/newsfirstlive-kannada/media/post_attachments/wp-content/uploads/2025/01/California-wildfires.jpg)
ಅಮೆರಿಕಾದ ಲಾಸ್ ಏಂಜಲೀಸ್ನಲ್ಲಿ ಹೊತ್ತಿ ಉರಿಯುತ್ತಿರುವ ಬೆಂಕಿಯ ಜ್ವಾಲೆ ಇನ್ನೂ ಮುಂದುವರಿದಿದೆ. ಭಯಾನಕ ಕಾಡ್ಗಿಚ್ಚಿಗೆ ಈವರೆಗೂ 16 ಮಂದಿ ಸಾವನ್ನಪ್ಪಿದ್ದಾರೆ. 10,000 ಕಟ್ಟಡಗಳು ಭಸ್ಮ ಆಗಿದ್ರೆ 1 ಲಕ್ಷ 80 ಸಾವಿರಕ್ಕೂ ಹೆಚ್ಚು ಜನರನ್ನ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ.
ಅಮೆರಿಕಾದಲ್ಲಿ ಇದುವರೆಗೂ 37,000ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಕಾಡ್ಗಿಚ್ಚು ರುದ್ರ ತಾಂಡವ ಆಡಿದೆ. ಕಾಡ್ಗಿಚ್ಚಿನಿಂದ 150 ಬಿಲಿಯನ್ ಡಾಲರ್ನಷ್ಟು ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಕಾಡ್ಗಿಚ್ಚಿಗೆ ಮನೆ, ಬಂಗಲೆ ಸುಟ್ಟು ಭಸ್ಮವಾದ್ರೆ ಜನರು ಮನೆಗಳನ್ನ ಖಾಲಿ ಮಾಡುತ್ತಿದ್ದಾರೆ. ಅತ್ತ ಜನರು ಮನೆ ಖಾಲಿ ಮಾಡ್ತಿದ್ದಂತೆ ಇತ್ತ ಕಳ್ಳರು ಕಾಡ್ಗಿಚ್ಚನ್ನೇ ಬಂಡವಾಳ ಮಾಡಿಕೊಂಡು ಎಂಟ್ರಿ ಆಗುತ್ತಿದ್ದಾರೆ.
ಇದನ್ನೂ ಓದಿ: ಲಾಸ್ ಏಂಜಲೀಸ್ ಅಗ್ನಿ ಪ್ರಮಾದಕ್ಕೆ ಈ ಮೀನು ಕಾರಣವೇ? ಡೆಲ್ಟಾ ಸ್ಮೆಲ್ಟ್ ಫಿಶ್ ಮಾಡಿದ್ದೇನು ಗೊತ್ತಾ?
ಕಾಡ್ಗಿಚ್ಚಿಗೆ ತುತ್ತಾದ ಮನೆಯಲ್ಲಿ ಕಳ್ಳರು ಕೈಚಳಕ ತೋರುತ್ತಿದ್ದಾರೆ. ಪೊಲೀಸರು ಈ ಕಳ್ಳತನ ಕೇಸ್ನಲ್ಲಿ 20 ಜನರನ್ನು ಬಂಧಿಸಿದ್ದಾರೆ. ಕಾಡ್ಗಿಚ್ಚಿನ ಪ್ರದೇಶದಲ್ಲಿ ರಾತ್ರಿ ಕರ್ಪ್ಯೂ ಘೋಷಿಸಿ ಅಲರ್ಟ್ ಆಗಿದ್ದಾರೆ.
ये हृदय विदारक दृश्य अमेरिका का है. #LosAngelesFire#CaliforniaWildfirespic.twitter.com/8mNlwcqRVt
— Akhilesh Anand अखिलेश आनंद (@akhileshanandd)
ये हृदय विदारक दृश्य अमेरिका का है. #LosAngelesFire#CaliforniaWildfirespic.twitter.com/8mNlwcqRVt
— Akhilesh Anand अखिलेश आनंद (@akhileshanandd) January 11, 2025
">January 11, 2025
ಪ್ರಾಣಿಗಳ ಮೂಕವೇದನೆ!
ಲಾಸ್ ಏಂಜಲೀಸ್, ಕ್ಯಾಲಿಫೋರ್ನಿಯಾ ಕಾಡ್ಗಿಚ್ಚಿನಲ್ಲಿ ಬಹಳಷ್ಟು ಅನಾಹುತಗಳು ಸಂಭವಿಸಿದೆ. ಬೆಂಕಿ ಮತ್ತಷ್ಟು ವ್ಯಾಪಿಸದಂತೆ ತಡೆಯಲು ಹರಸಾಹಸ ಪಡಲಾಗುತ್ತಿದೆ. ಈ ಮಧ್ಯೆ ಸುಟ್ಟು ಹೋದ ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳು ಪರದಾಡುತ್ತಿರುವ ದೃಶ್ಯ ಹೃದಯ ವಿದ್ರಾವಕ ಆಗಿದೆ. ಕಾಡುಮೃಗಗಳ ಅಸಹಾಯಕ ಸ್ಥಿತಿ ಕರುಣಾಜನಕವಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಅನೇಕ ವಿಡಿಯೋಗಳು ವೈರಲ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ