ATM ಮೂಲಕ PF ಹಣ ಡ್ರಾ..! ಗ್ರಾಹಕರಿಗೆ ಭರ್ಜರಿ ಗುಡ್​ನ್ಯೂಸ್​..!

author-image
Ganesh
Updated On
PF ಹಣ ಪಡಿಯೋದು ಮತ್ತಷ್ಟು ಸುಲಭ.. ATM, UPI ಮೂಲಕ ದುಡ್ಡು ಡ್ರಾ..!
Advertisment
  • ಉದ್ಯೋಗಿಗಳ ಭವಿಷ್ಯ ನಿಧಿಯಿಂದ ಸಿಹಿ ಸುದ್ದಿ..!
  • EPFOನಿಂದ ಗ್ರಾಹಕರಿಗೆ ಸಿಗಲಿದೆ​​ ATM ಕಾರ್ಡ್
  • EPFO 3.0 ಅಡಿಯಲ್ಲಿ ಎಷ್ಟು ಸೇವೆ? ಪ್ರಯೋಜನ ಏನು?

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಕೋಟಿಗಟ್ಟಲೆ ಗ್ರಾಹಕರಿಗೆ ದೊಡ್ಡ ಶುಭ ಸುದ್ದಿ ನೀಡಿದೆ. ಹೊಸ ಪಿಎಫ್ ನೀತಿಯು ಜೂನ್ 2025 ರೊಳಗೆ ಜಾರಿಗೆ ಬರಲಿದೆ. ಹೊಸ ಆ್ಯಪ್, ಎಟಿಎಂನಿಂದ ಪಿಎಫ್ ಹಣ ಡ್ರಾ ಮಾಡುವ ಸೌಲಭ್ಯ ಲಭ್ಯವಾಗಲಿದೆ ಎಂದು ತಿಳಿಸಿದೆ.

ಹೊಸ ಸಾಫ್ಟ್‌ವೇರ್ ಸಿಸ್ಟಮ್ ಇಪಿಎಫ್‌ಒ 3.0 ಅನ್ನು ಈ ವರ್ಷ ಪ್ರಾರಂಭಿಸಲಾಗುವುದು ಅಂತಾ ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಘೋಷಣೆ ಮಾಡಿದ್ದಾರೆ. ಈ ಹೊಸ ವ್ಯವಸ್ಥೆಯು ಉದ್ಯೋಗಿಗಳಿಗೆ ಅನುಕೂಲಕರ, ಬಳಕೆದಾರ ಸ್ನೇಹಿ ಆಗಿರಲಿದೆ.

ಇದನ್ನೂ ಓದಿ: ಈಗೇನಿದ್ದರೂ WhatsApp ಟಾರ್ಗೆಟ್​.. ಈ 4 ಮೆಸೇಜ್ ಬಂದರೆ ಕ್ಲಿಕ್ ಮಾಡಬೇಡಿ!

EPFO 3.0 ಅಡಿಯಲ್ಲಿ ಸದಸ್ಯರಿಗೆ ATM ಕಾರ್ಡ್​​​ಗಳನ್ನು ನೀಡಲಾಗುತ್ತದೆ. ಅದರ ಮೂಲಕ ಉದ್ಯೋಗಿಗಳು ತಮ್ಮ ಭವಿಷ್ಯ ನಿಧಿ (ಪಿಎಫ್) ಖಾತೆಯ ಮೊತ್ತವನ್ನು ಸುಲಭವಾಗಿ ಹಿಂಪಡೆಯಬಹುದು. ಆರ್ಥಿಕ ತುರ್ತು ಸಂದರ್ಭಗಳಲ್ಲಿ ಈ ಸೇವೆ ಸಹಾಯಕ ಆಗಲಿದೆ. ವೆಬ್​​ಸೈಟ್​ನಲ್ಲಿರುವ ಕೆಲವು ತಾಂತ್ರಿಕ ದೋಷಗಳನ್ನು ಮೊದಲು ಸರಿಪಡಿಸುತ್ತೇವೆ. ನಂತರ ಇಪಿಎಫ್‌ಒ 3.0 ಅನ್ನು ಹಂತಹಂತವಾಗಿ ಜಾರಿಗೊಳಿಸಲಾಗುತ್ತದೆ ಎಂದು ಕೇಂದ್ರ ಸಚಿವರ ತಿಳಿಸಿದ್ದಾರೆ.

ಪ್ರಯೋಜನ ಏನು..?

  • EPFO ಸದಸ್ಯರು 2025 ರಿಂದ ATM ಮೂಲಕ ಹಣ ಡ್ರಾ
  • PF ಖಾತೆಯಿಂದ ನೇರವಾಗಿ ಹಣ ಹಿಂಪಡೆಯಲು ಸಾಧ್ಯ
  • ಯಾವುದೇ ಅಧಿಕಾರಿಯಿಂದ ಕ್ಲಿಯರೆನ್ಸ್ ಪಡೆಯುವ ಅಗತ್ಯ ಇರಲ್ಲ
  • ಗ್ರಾಹಕರು ತಮ್ಮ ಹಕ್ಕು ಒಂದೇ ಕ್ಲಿಕ್‌ನಲ್ಲಿ ಇತ್ಯರ್ಥಪಡಿಸಲು ಅನುಮತಿ
  • ಇಪಿಎಫ್‌ಒ 3.0 ಡಿಜಿಟಲ್ ತಂತ್ರಜ್ಞಾನ ಬಳಸಿಕೊಂಡು ಸೇವೆ
  • ಸರಳ, ವೇಗ ಮತ್ತು ಪಾರದರ್ಶಕ ಗುರಿ ಹೊಂದಿರುವ EPFO
  • ಉದ್ಯೋಗಿಗಳ ಆರ್ಥಿಕ ನಿರ್ವಹಣೆಯನ್ನು ಸುಧಾರಿಸುತ್ತದೆ
  • ಕೋಟಿಗಟ್ಟಲೆ ಉದ್ಯೋಗಿಗಳಿಗೆ ಸುರಕ್ಷಿತ PF ನಿರ್ವಹಣೆಯ ಆಯ್ಕೆ

ಯಾವಾಗ ಹೊರಬರುತ್ತದೆ?

EPFO 3.0 ಅಡಿಯಲ್ಲಿ ಹೊಸ ಮೊಬೈಲ್ ಅಪ್ಲಿಕೇಶನ್ಸ್​, ಇತರೆ ಡಿಜಿಟಲ್ ಸೇವೆಗಳನ್ನ ಪ್ರಾರಂಭಿಸಲಾಗುತ್ತದೆ. 2025ರ ಜೂನ್ ವೇಳೆಗೆ ಹೊಸ ಆ್ಯಪ್, ಎಟಿಎಂ ಕಾರ್ಡ್ ಹಾಗೂ ಸುಧಾರಿತ ಸಾಫ್ಟ್ ವೇರ್ ರಿಲೀಸ್ ಆಗಲಿದೆ.

ಇದನ್ನೂ ಓದಿ: ಈಗೇನಿದ್ದರೂ WhatsApp ಟಾರ್ಗೆಟ್​.. ಈ 4 ಮೆಸೇಜ್ ಬಂದರೆ ಕ್ಲಿಕ್ ಮಾಡಬೇಡಿ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment