Advertisment

ESIC ಆಸ್ಪತ್ರೆಯಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಪರೀಕ್ಷೆ ಇಲ್ಲ.. ಸ್ಯಾಲರಿ ಮಾತ್ರ ಲಕ್ಷ ಲಕ್ಷ ರೂಪಾಯಿ

author-image
Bheemappa
Updated On
ESIC ಆಸ್ಪತ್ರೆಯಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಪರೀಕ್ಷೆ ಇಲ್ಲ.. ಸ್ಯಾಲರಿ ಮಾತ್ರ ಲಕ್ಷ ಲಕ್ಷ ರೂಪಾಯಿ
Advertisment
  • ಈ ಹುದ್ದೆಗಳಿಗೆ ಇವರು ಮಾತ್ರ ಅಪ್ಲೇ ಮಾಡಬೇಕಾಗುತ್ತದೆ
  • ಪರೀಕ್ಷೆ ಇರುವುದಿಲ್ಲ, ಕೇವಲ ಸಂದರ್ಶನದ ಮೂಲಕ ಆಯ್ಕೆ
  • ಈ ಅಭ್ಯರ್ಥಿಗಳು ಕೆಲಸಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು

ಎಂಪ್ಲಾಯಿಸ್ ಸ್ಟೇಟ್ ಇನ್ಶೂರೆನ್ಸ್ ಕಾರ್ಪೊರೇಷನ್ (ಇಎಸ್​​ಐಸಿ) ಅರ್ಹ ಹಾಗೂ ಆಸಕ್ತಿಯುಳ್ಳ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಿದೆ. ಈ ಹುದ್ದೆಗಳಲ್ಲಿ ಪೂರ್ಣ ಸಮಯ/ ಅರೆಕಾಲಿಕ ತಜ್ಞ ಹಾಗೂ ಸೀನಿಯರ್ ರೆಸಿಡೆಂಟ್ ಹುದ್ದೆಗಳನ್ನ ಭರ್ತಿ ಮಾಡಲಾಗುತ್ತಿದೆ. ಒಟ್ಟು 22 ಹುದ್ದೆಗಳು ಇದ್ದು ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದು.

Advertisment

ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳ ವಯಸ್ಸು 45 ರಿಂದ 69 ವರ್ಷಗಳ ಒಳಗೆ ಇರಬೇಕು. ಎಲ್ಲ ಅರ್ಹತೆಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಉದ್ಯೋಗ ನೀಡಲಾಗುತ್ತದೆ. ಅದರಂತೆ ಈ ಹುದ್ದೆಗೆ ತಿಂಗಳ ಸಂಬಳ 1,37,837 ರಿಂದ 1,60,437 ರೂಪಾಯಿಗಳವರೆಗೆ ಇರುತ್ತದೆ. ಇಲ್ಲಿ ಒಪ್ಪಂದದ ಮೂಲಕ ಅಭ್ಯರ್ಥಿಗಳನ್ನು ಕೆಲಸಕ್ಕೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಕನಿಷ್ಠ 1 ವರ್ಷದಿಂದ 3 ವರ್ಷದವರೆಗೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ಕ್ಷೇತ್ರಗಳಲ್ಲಿ ಈಗಾಗಲೇ ಕನಿಷ್ಠ 2 ವರ್ಷದಿಂದ ಗರಿಷ್ಠ 7 ವರ್ಷಗಳ ಅನುಭವವನ್ನು ಹೊಂದಿರಬೇಕು. ಇವುಗಳಿಗೆ ಯಾವುದೇ ಪರೀಕ್ಷೆ ಇರುವುದಿಲ್ಲ. ಆದರೆ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನ ಆಯ್ಕೆಯನ್ನ ಮಾಡಲಾಗುತ್ತದೆ. ಹೀಗಾಗಿ ಸಂದರ್ಶನದಲ್ಲಿ ಅರ್ಜಿ ಸಲ್ಲಿಕೆ ಮಾಡಿರುವವರು ತುಂಬಾ ಚಟುವಟಿಕೆಯಿಂದ ಇರಬೇಕು. ಸಂದರ್ಶನಕ್ಕೆ ಹಾಜರಾಗಬೇಕಾದ ಅಭ್ಯರ್ಥಿಗಳು ಎಲ್ಲ ಮೂಲ ದಾಖಲಾತಿಗಳ ಜೊತೆ ಜೆರಾಕ್ಸ್ ಪ್ರತಿಗಳನ್ನ ತರಬೇಕಾಗುತ್ತದೆ. ಜೆರಾಕ್ಸ್ ಪ್ರತಿಗಳ ಮೇಲೆ ಸೆಲ್ಫ್​ ಅಟೆಸ್ಟೆಡ್ ಮಾಡಿರಲೇಬೇಕು.

ಇದನ್ನೂ ಓದಿ: ಕರ್ನಾಟಕ ವಿಧಾನಸಭೆ ಸಚಿವಾಲಯದಿಂದ ನೇಮಕಾತಿ.. 4, 7ನೇ ತರಗತಿ, ಪದವೀಧರರು ಅರ್ಜಿ ಸಲ್ಲಿಕೆ ಮಾಡಬಹುದು

Advertisment

publive-image

ವಿದ್ಯಾರ್ಹತೆ ಏನು ಕೇಳಿದ್ದಾರೆ?
ಪೂರ್ಣ ಸಮಯ/ ಅರೆಕಾಲಿಕ ತಜ್ಞ ಹುದ್ದೆಗಳಿಗೆ- ಎಂಬಿಬಿಎಸ್ ಜೊತೆಗೆ ಪಿಜಿ ಪದವಿ
ಸೀನಿಯರ್ ರೆಸಿಡೆಂಟ್- ಎಂಬಿಬಿಎಸ್/ಬಿಡಿಎಸ್ ಜೊತೆಗೆ ಪಿಜಿ ಪದವಿ, ಪಿಜಿ ಡಿಪ್ಲೋಮಾ

ಸಂದರ್ಶನ ನಡೆಯುವ ಸ್ಥಳ
ಇಎಸ್​ಐಸಿ ಆಸ್ಪತ್ರೆ, ಸರೋಜಿನಿ ನಗರ, ಲಕ್ನೋ, ಉತ್ತರ ಪ್ರದೇಶ

ಸಂದರ್ಶನ ನಡೆಯುವ ಸಮಯ

ರಿಪೋರ್ಟಿಂಗ್ ಸಮಯ- ನವೆಂಬರ್​ 05 ರಂದು ಬೆಳಗ್ಗೆ 09 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ
ಸಂದರ್ಶನವನ್ನು ನವೆಂಬರ್​ 05 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ನಡೆಸಲಾಗುತ್ತದೆ.

ಸಂದರ್ಶನದಲ್ಲಿ ಆಯ್ಕೆ ಆದ ವಿದ್ಯಾರ್ಥಿಗಳನ್ನು ಉತ್ತರ ಪ್ರದೇಶದ ಲಕ್ನೋದಲ್ಲಿ ಇರುವ ಸರೋಜಿನಿ ನಗರದ ಇಎಸ್​ಐಸಿ ಹಾಸ್ಪಿಟಲ್​ಗೆ ನೇಮಕ ಮಾಡಲಾಗುತ್ತದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment