IND vs ENG: ಭಾರತ ಫಸ್ಟ್ ಬ್ಯಾಟಿಂಗ್.. ತಂಡಲ್ಲಿ 3 ಬದಲಾವಣೆ, ಯಾರಿಗೆಲ್ಲ ಪ್ಲೇಯಿಂಗ್-11ನಿಂದ ಕೊಕ್?

author-image
Ganesh
Updated On
ಟೆಸ್ಟ್​ ಕ್ರಿಕೆಟ್​​ಗೆ ನಾಯಕನ ಹೆಸರು ಫೈನಲ್.. ಅಧಿಕೃತ ಘೋಷಣೆ ಒಂದೇ ಬಾಕಿ..!
Advertisment
  • ಇಂಡೋ-ಇಂಗ್ಲೆಂಡ್​​ ನಡುವಿನ 2ನೇ ಟೆಸ್ಟ್​​ ಕದನ ಆರಂಭ
  • ಮೊದಲ ಟೆಸ್ಟ್ ಮ್ಯಾಚ್ ಸೋತಿರುವ ಭಾರತ ತಂಡ
  • ಟೀಂ ಇಂಡಿಯಾದಲ್ಲಿ ಯಾರಿಗೆಲ್ಲ ಅವಕಾಶ ನೀಡಲಾಗಿದೆ

ಇಂಡೋ-ಇಂಗ್ಲೆಂಡ್​​ ನಡುವಿನ 2ನೇ ಟೆಸ್ಟ್​​ ಕದನ ಆರಂಭವಾಗಿದೆ. ಟೆಸ್ಟ್​ ಸರಣಿಯ ಮೊದಲ ಪಂದ್ಯವನ್ನ ಕೈಚೆಲ್ಲಿರೋ ಟೀಮ್​ ಇಂಡಿಯಾಗೆ ಇವತ್ತಿನಿಂದ ಶುರುವಾಗಿರುವ ಎಡ್ಜ್​ಬಾಸ್ಟನ್ ಟೆಸ್ಟ್ ನಿಜಕ್ಕೂ ಅಗ್ನಿಪರೀಕ್ಷೆ ಆಗಿದೆ.

ಕಳೆದ 58 ವರ್ಷಗಳಲ್ಲಿ ಈ ಸ್ಟೇಡಿಯಂನಲ್ಲಿ ಟೀಮ್​ ಇಂಡಿಯಾ 8 ಟೆಸ್ಟ್​​ ಪಂದ್ಯಗಳನ್ನಾಡಿದೆ. ಈ ಪೈಕಿ ಒಂದೇ ಒಂದು ಪಂದ್ಯವನ್ನೂ ಗೆದ್ದಿಲ್ಲ. ಸತತ ಸೋಲುಂಡಿರೋ ಅನ್​ಲಕ್ಕಿ ಪಿಚ್​​ನಲ್ಲಿ ಅದೃಷ್ಟದ ಹುಡುಕಾಟ ನಡೆಸಬೇಕಿದೆ. ಇದರ ಮಧ್ಯೆ ಮತ್ತೆ ಟಾಸ್​ ಸೋತಿರುವ ಭಾರತ, ಮೊದಲು ಬ್ಯಾಟಿಂಗ್ ಮಾಡಲಿದೆ. ಇಂಗ್ಲೆಂಡ್ ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಇನ್ನು ಟೀಂ ಇಂಡಿಯಾದಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ. ಮೂವರು ಆಟಗಾರರಿಗೆ ಕೊಕ್ ನೀಡಲಾಗಿದೆ. ವೇಗಿ ಜಸ್​ಪ್ರಿತ್​ ಬುಮ್ರಾಗೆ ವಿಶ್ರಾಂತಿ ನೀಡಿದ್ರೆ, ಮೊದಲ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ ಶಾರ್ದುಲ್ ಠಾಕೂರ್, ಸಾಯಿ ಸುದರ್ಶನ್​​ಗೆ ಕೊಕ್ ನೀಡಲಾಗಿದೆ. ಇನ್ನು, ಇವರ ಬದಲಿಯಾಗಿ ಆಕಾಶ್ ದೀಪ್, ವಾಷಿಂಗ್ಟನ್ ಸುಂದರ್, ನಿತೀಶ್ ರೆಡ್ಡಿ ತಂಡಕ್ಕೆ ಎಂಟ್ರಿ ಆಗಿದ್ದಾರೆ.

ಇದನ್ನೂ ಓದಿ: 18 ತಿಂಗಳಿಂದ ನೋವಲ್ಲೇ ನರಳಾಟ.. ತಂಡಕ್ಕಾಗಿ ಜೀವ ಸವೆಸಿದ ಬೂಮ್ರಾ..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment