608 ಉದ್ಯೋಗ ಆಹ್ವಾನ ಮಾಡಿರುವ ESIC.. ಆರಂಭದಲ್ಲೇ 56,100 ರೂಪಾಯಿ ಸಂಬಳ

author-image
Bheemappa
Updated On
PWD; ಲೋಕೋಪಯೋಗಿ ಇಲಾಖೆಯ ಹುದ್ದೆಗಳ ಆಹ್ವಾನ.. ಇನ್ನೊಂದಿನ ಮಾತ್ರ ಅರ್ಜಿ ಸಲ್ಲಿಕೆಗೆ ಅವಕಾಶ
Advertisment
  • ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಲು ಕೇವಲ ಇನ್ನೊಂದಿನ ಇದೆ
  • ಯಾವ್ಯಾವ ಹುದ್ದೆಗಳಿಗೆ ಪ್ರಸ್ತುತ ಅರ್ಜಿ ಆಹ್ವಾನ ಮಾಡಲಾಗಿದೆ?
  • ಈ ಉದ್ಯೋಗಗಳಿಗೆ ಬೇಕಾದ ಸಂಪೂರ್ಣ ಮಾಹಿತಿ ಇಲ್ಲಿದೆ

ನೌಕರರ ರಾಜ್ಯ ವಿಮಾ ನಿಗಮ (ಇಎಸ್​​ಐಸಿ) ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಿತ್ತು. ಇದಕ್ಕೆ ಅರ್ಜಿ ಸಲ್ಲಿಕೆ ಮಾಡಲು ನಾಳೆಯೇ ಅಂದರೆ ಜನವರಿ 31 ಕೊನೆಯ ದಿನಾಂಕವಾಗಿದೆ. ಹೀಗಾಗಿ ಈ ವರೆಗೆ ಅಪ್ಲೇ ಮಾಡದ ಅಭ್ಯರ್ಥಿಗಳಿಗೆ ಇನ್ನು ಒಂದು ದಿನ ಅವಕಾಶ ಇದೆ.

ಇನ್ಶುರೆನ್ಸ್ ಮೆಡಿಕಲ್ ಆಫೀಸರ್ ಗ್ರೇಡ್- II (IMO Gr.-II) ಹುದ್ದೆಗಳನ್ನ ಸಂಸ್ಥೆ ಭರ್ತಿ ಮಾಡುತ್ತಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಬೇಕು ಎಂದರೆ ಯುಪಿಎಸ್​ಸಿ 2022-23ರಲ್ಲಿ ನಡೆಸಿದಂತ CMSE (Combined Medical Services Examination) ಪರೀಕ್ಷೆಯಲ್ಲಿ ಪಾಸ್ ಆಗಿರಬೇಕು. ಜೊತೆಗೆ ಬಿಡುಗಡೆ ಮಾಡಲಾದ ಪಟ್ಟಿಯಲ್ಲಿ ಹೆಸರು ಇರಬೇಕು.

ಈ ಉದ್ಯೋಗಗಳಿಗೆ ಆನ್​​ಲೈನ್ ಮೂಲಕ ಮಾತ್ರ ಆಕಾಂಕ್ಷಿಗಳು ಅಪ್ಲೇ ಮಾಡಬೇಕು. ಇದಕ್ಕಾಗಿ esic.gov.in ಈ ವೆಬ್​ಸೈಟ್​ಗೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಬಹುದು. ಇವೆಲ್ಲಾ ಕೇಂದ್ರ ಸರ್ಕಾರಿ ಕೆಲಸವಾಗಿದ್ದರಿಂದ ದೇಶದ ಒಳಗಡೆ ಎಲ್ಲಿ ಬೇಕಾದರೂ ಕೆಲಸ ಮಾಡಲು ಸಿದ್ಧರಾಗಿರಬೇಕು. ಈ ಉದ್ಯೋಗಗಳಿಗೆ ಬೇಕಾದ ಇನ್ನಷ್ಟು ಮಾಹಿತಿ ಇಲ್ಲಿ ನೀಡಲಾಗಿದೆ. ಕೊನೆ ದಿನಾಂಕ, ಆಯ್ಕೆ ಪ್ರಕ್ರಿಯೆ ಅರ್ಜಿ ಶುಲ್ಕ, ಪರೀಕ್ಷೆಯ ಮಾಹಿತಿ ಇಲ್ಲಿದೆ.

ಉದ್ಯೋಗದ ಹೆಸರು-

ವಿಮಾ ವೈದ್ಯಕೀಯ ಅಧಿಕಾರಿ ಗ್ರೇಡ್-II (IMO Gr.-II) (Insurance Medical Officer)

ವಯೋಮಿತಿ ಏನಿದೆ..?

35 ವರ್ಷಗಳ ಒಳಗಿನವರಿಗೆ ಅವಕಾಶ ಇದೆ
ಎಸ್​​​ಸಿ, ಎಸ್​ಟಿ, ಒಬಿಸಿ, ವಿಶೇಷ ಚೇತನ, ಮಾಜಿ ಸೈನಿಕರಿಗೆ ವಯಸ್ಸಿನ ಸಡಿಲಿಕೆ ಇದೆ

ಇದನ್ನೂ ಓದಿ: ಸ್ಪರ್ಧಾತ್ಮಕ ಪರೀಕ್ಷೆ; ಗೆಲುವು ನಮ್ಮದೇ.. ಸರ್ಕಾರಿ ಉದ್ಯೋಗ ಪಡೆಯಲು ನಾವು ಏನೇನು ಮಾಡಬೇಕು?

publive-image

ವಿದ್ಯಾರ್ಹತೆ ಏನು ಕೇಳಲಾಗಿದೆ?

MBBS ಪದವಿ ಜೊತೆಗೆ ಇಂಟರ್ನ್‌ಶಿಪ್ ಪೂರ್ಣಗೊಳಿಸಿರಬೇಕು
2022 ಮತ್ತು 2023 ರ CMSE ಪಟ್ಟಿಗೆ ಅಭ್ಯರ್ಥಿ ಅರ್ಹನಾಗಿರಬೇಕು

ಮಾಸಿಕ ವೇತನ ಶ್ರೇಣಿ-

56,100 ರೂಪಾಯಿ ಇಂದ 1,77,500 ರೂಪಾಯಿಗಳು
ಕೆಲಸ ಮಾಡುವ ಸ್ಥಳ- ದೇಶದ ಎಲ್ಲೆಡೆ

ಆಯ್ಕೆ ಪ್ರಕ್ರಿಯೆ ಹೇಗೆ?

ಯುಪಿಎಸ್​ಸಿ 2022-23ರಲ್ಲಿ ನಡೆಸಿದಂತ CMSE ಪರೀಕ್ಷೆಗೆ ಪಾಲ್ಗೊಂಡಿದ್ದ ಅಭ್ಯರ್ಥಿಗಳ ಜೊತೆ ಸಂವನ ನಡೆಸಲಾಗುತ್ತದೆ. ಇದರ ಬಳಿಕ ಪರೀಕ್ಷೆಯಲ್ಲಿ ಅವರು ಪಡೆದಂತ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ಪ್ರಕಟಿಸಲಾಗುತ್ತದೆ.

ಹುದ್ದೆಗಳ ವಿಂಗಡಣೆ

  • Unreserved category (ಕಾಯ್ದಿರಿಸದ ವರ್ಗ)- 254
  • ಪರಿಶಿಷ್ಟ ವರ್ಗ- 63
  • ಪರಿಶಿಷ್ಟ ಪಂಗಡ- 53
  • ಒಬಿಸಿ- 178
  • ಇಡಬ್ಲುಎಸ್- 60
  • ವಿಶೇಷ ಚೇತನರು (ಸಿ)- 28
  • ವಿಶೇಷ ಚೇತನರು (D & E)- 62

ಒಟ್ಟು ಉದ್ಯೋಗಗಳ ಸಂಖ್ಯೆ- 608

ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ- 31 ಜನವರಿ 2025

ಸಂಪೂರ್ಣ ಮಾಹಿತಿಗಾಗಿ- https://static-cdn.publive.online/newsfirstlive-kannada/media/pdf_files/blog/wp-content/uploads/2024/12/19110217ESIC-IMO-Recruitment-2024-Notification.pdf

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment