/newsfirstlive-kannada/media/post_attachments/wp-content/uploads/2025/05/bng-kalla.jpg)
ನೀವು ರಾಬಿನ್ವುಡ್ ಇತಿಹಾಸವನ್ನ ಕೇಳಿರುತ್ತೀರಾ ಅಥವಾ ಪುಸ್ತಕಗಳನ್ನ ಓದಿರುತ್ತೀರಾ. ಆತ ಕಳ್ಳತನ, ದರೋಡೆ ಮಾಡಿ, ಒಂದೊಳ್ಳೆ ಕೆಲಸಗಳಿಗೆ ಆ ಹಣವನ್ನ ಯೂಸ್ ಮಾಡಿಕೊಳ್ತಿದ್ದ. ಅದೇ ರೀತಿ ಸಿಲಿಕಾನ್ ಸಿಟಿಯಲ್ಲಿ ಒಬ್ಬ ಅಪ್ಡೇಟೆಡ್ ರಾಬಿನ್ವುಡ್ ಇದ್ದಾನೆ. ಕಳ್ಳತನ ಮಾಡಿ, ಜೈಲಿಗೆ ಹೋಗಿ ಬಂದ್ರು, ಮತ್ತೆ ಕಳ್ಳತನ ಮಾಡ್ತಾನೆ ಇದ್ದ. ಆದ್ರೆ ಪದೇ ಪದೇ ಕಳ್ಳತನ ಮಾಡ್ತಿದ್ದ ಆ ಕಳ್ಳನನ್ನ ಪೊಲೀಸರು ಪರ್ಸನಲ್ ಆಗಿ ವಿಚಾರಣೆ ಮಾಡಿದ್ದಾರೆ. ಆ ಕಳ್ಳ ಹೇಳಿದ ಒಂದು ಹೇಳಿಕೆಗೆ ಒಂದು ಕ್ಷಣ ಪೊಲೀಸ್ ಅಧಿಕಾರಿಗಳೇ ಶಾಕ್ ಆಗಿದ್ದಾರೆ.
ಇದನ್ನೂ ಓದಿ: ಜಸ್ಟ್ 7 ತಿಂಗಳಲ್ಲಿ 25 ಮದುವೆ.. 23 ವರ್ಷದ ಸುಂದರಿ ಸಂಚು ಬಾಲಿವುಡ್ ಸಿನಿಮಾನೂ ಮೀರಿಸಿದ ಸ್ಟೋರಿ!
ಬೆಂಗಳೂರು ಪೊಲೀಸರ ಕಾರ್ಯಾಚರಣೆಯಲ್ಲಿ ಖತರ್ನಾಕ್ ಮನೆಗಳ್ಳರನ್ನು ಅರೆಸ್ಟ್ ಮಾಡಿದ್ದಾರೆ. ಇದರ ಪೈಕಿ, ಓಬ್ಬ ಕಳ್ಳ, ತಾನು ಕದ್ದಿದ್ದ ಹಣದಲ್ಲಿ 20 ಮಕ್ಕಳ ಶಾಲಾ-ಕಾಲೇಜು ಫೀಸ್ ಕಟ್ಟಿರೋದಾಗಿ ಹೇಳಿದ್ದಾನೆ. ಈ ಅಚ್ಚರಿ ವಿಚಾರ ಕಳ್ಳನ ಮಾತಿನಿಂದಲೇ ಬೆಳಕಿಗೆ ಬಂದಿದೆ. ಹೌದು, ಕಳ್ಳತನ ಮಾಡಿದ್ದ ಹಣದಲ್ಲಿ 20 ಮಕ್ಕಳ ಶಾಲಾ, ಕಾಲೇಜು ಫೀಸ್ ಕಟ್ಟಿದ್ದ ಖತರ್ನಾಕ್ ಮನೆಗಳ್ಳರನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಅರೆಸ್ಟ್ ಆದವರನ್ನ ಬೇಗೂರುನಲ್ಲಿ ವಾಸ ಮಾಡೋ ಶಿವು ಅಲಿಯಾಸ್ ಶಿವರಪ್ಪನ್, ಅವನ ಫ್ರೆಂಡ್ಸ್ಗಳಾದ ಅನಿಲ್ ಅಲಿಯಾಸ್ ಜಗ್ಗ ಹಾಗೂ ವಿವೇಕ್ ಅಂತ ಗುರುತಿಸಲಾಗಿದೆ. ಈ ಮೂವರ ಪೈಕಿ ಶಿವು ಅಲಿಯಾಸ್ ಶಿವರಪ್ಪನ್, ಈ ಗ್ಯಾಂಗ್ನ ಮಾಸ್ಟರ್ ಮೈಂಡ್. ಹೆಂಡತಿ, ಮಕ್ಕಳಿಲ್ಲದ ಶಿವು, ಆತ್ಮಹತ್ಯೆ ಮಾಡಿಕೊಳ್ಳೋದಕ್ಕೆ ಯೋಚನೆ ಮಾಡ್ತಿದ್ದ. ಇದರ ನಡುವೆ ಏರಿಯಾದಲ್ಲಿ ಮಕ್ಕಳ ಸ್ಕೂಲ್ ಫೀಸ್ ಕಟ್ಟೋದಕ್ಕೆ ತನ್ನ ಸ್ನೇಹಿತರು ಒದ್ದಾಡ್ತಿದ್ದನ್ನು ನೋಡಿದ್ದ. ಅದಾದ್ಮೇಲೆ ಶಿವು, ಬ್ಯಾಡರಹಳ್ಳಿ ಸೇರಿ ಸಾಕಷ್ಟೂ ಮನೆಗಳಿಗೆ ಕನ್ನ ಹಾಕಿದ್ದ. ಕದ್ದ ಚಿನ್ನಾಭರಣವನ್ನು ತನ್ನ ಸ್ನೇಹಿತರಾದ ಅನಿಲ್ ಅಲಿಯಾಸ್ ಜಗ್ಗ ಹಾಗೂ ವಿವೇಕ್‌ನ ಸಹಾಯದಿಂದ ಮಾರಾಟ ಮಾಡ್ತಿದ್ದ. ಹೀಗೆ ಮಾರಾಟ ಮಾಡಿದ ಹಣವನ್ನು, ಮಕ್ಕಳ ಶಾಲಾ-ಕಾಲೇಜು ಫೀಸ್ ಕಟ್ತಿದ್ದನಂತೆ.
ಪೊಲೀಸರ ಮಾಹಿತಿ ಪ್ರಕಾರ, ತಮಿಳುನಾಡಿನಲ್ಲಿ 22 ಲಕ್ಷಕ್ಕೆ ಶಿವು, ಚಿನ್ನ ಮಾರಾಟ ಮಾಡಿದ್ದ. ಆ ಹಣದಲ್ಲಿ ವಿವೇಕ್‌ಗೆ 4 ಲಕ್ಷ, ಅನಿಲ್‌ಗೆ 4 ಲಕ್ಷ ರೂ. ಮೌಲ್ಯದ ಆಟೋ ಕೊಡಿಸಿದ್ದ. ಉಳಿದ 14 ಲಕ್ಷ ರೂ. ಹಣದಲ್ಲಿ ಏರಿಯಾದ 20 ಮಕ್ಕಳಿಗೆ ಶಾಲಾ ಹಾಗೂ ಕಾಲೇಜು ಫೀಸ್ ಕಟ್ಟಿದ್ದಾನೆ. ಮನೆಗಳ್ಳರನ್ನ ಬೆನ್ನತ್ತಿದ್ದ ಬ್ಯಾಡರಹಳ್ಳಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಶಿವು, ಅನಿಲ್ ಹಾಗೂ ವಿವೇಕ್‌ನನ್ನು ಬಂಧಿಸಿದ ಪೊಲೀಸರು 24 ಲಕ್ಷ ಮೌಲ್ಯದ 260 ಗ್ರಾಂ ಚಿನ್ನದ ಗಟ್ಟಿಯನ್ನು ಸೀಜ್ ಮಾಡಿದ್ದಾರೆ.
ಇನ್ನು, ವಿಚಾರಣೆ ಟೈಂನಲ್ಲಿ ನನ್ನನ್ನ ಜೈಲಿಗೆ ಕಳುಹಿಸಿದ್ರು ಪರವಾಗಿಲ್ಲ. ನಾನು ಕಳ್ಳತನ ಮಾಡೋದು ಮಾತ್ರ ಬಿಡೋದಿಲ್ಲ ಅಂತ ಆರೋಪಿ ಶಿವು ಹೇಳಿಕೊಂಡಿದ್ದಾನೆ. ಜೈಲಿಂದ ಹೊರ ಬಂದ್ಮೇಲೆ, ಮತ್ತೆ ಕಳ್ಳತನ ಮಾಡಿ 100ಕ್ಕೂ ಹೆಚ್ಚಿನ ಮಕ್ಕಳ ಸ್ಕೂಲ್ ಫೀಸ್ ಕಟ್ಟಿ ಸಾಯುತ್ತೇನೆ ಅಂತ ಆರೋಪಿ ನೇರವಾಗಿ ಹೇಳಿದ್ದಕ್ಕೆ ಪೊಲೀಸರೇ ಅಚ್ಚರಿ ಪಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ