/newsfirstlive-kannada/media/post_attachments/wp-content/uploads/2024/09/JOB_SBI-1.jpg)
ಎಲ್ಲರಿಗೂ ಸಾಮಾನ್ಯವಾಗಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ಗಳು ಇದ್ದೇ ಇರುತ್ತೆ. ಸರ್ಕಾರಿ ನೌಕರರು ಆಗಲಿ, ಖಾಸಗಿ ಉದ್ಯೋಗಿಗಳಾಗಲಿ, ಉದ್ಯಮಿಗಳು, ವ್ಯಾಪಾರಸ್ಥರು ಹೀಗೆ ಎಲ್ಲರೂ ಕನಿಷ್ಠ ಎರಡು ಬ್ಯಾಂಕ್ ಅಕೌಂಟ್ಗಳು ಹೊಂದಿರುತ್ತಾರೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡೋರಿಗೆ ಸ್ಯಾಲರಿ ಅಕೌಂಟ್ ಜತೆಗೆ ಸೇವಿಂಗ್ಸ್ ಖಾತೆ ಕೂಡ ಇರುತ್ತದೆ. ಆದರೆ ಒಂದಕ್ಕಿಂತ ಹೆಚ್ಚು ಖಾತೆ ಹೊಂದಿರೋರಿಗೆ ಲಾಭಕ್ಕಿಂತಲೂ ನಷ್ಟವೇ ಹೆಚ್ಚು. ಕಾರಣ ನೀವು ಮಿನಿಮಮ್ ಬ್ಯಾಲೆನ್ಸ್ ಮೈನ್ಟೈನ್ ಮಾಡದಿದ್ರೆ ದಂಡ ಕಟ್ಟಬೇಕು.
ದಂಡ ಕಟ್ಟುವುದು ಏಕೆ?
ನಿಮ್ಮ ಬಳಿ ಒಂದಕ್ಕಿಂತಲೂ ಹೆಚ್ಚು ಅಕೌಂಟ್ ಇದ್ದು, ಅದರಲ್ಲೂ ನೀವು ಯಾವುದಾದ್ರೂ ಖಾತೆಯನ್ನು ಬಳಸದಿದ್ರೆ ದಂಡ ಕಟ್ಟಬೇಕು. ಇಲ್ಲದೆ ಹೋದಲ್ಲಿ ಅದನ್ನು ಕ್ಲೋಸ್ ಮಾಡಬೇಕು. ಒಂದು ವೇಳೆ ನೀವು ಆ ಖಾತೆಯನ್ನು ಕ್ಲೋಸ್ ಮಾಡದಿದ್ರೆ ದಂಡದ ರೂಪದಲ್ಲಿ ಹೆಚ್ಚಿನ ಹಣ ಬ್ಯಾಂಕ್ಗೆ ಪಾವತಿಸಬೇಕು.
ವ್ಯವಹಾರ ನಡೆಸದಿದ್ರೂ ಬೀಳುತ್ತೆ ದಂಡ
ಬ್ಯಾಂಕ್ ರೂಲ್ಸ್ ಪ್ರಕಾರ ಕಸ್ಟಮರ್ ಸದಾ ತನ್ನ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಡಬೇಕು. ಜತೆಗೆ ಆಗಾಗ ವ್ಯವಹಾರ ಕೂಡ ಮಾಡಬೇಕು. ಇಲ್ಲವಾದರೆ ಬ್ಯಾಂಕ್ ಗ್ರಾಹಕನಿಗೆ ಹೆಚ್ಚಿನ ದಂಡ ವಿಧಿಸಲಾಗುತ್ತದೆ. ಹೀಗಾಗಿ ಬ್ಯಾಂಕ್ ಖಾತೆಯನ್ನು ನಿಷ್ಕ್ರಿಯೆಗೊಳಿಸಿ ಎಂದು ಪರಿಣಿತರು ಸಲಹೆ ನೀಡಿತ್ತಾರೆ.
10 ಸಾವಿರ ಮಿನಿಮಮ್ ಬ್ಯಾಲೆನ್ಸ್
ಸೇವಿಂಗ್ಸ್ ಬ್ಯಾಂಕ್ ಅಕೌಂಟ್ನಲ್ಲಿ ಎಲ್ಲರೂ ಮಿನಿಮಮ್ 10 ಸಾವಿರ ಬ್ಯಾಲೆನ್ಸ್ ಮೈನ್ಟೈನ್ ಮಾಡಬೇಕು ಅನ್ನೋ ರೂಲ್ಸ್ ಇದೆ. ಒಂದು ತಿಂಗಳಲ್ಲಿ ಬ್ಯಾಂಕ್ ಖಾತೆಯಲ್ಲಿ ಒಂದು ಸಲ ಆದ್ರೂ 10 ಸಾವಿರ ಇಡಬೇಕು. ಅಷ್ಟು ಹಣ ನಿಮ್ಮ ಖಾತೆಯಲ್ಲಿ ಇಡದಿದ್ರೆ ಪೆನಾಲ್ಟಿ ಬೀಳುತ್ತೆ.
ಇದನ್ನೂ ಓದಿ: ಬೆಂಗಳೂರು ತಂಡಕ್ಕೆ KL ರಾಹುಲ್ ಎಂಟ್ರಿ ಪಕ್ಕಾ; ಸ್ಫೋಟಕ ಸುಳಿವು ಕೊಟ್ಟ RCB
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್