newsfirstkannada.com

VIDEO: ಬೆಂಕಿ, ಗಲಭೆ, ಹಿಂಸಾಚಾರ.. ಕೈ ಮೀರಿದ ಪರಿಸ್ಥಿತಿ; ನೆದರ್ಲ್ಯಾಂಡ್ಸ್‌ನ ಒಂದೊಂದು ದೃಶ್ಯವೂ ಭಯಾನಕ!

Share :

Published February 18, 2024 at 1:32pm

    ಪೊಲೀಸರ ವಾಹನಗಳಿಗೆ ಬೆಂಕಿ ಹಚ್ಚಿ ಅಟ್ಟಹಾಸ ಮೆರೆದ ಗುಂಪು

    ಹೇಗ್ ನಗರದಲ್ಲಿ ಎರಡು ಗುಂಪುಗಳ ಮಧ್ಯೆ ತೀವ್ರ ಘರ್ಷಣೆ

    ಗಲಭೆಕೋರರನ್ನು ಚದುರಿಸಲು ಪೊಲೀಸರಿಂದ ಅಶ್ರುವಾಯು ಪ್ರಯೋಗ

ಹೇಗ್‌: ಗಲಭೆ, ಹಿಂಸಾಚಾರಕ್ಕೆ ಸಿಲುಕಿರುವ ನೆದರ್ಲ್ಯಾಂಡ್ಸ್‌ ಅಕ್ಷರಶಃ ನಲುಗಿ ಹೋಗಿದೆ. ಹೇಗ್ ನಗರದಲ್ಲಿ ಎರಡು ಗುಂಪುಗಳ ಮಧ್ಯೆ ಘರ್ಷಣೆ ಸಂಭವಿಸಿದ್ದು, ಉದ್ರಿಕ್ತರ ಗುಂಪು ಸಿಕ್ಕ, ಸಿಕ್ಕ ವಾಹನಗಳಿಗೆ ಬೆಂಕಿ ಹಚ್ಚಿ ಅಟ್ಟಹಾಸ ಮೆರೆದಿವೆ.

ನೆದರ್ಲ್ಯಾಂಡ್ಸ್‌ನಲ್ಲಿ ಗಲಭೆಕೋರರು ಘರ್ಷಣೆಗಿಳಿದಿದ್ದು, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಅಷ್ಟೇ ಅಲ್ಲ ಪೊಲೀಸರ ಕಾರು, ಬಸ್‌ಗಳಿಗೆ ಬೆಂಕಿ ಹಚ್ಚಿ ಘೋಷಣೆಗಳನ್ನು ಕೂಗಿದ್ದಾರೆ. ಹೇಗ್‌ ನಗರದ ಸ್ಥಿತಿ ಸಂಪೂರ್ಣ ಕೈ ಮೀರಿ ಹೋಗಿದ್ದು, ಗಲಭೆಕೋರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ನೆದರ್ಲ್ಯಾಂಡ್ಸ್‌ನಲ್ಲಿ ನಡೆಯುತ್ತಿರುವ ಹಿಂಸಾಚಾರದ ದೃಶ್ಯಗಳು ಒಂದೊಂದು ಭಯಾನಕವಾಗಿವೆ. ಉದ್ರಿಕ್ತರ ಗುಂಪು ಕಲ್ಲು, ಇಟ್ಟಿಗೆಗಳ ತೂರಾಟದ ಜೊತೆಗೆ ಸಿಕ್ಕ, ಸಿಕ್ಕಲ್ಲಿ ಬೆಂಕಿ ಹಚ್ಚಿ ಹಿಂಸಾಚಾರದ ಉತ್ತುಂಗಕ್ಕೆ ತಲುಪಿದ್ದಾರೆ. ನೆದರ್ಲ್ಯಾಂಡ್ಸ್‌ನ ಗಲಭೆಯ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಹಲವಾರು ಪೊಲೀಸ್ ಕಾರುಗಳು ಬೆಂಕಿಗೆ ಆಹುತಿಯಾಗಿ ಸುಟ್ಟು ಕರಕಲಾಗಿವೆ.

ಗಲಭೆಗೆ ಕಾರಣವೇನು?
ಕಳೆದ ಶನಿವಾರ ರಾತ್ರಿ ಹೇಗ್‌ನಲ್ಲಿ ಆಫ್ರಿಕನ್ ದೇಶದ ಸರ್ಕಾರವನ್ನು ವಿರೋಧಿಸಿದ ಒಂದು ಗುಂಪು ಒಪೇರಾ ಹೌಸ್‌ನಲ್ಲಿ ಸಭೆ ನಡೆಸುತ್ತಿತ್ತು. ಆಗ ಗುಂಪು ಸೇರಿದ ಎರಿಟ್ರಿಯನ್ ಮೂಲದ ನಿರಾಶ್ರಿತರು ಪೊಲೀಸರ ಮೇಲೆ ದಾಳಿ ನಡೆಸಿದೆ. ಎರಿಟ್ರಿಯಾದಿಂದ ಪಲಾಯನ ಮಾಡಿದ ನಂತರ ಹತ್ತು ಸಾವಿರ ಜನರು ಯುರೋಪ್‌ನಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿದ್ದಾರೆ. ನೆದರ್ಲ್ಯಾಂಡ್ಸ್‌ನಲ್ಲಿ ಆಶ್ರಯ ಪಡೆದಿರುವ ಈ ನಿರಾಶ್ರಿತರು ಈ ಗಲಭೆಗೆ ಕಾರಣ ಎನ್ನಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಬೆಂಕಿ, ಗಲಭೆ, ಹಿಂಸಾಚಾರ.. ಕೈ ಮೀರಿದ ಪರಿಸ್ಥಿತಿ; ನೆದರ್ಲ್ಯಾಂಡ್ಸ್‌ನ ಒಂದೊಂದು ದೃಶ್ಯವೂ ಭಯಾನಕ!

https://newsfirstlive.com/wp-content/uploads/2024/02/Netharland-Riots.jpg

Load More