newsfirstkannada.com

ಉಪ್ಪಿ ಸಿನಿಮಾದ ‘ಕರಿಮಣಿ ಮಾಲೀಕ ನೀನಲ್ಲ’ ಸಾಂಗ್​​ ವೈರಲ್​​.. ಈ ಹಾಡು ಟ್ರೆಂಡ್​ ಆಗಿದ್ಹೇಗೆ?

Share :

Published February 3, 2024 at 6:27am

  ಗುರು ಫೀಲಿಂಗ್ ಸಾಂಗ್ ಅನ್ನೋದೇ ಮರೆತೊಯ್ತಲ್ಲ ಎಂದ ನೆಟ್ಟಿಗರು

  ಯಾವಾಗ? ಯಾವುದು? ಹೇಗೆ? ವೈರಲ್ ಆಗುತ್ತೆ ಗೊತ್ತೇ ಆಗಲ್ಲ!

  ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯ್ತು ಈ ವಿಡಿಯೋ

ಸೋಶಿಯಲ್ ಮೀಡಿಯಾ ಅನ್ನೋದೇ ಹೀಗೆ ಯಾವಾಗ? ಯಾರು? ಯಾವುದು? ಹೇಗೆ ವೈರಲ್ ಆಗುತ್ತೆ ಅಂತ ಹೇಳೋಕೆ ಆಗಲ್ಲ. ಈಗಿನ ಟ್ರೆಂಡಿಂಗ್​ ಜಮಾನದಲ್ಲಿ ಯಾವುದಾದರೂ ಒಂದು ಸಾಂಗ್, ಡೈಲಾಗ್ ಅಥವಾ ವಿಡಿಯೋ ಏನಾದರೂ ಕ್ಲಿಕ್ ಆಯ್ತು ಅಂದ್ರೆ ಮುಗಿದೇ ಹೋಯ್ತು. ಬೆಳಗಿನಿಂದ ರಾತ್ರಿ ಮಲಗೋವರೆಗೂ ಅದೇ ಸೌಂಡು ಗುಂಯ್​ಗುಟ್ತಾ ಇರುತ್ತೆ. ಹೌದು, ಅದೇ ಸಾಲಿಗೆ ಈ ಹಾಡು ಸೇರಲಿದೆ. ಅದುವೇ ಓ ನಲ್ಲಾ.. ನೀ ನಲ್ಲಾ.. ಕರಿಮಣಿ ಮಾಲೀಕ ನೀನಲ್ಲ.. ಕರಿಮಣಿ ಮಾಲೀಕ ನೀ-ನಲ್ಲ.

ರಿಸೆಂಟ್​ ಆಗಿ ಮೋದಿ ಸಾಂಗ್ಸ್​ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಮೋದಿ ಧ್ವನಿಯಲ್ಲಿ ಇರೋ ಬರೋ ಹಾಡುಗಳನ್ನ ಹಾಡಿಸಿಬಿಟ್ಟಿದ್ರು. ಲವ್ ಸಾಂಗ್ಸ್, ಪ್ಯಾಥೋ ಸಾಂಗ್ಸ್​, ಎಮೋಷನಲ್ ಸಾಂಗ್ಸ್​ ಹೀಗೆ ಎಲ್ಲ ತರಹದ ಹಾಡುಗಳನ್ನ ಮೋದಿ ವಾಯ್ಸ್​ನಲ್ಲಿ ಕೇಳಿ ಖುಷಿ ಪಟ್ಟಿದ್ದರು. ಸದ್ಯದವರೆಗೂ ಎಲ್ಲ ಕಡೆ ಮೋದಿ ಸಾಂಗ್ಸೇ ಟ್ರೆಂಡ್​ನಲ್ಲಿತ್ತು. ಆದ್ರೀಗ ಮೋದಿ ಸಾಂಗ್ಸ್​ನ ಓವರ್​ಟೇಕ್ ಮಾಡಿ ಸೋಶಿಯಲ್ ಮೀಡಿಯಾ ರೂಲ್ ಮಾಡ್ತಿರೋ ಹೊಸ ಸಾಂಗ್ ಬಂದಿದೆ. ಅದೇ​ ಓ ನಲ್ಲ.. ನೀ ನಲ್ಲ.. ಕರಿಮಣಿ ಮಾಲೀಕ ನಿನಲ್ಲ. ಈ ಸಾಂಗ್ ಯಾಕೆ ವೈರಲ್ ಆಯ್ತು ಅನ್ನೋದಕ್ಕೆ ಸದ್ಯಕ್ಕೆ ನಮ್ ಹತ್ರಾ​ ಉತ್ತರ ಇಲ್ಲ. ಯಾಕಂದ್ರೆ ಸೋಶಿಯಲ್ ಮೀಡಿಯಾ ಅನ್ನೋದೇ ಹೀಗೆ. ಯಾವಾಗ, ಹೇಗೆ, ಯಾಕೆ ವೈರಲ್ ಆಗುತ್ತೆ ಅನ್ನೋದೇ ಗೊತ್ತಾಗಲ್ಲ. ಆದರೆ ಒಂದ್ ಸಲ ಕ್ಲಿಕ್ ಆಯ್ತು ಅಂದ್ರೆ ಮತ್ತೆ ಅದನ್ನ ನಿಲ್ಲಿಸೋಕೆ ಇನ್ನೊಂದು ವೈರಲ್ ಕಂಟೆಂಟ್ಟೇ ಬರಬೇಕು.

ಆ ವೈರಲ್ ಕಂಟೆಂಟ್​ ಬರೋವರೆಗೂ ಈ ಕರಿಮಣಿ ಮಾಲೀಕನ ಮ್ಯಾಜಿಕ್ ನಿಲ್ಲೋದಿಲ್ಲ ಅನಿಸುತ್ತೆ. ಕನ್ನಡ ಸಿನಿಮಾಗಳನ್ನ ನೋಡೋರಿಗೆ, ಫಾಲೋ ಮಾಡೋರಿಗೆ ಇದು ಯಾವ ಚಿತ್ರದ ಸಾಂಗ್ ಅಂತ ಗೊತ್ತಿದೆ. ಇನ್ನು ಕೆಲವರಿಗೆ ಈ ಸಾಲುಗಳನ್ನ ಎಲ್ಲೋ ಕೇಳಿದಾಗೆ ಇದ್ಯಾಲ್ವ ಅಂತ ಅನಿಸಿದರೂ ಯಾವ ಸಿನಿಮಾದ ಅಂತ ಗೊತ್ತಾಗಿರಲಿಲ್ಲ. ಹಾಗಾಗಿ ಈ ಹಾಡು ಯಾವ ಚಿತ್ರದ್ದೂ ಅಂತ ಹುಡುಕಿ ಹುಡುಕಿ ಸರ್ಚ್ ಇಂಜಿನ್​ನಲ್ಲಿ ಕರಿಮಣಿ ಮಾಲೀಕ ಇನ್ನಷ್ಟು ಟ್ರೆಂಡ್​ ಗಟ್ಟಿಯಾಗಿ ಕೂತುಬಿಟ್ಟಿದ್ದಾನೆ. ಕೇಳುಗರ ಮನಸ್ಸಿನಲ್ಲಿ ಮನೆ ಮಾಡಿಬಿಟ್ಟಿದ್ದಾನೆ.

ಇದನ್ನು ಓದಿ: ಬಿಗ್‌ಬಾಸ್ ಶೃತಿ.. ಮೀಟೂ ಶೃತಿ.. ‘ಇದು ಚೀಲದ ವಿಚಾರ ಅಲ್ಲ ಶೀಲದ ವಿಚಾರ’- ಗುರುಪ್ರಸಾದ್

View this post on Instagram

A post shared by Rãvì Càdbûry🍫 (@ravi_cadbury)

ಸರ್ಪ್ರೈಸ್​ ಏನಪ್ಪಾ ಅಂದ್ರೆ ಈ ಸಾಲುಗಳ ಒಳ ಅರ್ಥ ಬಹಳಷ್ಟು ಜನಕ್ಕೆ ಗೊತ್ತೇ ಇಲ್ಲ. ಆದರೂ ಟ್ರೆಂಡ್​ ಆಗ್ತಿದೆ. ರೀಲ್ಸ್​ ಆಗ್ತಿದೆ ಅನ್ನೋ ಕಾರಣಕ್ಕೆ ಸಿಕ್ಕ ಸಿಕ್ಕವರೆಲ್ಲಾ ನಮ್ದೂ ಒಂದು ಇರಲಿ ಅಂತ ಮಾಡುತ್ತಾ ಇದ್ದಾರೆ. ಅದರಲ್ಲೂ ಯುವ ಸಮೂಹವಂತೂ ತಮ್ಮ ಮನಸಿನೊಳಗಿನ ಭಾವನೆಯನ್ನ ತಮ್ಮ ಗೆಳೆಯ, ಗೆಳತಿಯರಿಗೆ ತಲುಪಿಸೋಕೆ ಸದ್ಯ ಇದೇ ಸಾಂಗ್​ನ್ನ ಬಳಸ್ತಿರೋದು ಸ್ಪೆಷಲ್. ಓ ನಲ್ಲ.. ನೀ ನಲ್ಲ.. ಕರಿಮಣಿ ಮಾಲೀಕ ನೀನಲ್ಲ.. ಈ ಸಾಲುಗಳಲ್ಲಿ ಎರಡು ಅರ್ಥ ಇದೆ. ಒಂದು ಕರಿಮಣಿ ಮಾಲೀಕ ನೀನಲ್ಲ ಅಂದ್ರೆ, ನನ್ನ ಗಂಡ ನೀನು ಅಲ್ಲ ಅಂತ. ಮತ್ತೊಂದು ಅರ್ಥದಲ್ಲಿ ನನ್ನ ಕುತ್ತಿಗೆಗೆ ಬೀಳುವ ಕರಿಮಣಿಗೆ ಮಾಲೀಕ ನೀನೇ ನಲ್ಲ ಅನ್ನೋ ಅರ್ಥವೂ ಇದೇ.

ಆದರೆ ಸದ್ಯದ ಆ್ಯಂಗಲ್ ಮಾತ್ರ ಕರಿಮಣಿ ಮಾಲೀಕ ನೀ ಅಲ್ಲ ಅನ್ನೋ ಆ್ಯಂಗಲ್​ನಲ್ಲೇ ಹೆಚ್ಚು ರೀಲ್ಸ್​ ಆಗ್ತಿದೆ. ಅಂದ್ಹಾಗೆ, ಇದು ರಿಯಲ್ ಸ್ಟಾರ್ ಉಪೇಂದ್ರ ನಟಿಸಿ, ನಿರ್ದೇಶಿಸಿರುವ ಉಪೇಂದ್ರ ಚಿತ್ರದ ಸೂಪರ್​ ಹಿಟ್ ಗೀತೆ. ‘ಏನಿಲ್ಲಾ ಏನಿಲ್ಲಾ ನನ್ನ ನಿನ್ನ ನಡುವೆ ಏನಿಲ್ಲಾ’ ಹಾಡಿನಲ್ಲಿ ಬರೋ ಸಾಲುಗಳಿವು. ಸ್ವತಃ ಉಪೇಂದ್ರ ಅವರೇ ಈ ಹಾಡಿಗೆ ಗೀತೆ ರಚಿಸಿದ್ದರು. ಗುರುಕಿರಣ್ ಮ್ಯೂಸಿಕ್ ಕಂಪೋಸ್ ಮಾಡಿ ಪ್ರತಿಮಾ ರಾವ್ ಈ ಹಾಡನ್ನ ಹಾಡಿದ್ದರು. ಈ ಸಾಂಗ್ ಬಂದು ಆಲ್​ಮೋಸ್ಟ್​ 25 ವರ್ಷ ಆಗಿದೆ. ಇದೀಗ 25 ವರ್ಷದ ನಂತರ ಈ ಹಾಡಿನ ಸಾಲುಗಳು ಈ ಲೆವೆಲ್​ಗೆ ವೈರಲ್ ಆಗಿರೋದು ನಿಜಕ್ಕೂ ಸರ್ಪ್ರೈಸ್​.

25 ವರ್ಷದ ಹಿಂದೆ ಉಪ್ಪಿ ಮತ್ತು ಗುರುಕಿರಣ್ ಸೇರಿ ಈ ಬ್ಯೂಟಿಫುಲ್ ಹಾಡನ್ನ ಸೃಷ್ಟಿಸಿದ್ರು. ಆದ್ರೆ 25 ವರ್ಷದ ನಂತರ ಈ ಹಾಡು ಇಷ್ಟು ದೊಡ್ಡ ಕ್ರೇಜ್ ಸೃಷ್ಟಿಸೋಕೆ ಕಾರಣ ಕನಕ. ಉತ್ತರ ಕರ್ನಾಟಕದ ಈ ಪ್ರತಿಭೆ ಇಂತಹದೊಂದು ಕಲ್ಪನೆ ಮಾಡಿ ತನ್ನದೇ ಸ್ಟೈಲ್​ನಲ್ಲಿ ಒಂದು ಝಲಕ್​ ಅಪ್​ಲೌಡ್​ ಮಾಡಿದ್ದ. ಇದು ನೋಡಿದ್ರೆ ಸೋಶಿಯಲ್ ಮೀಡಿಯಾದಲ್ಲಿ ಒಳ್ಳೆ ವೈರಸ್ ಥರಾ ಅಂಟ್ಕೊಂಡು ಹೋಗ್ತಿದೆ. ಒಬ್ಬರಿಂದ ಒಬ್ಬರಿಗೆ ಒಬ್ಬರಿಂದ ಒಬ್ಬರಿಗೆ ಕರಿಮಣಿ ಮಾಲೀಕನ ಫೀವರ್​ ಹಬ್ಬಿದೆ. ಈ ವೈರಲ್​ ಸ್ಟೋರಿಯಲ್ಲಿ ಮತ್ತೊಂದು ಸ್ಪೆಷಲ್ ಏನ್ ಗೊತ್ತಾ? ಒಂದು ಹಂತದವರೆಗೂ ತುಂಬಾ ಸಾಫ್ಟ್​ ಆಗಿ ಟ್ರೆಂಡ್ ಆಗ್ತಿದ್ದ ಕರಿಮಣಿ ಸಾಂಗ್, ಈಗ ಟಪ್ಪಾಂಗುಚ್ಚಿ ಫಾರ್ಮೆಟ್​ಗೆ ಕನ್ವರ್ಟ್ ಆಗಿದೆ. ಅದೇ ಸಾಲುಗಳಿಗೆ ಡಿಜೆ ಬೀಟ್ಸ್​ ಸೇರಿ ಇದರ ಸ್ವರೂಪ ಇನ್ನೊಂದು ಲೆವಲ್​ಗೆ ರೀಚ್ ಆಗ್ತಿದೆ. ಒಂಥರಾ ಇದು ಸೆಕೆಂಡ್​ ವರ್ಷನ್​ ಇದ್ದಂಗೆ.

View this post on Instagram

A post shared by @kanakakk55

ಎಲ್ಲದಕ್ಕೂ ಒಂದು ಲಿಮಿಟ್​ ಅಂತಾ ಇರುತ್ತೆ. ಒಂದು ಸಂದರ್ಭ ಇರುತ್ತೆ. ಎಲ್ಲಿ ಅಂದ್ರೆ ಅಲ್ಲಿ ಒಂದೇ ಥರ ಇರಬಾರದು ಅಂತಾರೆ. ಅದ್ರೆ ಕರಿಮಣಿ ಟ್ರೆಂಡ್​ ಹೇಗಿದೆ ಅಂದ್ರೆ ತುಂಬಾ ಸಿರೀಯಸ್​ ಸಿಚುವೇಷನ್​ನಲ್ಲೂ ಪ್ಲೇ ಆಗ್ತಿದೆ. ತುಂಬಾ ಫನ್ ಆಗಿರೋ ಟೈಮ್​ಲ್ಲೂ ಪ್ಲೇ ಆಗ್ತಿದೆ. ಮತ್ತೊಂದೆಡೆ ಇದರ ಕಾಮಿಡಿ ವರ್ಷನ್ನೂ ಈಗ ಟ್ರೆಂಡ್​ ಆಗ್ತಿರೋದು ಸಂಥಿಂಗ್ ಸ್ಪೆಷಲ್. ಅದೇನೇ ಇರಲಿ, ಸದ್ಯದ ರೀಲ್ಸ್​ ದುನಿಯಾ, ಇನ್​ಸ್ಟಾ ವರ್ಲ್ಡ್​ಗೆ ಕರಿಮಣಿ ಮಾಲೀಕ ನಿಜವಾದ ಮಾಲೀಕನಾಗಿದ್ದಾನೆ. ಈ ಕರಿಮಣಿ ಮಾಲೀಕನ ಓವರ್​ಟೇಕ್ ಮಾಡೋದ್ಯಾರು ಅನ್ನೋದೇ ಮುಂದಿನ ಕುತೂಹಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉಪ್ಪಿ ಸಿನಿಮಾದ ‘ಕರಿಮಣಿ ಮಾಲೀಕ ನೀನಲ್ಲ’ ಸಾಂಗ್​​ ವೈರಲ್​​.. ಈ ಹಾಡು ಟ್ರೆಂಡ್​ ಆಗಿದ್ಹೇಗೆ?

https://newsfirstlive.com/wp-content/uploads/2024/02/KARIMANI.jpg

Load More