ಭಯಾನಕ ಅವಘಡ.. ಉಡಾವಣೆಯಾದ 40 ಸೆಕೆಂಡ್​ನಲ್ಲಿ ನೆಲಕ್ಕೆ ಅಪ್ಪಳಿಸಿದ ರಾಕೆಟ್​.. VIDEO

author-image
Ganesh
Updated On
ಭಯಾನಕ ಅವಘಡ.. ಉಡಾವಣೆಯಾದ 40 ಸೆಕೆಂಡ್​ನಲ್ಲಿ ನೆಲಕ್ಕೆ ಅಪ್ಪಳಿಸಿದ ರಾಕೆಟ್​.. VIDEO
Advertisment
  • ರಾಕೆಟ್​ ಬೀಳುತ್ತಿದ್ದಂತೆಯೇ ಬೆಂಕಿ ಹೊತ್ತಿ ಉರಿದಿದೆ
  • Isar Aerospace ಅಭಿವೃದ್ಧಿಪಡಿಸಿದ್ದ ರಾಕೆಟ್
  • ರಾಕೆಟ್ ಲಾಂಚ್ ಫೇಲ್ಯೂರ್ ಬಗ್ಗೆ ಕಂಪನಿ ಹೇಳಿದ್ದೇನು?

ನಾರ್ವೆಯಲ್ಲಿ ಉಡಾವಣೆಯಾದ ರಾಕೆಟ್ ಒಂದು ಕೇವಲ 40 ಸೆಕೆಂಡ್​ನಲ್ಲಿ ಪತನಗೊಂಡಿದೆ. ಕಡಲಿಗೆ ಅಪ್ಪಳಿಸಿದ ಬಳಿಕ ಭಯಾನಕವಾಗಿ ಸ್ಫೋಟಗೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದೆ.

ರಾಕೆಟ್ ಅನ್ನು ಯುರೂಪಿಯನ್ ಖಾಸಗಿ ಬಾಹ್ಯಾಕಾಶ ಸಂಸ್ಥೆ (Isar Aerospace) ಅಭಿವೃದ್ಧಿಪಡಿಸಿತ್ತು. ಯುರೋಪಿನಿಂದ ಉಪಗ್ರಹ ಉಡಾವಣೆಗಳನ್ನು ತೀವ್ರಗೊಳಿಸುವ ಉದ್ದೇಶದಿಂದ ಅಭಿವೃದ್ಧಿಪಡಿಸಲಾಗಿತ್ತು. ಆದರೆ, ಅದು ಟೇಕ್ ಆಫ್ ಆದ ತಕ್ಷಣ ಪತನಗೊಂಡಿದೆ. ಜರ್ಮನ್​ನ ಸ್ಟಾರ್ಟ್ಅಪ್ ಇಸಾರ್ ಏರೋಸ್ಪೇಸ್ ಇದನ್ನು ಆರಂಭಿಕ ಪರೀಕ್ಷೆ ಎಂದು ಕರೆದಿದೆ.

ಸ್ಪೆಕ್ಟ್ರಮ್ ರಾಕೆಟ್ ಯುರೋಪ್​​​ನಿಂದ ಯಶಸ್ವಿ ಉಡಾವಣೆಗೆ ಪ್ರಯತ್ನಿಸ್ತಿದೆ. ಈ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸ್ವೀಡನ್, ಬ್ರಿಟನ್ ಮತ್ತು ಇತರ ದೇಶಗಳು ವಾಣಿಜ್ಯ ಬಾಹ್ಯಾಕಾಶ ಕಾರ್ಯಾಚರಣೆಯಲ್ಲಿ ಭಾಗವಹಿಸುವ ಬಯಕೆ ವ್ಯಕ್ತಪಡಿಸಿವೆ. ರಾಕೆಟ್ ಸ್ಫೋಟದ ಹೊರತಾಗಿಯೂ ಈ ಘಟನೆ ಭವಿಷ್ಯದ ಕಾರ್ಯಾಚರಣೆಗಳಿಗೆ ಉಪಯುಕ್ತವಾಗಬಹುದಾದ ಪ್ರಮುಖ ಡೇಟಾಗಳನ್ನು ಒದಗಿಸಿದೆ ಎಂದು ಕಂಪನಿ ಹೇಳಿಕೊಂಡಿದೆ.

ಇದನ್ನೂ ಓದಿ: ಚೆನ್ನೈಗೆ ಮಾಸ್ಟರ್​ ಸ್ಟ್ರೋಕ್​​ ಕೊಟ್ಟ RCB ಮಾಜಿ ಪ್ಲೇಯರ್ ಹಸರಂಗ​; ಮತ್ತೊಂದು ಮುಖಭಂಗ..!

publive-image

ಪ್ರತಿಯೊಂದು ವಾಹಕ ವಿಮಾನವೂ ನಮಗೆ ಮುಖ್ಯ. ಏಕೆಂದರೆ ಅದು ನಮಗೆ ಡೇಟಾ ಮತ್ತು ಅನುಭವ ನೀಡುತ್ತದೆ. 30 ಸೆಕೆಂಡುಗಳ ವಿಮಾನವು ನಮಗೆ ದೊಡ್ಡ ಗೆಲುವಾಗಿದೆ. ಈ ಪರೀಕ್ಷೆಯ ಮೂಲಕ ಕಂಪನಿಯು ಕಕ್ಷೆಯನ್ನು ತಲುಪುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ವಾಸ್ತವವಾಗಿ ಯಾವುದೇ ಕಂಪನಿಯು ತನ್ನ ಮೊದಲ ಕಕ್ಷೆಯ ಉಡಾವಣಾ ವಾಹನವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿಲ್ಲ ಅಂತಾ ಎಸಾರ್ ಏರೋಸ್ಪೇಸ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ಡೇನಿಯಲ್ ಮೆಟ್ಜ್ಲರ್ ತಿಳಿಸಿದ್ದಾರೆ.

ನಾರ್ವೆಯ ಆರ್ಕ್ಟಿಕ್ ಆಂಡೋಯಾ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾದ ಸ್ಪೆಕ್ಟ್ರಮ್ ರಾಕೆಟ್ ಅನ್ನು ಸಣ್ಣ ಮತ್ತು ಮಧ್ಯಮ ಗಾತ್ರದಲ್ಲಿ ವಿನ್ಯಾಸಗೊಳಿಸಲಾಗಿತ್ತು. ಮೊದಲ ಪರೀಕ್ಷಾರ್ಥ ಹಾರಾಟ ಹಿನ್ನೆಲೆಯಲ್ಲಿ ಯಾವುದೇ ಪೇಲೋಡ್ ಹೊಂದಿರಲಿಲ್ಲ. ಈ ಕಾರ್ಯಾಚರಣೆಯ ಮುಖ್ಯ ಉದ್ದೇಶ ಏನೆಂದರೆ ಸ್ಥಳೀಯ ಜ್ಞಾನವನ್ನು ಬಳಸಿಕೊಂಡು ಉಡಾವಣಾ ವಾಹನ ನಿರ್ಮಾಣ ಮಾಡುವುದಾಗಿದೆ.

ಇದನ್ನೂ ಓದಿ: KL ರಾಹುಲ್​ ಅವರ​ ದೊಡ್ಡ ಗುಣವನ್ನು ರಿವೀಲ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್​ನ ಯುವ ಆಟಗಾರ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment