/newsfirstlive-kannada/media/post_attachments/wp-content/uploads/2025/02/MODEL-VILLAGE.jpg)
ಇಡೀ ಭಾರತದಲ್ಲಿ ಹತ್ತು ಲಕ್ಷ ಜನರಿಗೆ ಒಬ್ಬರಿಗಿಂಗ ಕಡಿಮೆ ಅಂಗಾಗದಾನಕ್ಕೆ ಮುಂದಾಗುತ್ತಾರೆ ಎಂಬ ಅಂಕಿ ಅಂಶಗಳಿವೆ. ವಿಶ್ವದಲ್ಲಿಯೇ ಅಂಗಾಗ ದಾನದ ವಿಚಾರದಲ್ಲಿ ಭಾರತ ಅತ್ಯಂತ ಹಿಂದುಳಿದಿದೆ ಎಂದು ಕೂಡ ಹೇಳಲಾಗುತ್ತದೆ. ನೇತ್ರದಾನ, ಅಂಗದಾನದ ಬಗ್ಗೆ ಅನೇಕ ಜಾಗೃತಿಗಳನ್ನು ನೀಡಿದರು ಕೂಡ ಜನರು ಈ ವಿಷಯಕ್ಕೆ ಮುಂದೆ ಬರುತ್ತಿಲ್ಲ. ದೊಡ್ಡ ದೊಡ್ಡ ಸೆಲೆಬ್ರಟಿಗಳೆ ತಮ್ಮ ಅಂಗಾಗ ದಾನ ಮಾಡಿ ಒಂದು ಮಾದರಿಯಾಗಿ ಹೊಸ ಮಾರ್ಗವನ್ನು ಜನರ ಮುಂದೆ ತೆರೆದಿಟ್ಟು ಹೋದರು ಕೂಡ ಭಾರತದಲ್ಲಿ ನೇತ್ರದಾನ, ಅಂಗಾಂಗ ದಾನದ ವಿಷಯದಲ್ಲಿ ಜನರು ಅಷ್ಟು ಮನಸ್ಸು ತೋರಿಸುತ್ತಿಲ್ಲ.
ಆದ್ರೆ ತೆಲಂಗಾಣದ ಹನುಮನಕೊಂಡ ಜಿಲ್ಲೆಯ ಮುಚೆರ್ಲಾ ಎಂಬ ಈ ಗ್ರಾಮ ಇದಕ್ಕೆ ಅಪವಾದ, ಇದು ಇಡೀ ದೇಶಕ್ಕೆ ಮಾದರಿಯಾಗಬಲ್ಲ ಗ್ರಾಮ. ಕೇವಲ ಐನೂರು ಜನ ನಿವಾಸಿಗಳನ್ನು ಹೊಂದಿರುವ ಈ ಗ್ರಾಮ ಇಡೀ ದೇಶಕ್ಕೆ ಒಂದು ಮಾದರಿಯಾಗಿದೆ. ಇಲ್ಲಿರುವ ಪ್ರತಿಯೊಬ್ಬರೂ ಕೂಡ ನಾವು ಸತ್ತಮೇಲೆ ನೇತ್ರದಾನ ಮಾಡುತ್ತೇವೆ ಎಂದು ಪ್ರತಿಜ್ಞೆ ಮಾಡಿದ್ದಾರೆ.
ಕಳೆದ ಕೆಲವು ವರ್ಷಗಳಲ್ಲಿ ಈ ಗ್ರಾಮದಲ್ಲಿ ಒಟ್ಟು 70 ಜನರು ಜೀವ ಕಳೆದುಕೊಂಡಿದ್ದಾರೆ ಆ 70 ಜನರು ಕೂಡ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ. ಇದೇ ಊರಿನ ನೀರಾವರಿ ಇಲಾಖೆಯ ವಿಭಾಗೀಯ ಇಂಜನೀಯರ್ ಆಗಿರುವ ಮಂಡಲಾ ರವಿಂದರ್ ಹೇಳುವ ಪ್ರಕಾರ ಅವರ ತಮ್ಮ ತಾಯಿಯ ಕಣ್ಣನ್ನು ದಾನ ಮಾಡಲು ಮೊದಲು ಮುಂದಾದರಂತೆ. ದಶಕಗಳ ಹಿಂದೆಯೇ ನಾವು ತೀರಿಕೊಂಡ ಮೇಲೆ ನಮ್ಮ ಯಾವುದೇ ಅಂಗವೂ ವ್ಯರ್ಥವಾಗಲು ಬಿಡಬಾರದು ಎಂದು ನಂಬಿದ್ದರಂತೆ. ಅದರಂತೆ ಅವರ ತಾಯಿ ತೀರಿಕೊಂಡಾಗ ಅವರ ಕಣ್ಣುಗಳನ್ನು ದಾನ ಮಾಡಿದ್ದರಂತೆ.
ಇತ್ತೀಚೆಗೆ ಅಂದ್ರೆ 2019ರಲ್ಲಿ ಅವರ ತಂದೆ ಅಸುನೀಗಿದಾಗಲು ಅವರು ತಂದೆಯ ದೇಹದ ಅಂಗಾಗ ದಾನವನ್ನು ಮಾಡಿದ್ದರಂತೆ. ಇನ್ನು ನಾನು ಕೂಡ ನನ್ನ ದೇಹದ ಅಂಗಾಂಗ ದಾನ ಮಾಡಲು ರೆಡಿಯಾಗಿದ್ದೇನೆ ಎಂದು ಹೇಳಿದ್ದಾರೆ. ಈ ಬಗ್ಗೆ ನಾನು ಉಳಿದವರಿಗೂ ಕೂಡ ಇದನ್ನು ಫಾಲೋವ್ ಮಾಡುವಂತೆ ಹೇಳಿದೆ. ನನ್ನ ಒಂದು ಜಾಗೃತಿ ತುಂಬಾ ಧನಾತ್ಮಕವಾಗಿ ಪ್ರತಿಫಲ ನೀಡಿದೆ ಎಂದು ಮಂಡಲಾ ರವಿಂದರ್ ಹೇಳಿದ್ದಾರೆ.
ಇದನ್ನೂ ಓದಿ:ಜನರು ನನ್ನ ಕಣ್ಮುಂದೆಯೇ ಜೀವ ಬಿಟ್ಟರು.. ದೆಹಲಿ ಕಾಲ್ತುಳಿತಕ್ಕೆ ಕಾರಣವೇನು? ಭೀಕರತೆ ತೆರೆದಿಟ್ಟ ಮಹಿಳೆ!
ರವಿಂದರ್ ಅವರಿಂದ ಪ್ರೇರಿತರಾದ ಗ್ರಾಮದವರು. ಅವರ ಈ ಒಂದು ಹೋರಾಟದ ಭಾಗವಾಗಿ ಸೇರಿಕೊಂಡಿದ್ದಾರೆ. ಎಲ್ಲರೂ ಕೂಡ ತಮ್ಮ ಅಂಗಾಗ ಹಾಗೂ ನೇತ್ರದಾನ ಮಾಡಲು ಸಜ್ಜಾಗಿದ್ದಾರೆ. ಒಂದು ವೇಳೆ ನಮ್ಮ ಮನೆಯಲ್ಲಿ ಯಾವುದೇ ಸಾವು ನಡೆದರು ಕೂಡ ವೈದ್ಯರಿಗೆ ಕರೆ ಮಾಡಿ ಆಗಬೇಕಾದ ಮುಂದಿನ ಕಾರ್ಯಕ್ಕೆ ನಾವು ಸಹಕಾರ ನೀಡುತ್ತೇವೆ ಎಂದು ರವಿಂದರ್ ಅವರಿಗೆ ಹೇಳಿದ್ದಾರೆ ಹಳ್ಳಿಯ ಜನರು.
ಗ್ರಾಮದ ನಿವಾಸಿ ಮಲ್ಲಾ ರೆಡ್ಡಿ ಹೇಳುವ ಪ್ರಕಾರ ಈ ಒಂದು ಕಾರ್ಯಕ್ಕೆ ಗ್ರಾಮದ ಪ್ರತಿಯೊಂದು ಕುಟುಂಬವೂ ಕೂಡ ಇದರಲ್ಲಿ ಭಾಗಿಯಾಗಲು ಸಜ್ಜಾಗಿದ್ದೇವೆ. ಈ ಒಂದು ಮಾದರಿ ಚಳುವಳಿ ಹಲವು ವರ್ಷಗಳ ಹಿಂದೆಯೇ ಈ ಗ್ರಾಮದಲ್ಲಿ ಶುರುವಾಗಿದೆ. ಈ ಹಳ್ಳಿಯಲ್ಲಿ ನಡೆದ ಮೊದಲ ನೇತ್ರದಾನ ಹಾಗೂ ಅಂಗಾಂಗ ದಾನ ಕಂಡ ಜನರು ಪ್ರೇರಿತರಾಗಿ ಇಡೀ ಹಳ್ಳಿಯಲ್ಲಿರುವ ಎಲ್ಲ ಕುಟುಂಬಗಳು ಈ ಚಳುವಳಿಗೆ ಕೈಜೋಡಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಇದನ್ನೂ ಓದಿ:ಮ್ಯೂಸಿಕ್ ಡೈರೆಕ್ಟರ್ಗೆ ಐಷಾರಾಮಿ ಕಾರು ಗಿಫ್ಟ್ ನೀಡಿದ ಟಾಲಿವುಡ್ ಸ್ಟಾರ್ ಬಾಲಕೃಷ್ಣ.. ಯಾಕೆ?
ಈ ಹಳ್ಳಿಯ ಹೊಸ ಮಾದರಿಯನ್ನು ಕಂಡ ಪಕ್ಕದ ಹಳ್ಳಿಯವರು ಕೂಡ ಪ್ರಭಾವಿತರಾಗಿ ಸುಮಾರು 20 ಜನರು ತಮ್ಮ ನೇತ್ರದಾನ ಮಾಡಲು ಸ್ವಯಂಪ್ರೇರಿತರಾಗಿ ಮುಂದು ಬಂದಿದ್ದಾರೆ ಎಂದು ಎಲ್ವಿ ಪ್ರಸಾದ್ ಕಣ್ಣಿನ ಸಂಸ್ಥೆಯ ವೈದ್ಯರು ಹೇಳೀದ್ದಾರೆ. ವೈದ್ಯಕೀಯ ತಜ್ಞರು ಈ ಗ್ರಾಮಕ್ಕೆ ಆಗಾಗ ಹೆಲ್ತ್ ಕ್ಯಾಂಪ್ ನಿಯೋಜನೆ ಮಾಡುತ್ತಾರೆ. ಅದರ ಜೊತೆಗೆ ಅಂಗಾಂಗ ದಾನದ ಪ್ರಾಮುಖ್ಯತೆಯ ಬಗ್ಗೆ ವಿವರಿಸುತ್ತಾರೆ.
ಮುಚೆರ್ಲಾ ಗ್ರಾಮದ ಜನರು ಅಂಗಾಗ ದಾನದ ವಿಚಾರದಲ್ಲಿ ಒಂದು ಸುಂದರ ವ್ಯವಸ್ಥೆಯನ್ನೇ ಮಾಡಿಕೊಂಡಿದ್ದಾರೆ.
ಯಾರು ಯಾರು ಅಂಗಾಂಗ ದಾನಕ್ಕೆ ಪ್ರತಿಜ್ಞೆ ಮಾಡಿದ್ದಾರೋ ಅವರ ಎಲ್ಲಾ ವಿವರಗಳ ದಾಖಲೆಗಳನ್ನು ಸಿದ್ಧಪಡಿಸಿನಿಟ್ಟುಕೊಂಡಿದ್ದಾರೆ. ಮತ್ತು ಅದನ್ನು ಹನುಮಕೊಂಡಾ ಜಿಲ್ಲಾಸ್ಪತ್ರೆಗೆ ಸಲ್ಲಿಸಿದ್ದಾರೆ ಕೂಡ. ನಾನು ಇತ್ತೀಚೆಗೆ ನನ್ನ ತಾಯಿಯ ಕಣ್ಣನ್ನು ದಾನ ಮಾಡಿದೆ. ಮತ್ತೊಂದು ಜೀವಕ್ಕೆ ದೃಷ್ಟಿ ಕೊಟ್ಟ ಹೆಮ್ಮೆ ನನಗಿದೆ ಎನ್ನತ್ತಾರೆ ಗ್ರಾಮದ ಬಿ ಸುಜಾತಾ. ಈ ಹಳ್ಳಿಯ ಈ ದಾನದ ಗುಣವನ್ನು ಮೆಚ್ಚಿಕೊಂಡ ಸರ್ಕಾರ ರಾಜ್ಯಪಾಲರಿಂದ ಈ ಗ್ರಾಮಕ್ಕೆ ಪ್ರಶಸ್ತಿಯನ್ನು ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ