/newsfirstlive-kannada/media/post_attachments/wp-content/uploads/2025/07/mushroom.jpg)
ನಾವು ನೀವೆಲ್ಲಾ ಬಹಳ ಇಷ್ಟಪಟ್ಟು ಮಶ್ರೂಮ್ ಅಂದರೆ, ಅಣಬೆಯನ್ನು ಸಾಂಬಾರು ಮಾಡಿಕೊಂಡು ಊಟ ಮಾಡುತ್ತೇವೆ. ಮಶ್ರೂಮ್ ಬಿರಿಯಾನಿ ಮಾಡ್ತಾರೆ. ಮಶ್ರೂಮ್ ಮಸಾಲಾ ಕೂಡ ನಮ್ಮ ದೇಶದಲ್ಲಿ ಬಹಳಷ್ಟು ಜನರಿಗೆ ಇಷ್ಟ. ಆದರೇ, ಇಂಥ ಅಣಬೆಯಲ್ಲೇ ಗಂಡನ ಕುಟುಂಬವನ್ನು ಮಹಿಳೆಯೊಬ್ಬಳು ಮುಗಿಸಿದ್ದಾಳೆ. ಅಣಬೆಗೆ ವಿಷ ಬೆರೆಸಿ ಮೂವರ ಜೀವ ತೆಗೆದಿದ್ದಾಳೆ. ಇದು ಈಗ ಮಶ್ರೂಮ್ ಮರ್ಡರ್ ಕೇಸ್ ಎಂದೇ ಹೆಸರಾಗಿದೆ. ಆದರೇ, ಇದು ನಡೆದಿರೋದು ನಮ್ಮ ದೇಶದಲ್ಲಿ ಅಲ್ಲ. ದೂರದ ಆಸ್ಟ್ರೇಲಿಯಾದ ಮೇಲ್ಬೋರ್ನ್ನ ನೈರುತ್ಯ ದಿಕ್ಕಿನ ಲಿಯೋನಾಗಾಂಥ ಎಂಬ ಚಿಕ್ಕ ಟೌನ್ನಲ್ಲಿ.
ಅಣಬೆಯಲ್ಲಿ ವಿಷವಿಟ್ಟು ಗಂಡನ ತಂದೆ, ತಾಯಿ, ತಂಗಿಗೆ ಊಟ ಬಡಿಸಿ ಜೀವ ತೆಗೆದ ಸೊಸೆ ಅಪರಾಧಿ ಎಂದು ಆಸ್ಟ್ರೇಲಿಯಾದ ಕೋರ್ಟ್ ತೀರ್ಪು ನೀಡಿದೆ. ಮಶ್ರೂಮ್ ಮರ್ಡರ್ ಕೇಸ್ ಆಸ್ಟ್ರೇಲಿಯಾದಲ್ಲಿ ಭಾರಿ ಗಮನ ಸೆಳೆದಿತ್ತು. ಹೀಗೆ ತನ್ನ ಅತ್ತೆ, ಮಾವ, ನಾದಿನಿಗೆ ವಿಷವಿಕ್ಕಿದ ಮಹಿಳೆಯ ಹೆಸರು ಎರಿನ್ ಪ್ಯಾಟರಸನ್. ತನ್ನ ಅತ್ತೆ ಗೈಲ್ ಪ್ಯಾಟರ್ ಸನ್, ಮಾವ ಡೋನಾಲ್ಡ್ ಪ್ಯಾಟರಸನ್, ಅತ್ತೆಯ ಸೋದರಿ ಹೀತ್ರೋ ವಿಲ್ಕಿನಸನ್ರನ್ನು ಮುಗಿಸಿದ್ದಳು. ಹೀತ್ರೋ ವಿಲ್ಕಿಸನ್ ಪತಿ ಇಯಾನ್ ವಿಲ್ಕಿನಸನ್ರನ್ನು ಮುಗಿಸಲು ಯತ್ನಿಸಿದ್ದಳು. ಈ ಯತ್ನ ಕೇಸ್ನಲ್ಲೂ ಎರಿನ್ ಪ್ಯಾಟರಸನ್ ಅಪರಾಧಿ ಎಂದು ಕೋರ್ಟ್ ತೀರ್ಪು ನೀಡಿದೆ. ಈ ಕೇಸ್ ವಿಚಾರಣೆ 10 ವಾರಗಳ ಕಾಲ ನಡೆದಿತ್ತು.
ನಾಲ್ವರು ಸಂತ್ರಸ್ತರು ಎರಿನ್ ಪ್ಯಾಟರಸನ್ ಮನೆಗೆ ಭೇಟಿ ನೀಡಿದ್ದಾಗ, ಮೂವರನ್ನು ಮುಗಿಸಿದ್ದಾಳೆ. ಈ ವೇಳೆ ಕ್ಯಾಪ್ ಮಶ್ರೂಮ್ನಿಂದ ಮೂವರ ಜೀನ ನಿಲ್ಲಿಸಿದ್ದು ತನಿಖೆ ನಡೆಸಿದ್ದ ಪೊಲೀಸ್ ಅಧಿಕಾರಿಗಳು ಹೇಳಿದ್ದರು. ಈಗ ಎರಿನ್ ಪ್ಯಾಟರಸನ್ ವಿರುದ್ಧದ ಎಲ್ಲ ಆರೋಪ ಸಾಬೀತಾಗಿವೆ ಎಂದು ಕೋರ್ಟ್ ತೀರ್ಪು ನೀಡಿದೆ.
ಇಯಾನ್ ವಿಲ್ಕಿನಸನ್ ಆಸ್ಪತ್ರೆಯಲ್ಲಿ ಒಂದು ವಾರ ಚಿಕಿತ್ಸೆ ಪಡೆದು ಬದುಕುಳಿದಿದ್ದಾರೆ. ಇಯಾನ್ ಸ್ಥಳೀಯ ಚರ್ಚ್ನಲ್ಲಿ ಪಾದ್ರಿಯಾಗಿದ್ದಾರೆ. ಆದರೇ, ಅಪರಾಧಿ ಎರಿನ್ ಪ್ಯಾಟರಸನ್ ಪರ ವಕೀಲರು, ಮೂವರು ಸಾವು ಭಯಾನಕ ಆಕ್ಸಿಡೆಂಟ್ನಿಂದ ಆಗಿದೆ. ಊಟವನ್ನು ಟೇಸ್ಟಿಯಾಗಿ ಮಾಡಲು ಎರಿನ್ ಪ್ಯಾಟರಸನ್ ಯತ್ನಿಸಿದ್ದಾರೆ. ಭಯದಿಂದ ಎರಿನ್ ಪ್ಯಾಟರಸನ್, ವಿಷಕಾರಿ ಮಶ್ರೂಮ್ ಅನ್ನು ಅಡುಗೆಗೆ ಮಿಕ್ಸ್ ಮಾಡಿದ್ದಾಗಿ ಸುಳ್ಳು ಹೇಳಿದ್ದಾಳೆ ಎಂದು ವಾದಿಸಿದ್ದರು.
ಇದನ್ನೂ ಓದಿ: ರೇಣುಕಾಸ್ವಾಮಿ ಮಾದರಿ ಕೇಸ್; ಕಲಬುರಗಿ ಸ್ಮಶಾನದಲ್ಲಿ ಜೀವ ತೆಗೆದು, ರಾಯಚೂರಿನ ಕೃಷ್ಣಾ ನದಿಗೆ ಎಸೆದ ಪಾಪಿಗಳು
ಇನ್ನೂ ಕೋರ್ಟ್ ಎರಿನ್ ಪ್ಯಾಟರಸನ್ ವಿರುದ್ಧ ಬೇರೆ ಬೇರೆ ವ್ಯಕ್ತಿಗಳು ಸಾಕ್ಷ್ಯ ನುಡಿದರು. ಇದನ್ನು ಕೋರ್ಟ್ನಲ್ಲಿ ಕುಳಿತು ಎರಿನ್ ಪ್ಯಾಟರಸನ್ ಕೇಳಿದ್ದಳು. ಎಲ್ಲರೂ ಕೃತ್ಯಕ್ಕೆ ಕಾರಣವಾದ ಅಂಶಗಳನ್ನು ಸಾಕ್ಷಿಯಾಗಿ ಕೋರ್ಟ್ ಗಮನಕ್ಕೆ ತಂದರು. ಇದರಿಂದಾಗಿ ಜಡ್ಜ್ಗೆ ಯಾವುದೇ ಅನುಮಾನ ಇಲ್ಲದೇ, ಎರಿನ್ ಪ್ಯಾಟರಸನ್ ತನ್ನ ಅತ್ತೆ, ಮಾವ, ಅತ್ತೆಯ ಸೋದರಿಯನ್ನು ಮುಗಿಸಿದ್ದಾಳೆ ಎಂಬುದು ಖಚಿತವಾಯಿತು. ಹೀಗಾಗಿ ಎರಿನ್ ಪ್ಯಾಟರಸನ್ ಅಪರಾಧಿ ಎಂದು ತೀರ್ಪು ಹೊರ ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ