ESIC ಇಂದ ಶೀಘ್ರವೇ ಭಾರೀ ಸಂಖ್ಯೆಯಲ್ಲಿ ಹುದ್ದೆಗಳ ನೇಮಕ.. ಆಕಾಂಕ್ಷಿಗಳಲ್ಲಿ ಪೂರ್ವ ತಯಾರಿ ಇರಲಿ!

author-image
Bheemappa
Updated On
ಪಂಚಾಯತ್ ರಾಜ್ ಇಲಾಖೆಯಲ್ಲಿ ಮಹತ್ವದ ಹುದ್ದೆಗಳಿಗೆ ನೇರ ನೇಮಕಾತಿ; ಸಂಬಳ ಎಷ್ಟು ಗೊತ್ತಾ?
Advertisment
  • ಯಾವ್ಯಾವ ಉದ್ಯೋಗಗಳನ್ನು ಇಎಸ್​ಐಸಿ ನೇಮಕ ಮಾಡುತ್ತದೆ.?
  • ಮುಂದಿನ ಅಪ್​ಡೇಟ್​ಗಳು ಈ ವೆಬ್​ಸೈಟ್​ನಲ್ಲಿ ನೀಡಲಾಗುವುದು
  • ತಮ್ಮ ದಾಖಲೆಗಳ ಜೊತೆಗೆ ಆಕಾಂಕ್ಷಿಗಳು ಎಲ್ಲ ಸಿದ್ಧತೆ ಮಾಡಿಕೊಳ್ಳಿ!

ಉದ್ಯೋಗ ಹುಡುಕುತ್ತಿರುವವರಿಗೆ, ಕೆಲಸಕ್ಕಾಗಿ ಕಾಯುತ್ತಿರುವವರಿಗೆ ಇಲ್ಲೊಂದು ಗುಡ್​ನ್ಯೂಸ್ ಇದ್ದು ಸದ್ಯದಲ್ಲಿ ಸಾವಿರಗಟ್ಟಲೇ ಉದ್ಯೋಗಗಳನ್ನು ಭರ್ತಿ ಮಾಡಲಾಗುತ್ತದೆ. ಈ ಸಂಬಂಧ ಭಾರೀ ಪ್ರಮಾಣದಲ್ಲಿ ಅರ್ಜಿಗಳನ್ನು ಆಹ್ವಾನ ಮಾಡುವ ಸಾಧ್ಯತೆ ಇದೆ. ಅಭ್ಯರ್ಥಿಗಳು ತಪ್ಪದೇ ಈ ಕೆಲಸಗಳಿಗೆ ಅಪ್ಲೇ ಮಾಡಬೇಕು. ಈ ಉದ್ಯೋಗಗಳು ಯಾವುದು ಎನ್ನುವ ಮಾಹಿತಿ ಇಲ್ಲಿದೆ.

ಎಂಪ್ಲಾಯೀಸ್ ಸ್ಟೇಟ್ ಇನ್ಶೂರೆನ್ಸ್​ ಕಾರ್ಪೊರೇಶನ್ (ಇಎಸ್​ಐಸಿ) ದೊಡ್ಡ ಪ್ರಮಾಣದಲ್ಲಿ ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡುತ್ತದೆ ಎಂದು ಹೇಳಲಾಗುತ್ತಿದೆ. ಡಿಸೆಂಬರ್ ಅಥವಾ 2025ರ ಜನವರಿಯಲ್ಲಿ ಇಎಸ್​ಐಸಿ ಸಂಸ್ಥೆ ನೋಟಿಫಿಕೇಶನ್ ಹೊರಡಿಸುವ ಸಾಧ್ಯತೆ ಇದೆ. ಈ ಉದ್ಯೋಗಗಳು ಭಾರತದ್ಯಾಂತ ಇರುತ್ತವೆ. ಕೆಲಸಕ್ಕೆ ನೇಮಕ ಆಗುವ ಅಭ್ಯರ್ಥಿಗಳನ್ನು ದೇಶದ ವಿವಿಧೆಡೆ ನೇಮಕ ಮಾಡಲಾಗುತ್ತದೆ. ಹೀಗಾಗಿ ಅಭ್ಯರ್ಥಿಗಳು ತಮ್ಮ ದಾಖಲೆಗಳು ಸೇರಿದಂತೆ ಪೂರ್ವ ತಯಾರಿ ಮಾಡಿಕೊಂಡರೇ ಉತ್ತಮ ಎನಿಸುತ್ತದೆ.

ಇದನ್ನೂ ಓದಿ:SAAD ಮುಖ್ಯ ಪರೀಕ್ಷೆಗೆ ಅಧಿಸೂಚನೆ ರಿಲೀಸ್.. ಈ ಉದ್ಯೋಗಗಳಿಗೆ ಯಾರು ಅಪ್ಲೇ ಮಾಡಬಹುದು?

publive-image

ನೌಕರರ ರಾಜ್ಯ ವಿಮಾ ನಿಗಮ ಸಂಸ್ಥೆ ನೇಮಕ ಮಾಡುತ್ತಿರುವ ಉದ್ಯೋಗಗಳ ಹೆಸರು, ಹುದ್ದೆಯ ಸಂಖ್ಯೆ, ಹಾಗೂ ಇನ್ನಿತರ ಮಾಹಿತಿಗಳನ್ನು ಮುಂದೆ ನೀಡಲಾಗುತ್ತೆ. ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ, ಅಪ್ಲೇ ಮಾಡುವುದು ಹೇಗೆ? ವೇತನ ಶ್ರೇಣಿ ಸೇರಿದಂತೆ ಇನ್ನಿತರ ಮಾಹಿತಿ ನೋಟಿಫಿಕೇಶನ್ ಬಳಿಕ ವಿವರವಾಗಿ ನೀಡಲಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಮಾಡುವುದರಿಂದ ಇದು ಅಭ್ಯರ್ಥಿಗಳಿಗೆ ಸಂತೋಷದ ವಿಷಯ ಎನ್ನಬಹುದು.

ಉದ್ಯೋಗಗಳ ಹೆಸರು:
ಒಟ್ಟು 17 ಸಾವಿರಕ್ಕೂ ಅಧಿಕ ಉದ್ಯೋಗಗಳನ್ನು ಇಎಸ್​ಐಸಿ ನೇಮಕ ಮಾಡವ ಸಾಧ್ಯತೆ ಇದೆ. ಇದರಲ್ಲಿ ಲೋವರ್ ಡಿವಿಷನ್ ಕ್ಲರ್ಕ್, ಅಪ್ಪರ್ ಡಿವಿಷನ್ ಕ್ಲರ್ಕ್/ಅಪ್ಪರ್ ಡಿವಿಷನ್ ಕ್ಲರ್ಕ್ ಕ್ಯಾಷಿಯರ್, ಹೆಡ್ ಕ್ಲರ್ಕ್/ ಸಹಾಯಕ ಮತ್ತು ಸಾಮಾಜಿಕ ಭದ್ರತಾ ಅಧಿಕಾರಿ/ ಮ್ಯಾನೇಜರ್ ಗ್ರೇಡ್- II/ ಸೂಪರಿಂಟೆಂಡೆಂಟ್ ಇತ್ಯಾದಿ ಹುದ್ದೆಗಳು ಇವೆ. ಕನಿಷ್ಠ 18 ರಿಂದ ಗರಿಷ್ಠ 45 ವರ್ಷದ ಒಳಗಿನ ಅಭ್ಯರ್ಥಿಗಳಿಗೆ ಅವಕಾಶ ಇರುತ್ತದೆ. ಆಯ್ಕೆಯನ್ನು ಲಿಖಿತ ಪರೀಕ್ಷೆ ಸೇರಿ ಮೂರು ಮಾದರಿಯಲ್ಲಿ ಮಾಡಲಾಗುತ್ತದೆ. ಹೀಗಾಗಿ ಉದ್ಯೋಗ ಆಕಾಂಕ್ಷಿಗಳು ಸಕಲ ಸಿದ್ಧತೆಯನ್ನು ಈಗಿನಿಂದಲೇ ಮಾಡಿಕೊಳ್ಳಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment