newsfirstkannada.com

ಪ್ರೀತಿ, ಸಂಸಾರ, ಕೊಲೆ: 3 ಬಾರಿ DNA ಪರೀಕ್ಷೆ.. 3.5 ವರ್ಷಗಳ ಕಾಲ ಜೈಲಿನಲ್ಲಿದ್ದ ಅಸ್ತಿಪಂಜರಕ್ಕೆ ಮುಕ್ತಿ ಸಿಕ್ಕ ಭಯಾನಕ ಸ್ಟೋರಿ..!

Share :

Published February 9, 2024 at 12:29pm

Update February 9, 2024 at 1:15pm

  ಮಗಳದ್ದೇ ಅಸ್ತಿಪಂಜರ ಎಂದರೂ ಪೊಲೀಸರು ಕೊಡಲಿಲ್ಲ

  ಮೂರೂವರೆ ವರ್ಷಗಳ ಕಾಲ ಅಸ್ಥಿಪಂಜರಕ್ಕಾಗಿ ಹೋರಾಟ

  ಕೋರ್ಟ್​ ಮಧ್ಯಪ್ರವೇಶದ ಬಳಿಕ ಅಸ್ಥಿಪಂಜರಕ್ಕೆ ಸಿಕ್ತು ಮುಕ್ತಿ

ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಮೂರೂವರೆ ವರ್ಷಗಳ ಕಾಲ ಅಸ್ತಿಪಂಜರವೊಂದು ಸೆರೆವಾಸದಲ್ಲಿತ್ತು. ಅದು ತಮ್ಮ ಮಗಳದ್ದೇ ಎಂದು ಪೋಷಕರಿಗೆ ಗೊತ್ತಿದ್ದರೂ, ಅಲ್ಲಿಂದ ಬಿಡಿಸಿಕೊಂಡು ಬರಲು ಸಾಧ್ಯವಾಗಲಿಲ್ಲ. ಪೊಲೀಸ್ ಠಾಣೆ, ಶವಗಾರ, ಕೋರ್ಟ್​ ಮೆಟ್ಟಿಲುಗಳ ಅಲೆದಾಟ ಸಂತ್ರಸ್ತ ಕುಟುಂಬಕ್ಕೆ ದೀರ್ಘವಾಗುತ್ತ ಹೋಯ್ತು. ‘ಮಗಳ ಅಸ್ತಿಪಂಜರ ಕೊಟ್ಟು ಬಿಡಿ, ಅಂತ್ಯಸಂಸ್ಕಾರ ಮಾಡುತ್ತೇವೆ. ಆ ಮೂಲಕ ಆಕೆಗೆ ಮುಕ್ತಿ ಸಿಗಲಿದೆ’ ಎಂದು ಕಣ್ಣೀರು ಇಟ್ಟರೂ ಪೊಲೀಸರ ಹೃದಯ ಕರಗಲಿಲ್ಲ. ಅದಕ್ಕೆ ಕಾರಣ ವೈಜ್ಞಾನಿಕ ಪ್ರಯೋಗಾಲಯದಲ್ಲಿ ಬಂದ ಎರಡು ವರದಿಗಳು, ಜೊತೆಗೆ ಪೊಲೀಸರ ನಿರ್ಲಕ್ಷ್ಯತನದ ಪರಮಾವಧಿ. ಅಸ್ತಿ ಪಂಜರ ಸಿಕ್ಕಿ ಎರಡೂ ವರ್ಷ ಕಳೆದರೂ DNA ಪರೀಕ್ಷೆ ಮಾಡಿಸಲು ಹಿಂದೇಟು ಹಾಕಿದ ಪರಿಣಾಮ ನಿಗೂಢ ಅಸ್ತಿಪಂಜರದ ರಹಸ್ಯ ಮತ್ತಷ್ಟು ಜಟಿಲವಾಗುತ್ತ ಹೋಯಿತು.

40 ತಿಂಗಳ ಸೆರೆಯಲ್ಲಿದ್ದ ಅಸ್ತಿಪಂಜರ..!
ಸರ್ಕಾರಿ ಆಸ್ಪತ್ರೆಯ ಶವಾಗಾರ ಒಂದರಲ್ಲಿ ಇರಿಸಲಾಗಿದ್ದ ರೆಫ್ರಿಜರೇಟರ್​​ ಒಳಗಿನ ಅಸ್ಥಿಪಂಜರದ ಸಂಪೂರ್ಣ ಕಥೆ ಇದಾಗಿದೆ. ಆ ರೆಫ್ರಿಜರೇಟರ್‌ನಲ್ಲಿ ಇಟ್ಟಿದ್ದ ಮೃತದೇಹ ಅಥವಾ ಅಸ್ಥಿಪಂಜರವು 40 ತಿಂಗಳುಗಳ ಕಾಲ ಅದರ ಭವಿಷ್ಯಕ್ಕಾಗಿ ಕಾಯುತ್ತಿತ್ತು. ಸಿಕ್ಕ ಕುರುಹುವಿನ ಆಧಾರದ ಮೇಲೆ ಕುಟುಂಬಸ್ಥರು ಪೊಲೀಸ್ ಠಾಣೆ, ನ್ಯಾಯಾಲಯಕ್ಕೆ ಅಲೆದಾಟ ನಡೆಸಿದ್ದರೂ ಪ್ರಕರಣಕ್ಕೆ ಮುಕ್ತಿ ಸಿಗಲಿಲ್ಲ. ಮೇಲಾಗಿ ಈ 40 ತಿಂಗಳ ಅವಧಿಯಲ್ಲಿ ಎರಡು ಬಾರಿ ಡಿಎನ್‌ಎ ಪರೀಕ್ಷೆ ಕೂಡ ನಡೆಸಲಾಗಿತ್ತು. ಎರಡೆರಡು ಬಾರಿ ಬಂದ ವರದಿ ಸತ್ತ ವ್ಯಕ್ತಿಯ ಗುರುತು ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ. ಪರಿಣಾಮ ಅಸ್ಥಿಪಂಜರದ ಜೈಲುವಾಸದ ಅವಧಿ ಹೆಚ್ಚುತ್ತಲೇ ಇತ್ತು.

ಅಂದ್ಹಾಗೆ ಈ ಕಥೆಯು ಮೂರು ವರ್ಷ.. ನಾಲ್ಕು ತಿಂಗಳ.. ಹಿಂದಿನಿಂದ ಆರಂಭವಾಗುತ್ತದೆ. ಉತ್ತರ ಪ್ರದೇಶದ ಇಟವಾ ಜಿಲ್ಲೆಯಲ್ಲಿ ಒಂದು ಹಳ್ಳಿ. ಚಕ್ ಸೇಲಂಪುರ ನಿವಾಸಿ ರೀಟಾ ಎಂಬ 19 ವರ್ಷದ ಹೆಣ್ಮಗಳು 19 ಸೆಪ್ಟೆಂಬರ್, 2020 ರಂದು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ಯಾರನ್ನೋ ಭೇಟಿ ಮಾಡುವುದಾಗಿ ಹೇಳಿ ಹೊರಟಿದ್ದ ರೀಟಾ, ಯಾರಿಗೂ ಸುಳಿವು ಸಿಗದ ರೀತಿಯಲ್ಲಿ ದಾರಿ ತಪ್ಪಿದ್ದಳು. ಮಗಳಿಗಾಗಿ ಹಗಲು ರಾತ್ರಿ ಹುಡುಕಾಡಿದ್ದ ಪೋಷಕರು, ಕೊನೆಗೆ ಪೊಲೀಸರಿಗೆ ದೂರು ನೀಡಿ ಅವರಿಂದಲೂ ಶೋಧಕಾರ್ಯ ನಡೆಸಿದ್ದರು. ಆದರೆ, ಆಕೆಯ ಸುಳಿವು ಮಾತ್ರ ಎಲ್ಲಿಯೂ ಸಿಕ್ಕಿರಲಿಲ್ಲ.

ರಾಗಿ ಗದ್ದೆಯಲ್ಲಿ ಅಸ್ಥಿಪಂಜರ..!
ಹಲವು ದಿನಗಳ ಹುಡುಕಾಟದ ಬಳಿಕ ಗ್ರಾಮದ ಹೊರಗಿನ ರಾಗಿ ಗದ್ದೆ ಒಂದರಲ್ಲಿ ಅಸ್ತಿಪಂಜರ ಒಂದು ಪತ್ತೆ ಆಗುತ್ತದೆ. ಆದರೆ ಅದು ರೀಟಾಳದ್ದು ಅನ್ನೋದಕ್ಕೆ ಪೊಲೀಸರಿಗೆ ಗ್ಯಾರಂಟಿ ಸಿಗಲಿಲ್ಲ. ಅಸ್ತಿಪಂಜರ ನೋಡಿದರೆ ಯಾವುದೋ ಕೆಮಿಕಲ್ ಹಾಕಿ ಸುಟ್ಟಂತೆ ಕಾಣ್ತಿತ್ತು. ಖಚಿತವಾಗಿ ಅದು ರೀಟಾಳದ್ದೇ ಎಂದು ಹೇಳಲು ಸಾಧ್ಯವಾಗದಿದ್ದರೂ, ಅಸ್ತಿ ಪಂಜರ ಪತ್ತೆಯಾದ ಜಾಗದಲ್ಲಿ ಮಹಿಳೆಯರು ಧರಿಸುವಂತಹ ಚಪ್ಪಲಿಗಳು, ಬಟ್ಟೆಗಳು ಬಿದ್ದಿದ್ದವು. ಅದು ರೀಟಾಳದ್ದೇ ಅಂತಾ ಸುಳಿವು ನೀಡುತ್ತಿದ್ದವು.

ಇನ್ನು ಪೊಲೀಸರಿಗೆ ಅಸ್ತಿ ಪಂಜರ ಪತ್ತೆಯಾಗಿದ್ದರೂ, ರೀಟಾಳ ಪೋಷಕರಿಗೆ ಮಾಹಿತಿ ನೀಡಿರಲಿಲ್ಲ. ಒಂದು ವಾರದ ಬಳಿಕ ಪೋಷಕರಿಗೆ ಹೇಗೋ ವಿಚಾರ ತಿಳಿದು ಗದ್ದೆಗೆ ಓಡಿ ಬಂದು ನೋಡಿದ್ದಾರೆ. ಅಸ್ತಿ ಪಂಜರ ಸಿಕ್ಕಿದ್ದ ಜಾಗ ವೀಕ್ಷಣೆ ಮಾಡಿದ್ದಾರೆ. ಅಲ್ಲಿ ಬಿದ್ದಿದ್ದ ಚಪ್ಪಲಿ, ಬಟ್ಟೆಯನ್ನು ನೋಡಿ ಅದು ಮಗಳು ರೀಟಾಳದ್ದೇ ಎಂದು ಕನ್ಫರ್ಮ್ ಮಾಡಿಕೊಳ್ತಾರೆ. ಈ ವಿಚಾರವನ್ನು ಪೊಲೀಸರ ಮುಂದೆಯೂ ಹೇಳುತ್ತಾರೆ. ಅಷ್ಟಲ್ಲದೇ, ಮಗಳನ್ನು ಯಾರು ಕೊಲೆ ಮಾಡಿದ್ದಾರೆ ಎಂದು ಆರೋಪಿಗಳ ಹೆಸರನ್ನು ಇದೇ ವೇಳೆ ಬಹಿರಂಗ ಮಾಡಿದ್ದಾರೆ.

ಆದರೆ..

ರೀಟಾಳ ಪೋಷಕರು, ಅದು ಮಗಳ ಅಸ್ತಿಪಂಜರವೇ ಎಂದು ಕಣ್ಣೀರು ಇಟ್ಟರೂ ಪೊಲೀಸರು ನಂಬಲಿಲ್ಲ. ಯಾವುದೇ ವೈಜ್ಞಾನಿಕ ಪರೀಕ್ಷೆ ಮಾಡದೇ ಹೇಗೆ ನಂಬೋದು ಅಂತಾ ತನಿಖಾಧಿಕಾರಿಗಳು ತಲೆಕೆಡಿಸಿಕೊಳ್ಳಲಿಲ್ಲ. ಅಲ್ಲಿ ಪತ್ತೆ ಆಗಿರುವ ಬಟ್ಟೆ, ಚಪ್ಪಲಿ ಹಾಗೂ ಕೆಲವು ವಸ್ತುಗಳು ರೀಟಾಳದ್ದೇ ಆಗಿದ್ದರೂ, ಮೃತದೇಹ ಗ್ರಾಮದ ಹೊರಗೆ ಪತ್ತೆಯಾಗಿತ್ತು. ಹಾಗಾಗಿ ಪೊಲೀಸರಿಗೂ ಅನುಮಾನಗಳು ಶುರುವಾಗಿದ್ದವು. ಅದೇ ಕಾರಣಕ್ಕೆ ಸಿಕ್ಕಿದ್ದ ಅಸ್ತಿಪಂಜರವನ್ನು ನೇರವಾಗಿ ಅಲ್ಲಿನ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಅಲ್ಲಿ ಶವ ಇಡುವ ರೆಫ್ರಿಜೇಟರ್​​ನಲ್ಲಿ ಕಳೆಬರವನ್ನು ಲಾಕ್ ಮಾಡಿದ್ದಾರೆ. ಪರಿಣಾಮ ಅದು ಬರೋಬ್ಬರಿ 3 ವರ್ಷದ 4 ತಿಂಗಳ ಕಾಲ ಸೆರೆವಾಸ ಅನುಭವಿಸಿದೆ.

ಇದರ ಮಧ್ಯೆ ರೀಟಾ ಕುಟುಂಬಸ್ಥರು ಅಲ್ಲಿದ್ದ ಅಸ್ತಿಪಂಜರ ಬಿಡಿಸಿಕೊಂಡು ಬರಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಾರೆ. ನೆರೆಹೊರೆಯ ಪರಿಚಯಸ್ಥ ರಾಮ್ ಕುಮಾರ್ ಯಾದವ್ ಎಂಬಾತನ ವಿರುದ್ಧ ಕೊಲೆ ಪ್ರಕರಣ ದಾಖಲಿಸುತ್ತಾರೆ. ಪೊಲೀಸರಿಗೆ ಆತನ ವಿರುದ್ಧ ಸಾಲು ಸಾಲು ದೂರುಗಳನ್ನು ನೀಡುತ್ತಾರೆ. ಹೀಗಿದ್ದೂ ಮಗಳ ಅಂತ್ಯಕ್ರಿಯೆ ಮಾಡಲು ಅವರಿಗೆ ಸಾಧ್ಯವಾಗಲಿಲ್ಲ. ಪೋಷಕರ ತೀವ್ರ ಹೋರಾಟ ಹಿನ್ನೆಲೆಯಲ್ಲಿ ಅಸ್ತಿಪಂಜರ ಸಿಕ್ಕಿ ಎರಡು ವರ್ಷ ಕಳೆದ ಮೇಲೆ ಅಂದರೆ 2022ರ ಆರಂಭದ ದಿನಗಳಲ್ಲಿ, ಇಟಾವಾ ಪೊಲೀಸರು DNA ಮಾದರಿ ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಹೈದರಾಬಾದ್‌ನಲ್ಲಿ ನಡೆದ ಪರೀಕ್ಷೆಯಲ್ಲಿ ವರದಿಯು ಸ್ಪಷ್ಟವಾಗಿ ಬಂದಿರಲಿಲ್ಲ.

ಆಮೇಲೆ ಏನಾಯ್ತು..? 

ಮಾರ್ಚ್ 26, 2022 ರಂದು ಲ್ಯಾಬ್‌ನಿಂದ ಬಂದ ವರದಿಯು ರೀಟಾ ಅವಳದ್ದೇ ಎಂದು ಹೇಳಲು ಸ್ಪಷ್ಟ ಕಾರಣ ಡಿಎನ್​ಎ ಪರೀಕ್ಷೆಯಿಂದ ಸಿಗಲಿಲ್ಲ. ಇದರಿಂದ ರೀಟಾ ಕುಟುಂಬ ಮತ್ತೆ ಆಘಾತ ಎದುರಿಸಿತು. ವಾಸ್ತವವಾಗಿ, ಡಿಎನ್ಎ ಮಾದರಿ ಸಂಗ್ರಹ ಸರಿಯಾಗಿಲ್ಲದ ಕಾರಣ ವರದಿ ಅಸ್ಪಷ್ಟವಾಗಿ ಬಂದಿತು ಎನ್ನಲಾಗಿದೆ. ಈ ವಿಚಾರ ರೀಟಾ ಕುಟುಂಬಸ್ಥರಿಗೆ ಗೊತ್ತಾಗ್ತಿದ್ದಂತೆಯೇ ಮತ್ತೊಮ್ಮೆ ಡಿಎನ್​​ಎ ಪರೀಕ್ಷೆ ನಡೆಸುವಂತೆ ಆಗ್ರಹಿಸುತ್ತಾರೆ. ರೀಟಾ ಕುಟುಂಬಸ್ಥರ ಒತ್ತಾಯದಿಂದ ಆಗಸ್ಟ್ 18, 2022ರಲ್ಲಿ ಮತ್ತೆ DNA ವರದಿಗೆ ಕಳುಹಿಸಲಾಗಿತ್ತು. ಈ ಬಾರಿಯೂ ಕೂಡ ಯಡವಟ್ಟಾಗಿತ್ತು. ವರದಿಯಲ್ಲಿ ಸ್ಪಷ್ಟವಾಗಿ ರೀಟಾಳದ್ದೇ ಅಸ್ತಿಪಂಜರ ಎಂದು ಹೇಳಲು ಸಾಧ್ಯವಾಗಲಿಲ್ಲ. ಯಾಕಂದರೆ ರೀಟಾಳ ಡಿಎನ್​ಎ ಹೊಂದಾಣಿಕೆ ಆಗುತ್ತಿರಲಿಲ್ಲ. ಪರಿಣಾಮ ರೀಟಾ ಕುಟುಂಬ, ಮಗಳ ಅಸ್ತಿಪಂಜರಕ್ಕಾಗಿ ಮತ್ತಷ್ಟು ದಿನ ಕಾಯಬೇಕಾಯಿತು.

ಹೈಕೋರ್ಟ್ ಮೆಟ್ಟಿಲೇರಿದ ಕುಟುಂಬಸ್ಥರು..!
ರೆಫ್ರಿಜೇಟರ್​​ನಲ್ಲಿದ್ದ ಅಸ್ತಿಪಂಜರಕ್ಕೆ ಅಂತ್ಯಕ್ರಿಯೆ ಮಾಡಬೇಕು, ಅದು ರೀಟಾಳದ್ದೇ ಎಂದು ಬಲವಾಗಿ ನಂಬಿದ್ದ ಕುಟುಂಬಸ್ಥರು ಹೈಕೋರ್ಟ್ ಮೆಟ್ಟಿಲೇರುತ್ತಾರೆ. ಎರಡು ಬಾರಿ ನಡೆದ ಪರೀಕ್ಷೆ ಮೇಲೆ ನಮಗೆ ಅನುಮಾನ ಇದೆ. ಈ ಬಾರಿ ತಗಲುವ ಖರ್ಚನ್ನು ನಾವೇ ಭರಿಸುತ್ತೇವೆ. ಡಿಎನ್​ಎ ಪರೀಕ್ಷೆ ಮಾಡಿಸಲು ನಮಗೆ ಅನುವು ಮಾಡಿಕೊಡಬೇಕು ಎಂದು ಕೋರ್ಟ್ ಬಳಿ ಕುಟುಂಸ್ಥರು ಮನವಿ ಮಾಡಿಕೊಂಡಿದ್ದಾರೆ.

ಕೋರ್ಟ್​ ಕ್ಲಾಸ್..!

ಬರೋಬ್ಬರಿ 2 ವರ್ಷಗಳ ಕಾಲ ಅಸ್ತಿಪಂಜರವನ್ನು ರೆಫ್ರಿಜೇಟರ್​ನಲ್ಲಿ ಇಟ್ಟಿರೋದಕ್ಕೆ ಹೈಕೋರ್ಟ್​ ಅಚ್ಚರಿ ವ್ಯಕ್ತಪಡಿಸುತ್ತದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಪೊಲೀಸರ ತನಿಖೆಯ ಮೇಲೆ ಅನುಮಾನ ವ್ಯಕ್ತಪಡಿಸುತ್ತದೆ. ಶವಗಾರ ರೆಫ್ರಿಜೇಟರ್​​​ನಲ್ಲಿ ಮೃತ ವ್ಯಕ್ತಿಯ ಶವವನ್ನು 72 ಗಂಟೆಗಳ ಕಾಲ ಮಾತ್ರ ಇಡಬೇಕು. ನಂತರ ಮಾದರಿಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿ ಅಂತ್ಯಸಂಸ್ಕಾರ ಮಾಡಬೇಕು ಎಂದು ನಿಯಮ ಹೇಳುತ್ತದೆ. ಹೇಗೆ ನೀವು 2 ವರ್ಷಗಳ ಕಾಲ ರೆಫ್ರಿಜೇಟರ್​​ನಲ್ಲಿ ಇಟ್ಟಿದ್ದೀರಿ ಎಂದು ಕೋರ್ಟ್​ ಪ್ರಶ್ನೆ ಮಾಡುತ್ತದೆ.

ಕೋರ್ಟ್​ನ ಸೂಚನೆಯಂತೆ ಪೊಲೀಸರು ಮೂರನೇ ಬಾರಿಗೆ ಡಿಎನ್​ಎ ಪರೀಕ್ಷೆ ನಡೆಸಿದ್ದಾರೆ. ಈ ಬಾರಿಯ ವರದಿ ಸುಳ್ಳಾಗಲಿಲ್ಲ. ದೀರ್ಘ ಕಾಲದಿಂದ ಕಾಯುತ್ತಿದ್ದ ಪೋಷಕರ ನಂಬಿಕೆ ಹುಸಿಯಾಗಲಿಲ್ಲ. ಫ್ರೀಜರ್​​ನಲ್ಲಿದ್ದ ಅಸ್ತಿಪಂಜರವು ಚಕ್ ಸೇಲಂಪುರ ಗ್ರಾಮದ ರೀಟಾ ಹುಡುಗಿಯದ್ದು ಎಂದು ವಿಜ್ಞಾನಿಗಳ ವರದಿ ಎತ್ತಿ ಹೇಳಿತು. ಮೂರನೇ ಡಿಎನ್​ಎ ಪರೀಕ್ಷೆ ಬರುತ್ತಿದ್ದಂತೆಯೇ ಪೊಲೀಸರು, ಅಸ್ತಿಪಂಜರವನ್ನು ರೀಟಾ ಕುಟುಂಬಸ್ಥರಿಗೆ ಹಸ್ತಾಂತರ ಮಾಡುತ್ತಾರೆ. ಪೊಲೀಸರ ಸಮ್ಮುಖದಲ್ಲಿಯೇ ತರಾತುರಿಯಲ್ಲಿ ಅಂತ್ಯಸಂಸ್ಕಾರ ಮಾಡಿ ಪ್ರಕರಣ ಮುಗಿಸಿಬಿಡಲು ನಿರ್ಧರಿಸುತ್ತಾರೆ.

ಪೊಲೀಸರ ಬೆನ್ನು ಬಿದ್ದ ರೀಟಾ ಪೋಷಕರು..!

ಆದರೆ ಪೊಲೀಸರು ತನಿಖೆಯಿಂದ ತಪ್ಪಿಸಿಕೊಳ್ಳಲು ರೀಟಾ ಪೊಷಕರು ಅಷ್ಟು ಸುಲಭವಾಗಿ ಬಿಡಲಿಲ್ಲ. ರೀಟಾಳ ಅಸ್ತಿಪಂಜರಕ್ಕೆ ಅಂತ್ಯಸಂಸ್ಕಾರ ಮಾಡುತ್ತಿದ್ದಂತೆಯೇ ಕೊಲೆ ಆರೋಪಿಯ ಬೆನ್ನು ಬೀಳುವಂತೆ ಪೊಲೀಸರನ್ನು ಕಾಡುತ್ತಾರೆ. ಕೊನೆಗೂ ಪೊಲೀಸರು ಆಕೆಯನ್ನು ಕೊಲೆ ಮಾಡಿದ್ದು ಯಾರೆಂದು ಪತ್ತೆ ಹಚ್ಚಲು ಫೀಲ್ಡಿಗೆ ಇಳಿಯುತ್ತಾರೆ. ಅದಾಗಲೇ ಆಕೆಯ ಪೋಷಕರು, ರಾಮ್ ಕುಮಾರ್​ ಎಂಬಾತ ಕೊಲೆ ಮಾಡಿದ್ದಾನೆ ಎಂದು ದೂರು ದಾಖಲಿಸಿದ್ದರು. ಆದರೆ ಪೊಲೀಸರು ಅದನ್ನು ಅಷ್ಟು ಬೇಗ ನಂಬಲು ಸಿದ್ಧರಿರಲಿಲ್ಲ.

ರೀಟಾಳ ಪ್ರೀತಿಯ ಗುಟ್ಟು ಬಿಚ್ಚಿಟ್ಟ ಪೋಷಕರು..!
ಅಸ್ತಿ ಪಂಜರ ಪತ್ತೆಯಾದ ಸ್ಥಳದಲ್ಲಿ ಸಿಕ್ಕಿರುವ ವಸ್ತುಗಳ ಆಧಾರದ ಮೇಲೆಯೇ ಮಗಳನ್ನು ಕೊಲೆ ಮಾಡಿದ್ದು ರಾಮ್ ಕುಮಾರ್ ಎಂದು ರೀಟಾ ಪೋಷಕರು ನೇರ ಆರೋಪ ಮಾಡಿದ್ದರು. ಅದಕ್ಕೆ ಬಲವಾದ ಕಾರಣವನ್ನೂ ನೀಡಿದ್ದರು. ನನ್ನ ಮಗಳು ಈಗಾಗಲೇ ಮದುವೆಯಾಗಿ ಮಕ್ಕಳಿದ್ದ ರಾಮ್​ ಕುಮಾರ್​​ ಯಾದವ್​ನನ್ನು ಪ್ರೀತಿಸುತ್ತಿದ್ದಳು. ಅವನ ಜೊತೆ ಫೋನಿನಲ್ಲಿ ನಿತ್ಯ ಗಂಟೆಗಟ್ಟಲೆ ಮಾತನಾಡುತ್ತಿದ್ದಳು. ಇಬ್ಬರು ಬೇರೆ ಬೇರೆ ಸಮುದಾಯ ಹಿನ್ನೆಲೆಯಲ್ಲಿ ಎರಡು ಕುಟುಂಬಸ್ಥರಿಂದ ವಿರೋಧ ಇತ್ತು ಎಂದು ಪೊಲೀಸರಿಗೆ ತಿಳಿಸುತ್ತಾರೆ.

ಮತ್ತೊಂದು ಕಡೆ ಹೊಲದಲ್ಲಿ ಅಸ್ತಿಪಂಜರ ಪತ್ತೆಯಾದ ವಿಚಾರ ಗೊತ್ತಾಗುತ್ತಿದ್ದಂತೆಯೇ ರಾಮ್​ ಕುಮಾರ್ ಯಾದವ್ ಕುಟುಂಬ, ಆ ಹಳ್ಳಿಯಿಂದ ಜಾಗ ಖಾಲಿ ಮಾಡಿತ್ತು. ಯಾರಿಗೂ ಗೊತ್ತಾಗದ ರೀತಿಯಲ್ಲಿ ತಲೆ ಮರೆಸಿಕೊಂಡು ಬದುಕಲು ಶುರುಮಾಡಿತ್ತು. ಅಲ್ಲದೇ, ರೀಟಾ ಕೊನೆಯದಾಗಿ ಮಾತನಾಡಿದ್ದು ರಾಮ್ ಕುಮಾರ್​ ಜೊತೆ ಅನ್ನೋದು ಕೂಡ ಫೋನ್ ಕಾಲ್ ಮೂಲಕ ತಿಳಿದುಬಂದಿತ್ತು. ಹೀಗಿದ್ದೂ ಪೊಲೀಸರು ರಾಮ್ ಕುಮಾರ್​ ಮೇಲೆ ತನಿಖೆ ನಡೆಸಲು ಪೊಲೀಸರು ಮುಂದಾಗಲಿಲ್ಲ ಎಂಬ ಆರೋಪ ಕೂಡ ಇದೆ.

ಆರೋಪಿಯೇ ಶರಣಾದ..!

ಯಾವಾಗ ಡಿಎನ್​ಎ ಪರೀಕ್ಷೆಯಲ್ಲಿ ಸಿಕ್ಕಿರುವ ಅಸ್ತಿಪಂಜರ ರೀಟಾಳದ್ದು ಎಂದು ಗೊತ್ತಾಯಿತೋ, ಆಗ ಆರೋಪಿಗೆ ಭಯ ಶುರುವಾಗಿದೆ. ಇನ್ಮುಂದೆ ಅಡಗಿ ಕೂತರೆ ನನ್ನನ್ನು ಬಿಡುವುದಿಲ್ಲ ಎಂದು ನೇರವಾಗಿ ಕೋರ್ಟ್​ಗೆ ಶರಣಾಗಿದ್ದಾನೆ. ಕೊನೆಗೆ ಪೊಲಿಸರು ಆತನನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಮತ್ತೊಂದು ಕಡೆ ರೀಟಾ ಕೊಲೆಯಾಗಿ ಮೂರು ವರ್ಷಗಳು ಕಳೆದರೂ, ಆಕೆಯ ಫೋನ್ ಮಾತ್ರ ಸಿಕ್ಕಿಲ್ಲ. ಪೊಲೀಸರಿಗೆ ಅವಳ ಮೊಬೈಲ್ ಸಿಗುವ ಸಾಧ್ಯತೆ ತುಂಬಾ ಕಡಿಮೆ ಇದೆ.

-ಗಣೇಶ ಕೆರೆಕುಳಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರೀತಿ, ಸಂಸಾರ, ಕೊಲೆ: 3 ಬಾರಿ DNA ಪರೀಕ್ಷೆ.. 3.5 ವರ್ಷಗಳ ಕಾಲ ಜೈಲಿನಲ್ಲಿದ್ದ ಅಸ್ತಿಪಂಜರಕ್ಕೆ ಮುಕ್ತಿ ಸಿಕ್ಕ ಭಯಾನಕ ಸ್ಟೋರಿ..!

https://newsfirstlive.com/wp-content/uploads/2024/02/REETA.jpg

Load More