ಜಮೀನೇ ಇವರದ್ದಲ್ಲ.. ಅದ್ರಲ್ಲೇ ಸೈಟ್​ ಕೊಡ್ತಾರಂತೆ! ಹುಬ್ಬಳ್ಳಿ-ಧಾರವಾಡದಲ್ಲಿ ‘ಎವರ್​ಗ್ರೀನ್’ ನಾಮ

author-image
Ganesh
Updated On
ಜಮೀನೇ ಇವರದ್ದಲ್ಲ.. ಅದ್ರಲ್ಲೇ ಸೈಟ್​ ಕೊಡ್ತಾರಂತೆ! ಹುಬ್ಬಳ್ಳಿ-ಧಾರವಾಡದಲ್ಲಿ ‘ಎವರ್​ಗ್ರೀನ್’ ನಾಮ
Advertisment
  • ಕೃಷಿ ಭೂಮಿಯನ್ನೇ ಲೇಔಟ್ ಮಾಡಿ ಯಾಮಾರಿಸ್ತಾರೆ
  • ಇವ್ರನ್ನ ನಂಬಿ ಸೈಟಿಗೆ ಕಾಸು ಕೊಟ್ರೆ ನಾಮ ಗ್ಯಾರಂಟಿ
  • ನ್ಯೂಸ್​ಫಸ್ಟ್​ ರಹಸ್ಯ ಕಾರ್ಯಾಚರಣೆಯಲ್ಲಿ ಬಟಾಬಯಲು

ಅವಳಿ ನಗರ ಹುಬ್ಬಳ್ಳಿ-ಧಾರವಾಡದಲ್ಲಿನ ‘ರಿಯಲ್ ಎಸ್ಟೇಟ್ ಮಾಫಿಯಾ’ ಬಗೆದಷ್ಟೂ ಬಯಲಾಗುತ್ತಿದೆ. ಗ್ರಾಹಕರದ್ದೇ ದುಡ್ಡಲ್ಲಿ ರಿಯಲ್ ಎಸ್ಟೇಟ್ ಹೆಸರಲ್ಲಿ ಕೋಟಿ ಕೋಟಿ ಲೂಟಿ ಮಾಡ್ತಿರೋ ಪ್ರಕರಣಗಳು ಬೆಳಕಿಗೆ ಬರ್ತಿವೆ. ಮೊನ್ನೆಯಷ್ಟೇ ನ್ಯೂಸ್​ಫಸ್ಟ್ ರಹಸ್ಯ ಕಾರ್ಯಾಚರಣೆ ಮೂಲಕ ‘ಭವಾನಿ ಪ್ರಾಪರ್ಟೀಸ್’ನ ಮುಖವಾಡ ಬಯಲು ಮಾಡಿತ್ತು. ಇದೀಗ ಎವರ್​ ಗ್ರೀನ್ ಪ್ರಾಪರ್ಟೀಸ್ ಸರದಿ!

ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿ ಎವರ್​ಗ್ರೀನ್ ಪ್ರಾಪರ್ಟೀಸ್ ಇದೆ. ಈ ರಿಯಲ್ ಎಸ್ಟೇಟ್ ಸಂಸ್ಥೆ ವಿರುದ್ಧ ಗಂಭೀರ ಆರೋಪಗಳು ಕೇಳಿ ಬಂದಿದ್ದವು. ಹೀಗಾಗಿ ನ್ಯೂಸ್​ಫಸ್ಟ್ ರಹಸ್ಯ ಕ್ಯಾಮೆರಾ ಜೊತೆಗೆ ಎವರ್​ಗ್ರೀನ್ ಪ್ರಾಪರ್ಟೀಸ್​​ಗೆ ಭೇಟಿ ಕೊಟ್ಟಿತ್ತು. ಈ ವೇಳೆ ಸಂಸ್ಥೆಯ ಸೇಲ್ಸ್ ಎಕ್ಸಿಕ್ಯೂಟಿವ್ ಸಂಜಯ್, ಸೈಟ್ ಕೊಡಿಸುವ ಪ್ರಾಜೆಕ್ಟ್​ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡದಲ್ಲಿ ರಿಯಲ್ ಎಸ್ಟೇಟ್ ವಂಚನೆ; ನ್ಯೂಸ್​ಫಸ್ಟ್ ರಹಸ್ಯ ಕಾರ್ಯಾಚರಣೆ ಬೆನ್ನಲ್ಲೇ ಎಚ್ಚೆತ್ತ ಪ್ರಾಧಿಕಾರ!

publive-image

ಅಸಲಿ ಸತ್ಯ ಏನು..?

ಅಸಲಿಗೆ ಇಲ್ಲಿರೋದು ಕೃಷಿ ಜಮೀನು. ಅದು ಇನ್ನೂ ನಿವೇಶನ ಉದ್ದೇಶಗಳಿಗೆ ಪರಿವರ್ತನೆಗೊಂಡಿಲ್ಲ. ಮೇಲಾಗಿ ಎವರ್​​ ಗ್ರೀನ್ ಪ್ರಾಪರ್ಟೀಸ್ ಖರೀದಿ ಕೂಡ ಮಾಡಿಲ್ಲ. ಸಂಸ್ಥೆ ಹೇಳುತ್ತಿರುವ ಜಮೀನಿನ ಮೂಲ ಮಾಲೀಕರ ಹೆಸರು ಶಾಂತವ್ವ ಮರಿಗೌಡ ಭದ್ರಾಪೂರ. ಇವರ ಹೆಸರಲ್ಲೇ ಜಮೀನು ಇದೆ. ಜಮೀನು ಮಾಲೀಕರಿಗೆ ಸ್ವಲ್ಪ ಅಡ್ವಾನ್ಸ್ ಕೊಟ್ಟು ಸ್ಟ್ಯಾಂಪ್ ಪೇಪರ್ ಮೇಲೆ ಒಪ್ಪಂದ ಮಾಡಿಕೊಂಡು ಆಗಲೇ ಸೈಟು ಮಾರಾಟ ಮಾಡಲು ‘ಎವರ್​ ಗ್ರೀನ್ ಪ್ರಾಪರ್ಟೀಸ್’ ಶುರು ಮಾಡಿದೆ. ಸೈಟು ಕೊಳ್ಳಲು ಬರೋರಿಗೆ ಅದೇ ಸ್ಟ್ಯಾಂಪ್ ಪೇಪರ್ ಮೇಲೆ ಒಪ್ಪಂದ ಕರಾರು ಪತ್ರಕ್ಕೆ ಸಹಿ ಹಾಕಿ ಕೊಡ್ತಿದೆ. ಇವರದ್ದಲ್ಲದ ಜಮೀನಿನಲ್ಲಿ ಸೈಟ್ ಕೊಡ್ತೀವಿ ಅಂತ ಹೇಳೋದಕ್ಕಿರುವ ಕರಾರು ಪತ್ರ ಅದು. ಇದು ಅಪ್ಪಟ ಚೀಟಿಂಗ್ ಅಲ್ದೇ ಇನ್ನೇನು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

publive-image

ಸೈಟು ಖರೀದಿಗೂ ಮುನ್ನ..?

ಮೊದಲು ಜಮೀನು ಖರೀದಿ ಆಗಬೇಕು. ಆಮೇಲೆ ಕಾನೂನು ಪ್ರಕಾರ, NA ಆಗಬೇಕು. ನಂತರ ಲೇಔಟ್ ನಕ್ಷೆ ರೆಡಿ ಆಗಬೇಕು. ಅದಕ್ಕೆ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಇಲಾಖೆಯಿಂದ ಅನುಮತಿ ಸಿಗಬೇಕು. ಆಮೇಲೆ ಕೆಜೆಪಿ ಆಗಬೇಕು. ನೀಲ ನಕ್ಷೆಯಂತೆ ಲೇಔಟ್ ನಿರ್ಮಾಣ ಆಗಬೇಕು. ನಿರ್ಮಾಣವಾದ ಲೇಔಟ್​ನಲ್ಲಿ ವಿದ್ಯುತ್ ಇಲಾಖೆ, ವಾಟರ್ ಬೋರ್ಡ್ ಎನ್ಓಸಿ ನೀಡಬೇಕು. ನಗರಾಭಿವೃದ್ಧಿ ಪ್ರಾಧಿಕಾರ ರಸ್ತೆ ಗುಣಮಟ್ಟ ಡ್ರೈನೇಜ್ ಸ್ಥಿತಿಗತಿ, ಸಿಎ ಲ್ಯಾಂಡ್ ಪಾರ್ಕ್ ಹೀಗೆ ನೂರೆಂಟು ಮಾನದಂಡಗಳಿವೆ.

ಇದನ್ನೂ ಓದಿ: ಗರುಡ ಜೊತೆಗೆ ಕಾಣಿಸಿಕೊಂಡ ಅಂತರಪಟ ಸೀರಿಯಲ್​ ನಟಿ ತನ್ವಿಯಾ ಬಾಲರಾಜ್; ಹೋಗಿದ್ದೆಲ್ಲಿಗೆ?

publive-image

ಆ ಮಾನದಂಡಗಳನ್ನ ಚೆಕ್ ಮಾಡಿ ಸಿಸಿ ನೀಡಬೇಕು. ಇಷ್ಟೆಲ್ಲಾ ಆದ್ಮೇಲೆ ಇಲ್ಲಿನ ಸೈಟ್​ಗಳು ಮಾರಾಟಕ್ಕೆ ಯೋಗ್ಯ. ಈ ಪ್ರಕ್ರಿಯೆಯಲ್ಲಿ ಕೊಂಚವೂ ಯಡವಟ್ಟಾದ್ರೂ ಲೇಔಟ್ ಅಪ್ರೂವಲ್ ಸಿಗಲ್ಲ. ಎವರ್​​ಗ್ರೀನ್​ ಪ್ರಾಪರ್ಟೀಸ್ ಮಾತ್ರ ಸಖತ್​ ಎವರ್​ಗ್ರೀನ್​ ಆಗಿಯೇ ನಾಮ ಹಾಕಲು ಮುಂದಾಗಿದೆ.

ಏನು ಹೇಳುತ್ತೆ ಕಾನೂನು?

ಒಂದು ಲೇಔಟ್​​ನಲ್ಲಿ ಸೈಟ್ ಮಾರಾಟ ಮಾಡಬೇಕು ಅಂದ್ರೆ ಸಂಬಂಧಪಟ್ಟಿರೋ ಪ್ರಾಧಿಕಾರದಿಂದ ಲೇಔಟ್ ಅಪ್ರೂವಲ್ ತಗೋಬೇಕು. 2021ರ ತಿದ್ದುಪಡಿ ಕಾಯ್ದೆ ಕೆಟಿಸಿಪಿ-17 2ಸಿ ಪ್ರಕಾರ ಲೇಔಟ್​ಗೆ ಪಾರ್ಷಿಯಲ್ ಅಂದ್ರೆ ಶೇ.40ರಷ್ಟು ಸೈಟ್​ ಮಾರಾಟಕ್ಕೆ ಅಪ್ರೂವಲ್ ತಗೋಬೇಕೆಂದರೆ ಲೇಔಟ್ ಸಂಪೂರ್ಣವಾಗಿ ಅಭಿವೃದ್ಧಿಪಡಿಸಿರಬೇಕು. ಮತ್ತು ಸಿಸಿ ಸಿಗೋವರೆಗೂ ಅದೇ ಸೈಟ್​ಗಳನ್ನ ಮಾತ್ರ ಮಾರಾಟ ಮಾಡಬೇಕು. ಈ ಲೇಔಟ್ ನಿರ್ಮಾಣ ಮಾಡುವ ರಿಯಲ್ ಎಸ್ಟೇಟ್ ಕಂಪನಿ ಕಡ್ಡಾಯವಾಗಿ ರೇರಾದಲ್ಲಿ ನೋಂದಣಿ ಮಾಡಿಸಲೇಬೇಕು. ಇಂಥ ಕಡ್ಡಾಯ ಕಾನೂನು ಕರ್ನಾಟಕದಲ್ಲಿ ಜಾರಿಯಲ್ಲಿರುವಾಗ ಅವಳಿನಗರದಲ್ಲಿ ರೇರಾ ದೂರದ ಮಾತು.

ಇದನ್ನೂ ಓದಿ: ಸುನಿತಾ ವಿಲಿಯಮ್ಸ್ ಭೂಮಿಗೆ ಬರುವ ದಿನ ಅಧಿಕೃತ.. ಅಮೆರಿಕದ ಸಮುದ್ರದಲ್ಲಿ ಲ್ಯಾಂಡ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment