/newsfirstlive-kannada/media/post_attachments/wp-content/uploads/2024/07/ENG-AUST.jpg)
ಪ್ರೀತಿಗೆ ಕಣ್ಣಿಲ್ಲ. ಪ್ರೀತಿಗೆ ಭಾಷೆಯಿಲ್ಲ. ಪ್ರೀತಿ ಗಡಿಯನ್ನು ಮೀರಿದ ಬಂಧ. ಇದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಆದರೀಗ ಮತ್ತೊಂದು ಉದಾಹರಣೆ ಎಂಬಂತೆ ಇಂಗ್ಲೆಂಡ್​​ ಮತ್ತು ಆಸ್ಟ್ರೇಲಿಯಾ ಮಹಿಳಾ ಸ್ಟಾರ್​ ಕ್ರಿಕೆಟಿಗರಿಬ್ಬರು ಪ್ರೀತಿಯ ಮೂಲಕ ಒಂದಾಗಿದ್ದಾರೆ. ಈ ಕುರಿತಾದ ಕುತೂಹಲಕಾರಿಯಾದ ಸ್ಟೋರಿ ಇಲ್ಲಿದೆ.
ಅಂದಹಾಗೆಯೇ ಇದು ಸಲಿಂಗಿ ಪ್ರೀತಿ. ಇಂಗ್ಲೆಂಡ್​ ವಿಕೆಟ್​ ಕೀಪರ್​ ಆಮಿ ಜೋನ್ಸ್​ ಮತ್ತು ಆಸ್ಟ್ರೇಲಿಯಾದ ಕ್ರಿಕೆಟ್​​​ ಆಟಗಾರ್ತಿ ಪೈಪಾ ಕ್ಲಿಯರಿ ನಡುವೆ ಹುಟ್ಟಿಕೊಂಡ ಪ್ರೀತಿಯಿದು. ಸದ್ಯ ಇವರಿಬ್ಬರ ನಡುವಿನ ಪ್ರೀತಿ ಎರಡು ದೇಶಗಳ ಸಂಬಂಧವನ್ನು ಬೆಸೆದಿದೆ. ಅದರಲ್ಲೂ ಗಡಿಯಾಚೆಗಿನ ಸಂಬಂಧವನ್ನು ಮೀರಿಸಿದೆ.
ಪ್ರೀತಿಸುತ್ತಿದ್ದ ಆಮಿ ಜೋನ್ಸ್​ ಮತ್ತು ಪೈಪಾ ಕ್ಲಿಯರಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಉಂಗುರಗಳನ್ನು ಬದಲಾಯಿಸಿಕೊಂಡು ನಾನು-ನೀನು ಜೋಡಿ ಎಂದು ಹೇಳಿಕೊಂಡಿದ್ದಾರೆ. ಮಾತ್ರವಲ್ಲದೆ, ಸಾಮಾಜಿಕ ಜಾಲತಾಣದಲ್ಲೂ ಈ ವಿಚಾರವನ್ನು ಘೋಷಿಸಿದ್ದಾರೆ.
View this post on Instagram
ಇನ್​​ಸ್ಟಾಗ್ರಾಂನಲ್ಲಿ ಇಂಗ್ಲೆಂಡ್​ನ ವಿಕೆಟ್​​ ಕೀಪರ್​ ಆಮಿ ಜೋನ್ಸ್​ ಮತ್ತು ಆಸ್ಟ್ರೇಲಿಯಾದ ಕ್ರಿಕೆಟ್​​​ ಆಟಗಾರ್ತಿ ಪೈಪಾ ಕ್ಲಿಯರಿ ಪೋಸ್ಟ್​ ಹಂಚಿಕೊಂಡಿದ್ದಾರೆ. ಷಾಂಪೇನ್​​ ತುಂಬಿದ ಗ್ಲಾಸ್​ ಹಿಡಿದುಕೊಂಡು ‘‘ಚಿಯರ್ಸ್​ ಟು ಫಾರೆವರ್​​’’ ಎಂದು ಬರೆದುಕೊಂಡಿದ್ದಾರೆ.
ಆಮಿ ಜೋನ್ಸ್ ಯಾರು? ಹಿನ್ನೆಲೆ ಏನು?
ಆಮಿ ಜೋನ್ಸ್ 2019 ರಲ್ಲಿ ಇಂಗ್ಲೆಂಡ್​ನ ಕ್ರಿಕೆಟ್​ ಆಟಗಾರ್ತಿ. ಜೂನ್ 13, 1993 ರಂದು ವೆಸ್ಟ್ ಮಿಡ್ಲ್ಯಾಂಡ್ಸ್​ನಲ್ಲಿ ಜನಿಸಿದರು. 31 ವರ್ಷ ವಯಸ್ಸಿನ ಅವರು ಇಂಗ್ಲೆಂಡ್​​ ತಂಡದ ಮಹಿಳಾ ಟೆಸ್ಟ್ ಮತ್ತು ODI ಪಂದ್ಯಗಳಲ್ಲಿ ಆಡುತ್ತಾ ಬಂದಿದ್ದಾರೆ. ಇಲ್ಲಿಯವರೆಗೆ 6 ಟೆಸ್ಟ್ ಮತ್ತು 91 ODI ಪಂದ್ಯಗಳನ್ನು ಆಡಿದ್ದಾರೆ. ಎರಡು ಆಟಗಳಲ್ಲಿ 116 ಮತ್ತು 1951 ರನ್ ಗಳಿಸಿದ್ದಾರೆ. 31 ವರ್ಷ ವಯಸ್ಸಿನವರು .
ಆಮಿಯವರು ಮಹಿಳಾ ಬಿಗ್ ಬ್ಯಾಷ್ ಲೀಗ್‌ನಲ್ಲಿ ಪರ್ತ್ ಸ್ಕಾರ್ಚರ್ಸ್‌ಗಾಗಿ ಆಡುತ್ತಿರುವಾಗ ಆಸ್ಟ್ರೇಲಿಯಾದ ಪೈಪಾ ಕ್ಲಿಯರಿ ಅವರನ್ನು ಭೇಟಿಯಾದರು. ಇವರ ಭೇಟಿ ಕೊನೆಗೆ ಸ್ನೇಹಕ್ಕೆ ತಿರುಗಿತು. ನಂತರ ಪ್ರೀತಿಯಾಯ್ತು.
ಪೈಪಾ ಕ್ಲಿಯರಿ ಹಿನ್ನೆಲೆ ಏನು?
ಪೈಪಾ ಕ್ಲಿಯರಿ ಜುಲೈ 17, 1996 ರಲ್ಲಿ ಜನಿಸಿದರು. ಆಮಿಗಿಂತ 3 ವರ್ಷ ಚಿಕ್ಕವರು. ಈಗಾಗಲೇ ಪೈಪಾರವರು ಸ್ಕಾರ್ಚರ್ಸ್ ಮತ್ತು ವೆಸ್ಟರ್ನ್ ಆಸ್ಟ್ರೇಲಿಯಾ ವುಮೆನ್ ತಂಡಗಳಿಗಾಗಿ ಆಡಿದ್ದಾರೆ. ಇವರು ಬಲಗೈ ಮಧ್ಯಮ ವೇಗದ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ