/newsfirstlive-kannada/media/post_attachments/wp-content/uploads/2024/08/RCB_TEAM-3.jpg)
ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ ಭರ್ಜರಿ ತಯಾರಿ ನಡೆಯುತ್ತಿದೆ. ಯಾರನ್ನು ಕೈ ಬಿಡಬೇಕು? ಯಾರನ್ನು ರಿಲೀಸ್​ ಮಾಡಬೇಕು? ಅನ್ನೋ ಚರ್ಚೆಗಳು ಜೋರಾಗಿವೆ. ಆರ್‌ಸಿಬಿ ಕೂಡ ಯಾರನ್ನು ಉಳಿಸಿಕೊಳ್ಳಲಿದೆ ಎಂಬ ಕುತೂಹಲ ಫ್ಯಾನ್ಸ್​ಗೆ ಇದೆ.
ಐಪಿಎಲ್​​ 18ನೇ ಸೀಸನ್​ಗೂ ಮುನ್ನ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಹರಾಜಿಗೆ ಮುನ್ನ ಮಾಲೀಕರು ರೀಟೈನ್​ ಮತ್ತು ರಿಲೀಸ್​ ಲಿಸ್ಟ್​​ ರೆಡಿ ಮಾಡಿ ಬಿಸಿಸಿಐಗೆ ಸಲ್ಲಿಸಬೇಕಿದೆ. ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಫಾಫ್ ಡುಪ್ಲೆಸಿಸ್, ರಿಷಭ್ ಪಂತ್​ ಸೇರಿ ಹಲವರನ್ನು ಐಪಿಎಲ್​ ತಂಡಗಳು ರಿಲೀಸ್​ ಮಾಡಲಿವೆ. ಸದ್ಯಕ್ಕೆ ಲಭ್ಯವಾಗಿರೋ ಮಾಹಿತಿ ಪ್ರಕಾರ ಚೆನ್ನೈ ಸೂಪರ್​ ಕಿಂಗ್ಸ್​ ತಂಡವು ಬೆನ್​ಸ್ಟೋಕ್ಸ್​ ಅವರನ್ನು ರಿಲೀಸ್​ ಮಾಡಲಿದ್ದು, ಇವರ ಮೇಲೆ ಆರ್​​ಸಿಬಿ ಹದ್ದಿನ ಕಣ್ಣಿಟ್ಟಿದೆ.
ಬೆನ್​ಸ್ಟೋಕ್ಸ್​ ಅವರನ್ನು ಕೈ ಬಿಡಲು ಕಾರಣವೇನು?
ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಪರ ಬೆನ್​ಸ್ಟೋಕ್ಸ್​ ಹೇಳಿಕೊಳ್ಳುವಂತ ಪ್ರದರ್ಶನ ನೀಡಿಲ್ಲ. ಈ ಕಾರಣದಿಂದಾಗಿ, ತಂಡದ ನಿರ್ವಹಣಾ ಮಂಡಳಿ ಅವರ ಬಗ್ಗೆ ಅಸಮಾಧಾನ ಹೊಂದಿದೆ. ಹಾಗಾಗಿ 2025ರ ಐಪಿಎಲ್​ಗೆ ತಂಡದಿಂದ ಕೈ ಬಿಡುವ ಸಾಧ್ಯತೆ ಇದೆ.
Overseas Captaincy Options
Ben Stokes To Lead #RCB in #IPL2025 ?#Crickettwitterpic.twitter.com/s0ycd4z6ub
— RCBIANS OFFICIAL (@RcbianOfficial)
Overseas Captaincy Options
Ben Stokes To Lead #RCB in #IPL2025 ?#Crickettwitterpic.twitter.com/s0ycd4z6ub— RCBIANS OFFICIAL (@RcbianOfficial) August 13, 2024
">August 13, 2024
ಬೆನ್​ಸ್ಟೋಕ್ಸ್​ ಮೇಲೆ ಆರ್​​ಸಿಬಿ ಕಣ್ಣು
ಆರ್‌ಸಿಬಿ ತಂಡದ ನಾಯಕ ಫಾಫ್ ಡುಪ್ಲೇಸಿಸ್ ಅವರನ್ನು ರಿಲೀಸ್​ ಮಾಡಲಿದೆ. ಹೀಗಾಗಿ ಆರ್‌ಸಿಬಿ ಭವಿಷ್ಯದ ದೃಷ್ಟಿಯಿಂದ ಬೆನ್​ಸ್ಟೋಕ್ಸ್​ ಅವರನ್ನು ಆರ್‌ಸಿಬಿ ಖರೀದಿ ಮಾಡಬೇಕು ಎಂದು ಪ್ಲಾನ್​ ಮಾಡಿಕೊಂಡಿದೆ. ಇವರು ಆರ್‌ಸಿಬಿ ತಂಡ ಸೇರಿಕೊಂಡರೆ ಮಿಡ್ಲ್ ಆರ್ಡರ್ ಬ್ಯಾಟಿಂಗ್ ಬಲಗೊಳ್ಳಲಿದೆ. ಇವರು ಆಲ್‌ರೌಂಡರ್ ಆಗಿದ್ದು, ಬೌಲಿಂಗ್​ ಕೂಡ ಮಾಡಬಹುದು. ಜತೆಗೆ ನಾಯಕತ್ವದ ಸಮಸ್ಯೆಗಳಿಗೆ ಪರಿಹಾರ ಕಂಡುಬರುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us