇಂಗ್ಲೆಂಡ್ 209 ರನ್ಗಳಿಸಿದ್ದು, 262 ರನ್ಗಳ ಹಿನ್ನಡೆಯಲ್ಲಿದೆ. 100 ರನ್ಗಳೊಂದಿಗೆ ಒಲಿ ಪೋಪ್ ಹಾಗೂ ಅದೃಷ್ಟದ ಆರಂಭ ಪಡೆದಿರೋ ಹ್ಯಾರಿ ಬ್ರೂಕ್ ಇಂದಿಗೆ ಕ್ರಿಸ್ ಕಾಯ್ದುಕೊಂಡಿದ್ದಾರೆ.
ಇದನ್ನೂ ಓದಿ: 21 ಮಂದಿ ಪ್ರಯಾಣಿರಿದ್ದ ಹಾಟ್ ಏರ್ ಬಲೂನ್ ಧಗಧಗ.. ಆಗಸದಲ್ಲೇ ಘೋರ ದುರಂತ.. VIDEO
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ