ಟೀಂ ಇಂಡಿಯಾಗೆ ಇಂದಿನಿಂದ ಅಗ್ನಿ ಪರೀಕ್ಷೆ; ಶಾರ್ದೂಲ್ ಔಟ್​.. ಬದಲಿ ಆಟಗಾರ ಯಾರು..?

author-image
Ganesh
Updated On
ಟೀಂ ಇಂಡಿಯಾಗೆ ಇಂದಿನಿಂದ ಅಗ್ನಿ ಪರೀಕ್ಷೆ; ಶಾರ್ದೂಲ್ ಔಟ್​.. ಬದಲಿ ಆಟಗಾರ ಯಾರು..?
Advertisment
  • ಇಂದಿನಿಂದ ಇಂಡೋ-ಇಂಗ್ಲೆಂಡ್​ 2ನೇ ಟೆಸ್ಟ್​ ಪಂದ್ಯ
  • ಎಡ್ಜ್​​ಬಾಸ್ಟನ್​ನಲ್ಲಿ ಟೀಮ್​ ಇಂಡಿಯಾಗೆ ಅಗ್ನಿಪರೀಕ್ಷೆ
  • 58 ವರ್ಷ.. 8 ಪಂದ್ಯ.. ಒಂದೂ ಪಂದ್ಯ ಗೆದ್ದಿಲ್ಲ..!

ಗೆಲ್ಲಬಹುದಾಗಿದ್ದ ಪಂದ್ಯವನ್ನ ಸಾಲು ಸಾಲು ತಪ್ಪು ಮಾಡಿ ಸೋತ ಟೀಮ್​ ಇಂಡಿಯಾ 2ನೇ ಟೆಸ್ಟ್​ಗೆ ರೆಡಿಯಾಗಿದೆ. ಅನ್​​ಲಕ್ಕಿ ಸ್ಟೇಡಿಯಂನಲ್ಲಿ ಎಡ್ಜ್​​ಬಾಸ್ಟನ್​ನಲ್ಲಿ ಇಂಗ್ಲೆಂಡ್​ ಮಣಿಸಿ ಇತಿಹಾಸ ಬದಲಿಸೋ ಲೆಕ್ಕಾಚಾರ ಹಾಕಿದೆ. ಇದಕ್ಕಾಗಿ ಭರ್ಜರಿ ಸಿದ್ಧತೆ ನಡೆಸಿದ್ದು, ಹಲವು ಬದಲಾವಣೆಗಳೊಂದಿಗೆ ಇಂದು ಟೀಮ್​ ಇಂಡಿಯಾ ಅಖಾಡಕ್ಕಿಳಿಯಲಿದೆ. ಆಂಗ್ಲರಿಗೆ ಸೋಲಿನ ರುಚಿ ತೋರಿಸಲು ಟೀಮ್​ ಇಂಡಿಯಾ ಪ್ಲಾನ್​ ಏನು ಅನ್ನೋ ವಿವರ ಇಲ್ಲಿದೆ.

ಟೀಮ್​ ಇಂಡಿಯಾಗೆ ಅಗ್ನಿಪರೀಕ್ಷೆ..!

ಇಂಡೋ-ಇಂಗ್ಲೆಂಡ್​​ ನಡುವಿನ 2ನೇ ಟೆಸ್ಟ್​​ ಕದನಕ್ಕೆ ಕೌಂಟ್​​ಡೌನ್​ ಶುರುವಾಗಿದೆ. ಟೆಸ್ಟ್​ ಸರಣಿಯ ಮೊದಲ ಪಂದ್ಯವನ್ನ ಕೈ ಚೆಲ್ಲಿರೋ ಟೀಮ್​ ಇಂಡಿಯಾಗೆ ಎಡ್ಜ್​ಬಾಸ್ಟನ್​ನಲ್ಲಿ ಅಗ್ನಿಪರೀಕ್ಷೆ ಕಾದಿದೆ. ಕಳೆದ 58 ವರ್ಷಗಳಲ್ಲಿ ಈ ಸ್ಟೇಡಿಯಂನಲ್ಲಿ ಟೀಮ್​ ಇಂಡಿಯಾ 8 ಟೆಸ್ಟ್​​ ಪಂದ್ಯಗಳನ್ನಾಡಿದೆ. ಈ ಪೈಕಿ ಒಂದೇ ಒಂದು ಪಂದ್ಯವನ್ನೂ ಗೆದ್ದಿಲ್ಲ. ಸತತ ಸೋಲುಂಡಿರೋ ಅನ್​ಲಕ್ಕಿ ಪಿಚ್​​ನಲ್ಲಿ ಅದೃಷ್ಟದ ಹುಡುಕಾಟ ನಡೆಸಬೇಕಿದೆ.

ಇದನ್ನೂ ಓದಿ: ಈಗೀಗ ಮೊಹಮ್ಮದ್ ಸಿರಾಜ್ ಅಟ್ಟರ್​ ಫ್ಲಾಪ್​​​​ ಆಗಲು ಕಾರಣನೇ ಕಿಂಗ್ ಕೊಹ್ಲಿ..!

publive-image

ಬ್ಯಾಟಿಂಗ್​ ಓಕೆ.. ಫೀಲ್ಡಿಂಗ್​, ಬೌಲಿಂಗ್​ನದ್ದೇ ಚಿಂತೆ..!

ಟೀಮ್​ ಇಂಡಿಯಾದ ಟಾಪ್​ ಆರ್ಡರ್,​ ಮಿಡಲ್​ ಆರ್ಡರ್​​ ಬ್ಯಾಟರ್ಸ್​​​ ಸಾಲಿಡ್​​ ಟಚ್​ನಲ್ಲಿದ್ದಾರೆ. ಲೀಡ್ಸ್​​ ಟೆಸ್ಟ್​ನಲ್ಲಿ ಶತಕದ ಮೇಲೆ ಶತಕ ಸಿಡಿಸಿ ಮಿಂಚಿದ್ದಾರೆ. ಹೀಗಾಗಿ ಎಡ್ಜ್​ಬಾಸ್ಟನ್​ ಸಮರಕ್ಕೆ ಸಜ್ಜಾಗಿರೋ ಟೀಮ್​ ಇಂಡಿಯಾಗೆ ಬ್ಯಾಟಿಂಗ್​ನ ಟೆನ್ಶನ್ ಅಷ್ಟೇನು​ ಇಲ್ಲ. ಫೀಲ್ಡಿಂಗ್​ ಹಾಗೂ ಬೌಲಿಂಗ್​ನದ್ದೇ ತಲೆನೋವಾಗಿದೆ. ಕ್ಯಾಚ್​ ಡ್ರಾಪ್​​ ಯಡವಟ್ಟುಗಳು, ಬೌಲಿಂಗ್​ ವೈಫಲ್ಯ ಮೊದಲ ಟೆಸ್ಟ್​ನಲ್ಲಿ ಸೋಲಿಗೆ ಗುರಿ ಮಾಡಿದ್ವು. ಹೀಗಾಗಿ 2ನೇ ಟೆಸ್ಟ್​ನಲ್ಲಿ ಕೆಲ ಬದಲಾವಣೆಗಳಾಗೋದು ಕನ್​ಫರ್ಮ್​.!

ಶಾರ್ದೂಲ್​​ ಔಟ್​.. ನಿತೀಶ್​​ ರೆಡ್ಡಿ ಇನ್.​.!

ಮೊದಲ ಟೆಸ್ಟ್​ ಪಂದ್ಯದಲ್ಲಿ ಎಫೆಕ್ಟಿವ್​ ಅನಿಸಿದ ಶಾರ್ದೂಲ್​ ಠಾಕೂರ್​​​ ಬೆಂಚ್​ಗೆ ಸೀಮಿತವಾಗೋ ಸಾಧ್ಯತೆ ದಟ್ಟವಾಗಿದೆ. ಶಾರ್ದೂಲ್​ ಬದಲು ನಿತೀಶ್​ ಕುಮಾರ್​ ರೆಡ್ಡಿ ಕಣಕ್ಕಿಳಿಯಲಿದ್ದಾರೆ. ಇದಕ್ಕಾಗಿ ಭರ್ಜರಿ ಅಭ್ಯಾಸ ಸಜ್ಜಾಗಿದ್ದಾರೆ. ಬ್ಯಾಟಿಂಗ್​, ಬೌಲಿಂಗ್​​ ಜೊತೆಗೆ ಸ್ಲಿಪ್​ ಕ್ಯಾಚಿಂಗ್​​ ಪ್ರಾಕ್ಟಿಸ್​ ಕೂಡ ಮಾಡಿದ್ದಾರೆ. ಹೀಗಾಗಿ ಶಾರ್ದೂಲ್​ ಠಾಕೂರ್​ ಬದಲು ನಿತೀಶ್​ ರೆಡ್ಡಿ ಆಡೋದು ಬಹುತೇಕ ಖಚಿತವಾಗಿದೆ.

ಇಬ್ಬರು ಸ್ಪಿನ್ನರ್​​ಗಳೊಂದಿಗೆ ಟೀಮ್​ ಇಂಡಿಯಾ ಅಖಾಡಕ್ಕೆ

ಎಡ್ಜ್​ಬಾಸ್ಟನ್​ ಪಿಚ್ ಪಂದ್ಯ ಸಾಗಿದಂತೆ ಸ್ಪಿನ್ನರ್​ಗಳಿಗೆ ನೆರವು ನೀಡಲಿದೆ. ಹೀಗಾಗಿ ಇನ್ನರು ಸ್ಪಿನ್ನರ್​​ಗಳೊಂದಿಗೆ ಕಣಕ್ಕಿಳಿಯಲು ಟೀಮ್​ ಇಂಡಿಯಾ ಮ್ಯಾನೇಜ್​ಮೆಂಟ್​ ನಿರ್ಧರಿಸಿದೆ. ಅಸಿಸ್ಟೆಂಟ್​ ಕೋಚ್​ ರಿಯಾನ್​ ಟೆನ್​ ಡೆಸ್ಕೋಟ್​​ ಇದನ್ನ ಈಗಾಗಲೇ ಕನ್​​ಫರ್ಮ್​ ಮಾಡಿದ್ದಾರೆ. ಕುಲ್​​​ದೀಪ್​ ಯಾದವ್​ಗೆ ಚಾನ್ಸ್​ ಸಿಗೋ ಸಾಧ್ಯತೆ ದಟ್ಟವಾಗಿದೆ. ಜೊತೆಗೆ ವಿದೇಶಿ ಪಿಚ್​​ಗಳಲ್ಲಿ ಪರದಾಡ್ತಿರೋ ರವೀಂದ್ರ ಜಡೇಜಾನ ಡ್ರಾಪ್​ ಮಾಡಿ ವಾಷಿಂಗ್ಟನ್​​ ಸುಂದರ್​​ಗೆ ಚಾನ್ಸ್​ ನೀಡಿದ್ರೂ ಅಚ್ಚರಿಪಡಬೇಕಿಲ್ಲ. ​​

ಇದನ್ನೂ ಓದಿ: ‘ನನ್ನ ಖುಷಿಗೆ ನೀನೇ ಕಾರಣ’.. ರಿಷಭ್​ ಪಂತ್ 10 ವರ್ಷದ​ ಲವ್ ಬ್ರೇಕಪ್​, ಏನಾಯಿತು?

ನೆಟ್ಸ್​​ನಲ್ಲಿ ಬ್ಯಾಟಿಂಗ್​ ಅಭ್ಯಾಸ ನಡೆಸಿದ ಬೌಲರ್ಸ್.​.!

ಟೀಮ್​ ಇಂಡಿಯಾ ಕೊನೆಗೂ ಕೆಟ್ಟ ಮೇಲೆ ಬುದ್ದಿ ಕಲಿತಂತಿದೆ. ಲೋವರ್​ ಆರ್ಡರ್ ಬ್ಯಾಟ್ಸ್​ಮನ್​​ಗಳ ವೈಫಲ್ಯ, ಬೌಲರ್​​ಗಳು ಬ್ಯಾಟಿಂಗ್​ನಲ್ಲಿ ಅಲ್ಪ ಕಾಣಿಕೆಯನ್ನೂ ನೀಡದಿದ್ದಿದ್ದು ಮೊದಲ ಟೆಸ್ಟ್​ ಸೋಲಿಗೆ ಮತ್ತೊಂದು ಕಾರಣವಾಗಿತ್ತು. ತೀವ್ರ ಟೀಕೆಗಳು ವ್ಯಕ್ತವಾಗಿದ್ವು. ಇದೀಗ ಬೌಲರ್​​ಗಳು ನೆಟ್ಸ್​​ನಲ್ಲಿ ಬ್ಯಾಟಿಂಗ್​ ಅಭ್ಯಾಸ ನಡೆಸಿ ಇಂದಿನ ಪಂದ್ಯಕ್ಕೆ ಸಜ್ಜಾಗಿದ್ದಾರೆ.

ಬೂಮ್ರಾ ನಡೆ ನಿಗೂಢ..!

ಇಂದಿನ ಪಂದ್ಯದ ಆರಂಭಕ್ಕೂ ಮುನ್ನ ಎಲ್ಲರಿಗೂ ಕಾಡ್ತಿರೋ ಮಿಲಿಯನ್​ ಡಾಲರ್​ ಪ್ರಶ್ನೆಯಿದು. ವರ್ಕ್​​ಲೋಡ್​​​ ಮ್ಯಾನೇಜ್​​ಮೆಂಟ್​ ಕಾರಣಕ್ಕೆ ಸರಣಿಯಲ್ಲಿ ಕೇವಲ 3 ಪಂದ್ಯಗಳನ್ನ ಮಾತ್ರ ಆಡೋದಾಗಿ ಬೂಮ್ರಾ ಹೇಳಿದ್ರು. ಹೀಗಾಗಿ 2ನೇ ಟೆಸ್ಟ್​​ನಿಂದ ಬೂಮ್ರಾ ರೆಸ್ಟ್​ ಪಡೀತಾರೆ ಎನ್ನಲಾಗಿದೆ. ಕಳೆದ 2 ದಿನಗಳಿಂದ ಬೂಮ್ರಾ ನೆಟ್ಸ್​ನಲ್ಲಿ ಭರ್ಜರಿ ಅಭ್ಯಾಸ ನಡೆಸಿದ್ದಾರೆ. ರಿಯಾನ್​ ಟೆನ್​ ಡೆಸ್ಕೋಟ್​ ಕೂಡ ಬೂಮ್ರಾ ಆಯ್ಕೆಗೆ ಲಭ್ಯ ಎಂದಿದ್ದು, ಪಂದ್ಯಕ್ಕೂ ಮುನ್ನ ಫೈನಲ್​ ಕಾಲ್​ ತೆಗೆದುಕೊಳ್ಳೋದಾಗಿ ಹೇಳಿದ್ದಾರೆ.

ಒಂದು ವೇಳೆ ಬೂಮ್ರಾ 2ನೇ ಟೆಸ್ಟ್​​ನಿಂದ ಹೊರಗುಳಿದ್ರೆ ಆಕಾಶ್​ದೀಪ್​ ಅಥವಾ ಎಡಗೈ ವೇಗಿ ಆರ್ಷ್​​ದೀಪ್​ ಸಿಂಗ್​ ಇಬ್ಬರಲ್ಲಿ ಒಬ್ಬರಿಗೆ ಚಾನ್ಸ್​ ಸಿಗಲಿದೆ. ಆಕಾಶ್​​ದೀಪ್ ಕಳೆದ ಕೆಲ ದಿನದಿಂದ ಭರ್ಜರಿ ಅಭ್ಯಾಸ ನಡೆಸಿದ್ದು,​ ಮ್ಯಾನೇಜ್​ಮೆಂಟ್​ನ​ ಮೊದಲ ಚಾಯ್ಸ್​ ಎನಿಸಿದ್ದಾರೆ. ಆರ್ಷ್​​​ದೀಪ್​​ ಸಿಂಗ್​ ಎಡಗೈ ವೇಗಿ ಆಗಿರೋದ್ರಿಂದ ಬೌಲಿಂಗ್​ನಲ್ಲಿ ವೆರೈಟಿ ಸಿಗಲಿದೆ. ಹೀಗಾಗಿ ಇಬ್ಬರಲ್ಲಿ ಯಾರಿಗೆ ಚಾನ್ಸ್ ಸಿಗುತ್ತೆ​ ಅನ್ನೋದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಇಂಗ್ಲೆಂಡ್​ ಪ್ರವಾಸದ ಬೆನ್ನಲ್ಲೇ ಟೀಮ್ ಇಂಡಿಯಾದಲ್ಲಿ ಮೇಜರ್​ ಸರ್ಜರಿ.. ಏನೇನು ಆಗಲಿದೆ?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment