/newsfirstlive-kannada/media/post_attachments/wp-content/uploads/2025/06/KL_RAHUL_TEST.jpg)
ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಜೊತೆಗಿನ ಮೊದಲ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ತಂಡ ಗೆದ್ದುಕೊಂಡಿದೆ. 2ನೇ ಇನ್ನಿಂಗ್ಸ್ನಲ್ಲಿ ಸಾಧಾರಣ ಮೊತ್ತದ ಟಾರ್ಗೆಟ್ ನೀಡಿದ್ದ ಭಾರತ ಸೋಲೋಪ್ಪಿಕೊಂಡಿದೆ.
ಲೀಡ್ಸ್ನ ಹೆಡಿಂಗ್ಲೆ ಕ್ರಿಕೆಟ್ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಕ್ಯಾಪ್ಟನ್ ಬೆನ್ ಸ್ಟೋಕ್ಸ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಇದರಿಂದ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ ಮೊದಲ ಬ್ಯಾಟಿಂಗ್ ಮಾಡಿ 471 ರನ್ಗಳ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಮೊದಲ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡ 465 ರನ್ಗಳಿಗೆ ಆಲೌಟ್ ಆಗಿತ್ತು.
ಇದರಿಂದ ಟೀಮ್ ಇಂಡಿಯಾ ಕೇವಲ 6 ರನ್ಗಳನ್ನು ಮುನ್ನಡೆ ಪಡೆದುಕೊಂಡು 2ನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡಿತ್ತು. ಈ ಎರಡನೇ ಇನ್ನಿಂಗ್ಸ್ನಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಹಾಗೂ ರಿಷಭ್ ಪಂತ್ ಅವರು ಅದ್ಭುತವಾದ ಸೆಂಚುರಿ ಬಾರಿಸಿದ್ದರು. 4ನೇ ದಿನದಾಟದ ಕೊನೆಯ ಸಮಯದಲ್ಲಿ ಭಾರತ ತಂಡ ಆಲೌಟ್ ಆಗಿತ್ತು. ಇದರಿಂದಾಗಿ ಟೀಮ್ ಇಂಡಿಯಾ ಒಟ್ಟು 371 ರನ್ಗಳ ಟಾರ್ಗೆಟ್ ಅನ್ನು ಇಂಗ್ಲೆಂಡ್ ತಂಡಕ್ಕೆ ನೀಡಿತ್ತು.
ಟೆಸ್ಟ್ನಲ್ಲಿ 371 ರನ್ಗಳ ಸಾಧಾರಣ ಗುರಿ ಬೆನ್ನಟ್ಟಿದ್ದ ಇಂಗ್ಲೆಂಡ್ಗೆ ಒಂದು ದಿನ ಇದ್ದಿದ್ದರಿಂದ ಸುಲಭವಾಗಿಯೇ ಗುರಿಯನ್ನು ಮುಟ್ಟಿದೆ. ಓಪನಿಂಗ್ನಲ್ಲಿ ಅತ್ಯದ್ಭುತವಾಗಿ ರನ್ಗಳು ತಂಡಕ್ಕೆ ಒಲಿದು ಬಂದವು. 188 ರನ್ಗಳ ಜೊತೆಯಾಟವನ್ನು ಓಪನರ್ಸ್ ಜ್ಯಾಕ್ ಕ್ರಾಲಿ ಮತ್ತು ಬೆನ್ ಡಕೆಟ್ ಆಡಿದರು. ಪಂದ್ಯ ಗೆಲ್ಲಲು ಇದೇ ಮುಖ್ಯ ಕಾರಣವಾಯಿತು.
ಇದನ್ನೂ ಓದಿ: ಲಕ್ ಅಂದ್ರೆ ಇದು ಅಲ್ಲವೇ..! ಸತತ 2 ವರ್ಷ ಶ್ರಮ, ಛಲ ಬಿಡದ ಮಹಿಳೆಗೆ ಸಿಕ್ಕ 2.69 ಕ್ಯಾರೆಟ್ ವಜ್ರ
ಇದರಲ್ಲಿ ಜ್ಯಾಕ್ ಕ್ರಾಲಿ 65 ರನ್ಗೆ ವಿಕೆಟ್ ಒಪ್ಪಿಸಿದರೆ, ಬೆನ್ ಡಕೆಟ್ ಅತ್ಯಮೂಲ್ಯವಾದ 149 ರನ್ಗಳನ್ನು ಸಿಡಿಸಿ ದೊಡ್ಡ ಕೊಡುಗೆ ನೀಡಿದರು. ಜೋ ರೂಟ್ ಹಾಫ್ ಸೆಂಚುರಿ ಜೆಮಿಯಾ ಸ್ಮಿತ್ 44 ರನ್ಗಳಿಂದ ಈ ಇಬ್ಬರೂ ಇಂಗ್ಲೆಂಡ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದರಿಂದ ಇಂಗ್ಲೆಂಡ್ 373 ರನ್ ಬಾರಿಸಿ, 5 ವಿಕೆಟ್ಗಳಿಂದ ಅಮೋಘವಾದ ಗೆಲುವು ಪಡೆಯಿತು.
ಕೊನೆಯ ದಿನದಲ್ಲಿ ಇಂಗ್ಲೆಂಡ್ ಬ್ಯಾಟರ್ಗಳ ವಿಕೆಟ್ ಪಡೆಯಲು ಟೀಮ್ ಇಂಡಿಯಾದ ಬೌಲರ್ಗಳು ದೊಡ್ಡ ಹರಸಾಹಸವೇ ಪಡಬೇಕಾಯಿತು. ಜಸ್ಪ್ರಿತ್ ಬೂಮ್ರಾ, ಸಿರಾಜ್, ಕನ್ನಡಿಗ ಪ್ರಸಿದ್ಧ್ ಕೃಷ್ಣ ಸೇರಿದಂತೆ ಎಲ್ಲ ಬೌಲರ್ಗಳು ಆಂಗ್ಲರ ಬೇಟೆಯಾಡಲು ಸಾಕಷ್ಟು ಶ್ರಮ ಪಟ್ಟರು. ಆದರೂ ಉಪಯೋಗಕ್ಕೆ ಬರಲಿಲ್ಲ. ಶಾರ್ದೂಲ್ ಠಾಕೂರ್, ಪ್ರಸಿದ್ಧ್ ಕೃಷ್ಣ, ಜಡೇಜಾ ವಿಕೆಟ್ ಪಡೆದರು ಅಷ್ಟೇ. ಉಳಿದವರಿಗೆ ವಿಕೆಟ್ ಬೀಳಲಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ