newsfirstkannada.com

IND VS AFG: ಇಂದೋರ್‌ನಲ್ಲೂ ರೋಹಿತ್ ಪಡೆ ಬಿಗಿ ಹಿಡಿತ; ಬೌಲರ್‌ಗಳ ದಾಳಿಗೆ ಅಫ್ಘಾನ್‌ ಸುಸ್ತು!

Share :

Published January 14, 2024 at 8:05pm

Update January 14, 2024 at 8:06pm

    ಅಫ್ಘಾನ್ ಆರಂಭಿಕ ಆಟಗಾರರಿಗೆ ರವಿ ಬಿಷ್ಣೋಯ್ ಬಿಗ್ ಶಾಕ್!

    ಇಂದೋರ್‌ನಲ್ಲೂ ಬಿಗಿ ಹಿಡಿತ ಸಾಧಿಸಿದ ಭಾರತದ ಬೌಲರ್‌ಗಳು

    ಬಹಳ ದಿನಗಳ ಬಳಿಕ ವಿರಾಟ್ ಕೊಹ್ಲಿ ಕಮ್‌ಬ್ಯಾಕ್‌ ಜಾದು ನಡೆಯುತ್ತಾ?

ಇಂದೋರ್‌ನಲ್ಲಿ ನಡೆಯುತ್ತಿರುವ ಟಿ20 2ನೇ ಪಂದ್ಯದಲ್ಲೂ ಅಫ್ಘಾನಿಸ್ತಾನದ ಮೇಲೆ ಭಾರತ ಸವಾರಿ ನಡೆಸಿದೆ. ಟಾಸ್ ಗೆದ್ದ ಟೀಂ ಇಂಡಿಯಾ ಫೀಲ್ಡಿಂಗ್ ಆಯ್ಕೆ ಮಾಡಿದ್ದು, ಬೌಲರ್‌ಗಳ ಮಾರಕ ದಾಳಿಗೆ ಇಬ್ರಾಹಿಂ ಪಡೆ ತತ್ತರಿಸಿ ಹೋಗಿದೆ.

ಅಘ್ಘಾನಿಸ್ತಾನದ ಆರಂಭಿಕ ಆಟಗಾರರಿಗೆ ರವಿ ಬಿಷ್ಣೋಯ್ ಬಿಗ್ ಶಾಕ್ ಕೊಟ್ಟರು. ಆರಂಭಿಕ ಆಘಾತಕ್ಕೆ ತತ್ತರಿಸಿದ ಅಘ್ಘಾನ್ ತಂಡಕ್ಕೆ ಗುಲ್ಬದಿನ್ ನೈಬ್ ಆಸರೆಯಾದರು. ಗುಲ್ಬದಿನ್ ನೈಬ್ ಅರ್ಧಶತಕದ ನೆರವಿನಿಂದ ಅಫ್ಘಾನಿಸ್ತಾನ ಸ್ವಲ್ಪ ಚೇತರಿಕೆಯನ್ನು ಕಂಡಿತು. ಇಷ್ಟಾದ್ರೂ ಬಿಗಿ ಹಿಡಿತ ಸಾಧಿಸಿದ ಭಾರತದ ಬೌಲರ್‌ಗಳನ್ನು ಬೃಹತ್‌ ಟಾರ್ಗೆಟ್‌ನತ್ತ ಮುನ್ನುಗ್ಗುವುದನ್ನ ಕಂಟ್ರೋಲ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 104 ರನ್ ಗಳಿಸುವಷ್ಟರಲ್ಲೇ ಪ್ರಮುಖ 5 ವಿಕೆಟ್‌ಗಳನ್ನು ಕಳೆದುಕೊಂಡಿದೆ.

ಇದನ್ನೂ ಓದಿ: ಅಫ್ಘಾನ್ ವಿರುದ್ಧದ ಅಖಾಡದಲ್ಲಿ ಕೊಹ್ಲಿ ಆಡೋದು ಕನ್ಫರ್ಮ್.. ಈ ಮೂವರಲ್ಲಿ ಹೊರಗೆ ಹೋಗೋದ್ಯಾರು?

ಮೊದಲ ಟಿ20 ಪಂದ್ಯ ಗೆದ್ದಿರುವ ಭಾರತ ಇಂದಿನ ಪಂದ್ಯ ಗೆದ್ದು T20 ಸರಣಿಯನ್ನು ವಶಪಡಿಸಿಕೊಳ್ಳುವ ತವಕದಲ್ಲಿದೆ. ಬಹಳ ದಿನಗಳ ಬಳಿಕ ವಿರಾಟ್ ಕೊಹ್ಲಿ ಕಮ್‌ಬ್ಯಾಕ್‌ ಮಾಡಿದ್ದು, ರನ್‌ ಮಳೆ ಸುರಿಸುವ ನಿರೀಕ್ಷೆ ಇದೆ. ಇನ್ನು, ವಿಶ್ವಕಪ್ ಪಂದ್ಯದ ಹಿನ್ನೆಲೆಯಲ್ಲಿ ರೋಹಿತ್ ಶರ್ಮಾ ಕೂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುವ ನಿರೀಕ್ಷೆ ಇದೆ.

ಪ್ಲೇಯಿಂಗ್ 11ರಲ್ಲಿ ಯಾರಿದ್ದಾರೆ?
ಭಾರತ
ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶಿವಂ ದುಬೆ, ಜಿತೇಶ್ ಶರ್ಮಾ, ರಿಂಕು ಸಿಂಗ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್.

ಅಫ್ಘಾನಿಸ್ಥಾನ
ಇಬ್ರಾಹಿಂ ಜದ್ರಾನ್ (ನಾಯಕ), ರಹಮಾನುಲ್ಲಾ ಗುರ್ಬಾಜ್, ಗುಲ್ಬದಿನ್ ನೈಬ್, ಅಜ್ಮತುಲ್ಲಾ ಒಮರ್ಜಾಯ್, ಮೊಹಮ್ಮದ್ ನಬಿ, ನಜೀಬುಲ್ಲಾ ಜದ್ರಾನ್, ಕರೀಂ ಜನತ್, ಫಜಲ್ಹಕ್ ಫಾರೂಕಿ, ನವೀನ್-ಉಲ್-ಹಕ್, ಮುಜೀಬ್ ಉರ್ ರೆಹಮಾನ್, ನೂರ್ ಅಹ್ಮದ್.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

IND VS AFG: ಇಂದೋರ್‌ನಲ್ಲೂ ರೋಹಿತ್ ಪಡೆ ಬಿಗಿ ಹಿಡಿತ; ಬೌಲರ್‌ಗಳ ದಾಳಿಗೆ ಅಫ್ಘಾನ್‌ ಸುಸ್ತು!

https://newsfirstlive.com/wp-content/uploads/2024/01/India-Bishnoi.jpg

Load More