/newsfirstlive-kannada/media/post_attachments/wp-content/uploads/2025/07/KL-RAHUL-7.jpg)
ಲೀಡ್ಸ್ನಲ್ಲಿ ಇಂಗ್ಲೆಂಡ್ ವಿರುದ್ಧ ಸೋತಿದ್ದ ಟೀಮ್ ಇಂಡಿಯಾ, ಎಡ್ಜ್ಬಾಸ್ಟನ್ನಲ್ಲಿ ಸ್ಟ್ರಾಂಗ್ ಕಮ್ಬ್ಯಾಕ್ ಮಾಡಿದೆ. ಸರಣಿ ಸಮಬಲ ಮಾಡಿಕೊಂಡಿರುವ ಟೀಮ್ ಇಂಡಿಯಾ, ಕ್ರಿಕೆಟ್ ಕಾಶಿ ಲಾರ್ಡ್ಸ್ನಲ್ಲಿ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ಅತ್ತ ಬರ್ಮಿಂಗ್ಹ್ಯಾಮ್ನಲ್ಲಿ ಸೋತ ಇಂಗ್ಲೆಂಡ್, ಕ್ರಿಕೆಟ್ ಕಾಶಿಯಲ್ಲಿ ತಿರುಗೇಟು ನೀಡುವ ತವಕದಲ್ಲಿದೆ.
ಇಂಡಿಯಾಗೆ ರಿಯಲ್ ‘ಟೆಸ್ಟ್’
ಸರಣಿ ಸಮಬಲ ಮಾಡಿಕೊಂಡಿರುವ ಟೀಮ್ ಇಂಡಿಯಾಗೆ ಲಾರ್ಡ್ಸ್ನಲ್ಲಿ ಬಿಗ್ ಚಾಲೆಂಜ್ ಎದುರಾಗಲಿದೆ. ಪ್ರಮುಖವಾಗಿ ಲೀಡ್ಸ್ ಹಾಗೂ ಎಡ್ಜ್ಬಾಸ್ಟನ್ನಲ್ಲಿ ಟೀಮ್ ಇಂಡಿಯಾ ಬ್ಯಾಟರ್ಗಳು ರನ್ ಹೊಳೆ ಹರಿಸಿದ್ದಾರೆ. ಲಾರ್ಡ್ಸ್ನಲ್ಲಿ ಅಷ್ಟು ಸುಲಭದಲ್ಲ, ಇದಕ್ಕೆ ಕಾರಣ ಲಾರ್ಡ್ಸ್ ಪಿಚ್.
ಇದನ್ನೂ ಓದಿ:ಕೊನೆಗೂ ಈಡೇರಿತು ಕೊಹ್ಲಿಯ ಕನಸು.. ಜೊಕೊವಿಚ್-ಕೊಹ್ಲಿ ಗೆಳೆತನ ಆರಂಭವಾಗಿದ್ದೇಗೆ..?
ಹೇಗಿದೆ ಐತಿಹಾಸಿಕ ಲಾರ್ಡ್ಸ್ ಪಿಚ್? ಯಾರಿಗೆ ಫೇವರ್?
ಕಳೆದ ಎರಡು ಪಂದ್ಯಗಳಿಗೆ ಹೋಲಿಸಿದ್ರೆ ಲಾರ್ಡ್ಸ್ ಪಿಚ್ ಡಿಫರೆಂಟ್ ಆಗಿದೆ. ಲಾರ್ಡ್ಸ್ ಹಂಚಿಕೊಂಡಿರುವ ಮೈದಾನದ ಪಿಚ್ ಗಮನಿಸಿದರೆ ಲೀಡ್ಸ್, ಎಜ್‌ಬಾಸ್ಟನ್‌ಗಿಂತ ಹೆಚ್ಚು ಹಸಿರಾಗಿ ಕಾಣ್ತಿದೆ. ಸಾಕಷ್ಟು ನೀರು ಹರಿಸಿರುವ ಕಾರಣ ವೇಗಿಗಳಿಗೆ ಬಿಗ್ ಅಡ್ವಾಂಟೇಜ್. ಟೀಮ್ ಇಂಡಿಯಾ ಬ್ಯಾಟಿಂಗ್ ಅನ್ನೇ ಟಾರ್ಗೆಟ್ ಮಾಡಿ ನಿರ್ಮಿಸಲಾದ ಈ ಪಿಚ್ನಲ್ಲಿ ನಿರೀಕ್ಷೆಗೂ ಮೀರಿದ ಪೇಸ್ ಆ್ಯಂಡ್ ಬೌನ್ಸ್ ಇರಲಿದೆ. ಹೀಗಾಗಿ ಫಸ್ಟ್ ಬ್ಯಾಟಿಂಗ್, ಮಾಡೋದು ನಿಜಕ್ಕೂ ಕಷ್ಟಕರ.
ರಾಹುಲ್, ಶುಭ್ಮನ್ ಮೇಲೆ ಬೆಟ್ಟದಷ್ಟು ನಿರೀಕ್ಷೆ
ಹಿಂದಿನ ಎರಡೂ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಬ್ಯಾಟರ್ಗಳು ಸಾಲಿಡ್ ಫಾರ್ಮ್ನಲ್ಲಿದ್ದಾರೆ. ಯಶಸ್ವಿ ಜೈಸ್ವಾಲ್, ಕೆ.ಎಲ್.ರಾಹುಲ್ ಉತ್ತಮ ಸ್ಟಾರ್ಟ್ ನೀಡ್ತಿದ್ದಾರೆ. 3ನೇ ಕ್ರಮಾಂಕದಲ್ಲಿ ನಿರೀಕ್ಷಿತ ಪ್ರದರ್ಶನ ಬಂದಿಲ್ಲ. ಲಾರ್ಡ್ಸ್ನಲ್ಲಿ ಕರುಣ್ ಮುಂದುವರಿಕೆ ಬಹುತೇಕ ಫಿಕ್ಸ್. ಹಾಗಾಗಿ ಕರುಣ್, ಈ ಚಾನ್ಸ್ ಸದ್ಬಳಕೆ ಮಾಡಿಕೊಳ್ಳಬೇಕಿದೆ.
ಇದನ್ನೂ ಓದಿ: ಸಂಜುಗಾಗಿ ಕ್ಯಾಪ್ಟನ್ನನ್ನೇ ಬಿಟ್ಟುಕೊಡಲು ಮುಂದಾದ CSK.. ಗಾಯಕ್ವಾಡ್ ಯಾಕೆ ಬೇಡವಾದ್ರು ಗೊತ್ತಾ..?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ