newsfirstkannada.com

ಪ್ರತಿಯೊಂದು ಮಹಿಳೆ ಘನತೆಗೆ ಅರ್ಹಳು.. ವಿವಾದಾತ್ಮಕ ಪೋಸ್ಟ್​ ಹರಿಬಿಟ್ಟ ‘ಕೈ‘ ವಕ್ತಾರೆಗೆ ಕಂಗಾನಾ ತಿರುಗೇಟು

Share :

Published March 26, 2024 at 7:36am

Update March 26, 2024 at 10:10am

  ವಿವಾದಾತ್ಮಕ ಪೋಸ್ಟ್ ಹಂಚಿದ ‘ಕೈ’ ರಾಷ್ಟ್ರೀಯ ವಕ್ತಾರೆ ಸುಪ್ರಿಯಾ ಶ್ರೀನತೆ

  ಜನಾಕ್ರೋಶದ ಬೆನ್ನಲ್ಲೇ ಪೋಸ್ಟ್​ ಡಿಲೀಟ್ ಮಾಡಿದ ಕಾಂಗ್ರೆಸ್ ನಾಯಕಿ

  ನನ್ನ ವೃತ್ತಿಜೀವನದಲ್ಲಿ ಎಲ್ಲಾ ರೀತಿಯ ಮಹಿಳಾ ಪಾತ್ರ ನಿರ್ವಹಿಸಿದ್ದೇನೆ ಎಂದ ಕಂಗನಾ

ಲೋಕ ಅಖಾಡ ಗೆಲ್ಲಲು ಕೇಸರಿ ಪಡೆ ಪಣ ತೊಟ್ಟಿದೆ. ಬಾಲಿವುಡ್ ನಟಿ ಕಂಗನಾ ರಣಾವತ್‌ಗೆ ಮಂಡಿ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಘೋಷಣೆ ಆಗ್ತಿದ್ದಂತೆ ಬಿಜೆಪಿ-ಕಾಂಗ್ರೆಸ್ ನಾರಿಯರ ನಡುವೆ ವಾಗ್ಯುದ್ಧ ಶುರುವಾಗಿದೆ. ಕಂಗನಾ ರಣಾವತ್ ವಿರುದ್ಧ ಅವಹೇಳನಕಾರಿ ಫೋಸ್ಟ್‌ ಕಾಂಗ್ರೆಸ್ ನಾಯಕಿ ವಿವಾದ ಸೃಷ್ಟಿ ಮಾಡಿಕೊಂಡಿದ್ದಾರೆ.

ಲೋಕಸಭಾ ಚುನಾವಣಾ ಕಣದಲ್ಲಿ ಕಾಂಗ್ರೆಸ್, ಬಿಜೆಪಿ ನಾರಿಯರ ವಾಕ್ಸಮರ ರಂಗೇರಿದೆ. ನಟಿ ಕಂಗನಾ ರಣಾವತ್ ವಿರುದ್ಧ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನತೆ ಸೋಷಿಯಲ್ ಮೀಡಿಯಾದಲ್ಲಿ ಆಕ್ಷೇಪಾರ್ಹ ಫೋಟೋ ಶೇರ್ ಮಾಡಿದ್ದಾರೆ ಎನ್ನಲಾಗಿದ್ದು, ಈ ಫೋಟೋ ವೈರಲ್ ಆಗಿದ್ದು, ತೀವ್ರ ಸಂಚಲನ ಸೃಷ್ಟಿಸಿದೆ.

ಕಂಗನಾ ರಣಾವತ್ ಫೋಟೋ ಪೋಸ್ಟ್ ಮಾಡಿದ ಆರೋಪ

ಬಿಜೆಪಿ ಹೈಕಮಾಂಡ್ ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಘೋಷಣೆ ಮಾಡಲಾಗಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನತೆ ತಮ್ಮ ಇನ್ಸ್‌ಸ್ಟಾಗ್ರಾಂನಲ್ಲಿ ಕಂಗನಾ ಅವರ ಆಕ್ಷೇಪಾರ್ಹ ಫೋಟೋ ಶೇರ್ ಮಾಡಿದ್ದಾರೆ. ಸುಪ್ರಿಯಾ ಶ್ರೀನತೆ ಅವರು ಶೇರ್ ಮಾಡಿದ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ್ದು, ಬಿಜೆಪಿ ನಾಯಕರು ಕೆಂಡಾಮಂಡಲರಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಸುಪ್ರಿಯಾ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಇಷ್ಟೊಂದು ಕೆಟ್ಟದಾಗಿ ಕಮೆಂಟ್ ಮಾಡುವ ಇವರನ್ನು ಪಕ್ಷದಿಂದಲೇ ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ

ಸುಪ್ರಿಯಾಗೆ ಖಡಕ್ ತಿರುಗೇಟು ನೀಡಿದ ಕಂಗನಾ ರಣಾವತ್

ತನ್ನ ಫೋಟೋವನ್ನ ಹಾಕಿ ಅವಹೇಳನಕಾರಿ ಫೋಸ್ಟ್ ಮಾಡಿದ ಕಾಂಗ್ರೆಸ್ ನಾಯಕಿ ಸುಪ್ರಿಯಾಗೆ ನಟಿ ಕಂಗನಾ ತಿರುಗೇಟು ಕೊಟ್ಟಿದ್ದಾರೆ. ಸುಪ್ರಿಯಾ ಅವರ ಫೋಸ್ಟ್‌ ಶೇರ್ ಮಾಡಿಕೊಂಡು ಕಿಡಿಕಾರಿದ್ದಾರೆ.

ಕಂಗನಾ ರಣಾವತ್, ಬಿಜೆಪಿ ಅಭ್ಯರ್ಥಿ

ಡಿಯರ್ ಸುಪ್ರಿಯಾ ಜೀ, ಕಲಾವಿದೆಯಾಗಿ ಕಳೆದ 20 ವರ್ಷಗಳ ನನ್ನ ವೃತ್ತಿಜೀವನದಲ್ಲಿ ನಾನು ಎಲ್ಲಾ ರೀತಿಯ ಮಹಿಳೆಯ ಪಾತ್ರವನ್ನು ನಿರ್ವಹಿಸಿದ್ದೇನೆ. ಕ್ವೀನ್​​ನಲ್ಲಿನ ಮುಗ್ದ ಹುಡುಗಿಯಿಂದ ಹಿಡಿದು ಢಾಕಡ್‌ನಲ್ಲಿ ಮೋಹಕ ಗೂಢಚಾರಿಕೆಯವರೆಗೆ, ಮಣಿಕರ್ಣಿಕಾದಲ್ಲಿ ದೇವತೆಯಿಂದ ಚಂದ್ರಮುಖಿಯಲ್ಲಿನ ಪಿಶಾಚಿವರೆಗೆ, ರಜ್ಜೋದಲ್ಲಿ ವೇಶ್ಯೆಯಿಂದ ತಲೈವಿಯ ಕ್ರಾಂತಿಕಾರಿ ನಾಯಕಿವರೆಗೆ. ನಾವು ಪೂರ್ವಾಗ್ರಹಗಳ ಸಂಕೋಲೆಯಿಂದ ನಮ್ಮ ಹೆಣ್ಣುಮಕ್ಕಳನ್ನು ಮುಕ್ತಗೊಳಿಸಬೇಕು, ಅವರ ದೇಹದ ಅಂಗಗಳ ಬಗ್ಗೆ ಕುತೂಹಲ ಬಿಡಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಸವಾಲು ಹಾಕುವುದನ್ನು ಕೆಲವು ರೀತಿಯ ನಿಂದನೆಯಾಗಿ ಬಳಸುವುದನ್ನು ತಡೆಯಬೇಕು. ಪ್ರತಿಯೊಬ್ಬ ಮಹಿಳೆಯೂ ಅವಳ ಘನತೆಗೆ ಅರ್ಹಳು.

ಇದನ್ನೂ ಓದಿ: ಮನೆಯವರಿಗೆ ಮದುವೆ ಗೌಜಿ, ಕಳ್ಳರಿಗೆ ಚಿನ್ನದ ಮೇಲಿತ್ತು ಕಣ್ಣು.. 61 ಲಕ್ಷ ಮೌಲ್ಯದ ಆಭರಣ ಕದ್ದವರು ಕೊನೆಗೂ ಅರೆಸ್ಟ್​

ಇನ್‌ಸ್ಟಾ ಅಕೌಂಟ್ ಹ್ಯಾಕ್​ ಸುಪ್ರಿಯಾ ಸಬೂಬು

ಕಂಗನಾ ರಣಾವತ್ ಬಗ್ಗೆ ಆಕ್ಷೇಪಾರ್ಹ ಪೋಸ್ಟ್ ಮಾಡಿರೋ ಬಗ್ಗೆ ಕಾಂಗ್ರೆಸ್ ನಾಯಕಿ ಸುಪ್ರಿಯಾ ವಿರುದ್ಧ ಎಲ್ಲೆಡೆ ಜನಾಕ್ರೋಶ ವ್ಯಕ್ತವಾಗಿದೆ. ಬಿಸಿ ತಟ್ಟುತ್ತಿದ್ದಂತೆ ಎಚ್ಚೆತ್ತ ಸುಪ್ರಿಯಾ ಶ್ರೀನತೆ, ಪೋಸ್ಟ್​ ಡಿಲೀಟ್​ ಮಾಡಿದ್ದಾರೆ. ನನ್ನ ಫೇಸ್‌ಬುಕ್ ಹಾಗೂ ಇನ್‌ಸ್ಟಾ ಅಕೌಂಟ್‌ನಿಂದ ಯಾರೋ ಒಬ್ಬ ವ್ಯಕ್ತಿ ಅಸಹ್ಯಕರವಾಗಿ ಪೋಸ್ಟ್ ಮಾಡಿದ್ದಾರೆ. ಅದು ಗೊತ್ತಾಗುತ್ತಿದ್ದಂತೆ ನಾನು ಪೋಸ್ಟ್‌ ಅನ್ನು ಡಿಲೀಟ್ ಮಾಡಿದ್ದಾನೆ. ನನಗೆ ತಿಳಿದಿರುವ ಹಾಗೇ ನಾನು ಯಾವ ಮಹಿಳೆಗೆ ಹಾಗೆ ಹೇಳೋದಿಲ್ಲ ಮತ್ತೆ ಅದನ್ನು ವಿರೋಧಿಸುತ್ತೇನೆ. ಟ್ವಿಟರ್‌ನಲ್ಲಿ ನನ್ನ ಹೆಸರನ್ನು ದುರುಪಯೋಗ ಪಡಿಸಿಕೊಂಡು ಈ ರೀತಿಯಾಗಿ ಮಾಡಲಾಗಿದೆ. ಈ ಪೋಟೋವನ್ನು ನಾನು ಹಾಕಿಲ್ಲ. ನನ್ನ ಅಕೌಂಟ್‌ ಅನ್ನು ಹ್ಯಾಕ್ ಮಾಡಲಾಗಿದೆ ಎಂದು ಸಬೂಬು ನೀಡಿ, ವಿವಾದಕ್ಕೆ ಬ್ರೇಕ್​ ಹಾಕಲು ಯತ್ನಿಸಿದ್ದಾರೆ.

ಸುಪ್ರಿಯಾ, ಕಾಂಗ್ರೆಸ್ ನಾಯಕಿ

ಅದೇನೇ ಇರ್ಲಿ, ಚುನಾವಣೆ ಬಂದ್ ಮೇಲೆ ಟೀಕೆಗಳು ಸಹಜ. ಟೀಕೆಯ ಭರದಲ್ಲಿ ಮಾತಿನ ಲಹರಿ ತಪ್ಪದಿದ್ರೆ ಒಳ್ಳೆಯದು..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರತಿಯೊಂದು ಮಹಿಳೆ ಘನತೆಗೆ ಅರ್ಹಳು.. ವಿವಾದಾತ್ಮಕ ಪೋಸ್ಟ್​ ಹರಿಬಿಟ್ಟ ‘ಕೈ‘ ವಕ್ತಾರೆಗೆ ಕಂಗಾನಾ ತಿರುಗೇಟು

https://newsfirstlive.com/wp-content/uploads/2024/03/kangana-3.jpg

Load More