/newsfirstlive-kannada/media/post_attachments/wp-content/uploads/2024/07/Pavel-Durov-sperm-story.jpg)
ರಷ್ಯಿಯನ್ ಮೂಲದ ಟೆಲಿಗ್ರಾಮ್ನ ಸಹ ಸಂಸ್ಥಾಪಕ ಪಾವೆಲ್ ಡುರೆವಾ ಶಾಕಿಂಗ್ ಹೇಳಿಕೆಯೊಂದನ್ನು ಕೊಟ್ಟಿದ್ದಾರೆ. ಒಟ್ಟು 12 ದೇಶಗಳಲ್ಲಿ 100 ಜನ ನನ್ನ ಜೈವಿಕ ಮಕ್ಕಳಿದ್ದಾರೆ ಅಂದ್ರೆ ನನ್ನ ಅಂಶದಿಂದ ಹುಟ್ಟಿದ ಮಕ್ಕಳಿದ್ದಾರೆ ಎಂದು ಹೇಳಿದ್ದಾರೆ. ತಮ್ಮ ಟೆಲಿಗ್ರಾಮ್ನ ಪೋಸ್ಟ್ ಒಂದರಲ್ಲಿ ಈ ಮಾತನ್ನು ಹಂಚಿಕೊಂಡಿರುವ ಪಾವೆಲ್ ಡುರೆವಾ, ನನ್ನ ವಿರ್ಯ ದೇಣಿಗೆಯಿಂದಾಗಿಯೇ ಸುಮಾರು 12 ದೇಶಗಳಲ್ಲಿ 100ಕ್ಕೂ ಹೆಚ್ಚು ನನ್ನ ಮಕ್ಕಳಿದ್ದಾರೆ ಎಂಬ ಮಾತನ್ನು ಹೇಳಿದ್ದಾರೆ. ಮುಂದುವರೆದು ಹೇಳಿದ ಅವರು, ಇದೆಲ್ಲಾ ಹೇಗೆ ಶುರುವಾಯ್ತು ಎಂದು ಹೇಳಿರುವ ಡುರೆವಾ, 15 ವರ್ಷಗಳ ಹಿಂದೆ ನನ್ನ ಸ್ನೇಹಿತನೊಬ್ಬ ನಮಗೆ ಇನ್ನೂ ಮಕ್ಕಳಾಗಿಲ್ಲ, ನನ್ನ ವಿರ್ಯಾಣುವಿನಲ್ಲಿ ಸಂತಾನಶಕ್ತಿ ಇಲ್ಲದ ಕಾರಣ ನಾವು ಮಕ್ಕಳನ್ನು ಹೊಂದಲಾಗಿಲ್ಲ, ಹೀಗಾಗಿ ನಾನು ಹೇಳುವ ಆಸ್ಪತ್ರೆಗೆ ಬಂದು ನಿನ್ನ ಧಾತು ದಾನವನ್ನು ಮಾಡಿ ಹೋಗು ಎಂದು ವಿನಂತಿ ಮಾಡಿಕೊಂಡ, ನನಗೆ ಆಗ ಅವನು ತಮಾಷೆ ಮಾಡುತ್ತಿದ್ದಾನೆ ಎಂದು ನಗು ಬಂದಿತ್ತು.
ನಂತರ ನಾನು ಆಸ್ಪತ್ರೆಗೆ ಹೋದಾಗ ವಿರ್ಯ ದಾನದ ಮಹತ್ವ ಅರಿವಾಯ್ತು, ಅಷ್ಟೇ ಅಲ್ಲ ಅದರ ಬಗ್ಗೆ ನನಗೊಂದು ರೀತಿ ಕುತೂಹಲದೊಂದಿಗೆ ಉತ್ಸಾಹವನ್ನು ಹೆಚ್ಚಿಸಿತು ಆವಾಗ ನನ್ನನ್ನು ನಾನು ಧಾತು ದಾನದ ಜಗತ್ತಿನೊಂದಿಗೆ ತೆರೆದುಕೊಂಡೆ. ನಾನು ಸಂತಾನ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸಹಾಯಕನಾಗಿ ನಿಲ್ಲಲು ಈ ಕಾರ್ಯಕ್ಕೆ ಮುಂದಾದೆ, ಆರೋಗ್ಯಕರ ಪುರುಷರ ಈ ರೀತಿಯ ವಿರ್ಯ ದಾನವನ್ನು ಮಾಡಬೇಕು ಎಂದು ಕೂಡ ಹೇಳಿದ್ದಾರೆ
ಇದನ್ನೂ ಓದಿ:ಮಹಾರಾಷ್ಟ್ರದಲ್ಲಿ ಅಮೆರಿಕ ಲೇಡಿಗೆ ಟಾರ್ಚರ್.. ಕೊನೆಗೂ ಹೇಳಿಕೆ ನೀಡಿದ ಮಹಿಳೆ; ಚಿತ್ರಹಿಂಸೆಯ ರಹಸ್ಯ ಬಯಲು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ