/newsfirstlive-kannada/media/post_attachments/wp-content/uploads/2025/04/PF_MONEYA.jpg)
ನವದೆಹಲಿ: ಮುಂಗಡ ಹಕ್ಕುಗಳ ಸ್ವಯಂ-ಇತ್ಯರ್ಥ (auto-settlement of advance claims (ASAC) ಮಿತಿಯನ್ನು 1 ಲಕ್ಷದಿಂದ 5 ಲಕ್ಷ ರೂಪಾಯಿವರೆಗೆ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್​ಒ) ಹೆಚ್ಚಿಸಲು ನಿರ್ಧರಿಸಲಾಗಿದೆ. ಇದನ್ನೂ ಒಮ್ಮೆಗೆ ವಿತ್​​ಡ್ರಾ ಕೂಡ ಮಾಡಬಹುದು. ಇದರಿಂದ 7.5 ಕೋಟಿ ಇಪಿಎಫ್​ಒ ಸದಸ್ಯರ ಜೀವನ ಸುಲಭತೆ ಹೆಚ್ಚಿಸಲು ಸಹಕಾರಿ ಆಗಲಿದೆ ಎಂದು ತಿಳಿಸಲಾಗಿದೆ.
ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಾರ್ಯದರ್ಶಿ ಸುಮಿತಾ ದಾವ್ರಾ ಅವರು ಈ ಪ್ರಸ್ತಾವನೆ ಅನುಮೋದಿಸಿದ್ದಾರೆ. ಮಾರ್ಚ್ 28 ರಂದು ಶ್ರೀನಗರದಲ್ಲಿ ನಡೆದ ಕೇಂದ್ರೀಯ ಟ್ರಸ್ಟಿಗಳ ಮಂಡಳಿಯ (ಸಿಬಿಟಿ) ಕಾರ್ಯಕಾರಿ ಸಮಿತಿಯ (ಇಸಿ) 113 ನೇ ಸಭೆಯಲ್ಲಿ ಪ್ರಸ್ತಾವನೆಯನ್ನ ಅನುಮೋದಿಸಲಾಗಿದೆ. ಸಿಬಿಟಿ ಇಂದ ಅಂತಿಮ ಅನುಮೋದನೆಗೆ ಕಳುಹಿಸಲಾಗಿದೆ. ಇದಕ್ಕೆ ಅನುಮತಿ ಸಿಕ್ಕ ಬಳಿಕವೇ EPFO ​​ಸದಸ್ಯರು ಸ್ವಯಂ-ಇತ್ಯರ್ಥ ಮಿತಿಯನ್ನು 5 ಲಕ್ಷ ರೂಪಾಯಿವರೆಗೆ ಹಿಂಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಕ್ಯಾಪ್ಟನ್ ಆದ ಮೇಲೆ ರಿಷಭ್ ಪಂತ್ ಬ್ಯಾಟಿಂಗ್ ಖದರ್ ಮಾಯ.. ಫ್ರಾಂಚೈಸಿಯಲ್ಲಿ ಏನಾಗ್ತಿದೆ?
/newsfirstlive-kannada/media/post_attachments/wp-content/uploads/2024/02/EPFO-Interest-Rate.jpg)
ಮುಂಗಡ ಹಕ್ಕುಗಳ ಸ್ವಯಂ-ಇತ್ಯರ್ಥ ಮಿತಿಯನ್ನು 5 ಲಕ್ಷ ರೂಪಾಯಿವರೆಗೆ ಪರಿಷ್ಕರಣೆಯಿಂದ ಕೋಟ್ಯಂತರ ಜನರ ಜೀವನ ಸುಲಭತೆ ಹೆಚ್ಚಿಸುತ್ತದೆ. ಸ್ವಯಂ ಇತ್ಯರ್ಥ ಪ್ರಕ್ರಿಯೆಯು ಕ್ಲೈಮ್ ಇತ್ಯರ್ಥಗಳನ್ನು ಈಗ ತುಂಬಾ ಸರಳಗೊಳಿಸಲಾಗಿದೆ. ನೌಕರರು ತಮ್ಮ ಪಿಎಫ್ ಹಣವನ್ನು ಸುಲಭವಾಗಿ ಹಿಂದಕ್ಕೆ ಪಡೆಯಲು ಕೆಲವು ಬದಲಾವಣೆಗಳನ್ನು ಇತ್ತೀಚೆಗೆ ತರಲಾಗಿದೆ. ಇದರಿಂದ ಸಮಯ ಉಳಿತಾಯ ಹಾಗೂ ಸಿಬ್ಬಂದಿ ನಡುವೆ ನಡೆಯುತ್ತಿದ್ದ ಹಸ್ತಕ್ಷೇಪ ಕಡಿಮೆ ಮಾಡಲಾಗಿದೆ ಎಂದು ತಿಳಿಸಿದೆ.
1 ಲಕ್ಷ ರೂಪಾಯಿವರೆಗಿನ ಕ್ಲೈಮ್‌ಗಳು ಪ್ರಸ್ತುತ, 60% ವರೆಗಿನ ಕ್ಲೈಮ್‌ಗಳನ್ನು ಸ್ವಯಂಚಾಲಿತವಾಗಿ ಪ್ರಕ್ರಿಯೆ ಮಾಡಲಾಗುತ್ತದೆ. ಈ ಬದಲಾವಣೆಗಳ ನಂತರ, 1 ಲಕ್ಷ ರೂಪಾಯಿವರೆಗಿನ ಕ್ಲೈಮ್‌ಗಳನ್ನು 3 ದಿನಗಳಲ್ಲಿ ಸ್ವಯಂಚಾಲಿತವಾಗಿ ಪ್ರಕ್ರಿಯೆಗೊಳಿಸಲಾಗುತ್ತಿದೆ. ಅನಾರೋಗ್ಯ, ಆಸ್ಪತ್ರೆ ವೆಚ್ಚಗಳು, ಮನೆ ಖರೀದಿ, ಮಕ್ಕಳ ಶಿಕ್ಷಣ ಮತ್ತು ಮದುವೆಗಾಗಿ ಕ್ಲೈಮ್‌ಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲಾಗುತ್ತದೆ.
ಇಪಿಎಫ್​ಒ ಮುಂಗಡ ಹಕ್ಕುಗಳ ಸ್ವಯಂ-ಇತ್ಯರ್ಥ ಪ್ರಕ್ರಿಯೆಯು ಅತಿ ವೇಗವಾಗಿ ಬೆಳೆವಣಿಗೆ ಕಾಣುತ್ತಿದೆ. ಕಳೆದ ವರ್ಷ ಇದು 89.52 ಲಕ್ಷ ಕ್ಲೇಮ್‌ಗಳು ಮಾಡಲಾಗಿತ್ತು. ಆದರೆ ಈ ವರ್ಷ ಮಾರ್ಚ್ 6ರ ವೇಳೆಗೆ 2.16 ಕೋಟಿ ಸ್ವಯಂ ಕ್ಲೇಮ್‌ಗಳನ್ನ ಮಾಡಲಾಗಿದೆ. ಇದು ದಕ್ಷತೆ ಪ್ರತಿಬಿಂಬಿಸುತ್ತಿದ್ದು ಶೇಕಡಾ 95 ಕ್ಲೇಮ್‌ಗಳನ್ನು ಈಗ 3 ದಿನಗಳಲ್ಲಿ ಇತ್ಯರ್ಥಪಡಿಸಲಾಗುತ್ತದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us