SSLC ಸ್ಟೂಡೆಂಟ್ಸ್​ ಸ್ಟಡಿ ಪ್ಲಾನ್ ಹೇಗೆ ಮಾಡಬೇಕು..? ಹೆಚ್ಚಿನ ಮಾರ್ಕ್ಸ್ ಪಡೆಯಲು ಈ ಟಿಪ್ಸ್ ನಿಮಗಾಗಿ!

author-image
Bheemappa
Updated On
SSLC ಸ್ಟೂಡೆಂಟ್ಸ್​ ಸ್ಟಡಿ ಪ್ಲಾನ್ ಹೇಗೆ ಮಾಡಬೇಕು..? ಹೆಚ್ಚಿನ ಮಾರ್ಕ್ಸ್ ಪಡೆಯಲು ಈ ಟಿಪ್ಸ್ ನಿಮಗಾಗಿ!
Advertisment
  • ಪರೀಕ್ಷೆ ಹತ್ತಿರ ಬರುತ್ತಿದೆ.. ವಿದ್ಯಾರ್ಥಿಗಳು ಹೀಗೆಮಾಡಬೇಕು
  • ಹೆಚ್ಚಿನ ಅಂಕ ತಂದುಕೊಡುವ ವಿಷಯಗಳು ಯಾವವು ಗೊತ್ತಾ?
  • ಕಷ್ಟ ಎನಿಸುವ ಪ್ರಶ್ನೆಗಳ ಪರಿಹಾರಕ್ಕೆ ನೀವು ಏನು ಮಾಡಬೇಕು?

1ನೇ ತರಗತಿಯಿಂದ 9ನೇ ತರಗತಿವರೆಗೆ ವಿದ್ಯಾರ್ಥಿ ಏನನ್ನು ಓದಿದ್ದಾನೆ ಎನ್ನುವುದನ್ನ ನಿರ್ಧರಿಸುವುದೇ 10ನೇ ತರಗತಿ ಬೋರ್ಡ್ ಪರೀಕ್ಷೆ ಆಗಿದೆ. ಈ ಪರೀಕ್ಷೆಯಲ್ಲಿ ವಿದ್ಯಾರ್ಥಿಯ ಓದಿನ ಹವ್ಯಾಸ, ಸಾಮರ್ಥ್ಯ ಗೊತ್ತಾಗಲಿದೆ. ಇದರಿಂದಲೇ ಎಲ್ಲ ವಿದ್ಯಾರ್ಥಿಗಳು ಎಸ್​ಎಸ್​ಎಲ್​ಸಿಗೆ ಬಂದ ಮೇಲೆ ಹೆಚ್ಚಿನಮಟ್ಟದ ಓದು ಬಹಳ ಮುಖ್ಯವಾಗಿರುತ್ತದೆ. ಇದೆಲ್ಲದರ ನಡುವೆ ಇನ್ನೇನು ಪರೀಕ್ಷೆ ದಿನಗಳು ಬರಲು ಕೆಲವೇ ತಿಂಗಳುಗಳು ಬಾಕಿ ಉಳಿದಿವೆ. 10ನೇ ತರಗತಿ ಸ್ಟೂಡೆಂಂಟ್ಸ್​ ಯಾವ ರೀತಿ ಸ್ಟಡಿ ಮಾಡಬೇಕು ಎನ್ನುವ ಕೆಲ ಟಿಪ್ಸ್​ ಇಲ್ಲಿವೆ.

ಎಸ್​ಎಸ್​ಎಲ್​ಸಿ ಮಕ್ಕಳು ಮೊದಲು ಮಾಡಬೇಕಾದ ಕೆಲಸ ಎಂದರೆ ಈ ಹಿಂದಿನ ಪರೀಕ್ಷಾ ಪ್ರಶ್ನೆ ಪತ್ರಿಕೆಗಳನ್ನ ತೆಗೆದುಕೊಂಡು ಅವುಗಳನ್ನ ಚೆನ್ನಾಗಿ ಅಭ್ಯಾಸ ಮಾಡಬೇಕು. ಏಕೆಂದರೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಅಂಕ ಪಡೆಯಲು ಹಳೆಯ ಪ್ರಶ್ನೆ ಪತ್ರಿಕೆಗಳು ಸಹಕಾರಿ ಆಗಲಿವೆ. ಅಲ್ಲದೇ ಪರೀಕ್ಷೆ ಪತ್ರಿಕೆ ಹೀಗೆ ಬರಲಿದೆ ಎನ್ನುವ ಐಡಿಯಾ ಮಕ್ಕಳಲ್ಲಿ ಬರುತ್ತದೆ. ಪರೀಕ್ಷೆಯಲ್ಲಿ ಉತ್ತರಿಸಲು ಅನುಕೂಲ ಆಗುತ್ತದೆ. ಇದರ ಜೊತೆಗೆ ಪ್ರಶ್ನೆಗಳನ್ನ ಬಿಡಿಸಲು ಕೆಲ ಸ್ಕಿಲ್​ಗಳನ್ನ ವಿದ್ಯಾರ್ಥಿಗಳು ಕಲಿಯುತ್ತಾರೆ.

ಇದನ್ನೂ ಓದಿ:1,000ಕ್ಕೂ ಹೆಚ್ಚು ಉದ್ಯೋಗಗಳ ನೇಮಕಾತಿ.. ಕರ್ನಾಟಕದ ಬ್ರ್ಯಾಂಚ್​ಗಳಲ್ಲೂ 300 ಹುದ್ದೆಗಳು

publive-image

ಈ ಹಂತದಲ್ಲಿ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕು

ನಿಮ್ಮ 10ನೇ ತರಗತಿ ಬುಕ್​​ನಲ್ಲಿನ ಯಾವುದೇ ಪ್ರಶ್ನೆ, ಅಧ್ಯಾಯ ಡಿಫಕಲ್ಟ್ ಎನಿಸುತ್ತದೆ ಅದರ ಬಗ್ಗೆ ನಿಮ್ಮ ಟೀಚರ್ಸ್ ಹಾಗೂ ಸ್ನೇಹಿತರ ಬಳಿ ಚರ್ಚಿಸಿ. ಫೋಷಕರು ವಿದ್ಯಾವಂತರಾಗಿದ್ದಾರೆ ಅವರ ಬಳಿಯು ಕೇಳಿ ತಿಳಿದುಕೊಳ್ಳಬಹುದು. ಇದೇ ಹಂತದಲ್ಲೇ ನಿಮ್ಮ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕು. ಪರೀಕ್ಷೆ ಹತ್ತಿರವಾದಂತೆ ಧೈರ್ಯ ಕಳೆದುಕೊಳ್ಳಬಾರದು.

600 ಪ್ರಶ್ನೆಗಳನ್ನ ನಿಮ್ಮ ಸ್ವಂತ ಆಯ್ಕೆ ಆಗಿರಲಿ

ವಿದ್ಯಾರ್ಥಿಗಳು ಪುಸ್ತಕದಲ್ಲಿನ ಪ್ರಶ್ನೆಗಳನ್ನ ನಿರಂತರವಾಗಿ ಬಿಡಿಸಬೇಕು. ಬಾರದೇ ಇರುವುದನ್ನ ಪಟ್ಟಿ ಮಾಡಿಕೊಂಡು ಶಿಕ್ಷಕರ ಬಳಿ ಕೇಳಿ ಕ್ಲಾರಿಟಿ ಪಡೆಯಬೇಕು. ಮಾದರಿ ಪ್ರಶ್ನೆ ಪತ್ರಿಕೆಗಳು, ಅರ್ಧವಾರ್ಷಿಕ ಪ್ರಶ್ನೆ ಪತ್ರಿಕೆಗಳನ್ನ ಅಭ್ಯಾಸ ಮಾಡುತ್ತಲೇ ಇರಿ. ನಿಮಗೆ ಅನಿಸಿದ ಹೆಚ್ಚುವರಿ ಪ್ರಶ್ನೆಗಳಿಗೆ ಉತ್ತರ ಬರೆದು ಅಭ್ಯಾಸ ಮಾಡಬೇಕು. 6 ವಿಷಯಗಳಿಂದ ಕನಿಷ್ಠ ಎಂದರೂ 600 ಪ್ರಶ್ನೆಗಳನ್ನ ನಿಮ್ಮ ಸ್ವಂತ ಆಯ್ಕೆ ಆಗಿರಬೇಕು.

ವಿಜ್ಞಾನ ವಿಷಯದಲ್ಲಿ ಬರುವಂತ ಪ್ರಶ್ನೆಗಳಿಗೆ ಹೆಚ್ಚಿನ ಹೊತ್ತು ಕೊಡಿ. ಶಿಕ್ಷಕರು ಶಾಲೆಯಲ್ಲಿ ಹೇಳುವ ವಿಜ್ಞಾನ ವಿಷಯದ ಚಿತ್ರಗಳನ್ನ ಬಿಡಿಸಿ.. ಬಿಡಿಸಿ ಅಭ್ಯಾಸ ಮಾಡಿ. ಚಿತ್ರದಲ್ಲಿ ಬರುವ ಭಾಗಗಳನ್ನ ನೆನಪಿಟ್ಟು ಎಕ್ಸಾಂನಲ್ಲಿ ಬರೆಯಲೇಬೇಕು. ರಸಾಯನಶಾಸ್ತ್ರ, ಭೌತಶಾಸ್ತ್ರದಲ್ಲಿ ಬರುವ ತುಸು ಹೆಚ್ಚಿಗೆ ಪ್ರಶ್ನೆಗಳನ್ನ ಉತ್ತರಿಸಿ. ಇವು ಹೆಚ್ಚಾಗಿ ನೆನಪಲ್ಲಿ ಉಳಿಯುವುದು ಕಷ್ಟವಾಗಿದ್ದರಿಂದ ನೀವು ಮತ್ತೆ ಮತ್ತೆ ಓದಿಕೊಳ್ಳಬೇಕು.

ಮುಂದಿನ ತರಗತಿಗೆ ಹೋಗಬೇಕೆ ಎಂದರೆ ಗಣಿತ, ವಿಜ್ಞಾನ ಮುಖ್ಯ

ಗಣಿತದಲ್ಲಿನ ಅಂಕಗಣಿತ, ಬೀಜಗಣಿತ, ರೇಖಾಗಣಿತ, ತ್ರಿಕೋನಮಿತಿ, ಮತ್ತು ಅಂಕಿಅಂಶಗಳ ಬರೆದು.. ಬರೆದು ರೂಢಿಸಿಕೊಳ್ಳಬೇಕು. ಏಕೆಂದರೆ ಗಣಿತವನ್ನ ಓದಿ ಕಂಠಪಾಠ ಮಾಡಿಕೊಳ್ಳಲು ಆಗಲ್ಲ. ಹೀಗಾಗಿ ಯಾವಾಗಲೂ ಒಂದು ನೋಟ್​ ಜೊತೆ ಪೆನ್ನು, ಪೆನ್ಸಿಲ್​ ಅನ್ನು ಜೊತೆಗಿಟ್ಟುಕೊಂಡು ಅಭ್ಯಾಸ ನಿರಂತರ ಮಾಡಿ. ಗಣಿತ ಹಾಗೂ ವಿಜ್ಞಾನ ವಿಷಯಗಳಲ್ಲಿ ಎಷ್ಟರ ಮಟ್ಟಿಗೆ ಅಂಕಗಳನ್ನ ಪಡೆಯುತ್ತೀರಿ ಎನ್ನುವುದು ನೀವು ಮುಂದಿನ ತರಗತಿಗೆ (ಪಿಯುಸಿ, ಡಿಪ್ಲೋಮಾ, ಐಟಿಐ.. ಇತ್ಯಾದಿ) ಹೋಗಲು ಸಹಕಾರಿ ಆಗುತ್ತದೆ.

ಕೆಲ ಮಕ್ಕಳಿಗೆ ಹಿಂದಿ ಭಾಷೆ ಕಷ್ಟ ಎನಿಸಬಹುದು. ಹೀಗಾಗಿ ಹೆಚ್ಚಿನ ಹೊತ್ತು ಪದ್ಯಗಳನ್ನ ಕಂಠಪಾಠ ಮಾಡಿ. ನಿಮ್ಮ ಶಿಕ್ಷಕರು ಹೇಳಿದ ಹಲವು ಪ್ರಶ್ನೆಗಳನ್ನು ಬರೆದುಕೊಂಡು ಪುನರಾವರ್ತನೆ ಮಾಡಬೇಕು. ಇದು ಅಲ್ಲದೇ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನ ನಿರಂತರವಾಗಿ ಗಮನಿಸುವುದರಿಂದ 10ನೇ ತರಗತಿಯ ಹಿಂದಿ ಭಾಷೆಯಲ್ಲಿ ಅಧಿಕ ಅಂಕ ಗಳಿಸಬಹುದು.

ಇದನ್ನೂ ಓದಿ: ಸ್ಪೋರ್ಟ್ಸ್​ ಕೋಟಾದಡಿ ಉದ್ಯೋಗಗಳಿಗೆ ಅರ್ಜಿ ಆಹ್ವಾನ.. ಹುಬ್ಬಳ್ಳಿ, ಮೈಸೂರು, ಬೆಂಗಳೂರಲ್ಲಿ ಕೆಲಸ

publive-image

ನಿದ್ದೆ ಬರುವ ಸಮಯದಲ್ಲಿ ಈ ವಿಷಯಗಳನ್ನ ಓದಿ

ಸಮಾಜ ವಿಜ್ಞಾನದಲ್ಲಿ ಭಾರತದ, ಕರ್ನಾಟಕದ ಮ್ಯಾಪ್ ಗಮನದಲ್ಲಿರಲಿ. ಇದರ ಜೊತೆಗೆ ದಿನಾಂಕಗಳ, ಇಸ್ವಿಗಳನ್ನ ನೆನಪಿಡಿ. ಉಳಿದಂತೆ ರಾಜರುಗಳ ಆಡಳಿತ, ಘಟನೆ, ಅವರು ಜಾರಿಗೆ ತಂದ ಯೋಜನೆ, ಮಾಡಿದ ಕೆಲಸ, ಯುದ್ಧ ಇತ್ಯಾದಿಗಳನ್ನ ಕಥೆ ರೂಪದಲ್ಲಿ ತಲೆಯಲ್ಲಿರಲಿ. ಭೂಗೋಳ ಶಾಸ್ತ್ರದ ಕೆಲ ಪ್ರಶ್ನೆಗಳನ್ನ ಅಭ್ಯಾಸಿಸಿ. ಕನ್ನಡ, ಇಂಗ್ಲಿಷ್​ ವಿಷಯಗಳನ್ನ ನಿದ್ದೆ ಬರುವ ಸಮಯದಲ್ಲಿ ಓದಿದರೆ ನಿದ್ದೆ ದೂರ ಹೋಗುತ್ತದೆ. ಈ 3 ವಿಷಯಗಳಲ್ಲಿ ಹೆಚ್ಚಿನ ಅಂಕ ಗಳಿಸಬಹುದು. ಹೀಗಾಗಿ ಕನ್ನಡ, ಇಂಗ್ಲಿಷ್ ವಿಷಯದಲ್ಲಿನ ಪದ್ಯ, ಹಳೆಯ ಪ್ರಶ್ನೆ ಪತ್ರಿಕೆಗಳನ್ನ ಅಭ್ಯಾಸ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಹೆಚ್ಚು ಅನುಕೂಲವಾಗಲಿದೆ.

ವಿದ್ಯಾರ್ಥಿಗಳು ಪರೀಕ್ಷೆ ಎಂದು ಹಿಂಜರಿಯಬಾರದು. ದೈಹಿಕವಾಗಿ, ಮಾನಸಿಕವಾಗಿ ವಿದ್ಯಾರ್ಥಿ ಸಿದ್ಧವಾಗಿರಬೇಕು. ಒಳ್ಳೆಯ ನಿದ್ದೆ ಮಾಡಬೇಕು. ಪೌಷ್ಟಿಕ ಆಹಾರ ಸೇವನೆ ಮಾಡಬೇಕು. ದೈಹಿಕವಾಗಿ ಸದೃಢವಾಗಿ, ಸ್ಟಡಿ ಪ್ಲಾನ್ ತಲೆಯಲ್ಲಿರಬೇಕು. ನಿರಂತರ ಸ್ಟಡಿಯಲ್ಲಿರುವಾಗ ಕೊಂಚ ಬ್ರೇಕ್ ಕೊಟ್ಟು ಏನಾದರೂ ತಿಂಡಿ ತಿಂದು ಮತ್ತೆ ಅಭ್ಯಾಸ ಮುಂದುವರೆಸಬೇಕು. ನಿರಂತರ ಓದಿನಿಂದ ನಿದ್ದೆ ಬರುವುದು ಸಾಮಾನ್ಯ, ಅವಾಗ ಕಾಫಿ, ಟೀ ಆಗಾಗ ಸೇವಿಸಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment